ಕನ್ನಡ ಸುದ್ದಿ  /  Entertainment  /  Kannada Television News Rakshit Shetty S Sapta Sagaradaache Ello Side B World Television Premier Date Locked Mnk

Sapta Sagaradaache Ello Side B: ಕಿರುತೆರೆಗೆ ರಕ್ಷಿತ್‌ ಶೆಟ್ಟಿಯ ‘ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ’; ಹೀಗಿದೆ ಪ್ರಸಾರದ ವಿವರ

ರಕ್ಷಿತ್‌ ಶೆಟ್ಟಿ ನಾಯಕನಾಗಿ ನಟಿಸಿರುವ ಸಪ್ತಸಾಗರದಾಚೆ ಎಲ್ಲೋ ಸೈಡ್‌ ಬಿ ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ ಹಿಟ್‌ ಆಗಿತ್ತು. ಒಟಿಟಿಯಲ್ಲೂ ಒಳ್ಳೇ ನಂಬರ್ಸ್‌ ಪಡೆದಿತ್ತು. ಈಗ ಕಿರುತೆರೆಗೆ ಆಗಮಿಸುತ್ತಿದೆ. ಪ್ರಸಾರಕ್ಕೆ ದಿನಾಂಕ ಮತ್ತು ಸಮಯವೂ ನಿಗದಿಯಾಗಿದೆ.

Sapta Sagaradaache Ello Side B: ಕಿರುತೆರೆಗೆ ರಕ್ಷಿತ್‌ ಶೆಟ್ಟಿಯ ‘ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ’; ಹೀಗಿದೆ ಪ್ರಸಾರದ ವಿವರ
Sapta Sagaradaache Ello Side B: ಕಿರುತೆರೆಗೆ ರಕ್ಷಿತ್‌ ಶೆಟ್ಟಿಯ ‘ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ’; ಹೀಗಿದೆ ಪ್ರಸಾರದ ವಿವರ

Sapta Sagaradaache Ello Side B: ಕಳೆದ ವರ್ಷ ತೆರೆಕಂಡು, ಕರ್ನಾಟಕ ಮಾತ್ರವಲ್ಲದೆ ಪರಭಾಷಿಕರಿಂದಲೂ ಮೆಚ್ಚುಗೆ ಪಡೆದಿತ್ತು ರಕ್ಷಿತ್‌ ಶೆಟ್ಟಿ ನಾಯಕನಾಗಿ ನಟಿಸಿದ ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ (Sapta Sagaradaache ello side B) ಸಿನಿಮಾ. ಚಿತ್ರಮಂದಿರದಲ್ಲಿ ಹಿಟ್‌ ಆದ ಬಳಿಕ ಒಟಿಟಿಯಲ್ಲೂ ಈ ಸಿನಿಮಾದ ಕಾಯುವಿಕೆಗೆ ಅದೆಷ್ಟೋ ಮಂದಿ ಕಾದಿದ್ದೇ ಬಂತು. ಕೊನೆಗೂ ಒಂದಷ್ಟು ಕಾಯಿಸಿ, ಭರ್ಜರಿ ಸರ್ಪ್ರೈಸ್‌ ಮೂಲಕವೇ ಅಮೆಜಾನ್‌ ಪ್ರೈಂನಲ್ಲಿ ಸ್ಟ್ರೀಮಿಂಗ್‌ ಆಗಿತ್ತು . ಈಗ ಇದೇ ಸಿನಿಮಾ ಕಿರುತೆರೆಯಲ್ಲಿ ಪ್ರಸಾರವಾಗಲಿದೆ.

