ಕನ್ನಡ ಸುದ್ದಿ  /  ಮನರಂಜನೆ  /  Seetha Rama Serial: ದೇವರ ತೀರ್ಮಾನವನ್ನೇ ಪ್ರಶ್ನಿಸಿದ್ದ ಚಾಂದಿನಿಗೆ ಮುಖಭಂಗ; ಸೀತಾ ರಾಮರ ಮೇಲೆ ಪುಷ್ಪವೃಷ್ಟಿ, ಇದಲ್ಲವೇ ದೈವಲೀಲೆ!

Seetha Rama Serial: ದೇವರ ತೀರ್ಮಾನವನ್ನೇ ಪ್ರಶ್ನಿಸಿದ್ದ ಚಾಂದಿನಿಗೆ ಮುಖಭಂಗ; ಸೀತಾ ರಾಮರ ಮೇಲೆ ಪುಷ್ಪವೃಷ್ಟಿ, ಇದಲ್ಲವೇ ದೈವಲೀಲೆ!

ಸೀತಾ ರಾಮನನ್ನು ಹೇಗಾದರೂ ಮಾಡಿ ದೂರ ದೂರ ಮಾಡಬೇಕೆಂಬ ನಿಟ್ಟಿನಲ್ಲಿ ಷಡ್ಯಂತ್ರ ಹೆಣೆಯುತ್ತಿರುವ ಚಾಂದಿನಿಗೆ ಈಗ ಮುಖಭಂಗವಾಗಿದೆ. ದೈವಕ್ಕೆ ಸವಾಲೆಸೆದಿದ್ದ ಚಾಂದಿನಿ ಮುಖ ಈಗ ಬೆಪ್ಪಾಗಿದೆ.

Seetha Rama Serial: ದೇವರ ತೀರ್ಮಾನವನ್ನೇ ಪ್ರಶ್ನಿಸಿದ್ದ ಚಾಂದಿನಿಗೆ ಮುಖಭಂಗ; ಸೀತಾ ರಾಮರ ಮೇಲೆ ಪುಷ್ಪವೃಷ್ಟಿ, ಇದಲ್ಲವೇ ದೈವಲೀಲೆ!
Seetha Rama Serial: ದೇವರ ತೀರ್ಮಾನವನ್ನೇ ಪ್ರಶ್ನಿಸಿದ್ದ ಚಾಂದಿನಿಗೆ ಮುಖಭಂಗ; ಸೀತಾ ರಾಮರ ಮೇಲೆ ಪುಷ್ಪವೃಷ್ಟಿ, ಇದಲ್ಲವೇ ದೈವಲೀಲೆ!

Seetha Rama Serial: ಆಪ್ತಮಿತ್ರನ ಮದುವೆ ಕಾರ್ಯಕ್ರಮದಲ್ಲಿ ತನ್ನ ಭಾವಿ ಪತ್ನಿಯ ಜತೆಗೆ ಡಾನ್ಸ್‌ ಮಾಡುತ್ತಿದ್ದಾನೆ ರಾಮ. ನಾನೇನೋ ಕಮ್ಮಿ ಅಂತ ಪತಿ ಅಶೋಕನ ಜತೆ ಕೈ ತುಂಬ ರಂಗೇರಿದ ಮೆಹೆಂದಿ ಹಾಕಿಕೊಂಡು ಹಾಡಿಗೆ ಹೆಜ್ಜೆ ಹಾಕುತ್ತಿದ್ದಾಳೆ ಪ್ರಿಯಾ. ಹೊಸ ಬಟ್ಟೆ ಧರಿಸಿ ಸಂಭ್ರಮದಲ್ಲಿ ಇಡೀ ಮದುವೆ ಮನೆ ತುಂಬ ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಓಡಾಡುತ್ತಿದ್ದಾಳೆ ಪುಟಾಣಿ ಸಿಹಿ. ಅಶೋಕನ ತಂಗಿ ಅಂಜಲಿ ಮೊಗದಲ್ಲೂ ಖುಷಿ ಬುಗ್ಗೆ, ಪ್ರಿಯಾ ತಾಯಿ ಕಣ್ಣಲ್ಲೂ ಸಂತಸ.. ಹೀಗೆ ಮದುವೆ ಮನೆತುಂಬ ಸಂಭ್ರಮದ ಅಲೆ ಮೂಡಿದೆ.

