ಕನ್ನಡ ಸುದ್ದಿ  /  Entertainment  /  Kannada Television News Seetha Rama Serial April 01st Episode Highlights Seetha Raama Serial Latest Update Mnk

Seetha Rama Serial: ಪ್ರೀತಿ ಮಾಡೋಕೆ ಒಂದು ಮಗುವಿನ ತಾಯಿಯೇ ಬೇಕಿತ್ತಾ ನಿನಗೆ? ಶ್ರೀರಾಮನ ಗುಟ್ಟಿನ ಜುಟ್ಟು ಭಾರ್ಗವಿ ಕೈಯಲ್ಲಿ!

ಸೀತಾ ರಾಮ ಸೀರಿಯಲ್‌ನಲ್ಲಿ ರಾಮನಿಗೆ ಅಪ್ಪ ಅನ್ನೋ ಪಟ್ಟ ಬೇಡ ಎಂದು ಪಟ್ಟು ಹಿಡಿದಿದ್ದಾಳೆ ಸಿಹಿ, ಇತ್ತ ಅಂಜಲಿಯ ಬೆನ್ನು ಬಿದ್ದ ಲಾಯರ್‌ಗೂ ಅಣ್ಣಂದಿರ ಮದುವೆ ವಿಷ್ಯಾ ತಿಳಿದಿದೆ. ಸೀತಾಳ ಮನೆಗೆ ಭೇಟಿ ನೀಡಿದ ಭಾರ್ಗವಿ, ಸೀತಾಳ ಮಗಳಿಂದಲೇ ಸ್ವಾಗತ ಸಿಕ್ಕಿದೆ. ರಾಮನ ನಡೆ ನುಡಿ, ಅಸಂಬದ್ಧ ಪ್ರಶ್ನೆಗಳು ತಾತ ಸೂರ್ಯ ಪ್ರಕಾಶ್‌ ದೇಸಾಯಿಗೂ ಅನುಮಾನ ತರಿಸಿದೆ.

Seetha Rama Serial: ಪ್ರೀತಿ ಮಾಡೋಕೆ ಒಂದು ಮಗುವಿನ ತಾಯಿಯೇ ಬೇಕಿತ್ತಾ ನಿನಗೆ? ಶ್ರೀರಾಮನ ಗುಟ್ಟಿನ ಜುಟ್ಟು ಭಾರ್ಗವಿ ಕೈಯಲ್ಲಿ!
Seetha Rama Serial: ಪ್ರೀತಿ ಮಾಡೋಕೆ ಒಂದು ಮಗುವಿನ ತಾಯಿಯೇ ಬೇಕಿತ್ತಾ ನಿನಗೆ? ಶ್ರೀರಾಮನ ಗುಟ್ಟಿನ ಜುಟ್ಟು ಭಾರ್ಗವಿ ಕೈಯಲ್ಲಿ!

Seetha Rama Serial: ಸಿಹಿ ಮನಸಲ್ಲಿನ ದುಗುಡ ಇನ್ನೂ ಮಾಯವಾಗಿಲ್ಲ. ರಾಮನನ್ನು ಅಪ್ಪ ಎಂದು ಸ್ವೀಕರಿಸಲು ಆಕೆ ಒಪ್ಪುತ್ತಿಲ್ಲ. ಅಪ್ಪ ಆಗ್ತಿನಿ ಅಂತ ಬಂದಿದ್ದ ಆ ಬ್ಯಾಡ್‌ ಲಾಯರ್ ಅಂಕಲ್, ನನ್ನನ್ನು ಅನಾಥಾಶ್ರಮಕ್ಕೆ ಸೇರಿಸ್ತಿನಿ ಅಂದಿದ್ರು. ಹಾಗಾಗಿ ನನಗೆ ಅಪ್ಪಾನೇ ಬೇಡ, ನೀನು ಈಗ ಹೇಗಿದ್ದಿಯೋ ಹಾಗೇ ಇರು ಎಂದು ಫ್ರೆಂಡ್‌ ರಾಮ್‌ ಬಳಿ ಹೇಳಿಕೊಂಡಿದ್ದಾಳೆ ಸಿಹಿ. ಸಿಹಿಯ ಮಾತು ಕೇಳಿ ಸೀತಾ ಮತ್ತು ರಾಮ ಇಬ್ಬರೂ ಮೌನಕ್ಕೆ ಜಾರಿದ್ದಾರೆ.‌ ಅಪ್ಪನ ಸಂಬಂಧ ಸಿಹಿ ಮೇಲೆ ಈ ಮಟ್ಟದ ನೆಗೆಟಿವ್‌ ಪರಿಣಾಮ ಬೀರುತ್ತೆ ಅಂತ ನಾನು ಅಂದುಕೊಂಡಿರಲಿಲ್ಲ ಎಂದು ಸೀತಾಳ ಬಳಿ ಹೇಳಿ ಹೊರಟಿದ್ದಾನೆ ರಾಮ.

