Seetha Rama Serial: ಪುಟಾಣಿ ಸಿಹಿಯನ್ನೇ ದಾಳವಾಗಿಸಿಕೊಂಡ ಭಾರ್ಗವಿ; ಸೀತೆಯ ಹೊಸ ಬದುಕಿಗೆ ಮಗಳೇ ಕಹಿಯಾಗ್ತಾಳಾ?
ಕನ್ನಡ ಸುದ್ದಿ  /  ಮನರಂಜನೆ  /  Seetha Rama Serial: ಪುಟಾಣಿ ಸಿಹಿಯನ್ನೇ ದಾಳವಾಗಿಸಿಕೊಂಡ ಭಾರ್ಗವಿ; ಸೀತೆಯ ಹೊಸ ಬದುಕಿಗೆ ಮಗಳೇ ಕಹಿಯಾಗ್ತಾಳಾ?

Seetha Rama Serial: ಪುಟಾಣಿ ಸಿಹಿಯನ್ನೇ ದಾಳವಾಗಿಸಿಕೊಂಡ ಭಾರ್ಗವಿ; ಸೀತೆಯ ಹೊಸ ಬದುಕಿಗೆ ಮಗಳೇ ಕಹಿಯಾಗ್ತಾಳಾ?

ಸೀತಾ ರಾಮ ಧಾರಾವಾಹಿಯಲ್ಲಿ ಮದುವೆಯ ಕನಸು ಕಾಣುತ್ತಿರುವ ಸೀತಾ ರಾಮನ ಬಾಳಲ್ಲಿ ಬಿರುಗಾಳಿ ಎಬ್ಬಿಸಲು ಪ್ಲಾನ್‌ ಮಾಡುತ್ತಿದ್ದಾಳೆ ಭಾರ್ಗವಿ. ಸಿಹಿಯನ್ನೇ ದಾಳವಾಗಿಸಿಕೊಂಡು, ರಣತಂತ್ರವನ್ನೇ ಹೆಣೆಯುತ್ತಿದ್ದಾಳೆ.

Seetha Rama Serial: ಪುಟಾಣಿ ಸಿಹಿಯನ್ನೇ ದಾಳವಾಗಿಸಿಕೊಂಡ ಭಾರ್ಗವಿ; ಸೀತೆಯ ಹೊಸ ಬದುಕಿಗೆ ಮಗಳೇ ಕಹಿಯಾಗ್ತಾಳಾ?
Seetha Rama Serial: ಪುಟಾಣಿ ಸಿಹಿಯನ್ನೇ ದಾಳವಾಗಿಸಿಕೊಂಡ ಭಾರ್ಗವಿ; ಸೀತೆಯ ಹೊಸ ಬದುಕಿಗೆ ಮಗಳೇ ಕಹಿಯಾಗ್ತಾಳಾ?

Seetha Rama Serial: ಅಶೋಕ ಪ್ರಿಯಾ ಜೋಡಿಯ ಅದ್ದೂರಿ ಮದುವೆ ಮುಗಿದಿದೆ. ಅಚ್ಚರಿಯ ರೀತಿಯಲ್ಲಿ ಭಾರ್ಗವಿ ಚಿಕ್ಕಿ ಮೂಲಕವೇ ರಾಮನ ಮದುವೆ ಆಗುವ ಹುಡುಗಿ ಯಾರೆಂಬ ವಿಚಾರ ಘೋಷಣೆ ಆಗಿದೆ. ಎಲ್ಲರ ಸಮ್ಮುಖದಲ್ಲಿಯೇ ನಮ್ಮ ಮನೆ ಮಗ ಶ್ರೀರಾಮ ಮತ್ತು ಸೀತಾ ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದಾರೆ. ಇನ್ನೇನು ಮದುವೆಯೂ ಆಗಲಿದ್ದಾರೆ ಎಂದು ಎಲ್ಲರ ಮುಂದೆ ಘೋಷಣೆ ಮಾಡಿದ್ದಾಳೆ. ಇತ್ತ ತಾತ ಸೂರ್ಯ ಪ್ರಕಾಶ್‌ ಖುಷಿಯಲ್ಲಿ ನಿಟ್ಟುಸಿರು ಬಿಟ್ಟಿದ್ದಾನೆ. ಅಲ್ಲೇ ಇದ್ದ ಚಾಂದಿನಿ ಮಾತ್ರ ಭಾರ್ಗವಿಯ ಈ ನಿರ್ಧಾರಕ್ಕೆ ಕುದಿಯುತ್ತಿದ್ದಾಳೆ.

