Seetha Rama: ಸೀತಾ ರಾಮ ಕಲ್ಯಾಣಕ್ಕೆ ಮುನ್ನುಡಿಯಾಯ್ತಾ ಬೊಂಬೆ ಆಡ್ಸೋನ ಭವಿಷ್ಯವಾಣಿ? ಸಿಹಿ ಮೊಗದಲ್ಲಿ ಮೂಡಿತು ಖುಷಿ
ಕನ್ನಡ ಸುದ್ದಿ  /  ಮನರಂಜನೆ  /  Seetha Rama: ಸೀತಾ ರಾಮ ಕಲ್ಯಾಣಕ್ಕೆ ಮುನ್ನುಡಿಯಾಯ್ತಾ ಬೊಂಬೆ ಆಡ್ಸೋನ ಭವಿಷ್ಯವಾಣಿ? ಸಿಹಿ ಮೊಗದಲ್ಲಿ ಮೂಡಿತು ಖುಷಿ

Seetha Rama: ಸೀತಾ ರಾಮ ಕಲ್ಯಾಣಕ್ಕೆ ಮುನ್ನುಡಿಯಾಯ್ತಾ ಬೊಂಬೆ ಆಡ್ಸೋನ ಭವಿಷ್ಯವಾಣಿ? ಸಿಹಿ ಮೊಗದಲ್ಲಿ ಮೂಡಿತು ಖುಷಿ

ಸಿಹಿಯ ಆಸೆಯನ್ನು ಈಡೇರಿಸುತ್ತ ಖುಷಿ ಕಾಣ್ತಿದ್ದಾನೆ ಶ್ರೀರಾಮ. ಸಿಹಿಯ ತರಲೆ ತುಂಟಾಟ.. ಸೀತಾ - ರಾಮರನ್ನ ಮತ್ತಷ್ಟು ಹತ್ತಿರವಾಗಿಸುತ್ತಿದೆ. ಬೊಂಬೆ ಆಡ್ಸೋನ ಭವಿಷ್ಯವಾಣಿಯೂ ಅಚ್ಚರಿ ಮೂಡಿಸಿದೆ.

Seetha Rama: ಸೀತಾ ರಾಮ ಕಲ್ಯಾಣಕ್ಕೆ ಮುನ್ನುಡಿಯಾಯ್ತು ಬೊಂಬೆ ಆಡ್ಸೋನ ಭವಿಷ್ಯವಾಣಿ; ಸಿಹಿ ಮೊಗದಲ್ಲಿ ಮೂಡಿತು ಖುಷಿ
Seetha Rama: ಸೀತಾ ರಾಮ ಕಲ್ಯಾಣಕ್ಕೆ ಮುನ್ನುಡಿಯಾಯ್ತು ಬೊಂಬೆ ಆಡ್ಸೋನ ಭವಿಷ್ಯವಾಣಿ; ಸಿಹಿ ಮೊಗದಲ್ಲಿ ಮೂಡಿತು ಖುಷಿ

Seetha Rama: (ಆಗಸ್ಟ್‌ 30ರ ಸಂಚಿಕೆ) ಬಿಕ್ಕಳಿಕೆ ನಿಲ್ಲದ ರಾಮನ ಸ್ಥಿತಿ ಕಂಡು ಸಿಹಿ ಮರುಗುತ್ತಿದ್ದಾಳೆ. ಸೀತಾ ನೀರು ಕೊಟ್ಟರೂ, ಇಲ್ಲ ನೀರು ಕುಡಿದೇ ಹೊಟ್ಟೆ ತುಂಬಿದೆ ಎನ್ನುತ್ತಿದ್ದಾನೆ ರಾಮ. ಇವನ ಸಮಸ್ಯೆ ಬಗೆಹರಿಸಪ್ಪ ರಾಮ ಎಂದು ದೇವರ ಮೊರೆ ಹೋಗುತ್ತಿದ್ದಾರೆ ಸೀತಾ ಮತ್ತು ಸಿಹಿ. ಬಿಕ್ಕಳಿಕೆ ಹೋಗಿಸಲು ಇತ್ತ ಡಾಕ್ಟರ್‌ ಕಿಟ್‌ ಬೇಕು ಅಂತ ಹಟ ಹಿಡಿದಿದ್ದಾಳೆ. ಸಿಹಿಯನ್ನು ಸ್ಟೇಷನರಿ ಅಂಗಡಿಗೆ ಕರೆದೊಯ್ದು ಡಾಕ್ಟರ್‌ ಕಿಟ್‌ ಕೊಡಿಸಿದ್ದಾನೆ ರಾಮ. ನನ್ನ ಥರ ಸಕ್ಕರೆ ಕಾಯಿಲೆ ಇರೋ ಮಕ್ಕಳಿಗೇ ನಾನು ಟ್ರೀಟ್‌ಮೆಂಟ್‌ ಮಾಡೋದು ಎನ್ನುತ್ತಾಳೆ ಸಿಹಿ.

