ಕನ್ನಡ ಸುದ್ದಿ  /  ಮನರಂಜನೆ  /  Seetha Rama Serial: ಸೀತಾ- ರಾಮರ ಪ್ರೀತಿಗೆ ಚಾಂದಿನಿ ಅಡ್ಡಗಾಲು ಹಾಕ್ತಿದ್ರೆ, ಚಿಕ್ಕಪ್ಪ ಸತ್ಯಜಿತ್ ಕಾವಲಾಗಿ ನಿಂತಿದ್ದಾನೆ!

Seetha Rama Serial: ಸೀತಾ- ರಾಮರ ಪ್ರೀತಿಗೆ ಚಾಂದಿನಿ ಅಡ್ಡಗಾಲು ಹಾಕ್ತಿದ್ರೆ, ಚಿಕ್ಕಪ್ಪ ಸತ್ಯಜಿತ್ ಕಾವಲಾಗಿ ನಿಂತಿದ್ದಾನೆ!

ಸೀತಾ ರಾಮ ಸೀರಿಯಲ್‌ನಲ್ಲೀಗ ಅಶೋಕ ಕಲ್ಯಾಣ ನಡೆಯುತ್ತಿದೆ. ಇದರ ಜತೆಗೆ ಸೀತಾ ಮತ್ತು ರಾಮನಿಗೂ ಇದು ಅಗ್ನಿಪರೀಕ್ಷೆಯಾಗಿ ಬದಲಾಗಿದೆ. ಇದೆಲ್ಲದರ ನಡುವೆ ಚಾಂದಿನಿಯೂ ಭಾರ್ಗವಿಯನ್ನು ಬ್ಲಾಕ್‌ ಮೇಲ್‌ ಮಾಡುತ್ತಲೇ ಒಳಗೊಳಗೇ ಹೊಸ ಸಂಚು ರೂಪಿಸುತ್ತಿದ್ದಾಳೆ.

Seetha Rama Serial: ಸೀತಾ- ರಾಮರ ಪ್ರೀತಿಗೆ ಚಾಂದಿನಿ ಅಡ್ಡಗಾಲು ಹಾಕ್ತಿದ್ರೆ, ಚಿಕ್ಕಪ್ಪ ಸತ್ಯಜಿತ್ ಕಾವಲಾಗಿ ನಿಂತಿದ್ದಾನೆ!
Seetha Rama Serial: ಸೀತಾ- ರಾಮರ ಪ್ರೀತಿಗೆ ಚಾಂದಿನಿ ಅಡ್ಡಗಾಲು ಹಾಕ್ತಿದ್ರೆ, ಚಿಕ್ಕಪ್ಪ ಸತ್ಯಜಿತ್ ಕಾವಲಾಗಿ ನಿಂತಿದ್ದಾನೆ!

Seetha Rama Serial: ಸೀತಾ ರಾಮ ಸೀರಿಯಲ್‌ನಲ್ಲೀಗ ಅಶೋಕ ಪ್ರಿಯಾ ಕಲ್ಯಾಣದ ಸಂಭ್ರಮ ಜೋರಾಗಿದೆ. ಸೀತಾ ರಾಮನ ನಡುವಿನ ಪ್ರೀತಿಗೂ ಮೊದಲು ಚಿಗುರಿದ್ದ ಈ ಜೋಡಿ ಇದೀಗ ಹಸೆಮಣೆ ಏರುತ್ತಿದೆ. ಒಂದರ್ಥದಲ್ಲಿ ರಾಮನ ಮುಂದಿನ ಬಾಳ ಪಯಣಕ್ಕೂ ಅಶೋಕನ ಮದುವೆ ತುಂಬ ಮಹತ್ವ ಪಡೆದುಕೊಂಡಿತ್ತು. ಮೊದಲು ಅಶೋಕನ ಮದುವೆ ಆದ್ರೆ, ನಾನು ಮದುವೆ ಆಗೋದು ಎಂಬುದು ರಾಮನ ವಾದವಾಗಿತ್ತು. ಅದರಂತೆ, ಸೀತಾ ಜತೆಗಿನ ಪ್ರೀತಿ ವಿಚಾರವನ್ನೂ ತಾತನ ಎದುರು ಹೇಳುವುದಾಗಿಯೂ ರಾಮ್‌ ನಿರ್ಧರಿಸಿದ್ದಾನೆ.

