ಕನ್ನಡ ಸುದ್ದಿ  /  ಮನರಂಜನೆ  /  Seetha Rama Serial: ನಡು ರಾತ್ರಿಯಲ್ಲಿಯೇ ಶ್ರೀರಾಮನ ತಾಯಿ ವಾಣಿಯ ಎಂಟ್ರಿ; ಕೆಟ್ಟ ಕನಸಿಗೆ ಬೆಚ್ಚಿ ಬೆವರಿದ ಭಾರ್ಗವಿ!

Seetha Rama Serial: ನಡು ರಾತ್ರಿಯಲ್ಲಿಯೇ ಶ್ರೀರಾಮನ ತಾಯಿ ವಾಣಿಯ ಎಂಟ್ರಿ; ಕೆಟ್ಟ ಕನಸಿಗೆ ಬೆಚ್ಚಿ ಬೆವರಿದ ಭಾರ್ಗವಿ!

ಸೀತಾ ರಾಮನ ಮದುವೆಯನ್ನು ಹೇಗಾದ್ರೂ ಮಾಡಿ ನಿಲ್ಲಿಸುವ ಸಂಚು ಮುಂದುವರಿಸಿರುವ ಭಾರ್ಗವಿಗೆ ಕೆಟ್ಟ ಕನಸು ಬಿದ್ದಿದೆ. ನಡು ರಾತ್ರಿ ಕನಸಿನಲ್ಲಿ ವಾಣಿಯ ಆಗಮನವಾಗಿದೆ. ನಿನ್ನ ಪಾಪದ ಕೊಡ ತುಂಬಿದೆ ಭಾರ್ಗವಿ, ನಿನ್ನ ಅವನತಿ ಇನ್ಮೇಲಿಂದ ಶುರು. ಏಕೆಂದರೆ, ನನ್ನ ಸೊಸೆ ಬರ್ತಿದ್ದಾಳೆ ಎಂದಿದ್ದಾಳೆ ವಾಣಿ.

Seetha Rama Serial: ನಡು ರಾತ್ರಿಯಲ್ಲಿಯೇ ಶ್ರೀರಾಮನ ತಾಯಿ ವಾಣಿಯ ಎಂಟ್ರಿ; ಕೆಟ್ಟ ಕನಸಿಗೆ ಬೆಚ್ಚಿ ಬೆವರಿದ ಭಾರ್ಗವಿ!
Seetha Rama Serial: ನಡು ರಾತ್ರಿಯಲ್ಲಿಯೇ ಶ್ರೀರಾಮನ ತಾಯಿ ವಾಣಿಯ ಎಂಟ್ರಿ; ಕೆಟ್ಟ ಕನಸಿಗೆ ಬೆಚ್ಚಿ ಬೆವರಿದ ಭಾರ್ಗವಿ!

Seetha Rama Serial: ಸೀತಾಗೆ ಮಗಳಿದ್ದಾಳೆ ಎಂದು ತಿಳಿದ ಸೂರ್ಯಪ್ರಕಾಶ್‌ ದೇಸಾಯಿ, ಮೌನಿಯಾಗಿಯೇ ಮನೆಗೆ ಮರಳಿದ್ದಾನೆ. ಸೀತಾಳನ್ನು ಕರೆಸಿ ಆಕೆ ಜತೆಗೆ ಪರ್ಸನಲ್‌ ಆಗಿ ಮಾತನಾಡಬೇಕು ಎಂದಿದ್ದಾನೆ. ಈ ನಡುವೆ ರಾಮ್‌ಗೆ ಫೋನ್‌ ಮಾಡಿದ ಸೀತಾ, ತನ್ನ ಮನದಾಳವನ್ನು ಹೇಳಿಕೊಂಡಿದ್ದಾಳೆ. ನನ್ನ ನಿರ್ಧಾರ ಯಾವತ್ತೂ ಬದಲಾಗುವುದಿಲ್ಲ. ನನ್ನ ಲೈಫ್‌ನಲ್ಲಿ ನಿಮ್ಮನ್ನು ಮತ್ತು ಸಿಹಿಯನ್ನು ಆಯ್ಕೆ ಮಾಡುವ ವಿಚಾರ ಯಾವತ್ತೂ ಬರದಿರಲಿ ಎಂದು ಆ ದೇವರಲ್ಲಿ ಬೇಡಿಕೊಳ್ಳುತ್ತಿದ್ದೆ. ಈಗ ಅದೇ ಬಂದಿದೆ. ನನಗೆ ನನ್ನ ಸಿಹಿಯೇ ಮೊದಲು ಎಂದಿದ್ದಾಳೆ ಸೀತಾ.

