ಕನ್ನಡ ಸುದ್ದಿ  /  ಮನರಂಜನೆ  /  ಡಿವೋರ್ಸ್ ಸದ್ದು ಗದ್ದಲದ ನಡುವೆ ಸದ್ದಿಲ್ಲದೆ ಮದುವೆಯಾಗಲು ಹೊರಟ್ರಾ ಸೋನು ಶ್ರೀನಿವಾಸ್‌ ಗೌಡ, ಇವರೇನಾ ಗಂಡು?

ಡಿವೋರ್ಸ್ ಸದ್ದು ಗದ್ದಲದ ನಡುವೆ ಸದ್ದಿಲ್ಲದೆ ಮದುವೆಯಾಗಲು ಹೊರಟ್ರಾ ಸೋನು ಶ್ರೀನಿವಾಸ್‌ ಗೌಡ, ಇವರೇನಾ ಗಂಡು?

ಸೋಷಿಯಲ್‌ ಮೀಡಿಯಾದಲ್ಲಿ ಸದಾ ಸುದ್ದಿಯಲ್ಲಿರುವ ಸೋನು ಶ್ರೀನಿವಾಸ್‌ ಗೌಡ, ಇನ್ನೇನು ಮದುವೆಯಾಗಲಿದ್ದಾರಾ? ಹೀಗೊಂದು ಸುದ್ದಿ ಇದೀಗ ಸದ್ದು ಮಾಡುತ್ತಿದೆ. ಇನ್‌ಸ್ಟಾಗ್ರಾಂನಲ್ಲಿ ಯುವಕನೊಟ್ಟಿಗಿನ ಒಂದಷ್ಟು ಫೋಟೋಗಳನ್ನು ಶೇರ್‌ ಮಾಡುತ್ತಿದ್ದಂತೆ ಈ ಅನುಮಾನ ಮೂಡಿದೆ.

ಡಿವೋರ್ಸ್ ಸದ್ದು ಗದ್ದಲದ  ನಡುವೆ ಸದ್ದಿಲ್ಲದೆ ಮದುವೆಯಾಗಲು ಹೊರಟ್ರಾ ಸೋನು ಶ್ರೀನಿವಾಸ್‌ ಗೌಡ, ಇವರೇನಾ ಗಂಡು?
ಡಿವೋರ್ಸ್ ಸದ್ದು ಗದ್ದಲದ ನಡುವೆ ಸದ್ದಿಲ್ಲದೆ ಮದುವೆಯಾಗಲು ಹೊರಟ್ರಾ ಸೋನು ಶ್ರೀನಿವಾಸ್‌ ಗೌಡ, ಇವರೇನಾ ಗಂಡು?

Sonu Srinivas gowda: ಒಂದಷ್ಟು ವಿವಾದಗಳಿಂದಲೇ ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿ, ಪ್ರಭಾವಿಯಾದವರ ಪೈಕಿ ಸೋನು ಶ್ರೀನಿವಾಸ್‌ ಗೌಡ ಅವರೂ ಒಬ್ಬರು. ಇತ್ತೀಚಿನ ದಿನಗಳಲ್ಲಿ ಪುಟಾಣಿ ಬಾಲಕಿಯನ್ನು ದತ್ತು ಪಡೆದುಕೊಂಡಿದ್ದೇನೆ ಎಂದು ಹೇಳಿಕೊಂಡು, ಆ ಬಾಲಕಿಯ ವಿಡಿಯೋಗಳನ್ನು ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲೂ ಪೋಸ್ಟ್‌ ಮಾಡಿ, ಜೈಲು ಸೇರಿದ್ದರು ಸೋನು. ಅಷ್ಟೇ ಅಲ್ಲ ಅದಕ್ಕೂ ಮೊದಲು ಬಿಗ್‌ ಬಾಸ್‌ ಕನ್ನಡದ ಮೊದಲ ಒಟಿಟಿ ಶೋಗೂ ತೆರಳಿ ತಮ್ಮ ನೇಮು ಫೇಮು ಹೆಚ್ಚಿಸಿಕೊಂಡಿದ್ದರು.

ಹೀಗೆ ಸೋಷಿಯಲ್‌ ಮೀಡಿಯಾದಲ್ಲಿ ಸದಾ ಸುದ್ದಿಯಲ್ಲಿರುವ ಸೋನು, ಪಾಸಿಟಿವ್‌ ವಿಚಾರಕ್ಕಿಂತ ನೆಗೆಟಿವ್‌ ವಿಚಾರಕ್ಕೇ ಸದ್ದು ಮಾಡುತ್ತಿರುತ್ತಾರೆ. ಇದೀಗ ಇದೇ ಸೋನು ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾರಾ? ಹೀಗೊಂದು ಅನುಮಾನ ಇದೀಗ ಎಲ್ಲರಲ್ಲೂ ಮೂಡಿದೆ. ಅದಕ್ಕೆ ಪುಷ್ಠಿ ನೀಡುವಂತೆ, ಯುವಕನೊಂದಿಗಿನ ಹಲವು ಫೋಟೋಗಳನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ ಸೋನು ಶ್ರೀನಿವಾಸ್‌ ಗೌಡ. ಹೀಗೆ ಫೋಟೋಗಳನ್ನು ಶೇರ್‌ ಮಾಡಿದ್ದೇ ತಡ, ತರಹೇವಾರಿ ಕಾಮೆಂಟ್‌ಗಳು ಹರಿದುಬಂದಿವೆ.

