ಕನ್ನಡ ಸುದ್ದಿ  /  ಮನರಂಜನೆ  /  Seetha Rama Serial: ಸೀತಮ್ಮನಿಗೆ ಶ್ರೀರಾಮನೇ ಗಂಡ ಆಗಬೇಕು! ಪರೋಕ್ಷವಾಗಿ ತನ್ನ ಮನದಾಸೆ ಹೇಳಿಕೊಂಡ ಸಿಹಿ

Seetha Rama Serial: ಸೀತಮ್ಮನಿಗೆ ಶ್ರೀರಾಮನೇ ಗಂಡ ಆಗಬೇಕು! ಪರೋಕ್ಷವಾಗಿ ತನ್ನ ಮನದಾಸೆ ಹೇಳಿಕೊಂಡ ಸಿಹಿ

ಸೀತಾ ರಾಮರ ನಡುವಿನ ಒಲುಮೆಯ ನಡುವೆಯೇ ಅಶೋಕ ಪ್ರಿಯಾ ಜೋಡಿಯ ಮದುವೆ ನಡೆಯುತ್ತಿದೆ. ಈ ನಡುವೆ, ಸೀತಾ ಮತ್ತು ರಾಮನ ಕಲ್ಯಾಣಕ್ಕೆ ಪರೋಕ್ಷವಾಗಿಯೇ ಸಿಹಿ ಒಪ್ಪಿಗೆ ಕೊಟ್ಟಿದ್ದಾಳೆ. ನನಗೆ ಅಪ್ಪ ಇಲ್ಲದಿದ್ದರೂ, ನಿನಗೆ ಗಂಡ ಇದ್ದರೆ ಚೆನ್ನಾಗಿರುತ್ತದೆ ಎಂದಿದ್ದಾಳೆ. ಸಿಹಿಯ ಈ ಪ್ರಬುದ್ಧತೆಯ ಮಾತು ಸೀತಾಳ ಮನಸು ಮುಟ್ಟಿದೆ.

Seetha Rama Serial: ಸೀತಮ್ಮನಿಗೆ ಶ್ರೀರಾಮನೇ ಗಂಡ ಆಗಬೇಕು! ಪರೋಕ್ಷವಾಗಿ ತನ್ನ ಮನದಾಸೆ ಹೇಳಿಕೊಂಡ ಸಿಹಿ
Seetha Rama Serial: ಸೀತಮ್ಮನಿಗೆ ಶ್ರೀರಾಮನೇ ಗಂಡ ಆಗಬೇಕು! ಪರೋಕ್ಷವಾಗಿ ತನ್ನ ಮನದಾಸೆ ಹೇಳಿಕೊಂಡ ಸಿಹಿ

Seetha Rama Serial: ಸೀತಾಗೆ ಅನಾಮಧೇಯ ವ್ಯಕ್ತಿಯಿಂದ ಮೆಸೆಜ್‌ಗಳು ಬರುತ್ತಿವೆ. ಇದು ಕೇವಲ ಸೀತಾಳನ್ನು ಮಾತ್ರವಲ್ಲ ರಾಮನನ್ನೂ ಕಂಗೆಡಿಸಿದೆ. ಇದು ಆ ಲಾಯರ್‌ ರುದ್ರಪ್ರತಾಪ್‌ನ ಕೆಲಸ ಎಂದು ವೀಕ್ಷಕರಿಗೆ ತಿಳಿದಿದೆ. ಆದರೆ, ಸೀತಾ ಮತ್ತು ರಾಮನಿಗೆ ಮಾತ್ರ ಇದರ ಹಿಂದಿನ ಸಂಚುಕೋರ ಯಾರೆಂದು ತಿಳಿದಿಲ್ಲ. ಇದೀಗ ಆ ವ್ಯಕ್ತಿ ಯಾರೆಂದು ಕಂಡುಹಿಡಿಯುವ ಕೆಲಸಕ್ಕೆ ಮುಂದಾಗಿದ್ದಾರೆ ಸೀತಾ ಮತ್ತು ರಾಮ. ಗಾರ್ಡನ್‌ನಲ್ಲಿ ಬಂದು ಆತನಿಗಾಗಿ ಬಂದು ಕೂತಿದ್ದಾಳೆ. ಈ ನಡುವೆ ಸೀತಾ ಬಂದಿರುವುದನ್ನೂ ಮೇಲಿನಿಂದಲೇ ನಿಂತು ನೋಡಿದ್ದಾನೆ ರುದ್ರಪ್ರತಾಪ್. ರಾಮ ಅಲ್ಲೇ ಅಡಗಿ ನಿಂತಿದ್ದಾನೆ.