ಭಾರ್ಗವಿಯ ಈ ಕುತಂತ್ರದಿಂದ ಕಂಗೆಟ್ಟ ಚಾಂದಿನಿ, ಆಕೆಯ ಬಣ್ಣ ಬಯಲು ಮಾಡಲು ರಾಮನಿಗೆ ಕರೆ ಮಾಡಿದ್ದಾಳೆ. ಆದರೆ, ರಾಮನಿಗೆ ಫೋನ್‌ ಪಿಕ್‌ ಮಾಡಲು ಸಾಧ್ಯವಾಗಲಿಲ್ಲ. ಅಷ್ಟಕ್ಕೆ ಸುಮ್ಮನಾಗದ ಚಾಂದಿನಿ, ವಾಯ್ಸ್‌ ಮೆಸೆಜ್‌ ಮೂಲಕ ರಾಮ್‌ಗೆ ಸಂದೇಶ ರವಾನಿಸಿದ್ದಾಳೆ. ಭಾರ್ಗವಿ ಒಳ್ಳೆಯವಳಲ್ಲ, ಅವಳು ಚೀಟರ್‌ ಎಂದಿದ್ದಾಳೆ. ಅಷ್ಟೆರಲ್ಲಿ, ಚಾಂದಿನಿ ಎದುರು ಬಂದ ಭಾರ್ಗವಿ, ಆ ಮೆಸೆಜ್‌ ಡಿಲಿಟ್‌ ಮಾಡಿಸಿ ತನ್ನ ಪ್ಲಾನ್‌ ಏನೆಂಬುದನ್ನು ಹೇಳಿದ್ದಾಳೆ. ಇದೆಲ್ಲ ಜಸ್ಟ್‌ ಪ್ಲಾನ್‌, ಸೀತಾಗೆ ಮಗಳಿರುವ ವಿಚಾರ ಸೂರ್ಯ ಪ್ರಕಾಶ ದೇಸಾಯಿಗೆ ಗೊತ್ತಿಲ್ಲ. ಅದು ಗೊತ್ತಾದರೆ, ನಿನ್ನ ಜತೆಗೇ ರಾಮನ ಮದುವೆ ಎಂದಿದ್ದಾಳೆ.

ಚಾಂದಿನಿಗೆ ತಾಳ್ಮೆ ಕಥೆ ಹೇಳಿದ ಭಾರ್ಗವಿ

ಮಾವಯ್ಯ ಸೀತಾಳನ್ನು ಒಪ್ಪಿಕೊಳ್ಳಬಹುದು ಆದರೆ, ಅದೇ ಸೀತಾಗೆ ಒಬ್ಬ ಮಗಳಿದ್ದಾಳೆ ಎಂಬ ವಿಚಾರವನ್ನು ಮಾವಯ್ಯ ಒಪ್ಪಿಕೊಳ್ತಾರಾ? ಇಲ್ಲ ಅಲ್ವಾ. ಆ ಮೇಲೆ ನಾವು ಅಂದುಕೊಂಡಿದ್ದೇ ನಡೆಯೋದು. ಸೀತಾ ಮನೆಯಿಂದ ಹೊರಹೋಗಬೇಕು, ಮಾವ ಅದೇ ಕೊರಗಲ್ಲಿ ಹಾಸಿಗೆ ಹಿಡಿಯಬೇಕು, ಮೊಮ್ಮಗನ ಮದುವೆ ನೋಡಬೇಕು ಅನ್ನೋ ತುಡಿತ ಹೆಚ್ಚಾಗುತ್ತೆ. ಆಗ ನಿನ್ನ ಸರದಿ ಚಾಂದಿನಿ ಎಂದಿದ್ದಾಳೆ ಭಾರ್ಗವಿ. ಆಗಾಗ ಮನೆಗೆ ಬರ್ತಿರು, ಮಾವನ ಕಣ್ಣಿಗೆ ಬೀಳ್ತಿರು ಎಂದು ಸಲಹೆ ನೀಡಿದ್ದಾಳೆ.