ಟ್ರೆಂಡಿಂಗ್​ ಸುದ್ದಿ

ಈಗ ಅಶೋಕನ ಮದುವೆಯ ನಿಮಿತ್ತ ಎಲ್ಲರೂ ಒಂದು ಕಡೆ ಸೇರಿದ್ದಾರೆ. ಅಚ್ಚರಿ ವಿಚಾರ ಏನೆಂದರೆ ಸೀತಾ, ಸಿಹಿ, ಅಜ್ಜಿ ತಾತ ಜತೆಗೆ ಆಫೀಸ್‌ನ ಸಹೋದ್ಯೋಗಿಗಳೂ ಮದುವೆಗೆ ಆಗಮಿಸಿದ್ದಾರೆ. ಅರಿಶಿಣ ಶಾಸ್ತ್ರದ ಕಾರ್ಯವೂ ಶುರುವಾಗಿದೆ. ಹಳದಿ ಬಣ್ಣದಲ್ಲಿ ಅಶೋಕ ಮತ್ತು ಪ್ರಿಯಾ ಮದುಮಕ್ಕಳಾಗಿ ಮಿಂಚುತ್ತಿದ್ದಾರೆ. ಅಲ್ಲೇ ಇದ್ದ ಭಾರ್ಗವಿ ಗಂಭೀರ ಮುಖ ಭಾವದಲ್ಲಿ ಕಂಡರೆ, ಚಾಂದಿನಿಯೂ ರಾಮನ ಮೇಲೆ ಕಣ್ಣಿಟ್ಟಿದ್ದಾಳೆ. ಇತ್ತ ಮದುವೆ ಬಂದ ರಾಮನ ಕಣ್ಣು ಸೀತಾಳ ಮೇಲಿದೆ.

ಸೀತಾ ರಾಮರ ಕೈ ಮೇಲೂ ಮದರಂಗಿ ರಂಗು

ಅರಿಶಿಣ ಶಾಸ್ತ್ರದ ಜತೆಗೆ ಮೆಹಂದಿಯ ರಂಗೂ ಕೈ ಮೇಲೇರಿದೆ. ಪ್ರಿಯಾ- ಅಶೋಕನ ಜತೆಗೆ ಶ್ರೀರಾಮನ ಕೈಮೇಲೂ S ಎಂಬ ಅಕ್ಷರ ಮೂಡಿದೆ. ಅದನ್ನು ಅಲ್ಲೇ ಇದ್ದ ಸೀತಾಳಿಗೂ ತೋರಿಸಿದ್ದಾನೆ. ಸೀತಾ ಮೊಗದಲ್ಲೂ ಕಿರು ನಗೆ ಮೂಡಿದೆ. ಸೀತಾ ಕೈಯಲ್ಲೂ R ಎಂಬಕ್ಷರ ಮೂಡಿದೆ. ಅದನ್ನು ರಾಮನಿಗೂ ತೋರಿಸಿದ್ದಾಳೆ ಸೀತಾ. ಇವರಿಬ್ಬರ ಈ ಕಣ್ಣಾಮುಚ್ಚಾಲೆ ಆಟ ಚಾಂದಿನಿ ಕಣ್ಣಿಗೂ ಬಿದ್ದಿದೆ. ಹೇಗಾದ್ರೂ ಮಾಡಿ ಈ ಸೀತಾಳ ಹೊಟ್ಟೆ ಉರಿಸಬೇಕು ಎಂದು ತನ್ನ ಕೈಮೇಲೆ ಶ್ರೀರಾಮ ಎಂದು ಬರೆದುಕೊಂಡಿದ್ದಾಳೆ.