ಟ್ರೆಂಡಿಂಗ್​ ಸುದ್ದಿ

ಸೀತಾಳ ಈ ಮಾತು ಕೇಳಿದ ರಾಮ್‌, ನೀವು ಯಾವತ್ತೂ ಸಿಹಿಯನ್ನು ಬಿಟ್ಟುಕೊಡಬಾರದು. ನಾವಿಬ್ಬರು ಒಂದಾಗಲು ಸಿಹಿನೇ ಕಾರಣ ಅಲ್ವಾ? ಹಾಗಂತ ನಮ್ಮ ಪ್ರೀತಿಗೆ ಸಿಹಿಯೂ ನೋವು ಅನುಭವಿಸಬಾರದು. ನಿಮ್ಮ ನಿರ್ಧಾರವೇ ನನ್ನ ನಿರ್ಧಾರ. ಇದೆಲ್ಲದಕ್ಕಿಂತ ಹೆಚ್ಚಾಗಿ ನಾನು ನಿಮ್ಮನ್ನು ಪ್ರೀತಿಸುತ್ತೇನೆ ಸೀತಾ ಎಂದಿದ್ದಾನೆ ರಾಮ. ಇನ್ನೊಂದು ಕಡೆ ಅಂಜಲಿ ಮತ್ತು ರುದ್ರಪ್ರತಾಪ್‌ ನಡುವೆ ಮಾತು ಹೆಚ್ಚಾಗುತ್ತಿದೆ. ಬೇಕು ಅಂತಲೇ ಅಂಜಲಿ ಜತೆಗೆ ಸಲುಗೆ ಮುಂದುವರಿಸಿದ್ದಾನೆ ರುದ್ರಪ್ರತಾಪ್‌.‌ ಇದು ಪ್ರಿಯಾ ಅಮ್ಮನ ಗಮನಕ್ಕೂ ಬಂದಿದೆ.

ಈ ನಡುವೆ ರಾಮ್‌ ಫೋನ್‌ ಮಾಡಿದ ಎಂಬ ಕಾರಣಕ್ಕೆ ಆತನನ್ನು ಭೇಟಿಯಾಗಿದ್ದಾನೆ ಅಶೋಕ. ಸೀತಾಳ ಜತೆಗೆ ನಡೆದ ವಿಚಾರವನ್ನು ಅಶೋಕನ ಗಮನಕ್ಕೆ ತಂದಿದ್ದಾನೆ. ಅದಕ್ಕೆ ಸೀತಾ ರಾಮನನ್ನು ಆ ವಿಧಿಯೂ ದೂರ ಮಾಡಲು ಸಾಧ್ಯವಿಲ್ಲ ಎಂದು ಭರವಸೆ ತುಂಬಿದ್ದಾನೆ. ಇದೇ ವೇಳೆ ವಿಲ್‌ ವಿಚಾರವಾಗಿ ಲಾಯರ್‌ ಅವರನ್ನು ಭೇಟಿ ಮಾಡಿ ಮಾಹಿತಿ ತಿಳಿದುಕೋ ಎಂದಿದ್ದಾನೆ. ಅದರ ವಿಚಾರ ಯಾರಿಗೂ ಗೊತ್ತಾಗಬಾರದು, ನನಗೂ ಸಹ ಗೊತ್ತಾಗುವುದು ಬೇಡ ಎಂದಿದ್ದಾನೆ.

