ಭಾಗ್ಯಲಕ್ಷ್ಮೀ ಧಾರಾವಾಹಿ; ಕುಸುಮಾಳ ಸತ್ವ ಪರೀಕ್ಷೆಗಳಲ್ಲಿ ಪಾಸ್‌ ಆದ ಜಿಮ್‌ ಟ್ರೇನರ್‌ ಕಿಶನ್‌, ಇನ್ನೇನಿದ್ದರೂ ಮದುವೆ ಮಾತುಕತೆ
ಕನ್ನಡ ಸುದ್ದಿ  /  ಮನರಂಜನೆ  /  ಭಾಗ್ಯಲಕ್ಷ್ಮೀ ಧಾರಾವಾಹಿ; ಕುಸುಮಾಳ ಸತ್ವ ಪರೀಕ್ಷೆಗಳಲ್ಲಿ ಪಾಸ್‌ ಆದ ಜಿಮ್‌ ಟ್ರೇನರ್‌ ಕಿಶನ್‌, ಇನ್ನೇನಿದ್ದರೂ ಮದುವೆ ಮಾತುಕತೆ

ಭಾಗ್ಯಲಕ್ಷ್ಮೀ ಧಾರಾವಾಹಿ; ಕುಸುಮಾಳ ಸತ್ವ ಪರೀಕ್ಷೆಗಳಲ್ಲಿ ಪಾಸ್‌ ಆದ ಜಿಮ್‌ ಟ್ರೇನರ್‌ ಕಿಶನ್‌, ಇನ್ನೇನಿದ್ದರೂ ಮದುವೆ ಮಾತುಕತೆ

ಪೂಜಾ ಇಷ್ಟಪಟ್ಟ ಕಿಶನ್‌ ಹೇಗಿದ್ದಾನೆ ಎಂಬುದನ್ನು ತಿಳಿದುಕೊಳ್ಳಲು ಆತನ ಜಿಮ್‌ಗೆ ಬಂದು ಪರೀಕ್ಷೆ ಮಾಡಿದ್ದಾಳೆ ಕುಸುಮಾ. ಗುಣ, ನಡೆತೆ ಎಲ್ಲದರಲ್ಲಿಯೂ ಕಿಶನ್‌ ಇಷ್ಟವಾಗಿದ್ದಾನೆ. ಇಲ್ಲಿದೆ ಕಲರ್ಸ್‌ ಕನ್ನಡದ ಭಾಗ್ಯಲಕ್ಷ್ಮೀ ಧಾರಾವಾಹಿಯ ಮೇ 17ರ 788ನೇ ಸಂಚಿಕೆಯ ವಿವರ.

ಭಾಗ್ಯಲಕ್ಷ್ಮೀ ಧಾರಾವಾಹಿ; ಕುಸುಮಾಳ ಸತ್ವ ಪರೀಕ್ಷೆಗಳಲ್ಲಿ ಪಾಸ್‌ ಆದ ಜಿಮ್‌ ಟ್ರೇನರ್‌ ಕಿಶನ್‌, ಇನ್ನೇನಿದ್ದರೂ ಮದುವೆ ಮಾತುಕತೆ
ಭಾಗ್ಯಲಕ್ಷ್ಮೀ ಧಾರಾವಾಹಿ; ಕುಸುಮಾಳ ಸತ್ವ ಪರೀಕ್ಷೆಗಳಲ್ಲಿ ಪಾಸ್‌ ಆದ ಜಿಮ್‌ ಟ್ರೇನರ್‌ ಕಿಶನ್‌, ಇನ್ನೇನಿದ್ದರೂ ಮದುವೆ ಮಾತುಕತೆ

ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಕಿಶನ್‌ ಗುಣಕ್ಕೆ ಫಿದಾ ಆಗಿದ್ದ ಕುಸುಮಾ, ಅದೇ ಕಿಶನ್‌ನ ಸಿಟ್ಟು ಹೇಗಿದೆ, ಅದನ್ನೂ ಟೆಸ್ಟ್‌ ಮಾಡಿಯೇ ಬಿಟ್ಟಿದ್ದಾಳೆ. ಅದಕ್ಕೆ ಆಕೆ ಬಳಸಿಕೊಂಡಿದ್ದು ಅಲ್ಲೇ ಇದ್ದ ಇನ್ನೋರ್ವ ಮಹಿಳೆಯನ್ನು. ಟ್ರೆಡ್‌ಮಿಲ್‌ನಲ್ಲಿ ಕಿವಿಗೆ ಹೆಡ್‌ಫೋನ್‌ ಹಾಕಿ ವಾಕ್‌ ಮಾಡುತ್ತಿದ್ದ ಮಹಿಳೆ ಜತೆಗೆ ಬೇಕು ಅಂತಲೇ ಕುಸುಮಾ ಜಗಳಕ್ಕಿಳಿದ್ದಾಳೆ. ಆಕೆ ಧರಿಸಿದ ಬಟ್ಟೆ ಬಗ್ಗೆಯೂ ಕಾಮೆಂಟ್‌ ಮಾಡಿದ್ದಾಳೆ. ನನಗೆ ಆವಾಜ್‌ ಹಾಕ್ತಿಯಾ ಎನ್ನುತ್ತಲೇ ಆಕೆಯ ಹೆಡ್‌ಫೋನ್‌ ಕಿತ್ತೆಸೆದಿದ್ದಾಳೆ. ಇಬ್ಬರ ನಡುವಿನ ಜಗಳ ತಾರಕಕ್ಕೇರಿದೆ.