ಮತ್ತೊಂದು ಕಡೆ, ಭಾರ್ಗವಿ ಮತ್ತು ಚಾಂದಿನಿಯ ಮುಖಾಮುಖಿಯಾಗಿದೆ. ಸೀತಾ ತನ್ನ ಬಗ್ಗೆ ಏನೆಲ್ಲ ಮಾತನಾಡಿದ್ದಾಳೋ ಅದೆಲ್ಲವನ್ನು ಬಂದು ಭಾರ್ಗವಿ ಮುಂದೆ ವರದಿ ಒಪ್ಪಿಸಿದ್ದಾಳೆ . ರಾಮ್‌ ಜತೆಗಿದ್ದಾನೆ ಅನ್ನೋ ಅಹಂಕಾರ ಅವಳಿಗೆ ಎಂದೂ ಚಾಂದಿನಿ ಕೆಂಡವಾಗಿದ್ದಾಳೆ. ನಿನ್ನ ಕೋಪ ಎದುರಾಳಿಗೆ ಗೊತ್ತಾಗಬಾರದು ಎಂದ ಭಾರ್ಗವಿ, ಚಾಂದಿನಿಯನ್ನು ಸಮಾಧಾನ ಮಾಡಿ, ನಾನೂ ಸೀತಾಳ ಹೊಸ ವರ್ಷನ್‌ ನೋಡಬೇಕೆಂದು ಸೀತಾ ಮನೆ ಕಡೆಗೆ ಹೊರಟು ನಿಂತಿದ್ದಾಳೆ.

ಅಂಜಲಿಯಿಂದ ಸತ್ಯ ತಿಳಿದ ಲಾಯರ್‌ ಶಾಕ್‌

ಲಾಯರ್‌ ರುದ್ರಪ್ರತಾಪ್‌, ಅಶೋಕನ ತಂಗಿ ಮೇಲೆ ಕಣ್ಣಿಟ್ಟಿದ್ದಾನೆ. ಅಂಜಲಿ ಬರುತ್ತಿದ್ದ ದೇವಸ್ಥಾನಕ್ಕೆ ಬಂದಿದ್ದಾನೆ. ಬೇಕು ಅಂತಲೇ ಆಕೆಯನ್ನು ಇಂಪ್ರೆಸ್‌ ಮಾಡಲು ಹೊರಟಿದ್ದಾನೆ. ಹೀಗಿರುವಾಗಲೇ ಅಶೋಕ ಮತ್ತು ರಾಮನ ಮದುವೆ ವಿಚಾರವನ್ನೂ ಲಾಯರ್‌ ಮುಂದೆ ಹೇಳಿಕೊಂಡಿದ್ದಾಳೆ. ಇದು ರುದ್ರನ ಕುದಿತಕ್ಕೆ ಕಾರಣವಾಗಿದೆ. ಈ ನಡುವೆ ಭಾರ್ಗವಿ ನೇರವಾಗಿ ಶಾಂತಮ್ಮನ ವಠಾರಕ್ಕೆ ಬಂದಿದ್ದಾಳೆ. ಆಗ ಸಿಹಿ ಬಡ್ಡಿ ಬಂಗಾರಮ್ಮ ವೇಷದಲ್ಲಿ ಫ್ಯಾನ್ಸಿ ಡ್ರೆಸ್‌ ಹಾಕ್ಕೊಂಡು ನಿಂತಿದ್ದಾಳೆ.

ಶಾಂತಮ್ಮನ ವಠಾರಕ್ಕೆ ಬಂದ ಭಾರ್ಗವಿ

ಶಾಂತಮ್ಮನ ವಠಾರಕ್ಕೆ ಬಂದ ಭಾರ್ಗವಿಯನ್ನು ನೋಡಿದ ಸಿಹಿ, ಯಾರು ಬೇಕಿತ್ತು ನಿಮಗೆ ಎಂದು ಭಾರ್ಗವಿಯನ್ನು ಕೇಳಿದ್ದಾಳೆ. ಸೀತಾಳ ಮನೆ ಯಾವ್ದು, ಅವರನ್ನೇ ನೋಡಲು ಬಂದಿರುವುದಾಗಿ ಹೇಳಿದ್ದಾಳೆ ಭಾರ್ಗವಿ. ಓಹ್‌ ಸೀತಮ್ಮನ ನೋಡಲು ಬಂದಿದ್ದೀರಾ, ನಮ್ಮ ಮನೆಗೆ ಬಂದಿದ್ದೀರಾ, ಬನ್ನಿ ಬನ್ನಿ ಎಂದು ಭಾರ್ಗವಿಯನ್ನು ಕರೆದುಕೊಂಡು ಮನೆ ಕಡೆ ನಡೆದಿದ್ದಾಳೆ ಸಿಹಿ. ಆದರೆ, ಪಾಪ ಈ ಭಾರ್ಗವಿ ಯಾರೆಂಬುದು ಪುಟಾಣಿ ಸಿಹಿಗೇನು ಗೊತ್ತು?