ಸೀತಾ ರಾಮ ಮುನಿಸು ಕೊನೆಯಾಯ್ತು

ಈ ನಡುವೆ ಅಶೋಕ ಮತ್ತು ಪ್ರಿಯಾಗಾಗಿ ಸಿಂಗಾರ ಮಾಡಿದ್ದ ಕೋಣೆಯಲ್ಲಿ ಸೀತಾ ರಾಮರ ಮಾತಿನ ರೊಮ್ಯಾನ್ಸ್‌ ನಡೆದಿದೆ. ಗುಲಾಬಿ ಹೂಗಳಿಂದ ಸಿಂಗರಿಸಿದ ರೂಮ್‌ನಲ್ಲಿ ಇಬ್ಬರೂ ಏಕಾಂತದಲ್ಲಿದ್ದಾರೆ. ಅತ್ತ ಚಾಂದಿನಿಯ ಫೋನ್‌ ರಿಂಗ್‌ ಆಗ್ತಿದೆ. ಹೋಗಿ ಫೋನ್‌ ಬರ್ತಿದೆ ಫೋನ್‌ ಪಿಕ್‌ ಮಾಡಿ ಎಂದು ರಾಮನಿಗೆ ಹೇಳಿದ್ದಾಳೆ ಸೀತಾ. ಅಷ್ಟಕ್ಕೆ ಮುನಿಸಿಕೊಂಡಿದ್ದಾನೆ ರಾಮ. ನಾನೇನು ತಪ್ಪು ಮಾಡಿದೆ ಅದನ್ನಾದರೂ ಹೇಳಿ ಎಂದು ರಾಮನ ಮುಂದೆ ಅಂಗಲಾಚಿದ್ದಾಳೆ ಸೀತಾ. ಅದ್ಯಾವುದಕ್ಕೂ ಬಗ್ಗದ ರಾಮ ಹಠ ಮುಂದುವರಿಸಿದ್ದಾನೆ. ಕೊನೆಗೆ ಹೇಗೋ ಇಬ್ಬರ ಮುನಿಸು ಮರೆಯಾಗಿದೆ.

ವಿಶ್ವನ ಮುಂದೆ ಅಸಲಿ ವಿಚಾರ ಪ್ರಸ್ತಾಪ

ಈ ನಡುವೆ ಭಾರ್ಗವಿಯ ಆಟ ಮುಂದುವರಿದಿದೆ. ಭಾರ್ಗವಿ ಖುಷಿ ಕಂಡು ವಿಶ್ವಜೀತ್‌ ಏನಿದಾಶ್ಚರ್ಯ ಎಂದು ಪ್ರಶ್ನೆ ಮಾಡಿದ್ದಾನೆ. ಸೀತಾ ರಾಮರ ಮದುವೆ ಜೋಕಾ? ಎಂದಿದ್ದಾನೆ. ಸೀತಾಗೊಬ್ಬಳು ಮಗಳಿರುವ ವಿಚಾರವನ್ನು ವಿಶ್ವನಿಗೆ ಹೇಳಿದ್ದಾಳೆ. ಇದೇ ವಿಚಾರವನ್ನು ಮುಂದಿರಿಸಿಕೊಂಡು, ಮದುವೆ ನಿಲ್ಲಿಸುವ ಪ್ಲಾನ್‌ ಮಾಡಿದ್ದಾಳೆ. ರಾಮನ ಮದುವೆ ನೋಡಬೇಕೆಂದಿರುವ ನಿಮ್ಮ ಅಪ್ಪ ರಾಮನ ಪಾದ ಸೇರಿಕೊಂಡರೇ? ರಾಮ ಮದುವೆ ಆಗುವ ಹುಡುಗಿಗೆ ಒಂದು ಹುಡುಗಿ ಇದ್ದಾಳೆ ಎಂಬ ವಿಚಾರ ಮಾವಯ್ಯನಿಗೆ ತಿಳಿದರೆ, ಒಪ್ಪಿಕೊಳ್ತಾರಾ ಎಂದಿದ್ದಾಳೆ.