ಟ್ರೆಂಡಿಂಗ್​ ಸುದ್ದಿ

ಸ್ಯಾಂಡಲ್‌ವುಡ್‌ನಲ್ಲಿ ಡಿವೋರ್ಸ್‌ ಸುದ್ದಿ...

ಸ್ಯಾಂಡಲ್‌ವುಡ್‌ನಲ್ಲಿ ಇತ್ತೀಚಿನ ಕೆಲ ದಿನಗಳಿಂದ ವಿಚ್ಛೇದನ ಸುದ್ದಿಯೇ ಸದ್ದು ಮಾಡುತ್ತಿದೆ. ಚಂದನ್‌ ಶೆಟ್ಟಿ- ನಿವೇದಿತಾ ಗೌಡ ಜೋಡಿ ಪರಸ್ಪರ ಸಹಮತಿಯ ಮೇರೆಗೆ ವಿಚ್ಛೇದನ ಪಡೆದಿದ್ದಾರೆ. ಇಬ್ಬರ ನಡುವೆ ಒಂದಷ್ಟು ಕಾರಣಗಳಿಂದ ಸರಿಹೊಂದುತ್ತಿಲ್ಲ ಎಂದು ಹೇಳಿ ಬೇರೆ ಬೇರೆಯಾಗಿದ್ದಾರೆ. ಇದಾದ ಬಳಿಕ ದೊಡ್ಮನೆ ಕುಡಿ ಯುವ ರಾಜ್‌ಕುಮಾರ್‌ ಮತ್ತು ಪತ್ನಿ ಶ್ರೀದೇವಿ ಭೈರಪ್ಪ ನಡುವೆಯೂ ಯಾವುದೂ ಸರಿ ಇಲ್ಲ ಎಂಬುದು ಕಂಡು ಬಂದಿದೆ. ಈ ನಡುವೆ ವಿಚ್ಛೇದನಕ್ಕೆ ಈಗಾಗಲೇ ಯುವ ಅರ್ಜಿ ಹಾಕಿದ್ದಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಬಗೆಬಗೆ ಕಾಮೆಂಟ್ಸ್‌

ಹೀಗೆ ಸ್ಯಾಂಡಲ್‌ವುಡ್‌ನಲ್ಲಿ ವಿಚ್ಛೇದನದ ಬಿಸಿ ಗಾಳಿ ಬೀಸುತ್ತಿದ್ದರೆ, ಇದರ ನಡುವೆಯೇ ಸೋನು ಶ್ರೀನಿವಾಸ್‌ ಗೌಡ ಅವರ ಮದುವೆ ವಿಚಾರ ಇದೀಗ ಮುನ್ನೆಲೆಗೆ ಬಂದಿದೆ. ಯುವಕನ ಜತೆಗಿನ ಸರಣಿ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಂತೆ, ಬಗೆಬಗೆ ಕಾಮೆಂಟ್‌ಗಳು ತೂರಿಬಂದಿವೆ. ಹಾ ಗಟ್ಟಿಮೇಳ ಗಟ್ಟಿಮೇಳ ಎಂದು ಕೆಲವರು ಹೇಳಿದರೆ, ಎಲ್ಲಾ ಡೈವರ್ಸ್ ಬಗ್ಗೆ ಪೋಸ್ಟ್ ಹಾಕೋ ಟೈಮ್ ಅಲ್ಲಿ ನೀವು ನಿಮ್ಮ ಹುಡ್ಗನ ಪೋಸ್ಟ್ ಹಾಕಿದ್ದಿರಲ್ಲ... ಎಂದು ಮತ್ತೋರ್ವ ಬಳಕೆದಾರ ಕಾಮೆಂಟ್‌ ಹಾಕಿದ್ದಾರೆ.

ಮೇಡ್‌ ಫಾರ್‌ ಈಚ್‌ ಅದರ್

ಜೋಡಿ ಚೆನ್ನಾಗಿದೆ, ಮೇಡ್‌ ಫಾರ್‌ ಈಚ್‌ ಅದರ್‌, ಕ್ಯೂಟ್‌ ಪೇರ್‌, ಅಕ್ಕಾ ಯಾರಿವರು, ಭವಿಷ್ಯದ ಪತಿಯೇ? ಈಗಾಗಲೇ ಒಂದು ಜೋಡಿ ಮಕ್ಕಳಾಟ ಮಾಡ್ಕೊಂಡು ಮದುವೆ ಮಾಡ್ಕೊಂಡು ಡೈವೋರ್ಸ್ ಆಗಿದೇ. ಎಚ್ಚರಿಕೆ.... ನಿಮ್ಮ ಒಳ್ಳೇದಕ್ಕಾಗಿ" ಹೀಗೆ ಬಗೆಬಗೆ ಕಾಮೆಂಟ್‌ಗಳ ಮೂಲಕವೇ ನೆಟ್ಟಿಗರು ಊಹೆ ಮಾಡುತ್ತಿದ್ದಾರೆ. ಆದರೆ, ಈ ಹುಡುಗ ಯಾರು, ಸೋನು ಜತೆಗೆ ಇವರ ಮದುವೆ ಆಗ್ತಿದೆಯಾ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ. ಇನ್‌ಸ್ಟಾಗ್ರಾಂ ಪುಟದಲ್ಲಿ ಹೇ ಯೂ ಎಂದು ಬರೆದು ಹೃದಯದ ಇಮೋಜಿ ಹಾಕಿ ಒಂದಷ್ಟು ಫೋಟೋ ಶೇರ್‌ ಮಾಡಿದ್ದಾರೆ.