ಅಲ್ಲಿ ರುದ್ರಪ್ರತಾಪ್‌ನಿಗೆ ಖೆಡ್ಡಾ ತೋಡಲು ಶ್ರೀರಾಮನ ತಂತ್ರ; ಇಲ್ಲಿ ಭಾವನಾ ಮೈ ಮುಟ್ಟಿದ ಮ್ಯಾನೇಜರ್‌ಗೆ ಬಿಸಿನೀರು ಕಾಯಿಸಿದ ಸಿದ್ದೇಗೌಡ
ಕನ್ನಡ ಸುದ್ದಿ  /  ಮನರಂಜನೆ  /  ಅಲ್ಲಿ ರುದ್ರಪ್ರತಾಪ್‌ನಿಗೆ ಖೆಡ್ಡಾ ತೋಡಲು ಶ್ರೀರಾಮನ ತಂತ್ರ; ಇಲ್ಲಿ ಭಾವನಾ ಮೈ ಮುಟ್ಟಿದ ಮ್ಯಾನೇಜರ್‌ಗೆ ಬಿಸಿನೀರು ಕಾಯಿಸಿದ ಸಿದ್ದೇಗೌಡ

ಅಲ್ಲಿ ರುದ್ರಪ್ರತಾಪ್‌ನಿಗೆ ಖೆಡ್ಡಾ ತೋಡಲು ಶ್ರೀರಾಮನ ತಂತ್ರ; ಇಲ್ಲಿ ಭಾವನಾ ಮೈ ಮುಟ್ಟಿದ ಮ್ಯಾನೇಜರ್‌ಗೆ ಬಿಸಿನೀರು ಕಾಯಿಸಿದ ಸಿದ್ದೇಗೌಡ

ಸೀತಾ ರಾಮ ಸೀರಿಯಲ್‌ನಲ್ಲಿ ಲಾಯರ್‌ ರುದ್ರಪ್ರತಾಪ್‌ಗೆ ಖೆಡ್ಡಾ ತೋಡಲು ರಾಮ್‌ ಸಿದ್ಧವಾಗಿದ್ರೆ, ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಭಾವನಾ ಮೇಡಂ ಮೈ ಮುಟ್ಟಿದ ಎಂಬ ಕಾರಣಕ್ಕೆ ಮ್ಯಾನೇಜರ್‌ನ ಕೈ ಮುರಿದಿದ್ದಾನೆ ಸಿದ್ದೇಗೌಡ.

ಅಲ್ಲಿ ರುದ್ರಪ್ರತಾಪ್‌ನಿಗೆ ಖೆಡ್ಡಾ ತೋಡಲು ಶ್ರೀರಾಮನ ತಂತ್ರ; ಇಲ್ಲಿ ಭಾವನಾ ಮೈ ಮುಟ್ಟಿದ ಬಾಸ್‌ಗೆ ಬಿಸಿನೀರು ಕಾಯಿಸಿದ ಸಿದ್ದೇಗೌಡ
ಅಲ್ಲಿ ರುದ್ರಪ್ರತಾಪ್‌ನಿಗೆ ಖೆಡ್ಡಾ ತೋಡಲು ಶ್ರೀರಾಮನ ತಂತ್ರ; ಇಲ್ಲಿ ಭಾವನಾ ಮೈ ಮುಟ್ಟಿದ ಬಾಸ್‌ಗೆ ಬಿಸಿನೀರು ಕಾಯಿಸಿದ ಸಿದ್ದೇಗೌಡ