ಟ್ರೆಂಡಿಂಗ್​ ಸುದ್ದಿ

ಆದರೆ, ಭಾರ್ಗವಿ ಮತ್ತು ಚಾಂದಿನಿಯ ಮುಖ ಮಾತ್ರ ನೋಡಲಾಗ್ತಿಲ್ಲ. ಕಡು ಕೋಪವನ್ನೂ ಉಗುಳುತ್ತಿದ್ದಾರೆ ಈ ಜೋಡಿ. ಅದರಲ್ಲೂ ಸೀತಾ ಮತ್ತು ರಾಮ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದಾರೆ ಎಂಬ ವಿಚಾರ ತಿಳಿದ ಬಳಿಕವಂತೂ, ಇವರಿಬ್ಬರನ್ನು ಹೇಗಾದರೂ ಮಾಡಿ ದೂರ ಮಾಡಬೇಕು ಎಂದು ಶತ ಪ್ರಯತ್ನ ಮಾಡುತ್ತಿದ್ದಾರಾದರೂ, ಅದು ಫಲ ಕೊಡುತ್ತಿಲ್ಲ. ಮದುವೆ ಮನೆಯಲ್ಲಿಯೇ ರಾಮ ತನ್ನ ಕೈ ಮೇಲೆ S ಎಂದು ಸೀತಾಳ ಹೆಸರನ್ನು ಮೆಹೆಂದಿ ಹಾಕಿಕೊಂಡರೆ, ಸೀತಾ ಕೈ ಮೇಲೂ R ಅಕ್ಷರ ಮೂಡಿದೆ. ಇವರಿಬ್ಬರ ಈ ಆಟ ಚಾಂದಿನಿ, ಭಾರ್ಗವಿಗೂ ಗೊತ್ತಾಗಿದೆ.

ದೇವರ ತೀರ್ಮಾನದ ಬಗ್ಗೆ ಚಾಂದಿನಿ ಮಾತು

ಸೀತಾ ರಾಮ ಜತೆಗಿರುವುದನ್ನು ಸಹಿಸದ ಚಾಂದಿನಿ, ಮದುವೆ ಮನೆಯಲ್ಲಿಯೇ ಸೀತಾಗೆ ಸವಾಲು ಹಾಕಿದ್ದಾಳೆ. ರಾಮ್‌ ಸೆಲೆಕ್ಟ್‌ ಮಾಡಿರುವ ಸೀರೆ ಸಿಕ್ಕಿರಬಹುದು ಆದರೆ, ರಾಮ್‌ ಯಾವತ್ತು ನಿಮಗೆ ಸಿಗಲ್ಲ. ಅಷ್ಟು ಸುಲಭವಾಗಿ ನಾನು ಬಿಟ್ಟುಕೊಡಲ್ಲ ಎಂದಿದ್ದಾಳೆ. ಇದಕ್ಕೆ ಪ್ರತ್ಯುತ್ತರವಾಗಿ, ಎಲ್ಲವೂ ಆ ದೈವಲೀಲೇ ದೇವರು ಬರೆದಂತಾಗುತ್ತದೆ ಎಂದಿದ್ದಾಳೆ. ಯಾರಿಗೆ ಯಾರು ಸಿಗಬೇಕು ಎಂಬುದನ್ನು ಆ ದೇವರೇ ತೀರ್ಮಾನಿಸಿರುತ್ತಾನೆ ಎಂದಿದ್ದಾಳೆ. ಓಹೋ ಆ ದೇವರು ನಿಮ್ಮಬ್ಬರ ಮೇಲೆ ಹೂವಿನ ಮಳೆ ಸುರಿಸ್ತಾನಾ? ಆ ದೇವರ ತೀರ್ಮಾನವನ್ನೇ ನಾನು ಬದಲಿಸ್ತಿನಿ ಎಂದು ಕೈಯಲ್ಲಿನ ಗುಲಾಬಿ ಹೂಗಳನ್ನು ಸೀತಾ ಕೈಗೆ ಕೊಟ್ಟು ಮಂಟಪದಲ್ಲಿಡೊ ಎಂದಿದ್ದಾಳೆ.