ಸಿಹಿ ಸೀತಾಳ ಮಗಳಾ? ಭಾರ್ಗವಿಗೆ ಗೊತ್ತಾಯ್ತು ನಿಜಾಂಶ

ಮನೆಗೆ ಹೋದ ತಕ್ಷಣ ಕುಳಿತುಕೊಳ್ಳಿ ನೀರು ತಗೊಂಡು ಬರ್ತಿನಿ ಎಂದು ಒಳ ನಡೆದಿದ್ದಾಳೆ ಸಿಹಿ. ಸಿಹಿ ಒಳನಡೆಯುತ್ತಿದ್ದಂತೆ, ಮನೆಯನ್ನು ಒಂದು ಸುತ್ತು ಕಣ್ಣಾಡಿಸಿದ್ದಾಳೆ ಭಾರ್ಗವಿ. ಸೀತಾ ಮತ್ತು ರಾಮನ ನಡುವಿನ ಈ ಪ್ರೀತಿ ಪ್ರೇಮಕ್ಕೆ ಅಂತ್ಯ ಹಾಡಲೇಬೇಕು ಎಂದು ತೀರ್ಮಾನಿಸಿಕೊಂಡೇ ಬಂದ ಭಾರ್ಗವಿ, ಸೀತಾಳ ಮನೆಯಲ್ಲಿ ಏನಾದ್ರೂ ಸಿಗಬಹುದಾ ಎಂದು ಹುಡುಕಿದ್ದಾಳೆ. ಆಗ ಅಚಾನಕ್ಕಾಗಿ ಸೀತಾ ಮತ್ತು ಸಿಹಿ ಇರೋ ಫೋಟೋ ಭಾರ್ಗವಿ ಕಣ್ಣಿಗೆ ಬಿದ್ದಿದೆ. ಸೀತಾಗೆ ಮಗಳಿದ್ದಾಳಾ? ಎಂಬ ವಿಚಾರ ಭಾರ್ಗವಿಗೆ ಗೊತ್ತಾಗಿದೆ.

ಶ್ರೀರಾಮನ ಗುಟ್ಟಿನ ಜುಟ್ಟು ಭಾರ್ಗವಿ ಕೈಯಲ್ಲಿ

ಈ ಮೂಲಕ ಸೀತೆಯನ್ನ ಅರಸಿ ಬಂದ ಭಾರ್ಗವಿಗೆ ಸಿಹಿ ಅನ್ನೋ ಬ್ರಹ್ಮಾಸ್ತ್ರ ಸಿಕ್ಕಿದೆ. ಈ ಸಿಹಿ ಸೀತಾಳ ಮಗಳಾ ಎಂದು ಮನದೊಳಗೆ ತಂತ್ರಗಳನ್ನು ಹೆಣೆಯುತ್ತಿದ್ದಾಳೆ. ಸೀತಾ ಮನೆಯಲ್ಲಿ ಇಲ್ಲದ ಕಾರಣ, ಮನೆಯಿಂದ ಹೊರಬಂದಿದ್ದಾಳೆ. ಕಾರ್‌ ಏರಿ, ಪ್ರೀತಿ ಮಾಡೋಕೆ ಒಂದು ಮಗುವಿನ ತಾಯಿಯೇ ಬೇಕಿತ್ತಾ ನಿನಗೆ ರಾಮ? ಎಂದಿದ್ದಾಳೆ. ಮತ್ತೊಂದು ಕಡೆ ಶ್ರೀರಾಮ ತಾತ ಸೂರ್ಯ ಪ್ರಕಾಶನ ಜತೆಗೆ ಅಪ್ಪನಲ್ಲಿರಬೇಕಾದ ಗುಣಗಳೇನು ಎಂದೆಲ್ಲ ಪ್ರಶ್ನೆ ಕೇಳುತ್ತಿದ್ದಾನೆ. ರಾಮನ ಈ ಅಸಂಬದ್ಧ ಪ್ರಶ್ನೆಗಳು ತಾತನಿಗೂ ಅನುಮಾನ ಸೃಷ್ಟಿಸಿದೆ. ರಾಮನ ಈ ವೀಕ್‌ನೆಸ್‌ ಇಟ್ಟುಕೊಂಡೇ ಆಟ ಆಡ್ತಾಳಾ ಭಾರ್ಗವಿ?