Kannada Serials: ಜೀ ಕನ್ನಡದಲ್ಲಿ ಪ್ರಸಾರವಾಗುವ ಸೀತಾ ರಾಮ ಮತ್ತು ಲಕ್ಷ್ಮೀ ನಿವಾಸ ಸೀರಿಯಲ್‌ ನೋಡುಗರ ಗಮನ ಸೆಳೆಯುತ್ತಿದೆ. ಟಿಆರ್‌ಪಿ ವಿಚಾರದಲ್ಲೂ ಲಕ್ಷ್ಮೀ ನಿವಾಸ ಮೊದಲ ಸ್ಥಾನದಲ್ಲಿದ್ದರೆ, ಸೀತಾ ರಾಮ ಸೀರಿಯಲ್ ಟಾಪ್‌ ಐದರಲ್ಲಿದೆ. ಈ ಎರಡು ಸೀರಿಯಲ್‌ನಲ್ಲಿನ ಒಂದಿಲ್ಲೊಂದು ಟ್ವಿಸ್ಟ್‌ ನೋಡುಗರನ್ನು ಹಿಡಿದು ಕೂರಿಸುತ್ತಿದೆ. ಸೀತಾ ರಾಮ ಸೀರಿಯಲ್‌ನಲ್ಲಿ ಸೀತಾ ಮತ್ತು ರಾಮನ ಮದುವೆ ವಿಚಾರದ ಜತೆಗೆ ರುದ್ರಪ್ರತಾಪ್‌ನ ಅಸಲಿ ಆಟ ರಾಮನ ಗಮನಕ್ಕೆ ಬಂದರೆ, ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಒಂದು ಹೆಣ್ಣಿನ ಜತೆಗೆ ಕೆಟ್ಟದಾಗಿ ನಡೆದುಕೊಂಡ ಬಾಸ್‌ಗೆ ಬಿಸಿನೀರು ಕಾಯಿಸಿದ್ದಾನೆ ಸಿದ್ದೇಗೌಡ.

Lakshmi nivasa Serial: ಭಾವನಾ ಮೈ ಮುಟ್ಟಿದ್ರೆ ಸಿದ್ದೇಗೌಡ ಸುಮ್ನೆ ಬಿಡ್ತಾನಾ?

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸಿದ್ಧೇಗೌಡ ಮತ್ತು ಭಾವನಾ ಜೋಡಿಯ ಕಾಂಬಿನೇಷನ್‌ ನೋಡುಗರ ಮೆಚ್ಚುಗೆ ಪಡೆದಿದೆ. ನಿತ್ಯದ ಸಂಚಿಕೆಯಲ್ಲಿ ಈ ಜೋಡಿಯನ್ನು ಹೆಚ್ಚು ತೋರಿಸಿ ಎಂದು ವೀಕ್ಷಕರು ಸೋಷಿಯಲ್‌ ಮೀಡಿಯಾದಲ್ಲಿ ಕಾಮೆಂಟ್‌ ಮಾಡುತ್ತಿದ್ದಾರೆ. ಆ ಮಟ್ಟಿಗೆ ಈ ಜೋಡಿ ಎಲ್ಲರಿಂದ ಕಾಂಪ್ಲಿಮೆಂಟ್‌ ಪಡೆದುಕೊಳ್ಳುತ್ತಿದೆ. ಹೀಗಿರುವಾಗಲೇ ಮಂಗಳವಾರದ ಸಂಚಿಕೆಯಲ್ಲಿ ಎಂದಿನಂತೆ ಆಫೀಸ್‌ಗೆ ಹೋದ ಭಾವನಾಗೆ ಕೆಟ್ಟ ಅನುಭವ ಆಗಿದೆ. ಅದು ಅಲ್ಲೇ ಇದ್ದ ಸಿದ್ದೇಗೌಡನ ಗಮನಕ್ಕೂ ಬಂದಿದೆ.

ಆಫೀಸ್‌ ಚೇಂಬರ್‌ಗೆ ಭಾವನಾಳನ್ನು ಕರೆದ ಮ್ಯಾನೇಜರ್, ಆಕೆಯ ಜತೆಗೆ ಅಸಭ್ಯವಾಗಿ ವರ್ತಿಸಿದ್ದಾನೆ. ಆಕೆಯ ಮೈ ಕೈ ಮುಟ್ಟಿ ಸ್ವಲ್ಪ ಅಡ್ಜಸ್ಟ್‌ ಮಾಡಿಕೊಳ್ಳಿ ಎಂದಿದ್ದಾನೆ. ತಕ್ಷಣಕ್ಕೆ ಬೇಸರದಿಂದ ಆಫೀಸ್‌ನ ಅರ್ಧಕ್ಕೆ ಬಿಟ್ಟು ಮನೆ ಕಡೆಗೆ ಹೋಗಿದ್ದಾಳೆ. ಭಾವನಾಮ್ಮ ಬೇಸರದಿಂದ ಇದ್ದಿದ್ದನ್ನು ನೋಡಿದ ಪುಟಾಣಿ ಖುಷಿ ಸಿದ್ದೇಗೌಡನಿಗೆ ಇರೋ ವಿಷಯವನ್ನು ಮತ್ತೆ ಹೇಳಿದ್ದಾಳೆ. ತಕ್ಷಣ ಆಫೀಸ್‌ಗೆ ಬಂದ ಸಿದ್ಧೇಗೌಡ, ಆತನ ಚಳಿ ಬಿಡಿಸಿದ್ದಾನೆ.