ಇನ್ನೊಂದು ಕಡೆ ಸದಾ ರಾಮನನ್ನು, ರಾಮನ ತಾಯಿಯನ್ನು ಶಪಿಸುತ್ತಿದ್ದ ಭಾರ್ಗವಿ ಕನಸಲ್ಲಿ ಅದೇ ರಾಮನ ತಾಯಿ ವಾಣಿಯ ಆಗಮನವಾಗಿದೆ. ಭಾರ್ಗವಿ ನಿನ್ನ ಪಾಪದ ಕೊಡ ತುಂಬಿದೆ. ಆ ಪಾಪವನ್ನು ತೊಳೆಯಲು ನನ್ನ ಸೊಸೆ ಬರ್ತಿದ್ದಾಳೆ ಎಂದಿದ್ದಾಳೆ ವಾಣಿ. ಹೀಗೆ ಕನಸಿನಲ್ಲಿ ವಾಣಿ ಕಾಣುತ್ತಿದ್ದಂತೆ, ವಾಣಿ ಎಂದು ಜೋರು ಧ್ವನಿಯಲ್ಲಿಯೇ ಕೂಗಿ ಗಾಬರಿಯಲ್ಲಿಯೇ ಬೆಚ್ಚಿ ಬಿದ್ದಿದ್ದಾಳೆ. ಪಕ್ಕದಲ್ಲಿದ್ದ ವಿಶ್ವನೂ ಗಾಬರಿಯಾಗಿದ್ದಾನೆ.

ಬೆಳಗಾಗುತ್ತಿದ್ದಂತೆ, ವಾಣಿ ಗುಂಗಿನಲ್ಲಿಯೇ ಇದ್ದ ಭಾರ್ಗವಿಗೆ, ಸೀತಾ ಬರ್ತಿದ್ದಾಳೆ ಅಡುಗೆ ಏನು ಮಾಡಲಿ ಎಂದು ಖುಷಿಯಲ್ಲಿಯೇ ಕೇಳಿದ್ದಾಳೆ ಸಾಧನಾ. ಸಾಧನಾ ಹೀಗೆ ಹೇಳುತ್ತಿದ್ದಂತೆ, ಕೈಯಲ್ಲಿದ್ದ ಟೀಯನ್ನು ಸಾಧನಾ ಮುಖದ ಮೇಲೆ ಎರಚಿದ್ದಾಳೆ. ಈ ಮೂಲಕ ತನ್ನ ಕೋಪತಾಪವನ್ನು ಹೊರಹಾಕಿದ್ದಾಳೆ.

ಸೀತಾ ರಾಮ ಧಾರಾವಾಹಿ ಪಾತ್ರವರ್ಗ

ನಿರ್ದೇಶಕ: ಮಧುಸೂಧನ್‌

ಗಗನ್‌ ಶ್ರೀನಿವಾಸ್: ಶ್ರೀರಾಮ (ನಾಯಕ)

ವೈಷ್ಣವಿ ಗೌಡ: ಸೀತಾ (ನಾಯಕ)

ರೀತು ಸಿಂಗ್: ಸಿಹಿ (ಸೀತಾ ಮಗಳು)

ಅಶೋಕ ಶರ್ಮಾ: ಅಶೋಕ (ಶ್ರೀರಾಮನ ಪ್ರಾಣ ಸ್ನೇಹಿತ)

ಭಾರ್ಗವಿ: ಪೂಜಾ ಲೋಕೇಶ್‌ (ಶ್ರೀರಾಮನ ಚಿಕ್ಕಮ್ಮ)

ಮುಖ್ಯಮಂತ್ರಿ ಚಂದ್ರು: ಸೂರ್ಯ ಪ್ರಕಾಶ್‌ ದೇಸಾಯಿ (ಶ್ರೀರಾಮನ ತಾತ)

ಶ್ವೇತಾ ಶಂಕರಪ್ಪ: ಪ್ರಿಯಾ (ಸೀತಾಳ ಸ್ನೇಹಿತೆ)

ವಿಕಾಸ್‌ ಕಾರ್‌ಗೋಡ್:‌ ಲಾಯರ್‌ ರುದ್ರಪ್ರತಾಪ್

ಸತೀಶ್‌ ಚಂದ್ರ: ಚರಣ್‌. ಡಿ

ಪೂರ್ಣಚಂದ್ರ ತೇಜಸ್ವಿ: ವಿಶ್ವಜೀತ್‌ (ಶ್ರೀರಾಮನ ಚಿಕ್ಕಪ್ಪ)

ಜಯದೇವ್‌ ಮೋಹನ್:‌ ಸತ್ಯಜೀತ್‌ (ಶ್ರೀರಾಮನ ಚಿಕ್ಕಪ್ಪ)

IPL_Entry_Point