ಅನುಬಂಧ ಅವಾರ್ಡ್ಸ್‌ 2024 ಕಾರ್ಯಕ್ರಮದಲ್ಲಿ ಹೆಚ್‌ಆರ್‌ ರಂಗನಾಥ್‌; ಆ ದನಿ ಕೇಳುತ್ತಿದ್ದಂತೆ ಭಾವುಕರಾಗಿ ನಿಂತ ಖಡಕ್‌ ವ್ಯಕ್ತಿತ್ವದ ರಂಗಣ್ಣ-kannada television news public tv head hr ranganath in colors kannada anubandha awards 2024 program rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಅನುಬಂಧ ಅವಾರ್ಡ್ಸ್‌ 2024 ಕಾರ್ಯಕ್ರಮದಲ್ಲಿ ಹೆಚ್‌ಆರ್‌ ರಂಗನಾಥ್‌; ಆ ದನಿ ಕೇಳುತ್ತಿದ್ದಂತೆ ಭಾವುಕರಾಗಿ ನಿಂತ ಖಡಕ್‌ ವ್ಯಕ್ತಿತ್ವದ ರಂಗಣ್ಣ

ಅನುಬಂಧ ಅವಾರ್ಡ್ಸ್‌ 2024 ಕಾರ್ಯಕ್ರಮದಲ್ಲಿ ಹೆಚ್‌ಆರ್‌ ರಂಗನಾಥ್‌; ಆ ದನಿ ಕೇಳುತ್ತಿದ್ದಂತೆ ಭಾವುಕರಾಗಿ ನಿಂತ ಖಡಕ್‌ ವ್ಯಕ್ತಿತ್ವದ ರಂಗಣ್ಣ

ಕಲರ್ಸ್‌ ಕನ್ನಡದ ಅನುಬಂಧ ಅವಾರ್ಡ್ಸ್‌ 2024 ಕಾರ್ಯಕ್ರಮ ಸೆಪ್ಟೆಂಬರ್‌ 20, 21 ಹಾಗೂ 22 ರಂದು ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿದೆ. ವಾಹಿನಿಯು ಕಾರ್ಯಕ್ರಮದ ವಿಡಿಯೋ ತುಣುಕುಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದೆ. ಪಬ್ಲಿಕ್‌ ಟಿವಿ ಮುಖ್ಯಸ್ಥ ಹೆಚ್‌ಆರ್‌ ರಂಗನಾಥ್‌ ಕೂಡಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

ಅನುಬಂಧ ಅವಾರ್ಡ್ಸ್‌ 2024 ಕಾರ್ಯಕ್ರಮದಲ್ಲಿ ಹೆಚ್‌ಆರ್‌ ರಂಗನಾಥ್‌; ಆ ದನಿ ಕೇಳುತ್ತಿದ್ದಂತೆ ಭಾವುಕರಾಗಿ ನಿಂತ ಖಡಕ್‌ ವ್ಯಕ್ತಿತ್ವದ ರಂಗಣ್ಣ
ಅನುಬಂಧ ಅವಾರ್ಡ್ಸ್‌ 2024 ಕಾರ್ಯಕ್ರಮದಲ್ಲಿ ಹೆಚ್‌ಆರ್‌ ರಂಗನಾಥ್‌; ಆ ದನಿ ಕೇಳುತ್ತಿದ್ದಂತೆ ಭಾವುಕರಾಗಿ ನಿಂತ ಖಡಕ್‌ ವ್ಯಕ್ತಿತ್ವದ ರಂಗಣ್ಣ (PC: Colors Kannada)

ಪ್ರತಿ ವರ್ಷದಂತೆ ಈ ಬಾರಿ ಕೂಡಾ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಅನುಬಂಧ ಅವಾರ್ಡ್‌ ಕಾರ್ಯಕ್ರಮ ಪ್ರಸಾರವಾಗಲಿದೆ. ಈಗಾಗಲೇ ಕಾರ್ಯಕ್ರಮದ ಚಿತ್ರಿಕರಣ ನಡೆದಿದ್ದು ಸೆಪ್ಟೆಂಬರ್‌ 20 ರಿಂದ ಮೂರು ದಿನಗಳ ಕಾಲ, ಅಂದರೆ ಸೆ. 20, 21 ಹಾಗೂ 22 ರಂದು ಕಲರ್‌ಫುಲ್‌ ಕಾರ್ಯಕ್ರಮ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಕಿರುತೆರೆ ವೀಕ್ಷಕರು ಕೂಡಾ ಕಾರ್ಯಕ್ರಮ ವೀಕ್ಷಿಸಲು ಕಾಯುತ್ತಿದ್ದಾರೆ.

ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ

ಕಾರ್ಯಕ್ರಮದಲ್ಲಿ ಕಲರ್ಸ್‌ ಕನ್ನಡ ಧಾರಾವಾಹಿ ಕುಟುಂಬ, ರಿಯಾಲಿಟಿ ಶೋ ಕಲಾವಿದರು ಪತ್ಯೇಕ ಡ್ರೆಸ್‌ಕೋಡ್‌ನಲ್ಲಿ ಮಿಂಚಿದ್ದಾರೆ. ಸ್ಯಾಂಡಲ್‌ವುಡ್‌ನ ಅನೇಕ ನಟ-ನಟಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಸಮಾಜದ ವಿವಿಧ ಕ್ಷೇತ್ರದ ಗಣ್ಯರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಈ ಬಾರಿ ಜನ ಮೆಚ್ಚಿದ ಸಂಸಾರ, ಜನ ಮೆಚ್ಚಿದ ಯೂತ್‌ ಐಕಾನ್‌, ಜನ ಮೆಚ್ಚಿದ ಹೊಸ ಪರಿಚಯ, ಜನ ಮೆಚ್ಚಿದ ಕಾಮಿಡಿಯನ್‌, ಜನ ಮೆಚ್ಚಿದ ಎಂಟರ್‌ಟೈನರ್‌, ಜನ ಮೆಚ್ಚಿದ ಶಕುನಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗಿದೆ. ಈ ಬಾರಿ ಯಾರಿಗೆ ಯಾವ ಪ್ರಶಸ್ತಿ ದೊರೆತಿದೆ ಎಂದು ನೋಡಲು ಕಿರುತೆರೆ ವೀಕ್ಷಕರು ಕೂಡಾ ಕಾಯುತ್ತಿದ್ದಾರೆ. ವಾಹಿನಿಯು ತನ್ನ ಅಧಿಕೃತ ಸೋಷಿಯಲ್‌ ಮೀಡಿಯಾ ಪೇಜ್‌ನಲ್ಲಿ ಅನುಬಂಧ ಅವಾರ್ಡ್‌ ಕಾರ್ಯಕ್ರಮದ ತುಣುಕುಗಳನ್ನು ಹಂಚಿಕೊಳ್ಳುತ್ತಾ ಬಂದಿದೆ.

ಖ್ಯಾತ ಪತ್ರಕರ್ತ, ಪಬ್ಲಿಕ್‌ ಟಿವಿಯ ಮುಖ್ಯಸ್ಥ ಹೆಚ್‌.ಆರ್.‌ ರಂಗನಾಥ್‌ ಕೂಡಾ ಈ ಬಾರಿಯ ಕಲರ್ಸ್‌ ಕನ್ನಡ ಅನುಬಂಧ ಅವಾರ್ಡ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಈ ವಿಡಿಯೋ ತುಣುಕನ್ನು ಕೂಡಾ ವಾಹಿನಿಯು ತನ್ನ ಅಧಿಕೃತ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದೆ. ಹೆಚ್‌.ಆರ್.‌ ರಂಗನಾಥ್‌ ಖಡಕ್‌ ವ್ಯಕ್ತಿತ್ವದ ಪತ್ರಕರ್ತ. ಕೆಲವರಿಗಂತೂ ಇವರನ್ನು ರಂಗಣ್ಣ ಎಂದು ಕರೆಯುವುದೇ ಬಹಳ ಇಷ್ಟ. ರಂಗಣ್ಣ ಒಮ್ಮೆ ಸುದ್ದಿ ಹೇಳಲು ಕುಳಿತರೆ ಯಾರಿಗೂ ಹೆದರದೆ, ಸಮಾಜದಲ್ಲಿ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಕಿಡಿ ಕಾರುತ್ತಾರೆ. ತಪ್ಪಿತಸ್ಥರಿಗೆ ಚಳಿ ಬಿಡಿಸುತ್ತಾರೆ. ರಾಜಕೀಯ ನಾಯಕರ ಬೆವರಿಳಿಸುತ್ತಾರೆ. ಹಲವರಿಗೆ ಬುದ್ಧಿ ಹೇಳಿದ್ದಾರೆ. ಇಂತಹ ವ್ಯಕ್ತಿತ್ವದ ರಂಗನಾಥ್‌ ಅವರು, ಕಲರ್ಸ್‌ ಕನ್ನಡ ವೇದಿಕೆ ಮೇಲೆ ಭಾವುಕರಾಗಿದ್ದಾರೆ.