ಹಿಗ್ಗಾ ಮುಗ್ಗಾ ಥಳಿಸಿ, ಆತನ ಬಾಯಿಂದಲೇ ಅಸಲಿ ವಿಷ್ಯ ಕಕ್ಕಿಸಿದ್ದಾನೆ. ಬಳಿಕ ಈ ಕೂಡಲೇ ಭಾವನಾ ಅವರ ಕಾಲಿಗೆ ಬಿದ್ದು ಕ್ಷಮೆ ಕೇಳುವಂತೆಯೂ ಹೇಳಿದ್ದಾನೆ. ಇತ್ತ ಮಾರನೇ ದಿನ ಆಫೀಸ್‌ಗೆ ಬಂದ ಭಾವನಾಗೆ ಮತ್ತೆ ತಮ್ಮ ಚೇಂಬರ್‌ಗೆ ಕರೆಸಿಕೊಂಡು, ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾನೆ. ಬಳಿಕ ಸಿದ್ಧೇಗೌಡನಿಗೂ ಫೋನ್‌ ಮಾಡಿ ನಿಮ್ಮಿಂದ ತುಂಬ ಉಪಕಾರವಾಯ್ತು ಎಂದೂ ಹೇಳಿದ್ದಾಳೆ.

Seetha Rama Serial: ರುದ್ರಪ್ರತಾಪ್‌ಗೆ ಖೆಡ್ಡಾ ತೋಡ್ತಾನಾ ಶ್ರೀರಾಮ?

ಇನ್ನು ಸೀತಾ ರಾಮ ಸೀರಿಯಲ್‌ನಲ್ಲಿ ಅಂಜಲಿ ಮನೆಯಲ್ಲಿರುವ ಸಿಹಿಗೆ ಆಘಾತಕಾರಿ ಅನುಭವ ಆಗಿದೆ. ಸಹಜವಾಗಿ ಅಂಜಲಿಯ ಫೋನ್‌ ಕೈಯಲ್ಲಿ ಹಿಡಿದು ಏನೋ ಮಾಡ್ತಿದ್ದಾಗ, ಆಕೆಯ ಕಣ್ಣಿಗೆ ರುದ್ರಪ್ರತಾಪ್‌ನ ಫೋಟೋ ಕಾಣಿಸಿದೆ. ಅಷ್ಟಕ್ಕೆ ಭಯದಲ್ಲಿ ನಡುಗಿದ್ದಾಳೆ ಸಿಹಿ. ಕೂಡಲೇ ಸೀತಮ್ಮನನ್ನು ಕರೆಸಿ ಎಂದು ಹಟ ಹಿಡಿದು ಕೂತಿದ್ದಾಳೆ. ಮನೆಯವರ ಯಾರ ಮಾತನ್ನೂ ಆಕೆ ಕೇಳುತ್ತಿಲ್ಲ. ಅಷ್ಟೊತ್ತಿಗೆ ರಾಮನ ಎಂಟ್ರಿಯಾಗಿದೆ. ಭಯದಲ್ಲಿಯೇ ನಂಗೆ ಸೀತಮನ್ನ ಹತ್ರ ಕರೆದುಕೊಂಡು ಹೋಗು ಎಂದಿದ್ದಾಳೆ.