ಟ್ರೆಂಡಿಂಗ್​ ಸುದ್ದಿ

ಹೀಗಿರುವಾಗಲೇ ಸೀತಾ ಒಬ್ಬಳೇ ಗಾರ್ಡನ್‌ನಲ್ಲಿ ಕೂತಿದ್ದನ್ನು ನೋಡಿದ ಪ್ರಿಯಾ ಮತ್ತು ಅಂಜಲಿ ನೇರವಾಗಿ ಆಕೆ ಬಳಿ ಆಗಮಿಸಿದ್ದಾರೆ. ಇವರಿಬ್ಬರೂ ಬಂದಿದ್ದನ್ನು ಅದರಲ್ಲೂ ಅಂಜಲಿ ಬಂದಿದ್ದನ್ನು ನೋಡಿ ಪ್ಲಾನ್‌ ಪ್ಲಾಪ್‌ ಆಯಿತೆಂದು ಅಂದುಕೊಂಡಿದ್ದಾನೆ. ಇತ್ತ ಗಿಡ ಮರೆಯಲ್ಲಿ ಅಡಗಿ ನಿಂತ ರಾಮ್‌ನನ್ನು ನೋಡಿದ್ದಾಳೆ ಪ್ರಿಯಾ. ಎಲ್ಲರೂ ಒಟ್ಟಿಗೆ ಸೇರಿದ್ದೇ ತಡ, ಕೊಂಚ ಗಾಬರಿಯಲ್ಲೇ ಹಲ್ಲು ಮಸಿದಿದ್ದಾನೆ. ಇತ್ತ ಅಯ್ಯೋ ನಿಮ್ಮಬ್ಬರಿಗೂ ತೊಂದರೆ ಕೊಟ್ವಿ ಎಂದು ಪಾರ್ಕ್‌ ಡೇಟ್‌ ಎಂಜಾಯ್‌ ಮಾಡಿ ಎಂದು ಹೊರಟಿದ್ದಾರೆ ಪ್ರಿಯಾ, ಅಂಜಲಿ.

ಈ ವೇಳೆ ಅನಾಮಧೇಯ ವ್ಯಕ್ತಿಯ ಬಗ್ಗೆ ಸೀತಾ ಮತ್ತು ರಾಮ ಮಾತನಾಡಿಕೊಂಡಿದ್ದಾರೆ. ಆ ವ್ಯಕ್ತಿ ಇಲ್ಲಿ ಬಂದಿಲ್ಲ ಅಂತ ಕಾಣತ್ತೆ. ಇದೆಲ್ಲವನ್ನು ಇಲ್ಲಿಯೇ ಮರೆತು ಬಿಡಿ. ಈ ನಡುವೆ ತಾತನಿಗೂ ಹುಷಾರಿಲ್ಲ. ಅಶೋಕನ ಮದುವೆಯಲ್ಲಿಯೇ ನಾನು ನಿಮ್ಮನ್ನು ಭೇಟಿ ಆಗ್ತಿನಿ. ಅದೇ ದಿನ ನಾನು ನನ್ನ ನಿರ್ಧಾರವನ್ನು ಮನೆಯವರ ಮುಂದೆ ಹೇಳಲು ಕಾಯ್ತಿದ್ದೇನೆ. ನೀವು ರೆಡಿಯಾಗಿ ಎಂದಿದ್ದಾನೆ ರಾಮ. ಅದಕ್ಕೆ ಉತ್ತರಿಸಿದ ಸೀತಾ, ನಾನು ಸಿಹಿ ಇಬ್ಬರೂ ರೆಡಿಯಾಗಿ ಇರ್ತೀವಿ ಎಂದಿದ್ದಾಳೆ. ಇವರಿಬ್ಬರನ್ನು ನೋಡಿ ಕಡುಕೋಪದಲ್ಲಿ ಅಲ್ಲಿಂದ ನಡೆದಿದ್ದಾನೆ ಲಾಯರ್.

