Nisha Narasappa: ಹೈ ಫೈ ಜೀವನ ನಡೆಸೋ ಶೋಕಿ; ನಿಶಾ ನರಸಪ್ಪ ಬ್ಯಾಂಕ್ ವಹಿವಾಟು ಕೋಟಿ ಕೋಟಿ!
ಕನ್ನಡ ಸುದ್ದಿ  /  ಮನರಂಜನೆ  /  Nisha Narasappa: ಹೈ ಫೈ ಜೀವನ ನಡೆಸೋ ಶೋಕಿ; ನಿಶಾ ನರಸಪ್ಪ ಬ್ಯಾಂಕ್ ವಹಿವಾಟು ಕೋಟಿ ಕೋಟಿ!

Nisha Narasappa: ಹೈ ಫೈ ಜೀವನ ನಡೆಸೋ ಶೋಕಿ; ನಿಶಾ ನರಸಪ್ಪ ಬ್ಯಾಂಕ್ ವಹಿವಾಟು ಕೋಟಿ ಕೋಟಿ!

ಸೋಷಿಯಲ್‌ ಮೀಡಿಯಾದಲ್ಲಿನ ಫೋಟೋಸ್ ನೋಡಿದರೆ, ಆರೋಪಿ ನಿಶಾ ನರಸಪ್ಪ ಸಖತ್ ಹೈ ಫೈ ಎನಿಸುವುದರಲ್ಲಿ ಎರಡನೇ ಮಾತಿಲ್ಲ. ಬಾರ್‌, ಪಬ್‌, ಐಶಾರಾಮಿ ಹೋಟೆಲ್ ಹೀಗೆ ನಿಶಾ ಹೈಫೈ ಜೀವನ ನಡೆಸುತ್ತಾ ಬಂದಿದ್ದಾರೆ.

ವಂಚನೆ ಪ್ರಕರಣ ಎದುರಿಸುತ್ತಿರುವ ನಿಶಾ ನರಸಪ್ಪ
ವಂಚನೆ ಪ್ರಕರಣ ಎದುರಿಸುತ್ತಿರುವ ನಿಶಾ ನರಸಪ್ಪ (PC: Nisha Narasappa Facebook)

Nisha Narasappa: ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಕೆಲ ದಿನಗಳಿಂದ ಭಾರೀ ಸದ್ದು ಮಾಡುತ್ತಿರುವ ನಿಶಾ ನರಸಪ್ಪ, ಇಂದಿಗೂ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಮಕ್ಕಳಿಗೆ ಸಿನಿಮಾ, ರಿಯಾಲಿಟಿ ಶೋಗಳಲ್ಲಿ ಚಾನ್ಸ್ ಕೊಡಿಸುವುದಾಗಿ ಹೇಳಿ ಪೋಷಕರಿಂದಲೇ ಈ ಲೇಡಿ ಹಣ ಎಗರಿಸಿ ಎಲ್ಲರ ಕಣ್ಣಿಗೆ ಮಣ್ಣೆರಚಿದ್ದರು. ಇದೀಗ ಪ್ರಕರಣ ತನಿಖೆಯಿಂದ ಹೊಸ ಹೊಸ ವಿಚಾರಗಳು ಹೊರ ಬೀಳುತ್ತಿವೆ.

ನಟ, ನಿರೂಪಕ ಮಾಸ್ಟರ್ ಆನಂದ್ ಪುತ್ರಿ ವಂಶಿಕಾ ಆನಂದ್ ಹೆಸರಿನಲ್ಲಿ ನಿಶಾ ನರಸಪ್ಪ ಪೋಷಕರಿಗೆ ವಂಚನೆ ಮಾಡಿದ್ದಳು. ಎನ್‌ಎನ್ ಪ್ರೊಡಕ್ಷನ್ಸ್ ಕಂಪನಿ ಮೂಲಕ ಹಣ ಪಡೆದು ಮೋಸ ಮಾಡಿದ್ದ ವಿಚಾರ ಹೊರಬರುತ್ತಿದ್ದಂತೆ, ಸದಾಶಿವನಗರ ಠಾಣೆಯಲ್ಲಿ ದೂರು ಸಹ ದಾಖಲಾಗಿತ್ತು.‌ ನಿಶಾ ಅವರನ್ನು ಬಂಧಿಸಲಾಗಿತ್ತು. ಹೀಗೆ ಬಂಧನವಾದ ಬಳಿಕ ಜೈಲಿನಿಂದಲೇ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದ್ದ ನಿಶಾ, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದರು.