ಜೀ ಕನ್ನಡ ವಾಹಿನಿಯು ಕೇವಲ ಧಾರಾವಾಹಿ, ರಿಯಾಲಿಟಿ ಶೋಗಳಷ್ಟೇ ಅಲ್ಲದೇ ಸದಭಿರುಚಿಯುಳ್ಳ ಸಿನಿಮಾಗಳನ್ನು ಪ್ರಸಾರ ಮಾಡುವುದರ ಮೂಲಕ ನೋಡುಗರನ್ನು ವಿಶೇಷವಾಗಿ ರಂಜಿಸುತ್ತಿದೆ. ಕೆಜಿಎಫ್, ವಿಕ್ರಾಂತ್ ರೋಣ, ಗರುಡ ಗಮನ ವೃಷಭ ವಾಹನ, ಸಪ್ತಸಾಗರದಾಚೆ ಎಲ್ಲೋ ಸೈಡ್‌ ಎ ಸೇರಿದಂತೆ ಹತ್ತು ಹಲವು ಜನಪ್ರಿಯ ಚಿತ್ರಗಳನ್ನು ಪ್ರದರ್ಶಿಸಿರುವ ಹೆಗ್ಗಳಿಕೆ ಜೀ ಕನ್ನಡದ್ದು. ಇದೀಗ ಆ ಸಾಲಿಗೆ ಪ್ರೇಕ್ಷಕರು ಮೆಚ್ಚಿ ಕೊಂಡಾಡಿರುವ ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ ಸಿನಿಮಾವನ್ನು ಕೂಡ ಪ್ರಸಾರ ಮಾಡಲು ಸಜ್ಜಾಗಿದೆ.

ನಿರ್ದೇಶಕ ಹೇಮಂತ್‌ ಎಂ ರಾವ್‌ ನಿರ್ದೇಶನದಲ್ಲಿ ಮೂಡಿಬಂದ ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ ಚಿತ್ರವನ್ನು ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಾಯಕನಾಗಿ ನಟಿಸುವುದರ ಜತೆಗೆ ನಿರ್ಮಾಣವನ್ನೂ ಮಾಡಿದ್ದಾರೆ. ಚರಣ್ ರಾಜ್ ಸಂಯೋಜನೆಯ ಹಾಡುಗಳು ಎಲ್ಲರ ಗಮನ ಸೆಳೆದಿವೆ. ಅದ್ವೈತ ಗುರುಮೂರ್ತಿ ಅವರ ಛಾಯಾಗ್ರಹಣ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇನ್ನು ಈ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಹಾಗೂ ಚೈತ್ರ ಜೆ ಆಚಾರ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಈ ಜೋಡಿಗೂ ಪೂರ್ಣಾಂಕ ಸಿಕ್ಕಿದೆ.

ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಎ ರಿಲೀಸ್ ಆಗಿ ವೀಕ್ಷಕರಿಂದ ಜನಮೆಚ್ಚುಗೆ ಗಳಿಸಿದಾಗ, ಸಪ್ತ ಸಾಗರದಾಚೆ ಎಲ್ಲೋ ಸೈಡ್‌ ಬಿ ಯಾವಾಗ ಬರುತ್ತೆ ಎಂಬ ಪ್ರಶ್ನೆಯಿತ್ತು. ಆ ಪ್ರಶ್ನೆಗೂ ಉತ್ತರ ಸಿಕ್ಕಿದೆ. ಈ ನಡುವೆ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿದ್ದ SIDE B ಸೂಪರ್ ಹಿಟ್ ಆಗಿ ಪ್ರೇಕ್ಷಕರ ಮನಗೆದ್ದಿತು. ಒಟಿಟಿಯಲ್ಲೂ ಮೋಡಿ ಮಾಡಿತ್ತು. ಇದೀಗ ಕಿರುತೆರೆಯಲ್ಲಿ ಮೊಟ್ಟ ಮೊದಲ ಬಾರಿಗೆ ಪ್ರಸಾರವಾಗಲು ಅಣಿಯಾಗಿದೆ ಈ ಚಿತ್ರ. ಅಂದಹಾಗೆ, ಇದೇ ಮಾರ್ಚ್ 24ರ ಭಾನುವಾರದಂದು ಜೀ ಕನ್ನಡ ವಾಹಿನಿಯಲ್ಲಿ ಸಪ್ತಸಾಗರದಾಚೆ ಎಲ್ಲೋ SIDE B ಚಿತ್ರ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ.

IPL_Entry_Point