ಲಾಯರ್‌ನ ಕರೆಸೆಂದ ಮಾವಯ್ಯ

ಇವರಿಬ್ಬರ ಮಾತುಕತೆ ನಡುವೆಯೇ ಗಾಬರಿಯಲ್ಲಿ ಓಡೋಡಿ ಬಂದ ಸಾಧನಾ, ಅಕ್ಕ ಮಾವಯ್ಯ ಹುಷಾರು ತಪ್ಪಿದ್ದಾರೆ ಎಂಬ ವಿಚಾರವನ್ನು ರವಾನಿಸಿದ್ದಾಳೆ. ವಿಶ್ವಜೀತ್‌ ಗಾಬರಿಯಾದರೆ, ಭಾರ್ಗವಿ ಮಾತ್ರ ಮನದಲ್ಲಿ ಹಾಲು ಕುಡಿದಷ್ಟೇ ಸಂಭ್ರಮಿಸಿದ್ದಾಳೆ. ಕುಹಕ ನಗೆ ಬೀರಿದ್ದಾಳೆ. ಏನಾಯ್ತು ಎಂದು ಹೋಗಿ ನೋಡುವಷ್ಟರಲ್ಲಿ, ಮದುವೆ ಮನೆಯಲ್ಲಿ ಓಡಾಡಿ ಸುಸ್ತಾಗಿದೆ ಅಷ್ಟೇ ಮತ್ತಿನೇನಿಲ್ಲ ಎಂದಿದ್ದಾನೆ ಮಾವಯ್ಯ. ಲಾಯರ್‌ನ ಬರೋಕೆ ಹೇಳಿ ಎಂದೂ ಭಾರ್ಗವಿಗೆ ಸೂಚಿಸಿದ್ದಾನೆ. ಈಗ್ಯಾಕೆ ಲಾಯರ್‌ ಎಂದಿದ್ದಾಳೆ.

ವಿಲ್‌ ವಿಚಾರ ಕೇಳಿ ದಿಗಿಲು ಬಡಿದಂತಾದ ಭಾರ್ಗವಿ

ಸೀತಾ ರಾಮನ ಮದುವೆ ಮಾಡಬೇಕು. ಅದಕ್ಕೂ ಮುಂಚೆ ವಿಲ್‌ ಬಗ್ಗೆ ಲಾಯರ್‌ ಜತೆ ಮಾತನಾಡಬೇಕು. ಲಾಯರ್‌ಗೆ ಬರೋಕೆ ಹೇಳಮ್ಮ ಎಂದಿದ್ದಾನೆ. ಮಾವಯ್ಯ ಮಾತಿಂದ ವಿಚಲಿತಳಾದ ಭಾರ್ಗವಿ, ರಾಮನ ಮದುವೆ ಅಂದ ತಕ್ಷಣ ಲಾಯರ್‌ನ ಕರೆಸು ಅಂತಿದ್ದಾರೆ. ಅಂದರೆ, ಇಷ್ಟು ವರ್ಷ ಮುಚ್ಚಿಟ್ಟ ವಿಲ್‌ ವಿಚಾರಕ್ಕೂ ರಾಮನ ಮದುವೆಗೂ ಏನೋ ಸಂಬಂಧ ಇದೆ ಅಂತಾಯ್ತು ಎಂದು ತನ್ನನ್ನು ತಾನೇ ಪ್ರಶ್ನೆ ಮಾಡಿಕೊಂಡಿದ್ದಾಳೆ.

Whats_app_banner