ಕನ್ನಡ ಸುದ್ದಿ  /  ಮನರಂಜನೆ  /  ಪತ್ನಿ ಜತೆ ಸಲುಗೆಯಿಂದ ಮಾತನಾಡಿದ ಎಂಬ ಕಾರಣಕ್ಕೆ ಆತನನ್ನೇ ಕೊಲ್ಲಲು ಯತ್ನಿಸಿದ ಸೈಕೋ ಜಯಂತ್!‌ ‘ಇವ್ನಾರ್ ಗುರೂ ಹಿಂಗೆ’ ಎಂದ ವೀಕ್ಷಕ

ಪತ್ನಿ ಜತೆ ಸಲುಗೆಯಿಂದ ಮಾತನಾಡಿದ ಎಂಬ ಕಾರಣಕ್ಕೆ ಆತನನ್ನೇ ಕೊಲ್ಲಲು ಯತ್ನಿಸಿದ ಸೈಕೋ ಜಯಂತ್!‌ ‘ಇವ್ನಾರ್ ಗುರೂ ಹಿಂಗೆ’ ಎಂದ ವೀಕ್ಷಕ

ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಜಯಂತ್‌ನ ಅತಿಯಾದ ಪ್ರೀತಿ, ಜಾಹ್ನವಿ ಗಮನಕ್ಕೆ ಬಂದಿದೆಯಾದರೂ, ಅದರ ಹಿಂದಿನ ಅಸಲಿ ವಿಚಾರ ಮಾತ್ರ ಆಕೆಗೆ ತಿಳಿದಿಲ್ಲ. ಇದೀಗ ಪತ್ನಿಯನ್ನು ಮಾತನಾಡಿಸಿದ ಕಾಲೇಜು ಸ್ನೇಹಿತನನ್ನೇ ಕೊಲ್ಲಲು ಸಂಚು ರೂಪಿಸಿದ್ದಾನೆ ಸೈಕೋ ಜಯಂತ್.‌

ಪತ್ನಿ ಜತೆ ಸಲುಗೆಯಿಂದ ಮಾತನಾಡಿದ ಎಂಬ ಕಾರಣಕ್ಕೆ ಆತನನ್ನೇ ಕೊಲ್ಲಲು ಯತ್ನಿಸಿದ ಸೈಕೋ ಜಯಂತ್!‌ ‘ಇವ್ನಾರ್ ಗುರೂ ಹಿಂಗೆ’ ಎಂದ ವೀಕ್ಷಕ
ಪತ್ನಿ ಜತೆ ಸಲುಗೆಯಿಂದ ಮಾತನಾಡಿದ ಎಂಬ ಕಾರಣಕ್ಕೆ ಆತನನ್ನೇ ಕೊಲ್ಲಲು ಯತ್ನಿಸಿದ ಸೈಕೋ ಜಯಂತ್!‌ ‘ಇವ್ನಾರ್ ಗುರೂ ಹಿಂಗೆ’ ಎಂದ ವೀಕ್ಷಕ

Lakshmi Nivasa Serial: ಜೀ ಕನ್ನಡದಲ್ಲಿನ ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಸೈಕೋ ಪತಿ ಜಯಂತ್‌, ಪತ್ನಿ ಜಾಹ್ನವಿ ಮೇಲಿನ ಅತಿಯಾದ ಪ್ರೀತಿಗೆ ಚಿತ್ರ ವಿಚಿತ್ರವಾಗಿ ಆಡುತ್ತಿದ್ದಾನೆ. ಯಾರೂ ಇಲ್ಲದ ಮನೆಯಲ್ಲಿ ಆಕೆಯನ್ನು ಒಂಟಿಯಾಗಿ ಬಂಧಿಸಿದ್ದಾನೆ. ಆಕೆಯ ಚಲನ ವಲನಗಳ ಮೇಲೂ ಕಣ್ಣಿಟ್ಟಿದ್ದಾನೆ. ಆಫೀಸ್‌ನಲ್ಲಿಯೇ ಕುಳಿತು ಆಕೆ ಏನೆಲ್ಲ ಮಾಡ್ತಿದ್ದಾಳೆ ಎಂಬುದನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾನೆ. ಇತ್ತೀಚೆಗಷ್ಟೇ ಹುಷಾರು ತಪ್ಪಿದ ಜಾಹ್ನವಿಗೆ ಚಿಕಿತ್ಸೆ ನೀಡಿದ ವೈದ್ಯನ ಕೈಯನ್ನೂ ಮುರಿದಿದ್ದಾನೆ.