ಪಾನಿಪುರಿ ತಿಂದು ಹೊಟ್ಟೆ ತುಂಬಿಸಿಕೊಂಡಿದ್ದ ಸಿಹಿಗೆ ಮತ್ತೆ ಹೊಟ್ಟೆ ಹಸಿವು. ಫೈವ್‌ ಸ್ಟಾರ್‌ ಹೊಟೇಲ್‌ಗೆ ಹೋಗಿ ಅಲ್ಲಿಯೇ ಏನಾದ್ರೂ ತಿಂದು ಸ್ವಿಮ್ಮಿಂಗ್‌ ಫೂಲ್‌ನಲ್ಲಿ ಆಟ ಆಡೋಣ್ವಾ ಎನ್ನುತ್ತಾಳೆ ಸಿಹಿ. ಸಿಹಿಯ ಮಾತಿಗೆ ಸೀತಮ್ಮ ವಿರೋಧ ವ್ಯಕ್ತಪಡಿಸಿದರೂ ರಾಮ ಮಾತ್ರ ಸಿಹಿಯ ಮಾತಿಗೆ ಎಲ್ಲದಕ್ಕೂ ಓಕೆ ಎನ್ನುತ್ತಾನೆ. ಇಲ್ಲೇ ಹತ್ತಿರದ ಹೊಟೇಲ್‌ಗೆ ಹೋಗುವುದಾಗಿಯೂ ನಿರ್ಧರಿಸುತ್ತಾರೆ. ಹಣಕ್ಕೆ ಚಿಂತೆ ಮಾಡಬೇಡಿ ಅನ್ನೋ ರಾಮನ ಮಾತಿಗೆ ಸೀತೆಯಿಂದ ಬುದ್ಧಿಮಾತೂ ಬರುತ್ತದೆ.

ಹೀಗಿರುವಾಗಲೇ ಬೊಂಬೆ ಆಡ್ಸೋನು ಸಿಹಿಯ ಕಣ್ಣೀಗೆ ಬೀಳುತ್ತಾನೆ. ಸಿಹಿಯ ತರಲೆ ಪ್ರಶ್ನೆಗಳಿಗೆ ಸೀತೆಗೆ ಉತ್ತರಿಸಿ ಸಾಕಾಗುತ್ತೆ. ಇತ್ತ ಬೇಡ ನಡೀ ಎಂದು ಸಿಹಿಯನ್ನು ಕರೆದೊಯ್ಯುತ್ತಾಳೆ ಸೀತಾ. ಇಂಥದ್ರಲ್ಲಿ ನಿಮಗೂ ನಂಬಿಕೆ ಇದೆಯಾ ಎನ್ನುವ ಸೀತಾ ಮಾತಿಗೆ, ನಮ್ಮಿಂದ ಅವರ ಹೊಟ್ಟೆಯಾದ್ರೂ ತುಂಬುತ್ತೆ. ಅಷ್ಟು ನಂಬಿಕೆ ಇದೆ ಎನ್ನುತ್ತಾನೆ ರಾಮ. ಬಾ ಫ್ರೆಂಡ್‌ ಭವಿಷ್ಯ ಕೇಳೋಣ ಎಂದು ಸಿಹಿಯನ್ನು ಕರೆದೊಯ್ಯುತ್ತಾನೆ. ಬೊಂಬೆ ಆಡ್ಸೋನ ಮಾತಿನಂತೆ ಸಿಹಿಯೂ ಒಂದು ಗೊಂಬೆ ಮುಟ್ಟುತ್ತಾಳೆ. ಅದರಲ್ಲಿ ಮೈಸೂರು ಅರಮನೆ ಕಾಣಿಸುತ್ತದೆ. ನೀನು ರಾಜಕುಮಾರಿ, ನಿನಗೆ ಅರಮನೆ ಯೋಗ ಇದೆ ಎಂದು ಭವಿಷ್ಯ ನುಡಿಯುತ್ತಾನೆ.