ಹೆಚ್‌ಆರ್‌ ರಂಗನಾಥ್‌ಗೆ ವೇದಿಕೆಯಲ್ಲಿ ಪ್ರಶ್ನೆಗಳ ಸುರಿಮಳೆ

ವೇದಿಕೆಗೆ ಹೆಚ್‌ಆರ್‌ ರಂಗನಾಥ್‌ ಬರುತ್ತಿದ್ದಂತೆ ನಿರೂಪಕ ನಿರಂಜನ್‌ ದೇಶಪಾಂಡೆ, ಅವರನ್ನು ಬರಮಾಡಿಕೊಳ್ಳುತ್ತಾರೆ. ನೀವು ಏಕೆ ಎಲ್ಲರಿಗೂ ಬೈಯ್ಯುತ್ತೀರ? ಎಂದು ಪುಟಾಣಿಯೊಬ್ಬಳು ಅವರನ್ನು ಪ್ರಶ್ನಿಸುತ್ತಾಳೆ. ನನ್ನ ಜೊತೆಗೂ ಆಂಕರಿಂಗ್‌ ಮಾಡಿ ಎನ್ನುತ್ತಾಳೆ. ಈಗ ಒಬ್ಬಳು ಬಲಿಪಶು ಇದ್ದಾಳೆ, ಈಗ ನೀನೊಬ್ಬಳೂ ಬಂದು ಸೇರಿಕೋ ಎಂದು ರಂಗನಾಥ್‌ ನಗೆ ಚಟಾಕಿ ಹಾರಿಸುತ್ತಾರೆ. ನಾವು ನಿಮ್ಮ ಮಗಳ ಕೈಯಿಂದ ನಿಮ್ಮ ಬಗ್ಗೆ ಪತ್ರ ಬರೆಸಿಕೊಂಡಿದ್ದೇವೆ ಎಂದು ನಿರೂಪಕ ನಿರಂಜನ್‌ ದೇಶಪಾಂಡೆ ಹೇಳುತ್ತಿದ್ದಂತೆ ವೇದಿಕೆ ಮೇಲೆ ಅಪ್ಪ ಎಂಬ ದನಿ ಕೇಳುತ್ತದೆ. ಅದನ್ನು ಕೇಳುತ್ತಿದ್ದಂತೆ ರಂಗನಾಥ್‌ ಸೈಲೆಂಟ್‌ ಅಗಿ ನಿಂತುಬಿಡುತ್ತಾರೆ.

2021 ರಲ್ಲಿ ಹೆಚ್‌ಆರ್‌ ರಂಗನಾಥ್‌ ತಮ್ಮ ಮಗಳ ಮದುವೆ ಮಾಡಿದ್ದರು. ಅವರ ಪುತ್ರಿ ಪಯಸ್ವಿನಿ ಈಗ ಪತಿ ನಿಖಿಲ್‌ ಭಾಸ್ಕರ್‌ ಜೊತೆ ವಿದೇಶದಲ್ಲಿ ನೆಲೆಸಿದ್ದಾರೆ. ಅವರ ಆಡಿಯೋ ಸಂದೇಶವನ್ನು ಕಾರ್ಯಕ್ರಮದಲ್ಲಿ ಪ್ರಸಾರ ಮಾಡಲಾಗಿದೆ. ಮಗಳ ದನಿ ಕೇಳುತ್ತಿದ್ದಂತೆ ರಂಗನಾಥ್‌ ಭಾವುಕರಾಗಿದ್ದಾರೆ. ಈ ವಿಡಿಯೋ ತುಣುಕು ಈಗ ವೈರಲ್‌ ಆಗುತ್ತಿದೆ. ಪೂರ್ತಿ ಕಾರ್ಯಕ್ರಮ ನೋಡಲು ಕಿರುತೆರೆಪ್ರಿಯರು ಕಾಯುತ್ತಿದ್ದಾರೆ. ಅನುಬಂಧ ಅವಾರ್ಡ್‌ ಕಾರ್ಯಕ್ರಮ ಸೆಪ್ಟೆಂಬರ್‌ 20 ಶುಕ್ರವಾರದಿಂದ ಭಾನುವಾರದವರೆಗೆ ಸಂಜೆ 7 ಗಂಟೆಗೆ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.

mysore-dasara_Entry_Point