ತಾತನ ಅನಾರೋಗ್ಯ, ರಾಮ, ಅಶೋಕ ಕಳವಳ

ತಾತ ಹಾಸಿಗೆ ಹಿಡಿದಿದ್ದನ್ನು ರಾಮ ಮತ್ತು ಅಶೋಕನಿಗೆ ನೋಡಲು ಆಗ್ತಿಲ್ಲ. ಆದಷ್ಟು ಬೇಗ ಗುಣಮುಖರಾಗಿ ಎಂದು ತಾತ ಸೂರ್ಯಪ್ರಕಾಶ್‌ಗೆ ಹೇಳುತ್ತಿದ್ದಾನೆ ಅಶೋಕ. ಮದುವೆ ಬಂತು, ಅಲ್ಲಿ ಓಡಾಡೋದು ತುಂಬ ಇರುತ್ತೆ ಎಂದಿದ್ದಾನೆ. ಈ ನಡುವೆ ಸೀತಾಳ ವಿಚಾರವನ್ನು ಆದಷ್ಟು ಬೇಗ ತಾತನಿಗೆ ಹೇಳು, ತಾತನೂ ಒಪ್ಪಿಕೊಳ್ತಾನೆ ಎಂದಿದ್ದಾನೆ ಅಶೋಕ. ಈ ನಡುವೆ ಸಿಹಿಗೆ ಫೋನ್‌ ಮಾಡಿ ಒಂದಷ್ಟು ಮಾತನಾಡಿದ್ದಾನೆ ರಾಮ. ಆಕೆಯ ಮೊಗದಲ್ಲೂ ನಗುತಿರಿಸಿದ್ದಾನೆ. ಇತ್ತ ಮದುವೆ ವಿಚಾರಕ್ಕೆ ಪ್ರಿಯಾಗೆ ನಿದ್ದೆ ಬರ್ತಿಲ್ಲ.

ರಾಮ್‌ ಮಾತಿನಿಂದ ಸಾಧನಾಗೆ ಬೇಸರ

ಇತ್ತ ಅಶೋಕನ ಮದುವೆಗೆ ಸಿದ್ಧತೆಗಳು ಜೋರಾಗಿವೆ. ತಾತನ ಅನಾರೋಗ್ಯದ ಹಿನ್ನೆಲೆಯಲ್ಲಿ ಮೆಹೆಂದಿ ಕಾರ್ಯಕ್ರಮಕ್ಕೆ ನಾನು ಬರಲ್ಲ ಎನ್ನುತ್ತಿದ್ದಾನೆ ತಾತ ಸೂರ್ಯಪ್ರಕಾಶ್‌. ಹಾಗಾದರೆ ಮನೆಯಲ್ಲಿ ತಾತನನ್ನು ನೋಡಿಕೊಳ್ಳುವವರು ಯಾರು? ಈ ವಿಚಾರಕ್ಕೆ ಸಂಬಂಧಿಸಿದಂತೆ ಒಂದಷ್ಟು ಪ್ರಶ್ನೆಗಳು ಮೂಡಿವೆ. ಭಾರ್ಗವಿ ತಾನು ತಾತನ ಜತೆಗಿರ್ತಿನಿ ಎಂದಿದ್ದಾಳೆ. ಅದಕ್ಕೆ, ಇಲ್ಲ ನೀವೇ ಅಶೋಕನ ಮದುವೆಯನ್ನ ಮುಂದೆ ನಿಂತು ಮಾಡಬೇಕಿರುವವರು. ನೀವು ಬರಲೇ ಬೇಕು, ಬೇಕಿದ್ರೆ ಸಾಧನಾ ಚಿಕ್ಕಿ ತಾತನನ್ನು ನೋಡಕೊಳ್ತಾರೆ ಎಂದಿದ್ದಾನೆ. ಇದು ಸಾಧನಾಗೂ ಬೇಸರ ತರಿಸಿದೆ. ಇತ್ತ ಪ್ರಿಯಾ ಮದುಮಗಳಾಗಿ ಕಲ್ಯಾಣ ಮಂಟಪದೆಡೆಗೆ ಹೊರಟಿದ್ದಾಳೆ.