ಬೊಂಬೆ ಮಾತು ಯಾವತ್ತೂ ಸುಳ್ಳಾಗಲ್ಲ ಎನ್ನುತ್ತಿದ್ದಂತೆ, ರಾಮ್‌ ಮುಖ ನೋಡುವ ಸಿಹಿ, ಆತನಿಗೂ ಬೊಂಬೆ ಭವಿಷ್ಯ ನೋಡು ಎನ್ನುತ್ತಾಳೆ. ಸಿಂಗಲ್‌ ಆಗಿ ಸುತ್ತಾಡೋ ನಿಮ್ಮ ಭವಿಷ್ಯ ಏನಿರಬಹುದು ನೋಡಿ ಎನ್ನುತ್ತಾಳೆ ಸೀತಾ. ಇಬ್ಬರ ಒತ್ತಾಯಕ್ಕೆ ಮಣಿದ ರಾಮ್‌, ಒಂದು ಬೊಂಬೆಯನ್ನು ಮುಟ್ಟುತ್ತಾನೆ. ಸೀತಾ ರಾಮ ಜೋಡಿಯಿರುವ ಫೋಟೋ ರಾಮನ ಕೈಗೆ ಬರುತ್ತದೆ. ರಾಮನಿಗೆ ಮದುವೆ ಯೋಗ ಬಂದಿದೆ ಎಂದು ಭವಿಷ್ಯ ನುಡಿಯುತ್ತಾನೆ ಬೊಂಬೆ ಆಡ್ಸೋನು.

ಭವಿಷ್ಯ ಕೇಳಿ ಮೂವರು ಮುಂದೆ ಸಾಗುತ್ತಾರೆ. ಹೀಗಿರುವಾಗಲೇ ಸಿಹಿ ಬಾಯಲ್ಲಿ ಫ್ರೆಂಡ್‌ ನೀನು ಮತ್ತೆ ಸೀತಮ್ಮ ಮದುವೆ ಆಗ್ತೀರಾ ಎಂದು ಪ್ರಶ್ನೆ ಮುಂದಿಡುತ್ತಾಳೆ ಸಿಹಿ. ಕೆಲ ಕ್ಷಣ ಗಲಿಬಿಲಿಯಾಗುವ ಇಬ್ಬರೂ, ಒಬ್ಬರ ಮುಖವನ್ನೊಬ್ಬರು ನೋಡುತ್ತಾರೆ. ಸಿಹಿಗೆ ಬೈಯುತ್ತ, ನಿಮಗೆ ಆದಷ್ಟು ಬೇಗ ಮದುವೆ ಆಗಲಿ ಎಂದು ಹಾರೈಸುತ್ತಾಳೆ ಸೀತಾ. ಸಿಹಿಗೆ ಹೊಟ್ಟೆ ಹಸಿದಿದ್ದಕ್ಕೆ ಹೊಟೇಲ್‌ಗೆ ಹೋಗುತ್ತಾರೆ. ಐಷಾರಾಮಿ ಹೊಟೇಲ್‌ ನೋಡಿ, ಬೇಡ ಎನ್ನುತ್ತಾಳೆ ಸೀತಾ. ಹೀಗೆ ಒಂದಷ್ಟು ಖುಷಿ, ನಗು, ಸುತ್ತಾಟ, ಸೆಲ್ಫಿ ಮೂಲಕ ಸಂಚಿಕೆ ಮುಕ್ತಾಯವಾಗುತ್ತದೆ. ಸಿಹಿಯ ಆಸೆಯನ್ನು ಈಡೇರಿಸುತ್ತ ಖುಷಿ ಕಾಣ್ತಿದ್ದಾನೆ ಶ್ರೀರಾಮ. ಆದರೆ, ಬೊಂಬೆ ಭವಿಷ್ಯ ನಿಜವಾಗುತ್ತಾ? ಸಿಹಿ ಕನಸು ನೆರವೇರುತ್ತಾ? ಕಾದು ನೋಡಬೇಕು.

ಮನರಂಜನೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

Whats_app_banner