ಜೋಡಿಯ ಮೇಲೆ ಬಿತ್ತು ಚಾಂದಿನಿ ಕೆಟ್ಟ ದೃಷ್ಟಿ

ಅಷ್ಟೇ ಅಲ್ಲ ತಾತಗೆ ಯಾಕೆ ಹುಷಾರಿಲ್ಲ ಎಂಬ ವಿಚಾರವನ್ನೂ ಚಾಂದಿನಿ ಸೀತಾಳ ಮುಂದೆ ಹೇಳಿದ್ದಾಳೆ. ರಾಮ್‌ಗೆ ಯಾರೋ ಡಿವೋರ್ಸ್‌ ಪಡೆದ, ಒಂದು ಮಗು ಇರೋ ಹುಡುಗಿಯ ಸಂಬಂಧ ಬಂದಿತ್ತು. ಒಂದು ಮದುವೆ ಆಗಿರೋ ಹುಡುಗಿ ನಮ್ಮ ರಾಮನ ಮದುವೆ ಆಗ್ತಿದಾಳಾ ಅಂತ ಪ್ರಜ್ಞೆ ತಪ್ಪೋದ್ರು ಎಂಬುದನ್ನು ಹೇಳಿದ್ದಾಳೆ. ಇದನ್ನು ಕೇಳಿ ಸೀತಾಗೂ ಶಾಕ್‌ ಆಗಿದೆ.

ಇನ್ನೊಂದು ಕಡೆಗೆ ತಾತ ಸೂರ್ಯ ಪ್ರಕಾಶ್‌ಗೆ ಆರೋಗ್ಯ ಸರಿಯಿಲ್ಲ. ಅಶೋಕನ ಮದುವೆಗೂ ಬರಲು ಆತನಿಂದ ಆಗುತ್ತಿಲ್ಲ. ಈ ನಡುವೆ ಅವರ ಆರೈಕೆ ಜವಾಬ್ದಾರಿ ಯಾರು ವಹಿಸಿಕೊಳ್ತಿರೀ ಎಂದಾಗ, ಸತ್ಯಜೀತ್‌ ಮತ್ತು ಸಾಧನಾ ಮನೆಯಲ್ಲಿಯೇ ಉಳಿದಿದ್ದಾರೆ. ಅಪ್ಪನ ಎದುರು ನಿಂತು ಮಾತನಾಡುವುದಕ್ಕೂ ಹಿಂದೇಟು ಹಾಕುತ್ತಿದ್ದ ಸತ್ಯಜೀತ್‌, ಪತ್ನಿ ಸಾಧನಾಳಿಂದ ನಾನೇ ಇವತ್ತು ಅಪ್ಪನಿಗೆ ಮಾತ್ರೆ ಕೊಡುತ್ತೇನೆ ಎಂದಿದ್ದಾನೆ.

ರಾಮನ ಬೆನ್ನಿಗೆ ನಿಂತ ಚಿಕ್ಕಪ್ಪ

ಅಪ್ಪನ ಮುಂದೆ ನಿಂತು, ರಾಮನಿಗೆ ಅವನು ಇಷ್ಟ ಪಡೋ ಹುಡುಗಿ ಜತೆಗೇ ಮದುವೆ ಮಾಡಿ. ಯಾರ್ಯಾರದ್ದೋ ಮಾತು ಕೇಳಿಕೊಂಡು, ಅನಿವಾರ್ಯಕ್ಕೆ ಸಿಕ್ಕಿಬಿದ್ದು, ಯಾರ್ಯಾರನ್ನೋ ತಂದು ಕಟ್ಟಬೇಡಿ ಎಂದು ಅಂಗಲಾಚಿ ಬೇಡಿಕೊಂಡಿದ್ದಾನೆ. ಸತ್ಯನ ಈ ಮಾತೂ ತಾತನಿಗೆ ಸರಿ ಎನಿಸಿದೆ. ಮೊಮ್ಮಗನ ಖುಷಿ ಮುಖ್ಯ ಎಂದು ಸೂರ್ಯಪ್ರಕಾಶ್‌ ತೀರ್ಮಾನಿಸಿದ್ದಾರೆ. ಮತ್ತೊಂದು ಕಡೆ ಮದುವೆ ಸಮಯ ಹತ್ತಿರ ಬರುತ್ತಿದ್ದಂತೆ, ರಾಮನ ಎದೆ ಬಡಿತ ಹೆಚ್ಚಾಗಿದೆ. ಅಶೋಕನ ಮದುವೆ ದಿನವೇ ತಾನು ಮದುವೆ ಆಗುವವಳನ್ನು ನಿಮ್ಮೆದುರು ತಂದು ನಿಲ್ಲಿಸುತ್ತೇನೆ ಎಂದು ತಾತನ ಬಳಿ ಹೇಳಿದ್ದ ರಾಮ. ಅದರಂತೆ, ನಿಜ ವಿಚಾರ ಹೊರಬೀಳುತ್ತಾ? ಕಾದು ನೋಡಬೇಕು.

IPL_Entry_Point