ಹೀಗೆ ಇವರಿಬ್ಬರ ಜಗಳ ಶುರುವಾಗಿದ್ದೇ ತಡ, ಅಷ್ಟೊತ್ತಿಗೆ ಜಿಮ್‌ ಮಾಲೀಕ ಕಿಶನ್‌ ಆಗಮನವಾಗಿದೆ. ಸಮಾಧಾನದಿಂದಲೂ ಇಬ್ಬರ ಜಗಳವನ್ನು ಬಿಡಿಸಿದ್ದಾನೆ. ಬಳಿಕ ಬೇಕು ಅಂತಲೇ ನಾನು ಇವತ್ತು ಒಂದಷ್ಟು ವರ್ಕೌಟ್‌ ಮಾಡೇ ಮಾಡುತ್ತೇನೆ ಎಂದಿದ್ದಾಳೆ ಕುಸುಮಾ. “ಜಿಮ್‌ ಅಂದ್ರೆ ಒಮ್ಮೆಗೆ ಕಲಿಯೋದಲ್ಲ. ಒಂದೊಂದೆ ಮೆಟ್ಟಿಲು ಏರುತ್ತ ಹೋಗುವುದು. ಇವತ್ತೊಂದಿಷ್ಟು, ನಾಳೆಗೆ ಇನ್ನಷ್ಟು ಮಾಡಿ” ಎಂದು ತಿಳಿ ಹೇಳಿದ್ದಾನೆ, ಆತನ ಮಾತಿನ ಧಾಟಿ ನೋಡಿ ಸರಿನಪ್ಪ ಹಾಗೇ ಮಾಡ್ತೀನಿ ಎಂದಿದ್ದಾಳೆ.

ಕಿಶನ್‌ ಕೋಪ ಟೆಸ್ಟ್‌ ಮಾಡಿದ ಕುಸುಮಾ

ಇದೇ ವಿಚಾರವನ್ನು ಭಾಗ್ಯಾಳಿಗೂ ಕರೆ ಮಾಡಿ ಹೇಳಿದ್ದಾಳೆ ಕುಸುಮಾ. ಹುಡುಗನಿಗೆ ಕೋಪಾನೇ ಬರಲ್ಲ ಎಂದಿದ್ದಾಳೆ. ನನ್ನ ಈ ಪರೀಕ್ಷೆಯಲ್ಲಿ ಫುಲ್‌ ಮಾರ್ಕ್ಸ್‌ನಲ್ಲಿ ಗೆದ್ದಿದ್ದಾನೆ. ಕಿಶನ್‌ ನೋಡಿ ನಕ್ಕ ಹುಡುಗಿಯ ಯಾರು, ಆ ಪರೀಕ್ಷೆಯನ್ನೂ ಮಾಡಿ ಫಲಿತಾಂಶ ಕೊಡ್ತೀನಿ ಎಂದಿದ್ದಾಳೆ ಕುಸುಮಾ. ಇತ್ತ ಜಿಮ್‌ನಲ್ಲಿನ ಹುಡುಗಿಯನ್ನು ಕುಸುಮಾ ಮಾತನಾಡಿಸಿದ್ದಾಳೆ. ನನಗೆ ಕಿಶನ್‌ ಅಂದರೆ ತುಂಬ ಇಷ್ಟ ಎಂದು ಆ ಹುಡುಗಿ ಹೇಳಿದ್ದಾಳೆ. ಆದರೆ, ಕಿಶನ್‌ ಮಾತ್ರ ಹುಡುಗಿಯರಿಂದ ಕೊಂಚ ದೂರ ಎಂದಿದ್ದಾಳೆ. ಈ ಮಾತು ಕೇಳಿದ ಕುಸುಮಾ ಮತ್ತೆ ಒಳಗೊಳಗೆ ಖುಷಿಯಾಗಿದ್ದಾಳೆ.

