ಕನ್ನಡ ಸುದ್ದಿ  /  ಮನರಂಜನೆ  /  ಜಾಲತಾಣದಲ್ಲಿ ವ್ಯಾಪಕ ಟೀಕೆ, ಲಕ್ಷ್ಮೀ ನಿವಾಸ ಸೀರಿಯಲ್‌ನಿಂದ ಹೊರ ಬಂದ್ರಾ ಚಂದನಾ ಅನಂತಕೃಷ್ಣ? ಹೀಗಿದೆ ನಟಿಯ ಸ್ಪಷ್ಟನೆ

ಜಾಲತಾಣದಲ್ಲಿ ವ್ಯಾಪಕ ಟೀಕೆ, ಲಕ್ಷ್ಮೀ ನಿವಾಸ ಸೀರಿಯಲ್‌ನಿಂದ ಹೊರ ಬಂದ್ರಾ ಚಂದನಾ ಅನಂತಕೃಷ್ಣ? ಹೀಗಿದೆ ನಟಿಯ ಸ್ಪಷ್ಟನೆ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸೈಕೋ ಜಯಂತನ ಪಾತ್ರ ನೋಡುಗರಿಗೆ ಅಸಹನೀಯ ಎನಿಸುತ್ತಿದೆ. ಈ ನಡುವೆ ಇದೇ ಸೈಕೋ ಪತ್ನಿ ಜಾಹ್ನವಿ ಪಾತ್ರದಲ್ಲಿ ನಟಿಸಿರುವ ಚಂದನಾ ಅನಂತಕೃಷ್ಣ, ಲಕ್ಷ್ಮೀ ನಿವಾಸ ಸೀರಿಯಲ್‌ನಿಂದಲೇ ಹೊರನಡೆದಿದ್ದಾರೆ ಎನ್ನಲಾಗುತ್ತಿದೆ.

ಸೈಕೋ ಜಯಂತನ ಕಾಟ, ಲಕ್ಷ್ಮೀ ನಿವಾಸ ಧಾರಾವಾಹಿಯಿಂದಲೇ ಹೊರ ಬಂದ್ರಾ ಚಂದನಾ ಅನಂತಕೃಷ್ಣ? ಹೀಗಿದೆ ನಟಿಯ ಸ್ಪಷ್ಟನೆ
ಸೈಕೋ ಜಯಂತನ ಕಾಟ, ಲಕ್ಷ್ಮೀ ನಿವಾಸ ಧಾರಾವಾಹಿಯಿಂದಲೇ ಹೊರ ಬಂದ್ರಾ ಚಂದನಾ ಅನಂತಕೃಷ್ಣ? ಹೀಗಿದೆ ನಟಿಯ ಸ್ಪಷ್ಟನೆ

Chandana Ananthkrishna: ಕನ್ನಡ ಕಿರುತೆರೆ ವೀಕ್ಷಕರಿಗೆ ಲಕ್ಷ್ಮೀ ನಿವಾಸ ಧಾರಾವಾಹಿ ಹೊಸ ಅನುಭವವನ್ನೇ ನೀಡುತ್ತಿದೆ. ನೋಡುಗರನ್ನು ಸೆಳೆಯುವುದರ ಜತೆಗೆ, ಸೀರಿಯಲ್‌ನಲ್ಲಿಯೇ ಮೊದಲ ಸಲ ಸೈಕೋ ಪತಿಯ ಕಾಟ ಹೇಗಿರುತ್ತದೆ ಎಂಬುದನ್ನು ಮನೆ ಮಂದಿ ಕಣ್ತುಂಬಿಕೊಂಡು ಆ ಪಾತ್ರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ಈ ವರೆಗೂ ಸಿನಿಮಾಗಳಲ್ಲಿ ಸೈಕೋಪಾತ್‌ಗಳನ್ನು ನೋಡಿ ಬೆಚ್ಚಿ ಬೀಳುತ್ತಿದ್ದ ಪ್ರೇಕ್ಷಕ, ಈಗ ಕಿರುತೆರೆಯ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿನ ಸೈಕೋ ಜಯಂತ್‌ನ ಮನಸ್ಥಿತಿಯನ್ನು ಕಂಡು ಅಕ್ಷರಶಃ ನಲುಗಿದ್ದಾರೆ. ಪತ್ನಿ ಜಾಹ್ನವಿಯನ್ನು ನಡೆಸಿಕೊಳ್ಳುತ್ತಿರುವ ರೀತಿಗೂ ಸಿಡಿಮಿಡಿಗೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಸೋಷಿಯಲ್‌ ಮೀಡಿಯಾದಲ್ಲಿಯೂ ಜಾನು ಮತ್ತು ಸೈಕೋ ಪತಿ ಜಯಂತನ ಕಾಂಬಿನೇಷನ್‌ಗೆ ಮೆಚ್ಚುಗೆ ಸಿಗುತ್ತಿದೆಯಾದರೂ, ನೋಡುಗರಿಂದ ಅಷ್ಟೇ ಪ್ರಮಾಣದ ನೆಗೆಟಿವ್‌ ಕಾಮೆಂಟ್‌ಗಳೂ ಹರಿದು ಬರುತ್ತಿವೆ. ಇದೀಗ ಈ ಸುದ್ದಿಯ ಬೆನ್ನಲ್ಲೇ ಇದೇ ಲಕ್ಷ್ಮೀ ನಿವಾಸ ಧಾರಾವಾಹಿಯ ಜಾನು ಪಾತ್ರಧಾರಿ ಚಂದನಾ ಅನಂತಕೃಷ್ಣ ಈ ಸೀರಿಯಲ್‌ನಿಂದಲೇ ಆಚೆ ಹೋಗುತ್ತಿದ್ದಾರೆ ಎಂಬ ವಿಚಾರ ಜಾಲತಾಣಗಳಲ್ಲಿ ಗುಲ್ಲೆಬ್ಬಿಸಿದೆ. ಅಷ್ಟೇ ಅಲ್ಲ, ಚಂದನಾ ಈ ಸೀರಿಯಲ್‌ ತೊರೆದು ಸಿನಿಮಾದಲ್ಲಿ ಮುಂದುವರಿಯಲ್ಲಿದ್ದಾರೆ ಎಂದೇ ಹೇಳಲಾಗುತ್ತಿದೆ.