ಆಕೆಯನ್ನು ಸಮಾಧಾನ ಮಾಡಿದ ರಾಮ್‌, ಸೀತಮ್ಮನ ಕಡೆ ಕರೆದೊಯ್ದಿದ್ದಾನೆ. ಆಗ ರಾಮ್‌ ಮತ್ತು ಸೀತಮ್ಮನ ಮುಂದೆ ಅಂಜಲಿ ಫೋನ್‌ನಲ್ಲಿ ಬ್ಯಾಡ್‌ ಅಂಕಲ್‌ ಫೋಟೋ ನೋಡಿದ ವಿಚಾರ ಗಮನಕ್ಕೆ ತಂದಿದ್ದಾಳೆ. ಆದರೆ, ಸಿಹಿಯ ಮಾತನ್ನು ಅಷ್ಟೊಂದು ಸೀರಿಯಸ್‌ ಆಗಿ ತೆಗೆದುಕೊಳ್ಳದ ಸೀತಾ ಮತ್ತು ರಾಮ್, ಮನೆಯ ಕಡೆ ನಡೆದಿದ್ದಾರೆ. ಮನೆ ಬಳಿ ಸೀತಾಳ ಅಣ್ಣ ಅತ್ತಿಗೆ ಸಹ ಬಂದಿದ್ದಾರೆ. ಅವರೂ ಸಹ ರುದ್ರಪ್ರತಾಪ್‌ನ ವಿಚಾರವನ್ನೇ ಹೇಳಿದ್ದಾರೆ. ಸೀತಾಳನ್ನು ನನಗೆ ಕೊಟ್ಟು ಮದುವೆ ಮಾಡಿ ಎಂದು ಹಿಂಸಿಸುತ್ತಿದ್ದಾನೆ ಎಂದಿದ್ದಾರೆ. ಅಲ್ಲಿಗೆ ಈ ಲಾಯರ್‌ ನಮ್ಮ ಬೆನ್ನ ಹಿಂದೆ ಬಿದ್ದಿದ್ದಾನೆ ಎಂಬ ವಿಚಾರ ಇವರಿಬ್ಬರಿಗೂ ಕನ್ಫರ್ಮ್‌ ಆಗಿದೆ.

ಭಾರ್ಗವಿಗೆ ಮುಖಭಂಗ

ತಕ್ಷಣ ರುದ್ರಪ್ರತಾಪ್‌ ಇರೋದು ನಮಗೆ ಗೊತ್ತು, ಬನ್ನಿ ನಾವು ಕರೆದುಕೊಂಡು ಹೋಗ್ತಿವಿ ಎಂದು ರಾಮನನ್ನು ಕರೆದೊಯ್ದಿದ್ದಾರೆ ಸುಲೋಚನಾ ಮತ್ತು ಸುಧೀಶ್‌. ಇತ್ತ ಆ ಲಾಯರ್‌ಗೆ ಒಂದು ಗತಿ ಕಾಣಿಸಲೇಬೇಕು ಎಂಬ ಕೋಪದಲ್ಲಿ ಹೊರಟೇಬಿಟ್ಟಿದ್ದಾನೆ. ಆದರೆ, ಅಚ್ಚರಿಯ ವಿಚಾರ ಏನೆಂದರೆ, ರಾಮನ ಆಗಮನವಾಗುತ್ತಿದ್ದಂತೆ, ಆ ಲಾಯರ್‌ ಈ ವಿಚಾರ ಗೊತ್ತಾಗಿ ಸ್ಥಳದಿಂದಲೇ ಕಾಲ್ಕಿತ್ತಿದ್ದಾನೆ. ಇನ್ನೊಂದು ಕಡೆ ಆಸ್ತಿ ವಿಚಾರವಾಗಿ ವಿಲ್‌ನಲ್ಲೇನಿದೆ ಎಂಬುದನ್ನು ತಿಳಿದುಕೊಳ್ಳಲು ವಕೀಲರ ಮನೆಗೆ ಹೋದ ಭಾರ್ಗವಿಗೂ ನಿರಾಸೆಯಾಗಿದೆ. ಹಾಗಾದರೆ, ಭಾರ್ಗವಿ ಮುಂದಿನ ಪ್ಲಾನ್‌ ಏನು? ಇತ್ತ ರುದ್ರನಿಗೆ ಖೆಡ್ಡಾ ತೋಡ್ತಾನಾ ರಾಮ? ಕಾದು ನೋಡಬೇಕು.

Whats_app_banner