ತಾತನಿಗೂ ಸನ್‌ ಎಂದು ಹೆಸರಿಟ್ಟ ಸಿಹಿ

ಕಾಕತಾಳೀಯ ಎಂಬಂತೆ, ಸೀತಾ ಹೂ ಹಿಡಿದು ಹೋಗುತ್ತಿದ್ದಂತೆ ರಾಮ್‌ ಆಕೆಗೆ ಡಿಕ್ಕಿ ಹೊಡೆಯುತ್ತಾನೆ. ಅಷ್ಟರಲ್ಲಿ ಕೈಯಲ್ಲಿದ್ದ ಹೂಗಳು ಚೆಲ್ಲಿ ಇಬ್ಬರ ಮೇಲೂ ಬೀಳುತ್ತವೆ. ಕೆಲ ಕ್ಷಣಗಳ ಹಿಂದಷ್ಟೇ , ಆ ದೇವರು ನಿಮ್ಮಬ್ಬರ ಮೇಲೆ ಹೂವಿನ ಮಳೆ ಸುರಿಸ್ತಾನಾ ಎಂದಿದ್ದ ಚಾಂದಿನಿ ಶಾಕ್‌ಗೆ ಒಳಗಾಗಿದ್ದಾಳೆ. ಇನ್ನೊಂದು ಕಡೆ ತಾತ ಮದುವೆ ಮಂಟಪಕ್ಕೆ ಬಂದಿದ್ದಾರೆ. ಒಳಗೆ ಪ್ರವೇಶಿಸುತ್ತಿದ್ದಂತೆ, ಎಡವಿದ್ದಾರೆ. ಅಲ್ಲೇ ಇದ್ದ ಸಿಹಿ ಅಯ್ಯೋ ಹುಷಾರು ಎಂದು ಅವರನ್ನು ಕರೆದು ಕೂರಿಸಿದ್ದಾರೆ. ತನ್ನ ಪರಿಚಯವನ್ನೂ ಮಾಡಿಕೊಂಡು ಒಂದಷ್ಟು ಹರಟೆ ಹೊಡೆದಿದ್ದಾಳೆ. ಸೂರ್ಯಪ್ರಕಾಶ್‌ಗೆ ಸನ್‌ ಎಂಬ ಹೆಸರನ್ನೂ ಇಟ್ಟಿದ್ದಾಳೆ. ಈ ತಾತ ಮತ್ತು ಸಿಹಿಯ ಮಾತುಕತೆಯನ್ನು ಸೀತಾ ರಾಮ ದೂರದಿಂದಲೇ ನೀಡಿ ಸಂಭ್ರಮಿಸಿದ್ದಾರೆ.

ಪ್ರೇಕ್ಷಕರ ಕಣ್ಣು ಮಾತ್ರ ಬೇರೆ ಕಡೆ..

ಇನ್ನು ಸೀತಾ ರಾಮ ಸೀರಿಯಲ್‌ ನೋಡುಗರಿಂದ ಮೆಚ್ಚುಗೆ ಪಡೆದುಕೊಂಡಿದೆ. ಟಿಆರ್‌ಪಿ ವಿಚಾರದಲ್ಲೂ ಮೂರನೇ ಸ್ಥಾನಕ್ಕೆ ಬಂದು ನಿಂತಿದೆ. ಅಶೋಕ ಮತ್ತು ಪ್ರಿಯಾ ಜೋಡಿಯ ವಿವಾಹದ ಸಂಭ್ರಮದಲ್ಲಿದ್ದಾರೆ. ಚೆಂದದ ಸೀರೆ ಧರಿಸಿ ಮಿಂಚುತ್ತಿದ್ದಾರೆ. ಈ ನಡುವೆ ಮದುಮಗಳು ಪ್ರಿಯಾ ಸೀರೆಯ ಮೇಲೂ ಕೆಲವರ ಕಣ್ಣು ಬಿದ್ದಿದೆ. ಯಾಕೋ ಪ್ರಿಯಾ ಸೀರೆ ತುಂಬ ಡಲ್ಲಾಗಿದೆ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಸೀತಾ ಕೊರಳಲ್ಲಿನ ನೆಕ್‌ಲೆಸ್‌ ತುಂಬ ದೊಡ್ಡದಾಯ್ತು ಎಂದೂ ಕಾಮೆಂಟ್‌ ಮಾಡುತ್ತಿದ್ದಾರೆ.

IPL_Entry_Point