"ಎನ್‌ಎನ್ ಪ್ರೊಡಕ್ಷನ್ಸ್ ಕಡೆಯಿಂದ ಹೀಗೊಂದು ಅಪ್‌ಡೇಟ್‌ ಇದೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ. ತನಿಖೆಯೂ ನಡೆಯುತ್ತಿದೆ. "ಮಾಧ್ಯಮದವರು ಮತ್ತು ಇನ್ನು ಕೆಲವರು ನನ್ನ ಬಗ್ಗೆ ಇಲ್ಲಸಲ್ಲದ್ದನ್ನು ಮಾತನಾಡುತ್ತಿದ್ದಾರೆ. ಸ್ವಲ್ಪ ತಡೀರಿ. ನಾನೇ ನಿಮ್ಮ ಮುಂದೆ ಬಂದು ಎಲ್ಲವನ್ನೂ ಮಾತನಾಡುತ್ತೇನೆ. ದಯಮಾಡಿ‌ ಸ್ವಲ್ಪ ಸಮಯ ಕೊಡಿ" ಎಂದಿದ್ದರು. ಇದೀಗ ಇದೇ ನಿಶಾ ವಂಚನೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಪೊಲೀಸರಿಗೆ ಮತ್ತೊಂದು ಶಾಕ್ ಎದುರಾಗಿದೆ.

ಬ್ಯಾಂಕ್‌ನಲ್ಲಿ ಕೋಟಿ ಕೋಟಿ ವ್ಯವಹಾರ!

ನಿಶಾ ನರಸಪ್ಪ ವಿರುದ್ಧ ಬೆಂಗಳೂರಿನ ಹಲವು ಪೊಲೀಸ್ ಠಾಣೆಗಳಲ್ಲಿ ಹತ್ತಾರು ಪ್ರಕರಣಗಳು ದಾಖಲಾಗಿವೆ. ಆ ಕೇಸ್ ವಿಚಾರವಾಗಿ ತನಿಖೆ ಆರಂಭಿಸಿರುವ ಪೊಲೀಸರು ನಿಶಾ ಬ್ಯಾಂಕ್ ವಹಿವಾಟು ಕಂಡು ದಂಗಾಗಿದ್ದಾರೆ. ಆರಂಭದಲ್ಲಿ 40 ಲಕ್ಷ ವಂಚನೆ ಆದ ಬಗ್ಗೆ ದೂರು‌ ನೀಡಿಲಾಗಿತ್ತು. ಇದೀಗ ಬ್ಯಾಂಕ್ ಖಾತೆ ಪರಿಶೀಲಿಸಿದಾಗ ಬರೋಬ್ಬರಿ 2ಕೋಟಿ ರೂಪಾಯಿಗೂ ಅಧಿಕ ವಹಿವಾಟು ನಡೆದಿರುವುದು ಬೆಳಕಿಗೆ ಬಂದಿದೆ! ಆದರೆ ಇಷ್ಟೆಲ್ಲ ಹಣದ ವಹಿವಾಟು ನಡೆದರೂ ಖಾತೆಯಲ್ಲಿ ಸದ್ಯ ಇದ್ದದ್ದು ಕೇವಲ 8 ಸಾವಿರ ರೂ. ಮಾತ್ರ.

ಹೈ ಫೈ ಶೋಕಿಗೆ ಹಣ ಖರ್ಚು?

ಸೋಷಿಯಲ್‌ ಮೀಡಿಯಾದಲ್ಲಿನ ಫೋಟೋಸ್ ನೋಡಿದರೆ, ಆರೋಪಿ ನಿಶಾ ನರಸಪ್ಪ ಸಖತ್ ಹೈ ಫೈ ಎನಿಸುವುದರಲ್ಲಿ ಎರಡನೇ ಮಾತಿಲ್ಲ. ಬಾರ್‌, ಪಬ್‌, ಐಶಾರಾಮಿ ಹೋಟೆಲ್ ಹೀಗೆ ನಿಶಾ ಹೈಫೈ ಜೀವನ ನಡೆಸುತ್ತಾ ಬಂದಿದ್ದಾರೆ. ಇದಷ್ಟೇ ಅಲ್ಲದೆ ಅಧಿಕ ಬಡ್ಡಿಗೆ ಹಣ ಪಡೆದು ವಂಚಿಸಿದ ಆರೋಪವೂ ಕೇಳಿ ಬಂದಿದೆ. ಆದರೆ ಇದಕ್ಕೆ ಸಂಬಂಧಿಸಿದ ಯಾವುದೇ ದೂರುಗಳು ಈವರೆಗೂ ದಾಖಲಾಗಿಲ್ಲ.

Whats_app_banner