ಟ್ರೆಂಡಿಂಗ್​ ಸುದ್ದಿ

ಪಾಪ ಇದ್ಯಾವುದೂ ಗೊತ್ತಿಲ್ಲದ ಜಾಹ್ನವಿ ಮಾತ್ರ ಪತಿಯೇ ದೈವ ಎಂದು ನಂಬಿದ್ದಾಳೆ. ಆಕೆ ಮೇಲಿನ ಅತಿಯಾದ್‌ ಪೊಸೆಸಿವ್‌ನಿಂದ, ಅವಳೆಡೆಗೆ ಕೆಟ್ಟ ದೃಷ್ಟಿ ಬೀರಿದವರ ಕಣ್ಣನ್ನೇ ಕೀಳುತ್ತಿದ್ದಾನೆ. ಹೀಗೆ ಸೈಕೋ ಜಯಂತನ ಬಗೆಬಗೆ ಮುಖಗಳ ಅನಾವರಣವಾಗುತ್ತಿದೆ. ಈ ನಡುವೆ ಜಾಹ್ನವಿ ಮದುವೆಯಾದ ಬಳಿಕ ಕಾಲೇಜಿನತ್ತ ಮುಖ ಮಾಡಿಲ್ಲ. ಹೀಗಿರುವಾಗಲೇ ಕಾಲೇಜಿನಲ್ಲಿ ಆಕೆಯ ಪರೀಕ್ಷೆಗಳು ಶುರುವಾಗಿವೆ. ಅಮ್ಮನ ಮನೆಯಿಂದಲೇ ಪರೀಕ್ಷೆಗೆ ಹೋಗುವ ಬಗ್ಗೆ ಪತಿ ಜಯಂತ್‌ ಮುಂದೆ ಹೇಳಿಕೊಂಡಿದ್ದಾಳೆ.

ಆದರೆ, ಇದಕ್ಕೆ ಆತನ ಒಪ್ಪಿಗೆ ಸಿಕ್ಕಿಲ್ಲ. ಅಮ್ಮನ ಮನೆಗೆ ಹೋದರೆ, ನಾನಿಲ್ಲಿ ಒಂಟಿಯಾಗ್ತಿನಿ. ನನಗೆ ನಿಮ್ಮನ್ನು ಬಿಟ್ಟಿರಲು ಆಗಲ್ಲ ಎನ್ನುತ್ತಾನೆ. ಕೊನೆಗೆ ನಿತ್ಯ ಪರೀಕ್ಷೆಗೆ ಕಾರಿನಲ್ಲಿಯೇ ಆಕೆಗೆ ಡ್ರಾಪ್‌ ಮಾಡುವುದಾಗಿ ಹೇಳಿದ್ದಾನೆ. ಅದರಂತೆ, ಮೊದಲ ದಿನ ಪರೀಕ್ಷೆಗೆಂದು ಪತ್ನಿ ಜಾಹ್ನವಿ ಜತೆಗೆ ಕಾಲೇಜಿಗೆ ಬಂದಿದ್ದಾನೆ ಜಯಂತ್.‌ ಕಾಲೇಜಿನಲ್ಲಿ ಸ್ನೇಹಿತರು ಸಿಗುತ್ತಿದ್ದಂತೆ, ಸಲುಗೆಯಿಂದಲೇ ಮಾತನಾಡಿದ್ದಾಳೆ ಜಾಹ್ನವಿ. ಪತ್ನಿಯ ಜತೆಗೆ ಉಳಿದ ಸ್ನೇಹಿತರೂ ಅಷ್ಟೇ ಸಲುಗೆಯಿಂದ ವರ್ತಿಸಿದ್ದಾರೆ.