ಹೆಚ್ಚಾಯ್ತು ಸೈಕೋ ಪತಿಯ ಉಪಟಳ

ಸೈಕೋ ಗಂಡನ ಉಪಟಳಕ್ಕೆ ಒಳಗಾದ ಜಾನು, ಬಂಗಾರದ ಪಂಜರದಲ್ಲಿ ಬಂಧಿಯಾಗಿದ್ದಾಳೆ. ಅಲ್ಲಿ ಆಕೆಗೆ ಯಾವುದೇ ಸ್ವಾತಂತ್ರ್ಯವಿಲ್ಲ. ಇಡೀ ಮನೆಗೆ ಹಿಡನ್‌ ಕ್ಯಾಮರಾ ಅಳವಡಿಸಿ, ಪತ್ನಿಯ ಮೇಲೆ ಹದ್ದಿನ ಕಣ್ಣಿಟ್ಟಿದ್ದಾನೆ ಜಯಂತ್. ಮನೆಯಲ್ಲಿದ್ದಾಗ ಯಾರ ಜತೆಗೂ ಫೋನ್‌ನಲ್ಲಿ ಮಾತನಾಡಬಾರದೆಂದು, ನೆಟ್‌ವರ್ಕ್‌ ಕಡಿತಗೊಳಿಸಿದ್ದಾನೆ. ಲ್ಯಾಂಡ್‌ಲೈನ್‌ ಫೋನ್‌ನ ವೈರ್‌ ಕಟ್‌ ಮಾಡಿದ್ದಾನೆ. ಹೀಗೆ ಒಂದಾದ ಮೇಲೊಂದು ಚಿತ್ರ ವಿಚಿತ್ರ ವರ್ತನೆ ತೋರುತ್ತಿದ್ದಾನೆ. ಪತಿಯ ಈ ವರ್ತನೆಯೂ ಜಾನುಗೂ ಅಸಹನೀಯ ಎನಿಸತೊಡಗಿದೆ.