ನಿನಗೊಬ್ಬಳಿಗೆ ಇಷ್ಟ ಇದ್ರೆ ಮುಗೀತಾ, ಅವನ ಮನಸ್ಸಲ್ಲಿ ಏನಿದೆ ಅನ್ನೋದನ್ನು ನೋಡಬೇಕಲ್ಲವೇ? ಹೋಗು ನಿನ್ನ ಪ್ರೀತಿ ಹೇಳು ಎಂದಿದ್ದಾಳೆ. ಧೈರ್ಯ ಮಾಡಿ ಆತನ ಮುಂದೆ ಹೋಗಿ ನಿಂತಿದ್ದಾಳೆ ಆ ಯುವತಿ. ನಿಮ್ಮ ಹತ್ರ ಸ್ವಲ್ಪ ಮಾತನಾಡಬೇಕಿತ್ತು ಎಂದು ಮಾತಿಗಿಳಿದಿದ್ದಾಳೆ. ನಿಮ್ಮ ಗುಣ, ನಡತೆ ಎಲ್ಲವೂ ನನಗಿಷ್ಟ. ಐ ಲವ್‌ ಯೂ ಎಂದೇಬಿಟ್ಟಿದ್ದಾಳೆ. ಆ ಹುಡುಗಿಯ ಮಾತು ಕೇಳಿ, ಇದೆಲ್ಲವನ್ನು ಇಲ್ಲಿ ಮಾತನಾಡುವುದಲ್ಲ ಎಂದು ಬೇರೆ ಕಡೆ ಕರೆದೊಯ್ದು, ಲವ್‌ ಮಾಡ್ತಿಲ್ಲ ಎಂದಿದ್ದಾನೆ. ಎಲ್ಲರ ಮುಂದೆ ಇಲ್ಲ ಎಂದು ಹೇಳಿ ನಿಮ್ಮ ಮನಸ್ಸಿಗೆ ನೋವು ಮಾಡುವುದು ನನಗಿಷ್ಟವಿಲ್ಲ ಎಂದಿದ್ದಾನೆ ಕಿಶನ್. ಇತ್ತ ಕುಸುಮಾ ಸಹ ನಿಟ್ಟುಸಿರು ಬಿಟ್ಟಿದ್ದಾಳೆ.

ಪ್ರೀತಿ ಪರೀಕ್ಷೆಯಲ್ಲಿ ಗೆದ್ದ ಕಿಶನ್‌

ನಾನು ಪೂಜಾ ಅನ್ನೋ ಹುಡುಗಿಯನ್ನ ಇಷ್ಟಪಟ್ಟಿದ್ದೇನೆ. ಅವಳ ಮೇಲಿನದ್ದು ನಿಜವಾದ ಪ್ರೀತಿ. ಈ ವಿಚಾರವನ್ನು ಅವಳಿಗೂ ಹೇಳಿದ್ದೇನೆ. ನನ್ನ ಮನಸ್ಸಲ್ಲಿ ಅವಳಿಗೆ ಬಿಟ್ಟರೆ, ಬೇರೆ ಯಾರಿಗೂ ಜಾಗ ಇಲ್ಲ. ಅದನ್ನು ಯಾರಿಗೂ ಕೊಡೋಕೆ ಆಗಲ್ಲ. ಮನಸ್ಸಲ್ಲಿ ಒಬ್ಬರನ್ನು ಇಟ್ಕೊಂಡು, ಇನ್ನೊಬ್ಬರಿಗೆ ಪ್ಲರ್ಟ್‌ ಮಾಡೋಕೆ ಇಷ್ಟ ಆಗಲ್ಲ. ನನ್ನ ಪ್ರಕಾರ ಪ್ರೀತಿ ಅಂದರೆ ಮನಸ್ಸಿಗೆ ಹಾಕುವ ಅಚ್ಚು. ಅದನ್ನ ಅಳಿಸೋದು ತುಂಬ ಕಷ್ಟ ಎಂದೂ ಕಿಶನ್‌ ಹೇಳಿದ್ದಾನೆ. ಕಿಶನ್‌ ಮಾತು ಕೇಳಿದ ಕುಸುಮಾ, ಖುಷಿಯಾಗಿದ್ದಾಳೆ. ಆಹಾ ಎಂಥ ಮಾತು, ಅಪರಂಜಿ ಎಂದಿದ್ದಾಳೆ. ಅಲ್ಲಿಗೆ ಭಾಗ್ಯಲಕ್ಷ್ಮೀ ಧಾರಾವಾಹಿಯ 788ನೇ ಸಂಚಿಕೆ ಮುಕ್ತಾಯವಾಗಿದೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌,

ಧರ್ಮರಾಜ್‌ - ಶಶಿಧರ್‌ ಕೋಟೆ,

ಭಾಗ್ಯಾ - ಸುಷ್ಮಾ ಕೆ ರಾವ್‌,

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌,

ಭಾಗ್ಯಾ ತಾಯಿ ಸುನಂದಾ- ಸುನಿತಾ ಶೆಟ್ಟಿ,

ಪೂಜಾ - ಆಶಾ ಅಯ್ಯನರ್‌,

ಶ್ರೇಷ್ಠಾ - ಕಾವ್ಯಾ ಗೌಡ,

ತನ್ವಿ - ಅಮೃತಾ ಗೌಡ,

ಗುಂಡಣ್ಣ - ನಿಹಾರ್‌ ಗೌಡ,

ಸುಂದರಿ - ಸುನೇತ್ರಾ ಪಂಡಿತ್‌

ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.