ದೂರದಿಂದಲೇ ಜಾಹ್ನವಿಯನ್ನು ನೋಡಿದ ಜಯಂತ್, ಆಕೆಯ ಜತೆಗೆ ಯಾರೆಲ್ಲ ಕ್ಲೋಸ್‌ ಆಗಿದ್ದಾರೆ ಎಂಬುದನ್ನೂ ನೋಡಿದ್ದಾನೆ. ಆ ಪೈಕಿ ಓರ್ವ ಸ್ನೇಹಿತನೂ ಜಾನು ಜತೆ ಆಪ್ತವಾಗಿಯೇ ಮಾತನಾಡಿದ್ದಾನೆ. ಇದನ್ನು ನೋಡಿದ ಜಯಂತ್‌, ಗಂಡ ನಾನಿಲ್ಲಿರುವಾಗ, ಇವ್ಯಾನರು? ನನ್ನ ಚಿನ್ನುಮರಿ ಹತ್ರ ಅಷ್ಟು ಕ್ಲೋಸ್‌ ಆಗಿ ಮಾತಾಡುತ್ತಿದ್ದಾನಲ್ಲ ಎಂದು ದೂರದಿಂದಲೇ ಕೆಕ್ಕರಿಸಿ ನೋಡಿದ್ದಾನೆ. ಅಷ್ಟಕ್ಕೆ ಮುಗಿಯಲಿಲ್ಲ. ಹಾಗೇ ಕ್ಲೋಸ್‌ ಆಗಿ ಮಾತನಾಡಿದ ಅವನಿಗೂ ಒಂದು ಗತಿ ಕಾಣಿಸಲು ತೀರ್ಮಾನಿಸಿದ್ದಾನೆ ಜಯಂತ್.

ತನ್ನ ಚಿನ್ನುಮರಿ ಜತೆಗೆ ಸಲುಗೆಯಿಂದ ಮಾತನಾಡಿದ ವ್ಯಕ್ತಿಯನ್ನು ಕೊಲ್ಲಲ್ಲು ಸಂಚು ರೂಪಿಸಿರುವ ಜಯಂತ್‌, ನೇರವಾಗಿ ‌ಕಾಲೇಜಿನ ಮೊದಲ ಮಹಡಿಗೆ ಹೋಗಿದ್ದಾನೆ. ಆ ಮಹಡಿಯ ಕೆಳಗೇ ಜಾಹ್ನವಿ ಜತೆಗೆ ಕಾಮನ್‌ ಆಗಿ ಮಾತನಾಡಿದ ವ್ಯಕ್ತಿ ನಿಂತಿದ್ದಾನೆ. ಆಗ ಅಲ್ಲಿಯೇ ಕಾಂಪೌಂಡ್‌ ಮೇಲಿದ್ದ ಶೋ ಕುಂಡವನ್ನು ಬೀಳಿಸಿದ್ದಾನೆ. ಆ ಕುಂಡ ಆತನ ತಲೆ ಮೇಲೆ ಬಿತ್ತಾ? ಪತ್ನಿ ಮೇಲಿನ ಅತಿಯಾದ ವ್ಯಾಮೋಹಕ್ಕೆ ಆಕೆಯ ಸ್ನೇಹಿತನ ಜೀವಕ್ಕೂ ಸಂಚಕಾರ ತಂದ್ನಾ ಜಯಂತ್?‌ ಇಂದಿನ ಏಪಿಸೋಡ್‌ನಲ್ಲಿ ಈ ಕೌತುಕ ಬಯಲಾಗಲಿದೆ.

ಲಕ್ಷ್ಮೀ ನಿವಾಸ ಪಾತ್ರವರ್ಗ

ನಿರ್ಮಾಣ; ಸಾಯಿ ನಿರ್ಮಲ ಪ್ರೊಡಕ್ಷನ್‌

ನಿರ್ದೇಶನ: ಆದರ್ಶ್ ಉಮೇಶ್ ಹೆಗಡೆ

ಶ್ವೇತಾ: ಲಕ್ಷ್ಮೀ

ಜಿಂಬೆ ಅಶೋಕ್‌: ಶ್ರೀನಿವಾಸ

ದೀಪಕ್‌ ಸುಬ್ರಹ್ಮಣ್ಯ: ಜಯಂತ್‌

ಚಂದನಾ ಅನಂತಕೃಷ್ಣ: ಜಾಹ್ನವಿ

ದಿಶಾ ಮದನ್:‌ ಭಾವನಾ

ಧನಂಜಯ್:‌ ಸಿದ್ದೇಗೌಡ

ಲಕ್ಷ್ಮೀ ಪಡಗೆರೆ

ಅಜಯ್‌ ರಾಜ್‌

ದಿವ್ಯಶ್ರೀ

ಮಧು ಹೆಗಡೆ

ರೂಪಿಕಾ

IPL_Entry_Point