ಭಾವ ತೀರ ಯಾನ ಸಿನಿಮಾದಲ್ಲಿ ಭಾಗಿ

ಈ ನಡುವೆಯೇ ಇದೇ ಸೀರಿಯಲ್‌ನಿಂದ ಜಾಹ್ನವಿ ಪಾತ್ರಧಾರಿ ನಟಿ ಚಂದನಾ ಅನಂತಕೃಷ್ಣ ಹೊರಬಂದಿದ್ದಾರೆ ಎನ್ನಲಾಗುತ್ತಿದೆ. ಅದಕ್ಕೆ ಕಾರಣ; ಭಾವ ತೀರ ಯಾನ ಸಿನಿಮಾ. ಭಾವ ತೀರ ಯಾನ ಚಿತ್ರದಲ್ಲಿ ಚಂದನಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಸಿನಿಮಾದ ಶೂಟಿಂಗ್‌ ಸಹ ನಡೆಯುತ್ತಿದ್ದು, ಇತ್ತೀಚೆಗಷ್ಟೇ ಶಾಖಾಹಾರಿ ಸಿನಿಮಾ ಮೂಲಕ ಮೋಡಿ ಮಾಡಿದ್ದ ಸಂಗೀತ ನಿರ್ದೇಶಕ ಮಯೂರ ಅಂಬೇಕಲ್ಲು ಹಾಗೂ ಅವರ ಸ್ನೇಹಿತ ತೇಜಸ್‌ ಕಿರಣ್‌ ಈ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಧೃತಿ ಹೆಸರಿನ ಪಾತ್ರದಲ್ಲಿಯೂ ಚಂದನಾ ನಟಿಸುತ್ತಿದ್ದಾರೆ.

ನಟಿ ಚಂದನಾ ಅನಂತಕೃಷ್ಣ ಸ್ಪಷ್ಟನೆ

ಈಗ ಇದೇ ಸಿನಿಮಾ ಸಲುವಾಗಿ ಲಕ್ಷ್ಮೀ ನಿವಾಸ ಧಾರಾವಾಹಿಯನ್ನು ಕೈಬಿಟ್ಟಿದ್ದಾರೆ. ಡೇಟ್ಸ್‌ ಸಮಸ್ಯೆಯಿಂದಾಗಿ ಸೀರಿಯಲ್‌ಗೆ ಗುಡ್ ಬೈ ಹೇಳಿ, ಸಿನಿಮಾದಲ್ಲಿಯೇ ಮುಂದುವರಿಯುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇದೀಗ ಇದೇ ವದಂತಿಗೆ ನಟಿ ಚಂದನಾ ಸ್ಪಷ್ಟನೆ ನೀಡಿದ್ದಾರೆ. “ಲಕ್ಷ್ಮೀ ನಿವಾಸ ಸೀರಿಯಲ್‌ ತ್ಯಜಿಸಲಿದ್ದೇನೆ ಎಂಬ ವದಂತಿಗಳು ನನ್ನ ಕಿವಿಗೂ ಬಿದ್ದಿವೆ. ಈ ಮೂಲಕ ನನ್ನ ಅಭಿಮಾನಿಗಳು ಮತ್ತು ವೀಕ್ಷಕರಿಗೆ ಹೇಳುವುದೆನೆಂದರೆ, ನಾನು ಯಾವುದೇ ಕಾರಣಕ್ಕೂ ಈ ಸೀರಿಯಲ್‌ ತ್ಯಜಿಸುತ್ತಿಲ್ಲ. ಜಾಹ್ನವಿಯಾಗಿ ನಾನು ನಿಮ್ಮ ಜತೆಗೇ ಇರುತ್ತೇನೆ. ನಿಮ್ಮ ಪ್ರೀತಿ ಸದಾ ನನ್ನ ಜತೆಗಿರಲಿ” ಎಂದು ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿ ಶೇರ್‌ ಮಾಡಿದ್ದಾರೆ.

ಲಕ್ಷ್ಮೀ ನಿವಾಸ ಧಾರಾವಾಹಿ ಪಾತ್ರವರ್ಗ

ನಿರ್ಮಾಣ; ಸಾಯಿ ನಿರ್ಮಲ ಪ್ರೊಡಕ್ಷನ್‌

ನಿರ್ದೇಶನ: ಆದರ್ಶ್ ಉಮೇಶ್ ಹೆಗಡೆ

ಶ್ವೇತಾ: ಲಕ್ಷ್ಮೀ

ಜಿಂಬೆ ಅಶೋಕ್‌: ಶ್ರೀನಿವಾಸ

ದೀಪಕ್‌ ಸುಬ್ರಹ್ಮಣ್ಯ: ಜಯಂತ್‌

ಚಂದನಾ ಅನಂತಕೃಷ್ಣ: ಜಾಹ್ನವಿ

ದಿಶಾ ಮದನ್:‌ ಭಾವನಾ

ಧನಂಜಯ್:‌ ಸಿದ್ದೇಗೌಡ

ಲಕ್ಷ್ಮೀ ಪಡಗೆರೆ

ಅಜಯ್‌ ರಾಜ್‌

ದಿವ್ಯಶ್ರೀ

ಮಧು ಹೆಗಡೆ

ರೂಪಿಕಾ

ಟಿ20 ವರ್ಲ್ಡ್‌ಕಪ್ 2024