ಸಿಹಿ ಬಾಯಲ್ಲಿ ಪ್ರಬುದ್ಧತೆ ಪಾಠ

ಈ ನಡುವೆ ಸಿಹಿಯ ಮನದಾಸೆಯೂ ಆಕೆಯ ಬಾಯಿಂದಲೇ ಹೊರಬಿದ್ದಿದೆ. ಸೀತಾಗೆ ದೇವರ ಮನೆಯಲ್ಲಿನ ಹೂ ತಂದು ಕೊಟ್ಟ ಸಿಹಿ, ನಿನಗೂ ಯಾರಾದ್ರೂ ಹೂವು ಮುಡಿಸಬೇಕು ಅನ್ಸುತ್ತಾ, ಸೀರೆ ನೆರಿಗೆ ಹಿಡಿಕೊಳ್ಳಬೇಕು ಅನ್ಸುತ್ತಾ? ಎಂದು ಪ್ರಶ್ನೆ ಮಾಡಿದ್ದಾಳೆ. ಸಿಹಿಯ ಮಾತಿಗೆ ಹೌದು ಪುಟ್ಟ ಎಂದಿದ್ದಾಳೆ. ಬಳಿಕ ನನಗೆ ಅಪ್ಪ ಇಲ್ಲದಿದ್ದರೂ ಪರವಾಗಿಲ್ಲ. ನಿನ್ನ ಗಂಡ ಇದ್ದಿದ್ದರೆ ಚೆನ್ನಾಗಿರುತ್ತೆ ಅಲ್ವಾ ಎಂದು ಹೇಳಿ ಅಲ್ಲಿಂದ ಹೊರನಡೆದಿದ್ದಾಳೆ. ಈ ಮೂಲಕ ರಾಮನ ಮಾತಿಗೆ ಪರೋಕ್ಷವಾಗಿಯೇ ಒಪ್ಪಿಕೊಟ್ಟಳಾ ಪುಟಾಣಿ ಸಿಹಿ? ಇನ್ನೇನು ಈ ಕೂಡಲೇ ಇದಕ್ಕೆ ಉತ್ತರ ಸಿಗಲಿದೆ.

ಸೀತಾ ರಾಮ ಧಾರಾವಾಹಿ ಪಾತ್ರವರ್ಗ

ನಿರ್ದೇಶಕ: ಮಧುಸೂಧನ್‌

ಗಗನ್‌ ಶ್ರೀನಿವಾಸ್: ಶ್ರೀರಾಮ (ನಾಯಕ)

ವೈಷ್ಣವಿ ಗೌಡ: ಸೀತಾ (ನಾಯಕ)

ರೀತು ಸಿಂಗ್: ಸಿಹಿ (ಸೀತಾ ಮಗಳು)

ಅಶೋಕ ಶರ್ಮಾ: ಅಶೋಕ (ಶ್ರೀರಾಮನ ಪ್ರಾಣ ಸ್ನೇಹಿತ)

ಭಾರ್ಗವಿ: ಪೂಜಾ ಲೋಕೇಶ್‌ (ಶ್ರೀರಾಮನ ಚಿಕ್ಕಮ್ಮ)

ಮುಖ್ಯಮಂತ್ರಿ ಚಂದ್ರು: ಸೂರ್ಯ ಪ್ರಕಾಶ್‌ ದೇಸಾಯಿ (ಶ್ರೀರಾಮನ ತಾತ)

ಶ್ವೇತಾ ಶಂಕರಪ್ಪ: ಪ್ರಿಯಾ (ಸೀತಾಳ ಸ್ನೇಹಿತೆ)

ವಿಕಾಸ್‌ ಕಾರ್‌ಗೋಡ್:‌ ಲಾಯರ್‌ ರುದ್ರಪ್ರತಾಪ್

ಸತೀಶ್‌ ಚಂದ್ರ: ಚರಣ್‌. ಡಿ

ಪೂರ್ಣಚಂದ್ರ ತೇಜಸ್ವಿ: ವಿಶ್ವಜೀತ್‌ (ಶ್ರೀರಾಮನ ಚಿಕ್ಕಪ್ಪ)

ಜಯದೇವ್‌ ಮೋಹನ್:‌ ಸತ್ಯಜೀತ್‌ (ಶ್ರೀರಾಮನ ಚಿಕ್ಕಪ್ಪ)

IPL_Entry_Point