‘ಸೀತಾ ರಾಮ ಒಂದಾಗಲ್ಲ, ನೀವಿಬ್ಬರಾದ್ರೂ ಬೇಗ ಮದುವೆ ಆಗಿ’; ಅಶೋಕ- ಪ್ರಿಯಾ ಪ್ರೀತಿಗೆ ವೀಕ್ಷಕನ ಬಹುಪರಾಕ್-kannada television news seetha rama serial ashok and priyas love track won the hearts of viewers mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ‘ಸೀತಾ ರಾಮ ಒಂದಾಗಲ್ಲ, ನೀವಿಬ್ಬರಾದ್ರೂ ಬೇಗ ಮದುವೆ ಆಗಿ’; ಅಶೋಕ- ಪ್ರಿಯಾ ಪ್ರೀತಿಗೆ ವೀಕ್ಷಕನ ಬಹುಪರಾಕ್

‘ಸೀತಾ ರಾಮ ಒಂದಾಗಲ್ಲ, ನೀವಿಬ್ಬರಾದ್ರೂ ಬೇಗ ಮದುವೆ ಆಗಿ’; ಅಶೋಕ- ಪ್ರಿಯಾ ಪ್ರೀತಿಗೆ ವೀಕ್ಷಕನ ಬಹುಪರಾಕ್

ಸೀತಾ ರಾಮ ಧಾರಾವಾಹಿಯಲ್ಲಿ ಸೀತಾ ಮತ್ತು ರಾಮನ ಜೋಡಿ ನೋಡುಗರನ್ನು ಸೆಳೆದಷ್ಟೇ ಇದೇ ಸೀರಿಯಲ್‌ನ ಮತ್ತೊಂದು ಹೃದಯ ಕದ್ದ ಜೋಡಿ ಎಂದರೆ ಅದು ಅಶೋಕ್‌ ಮತ್ತು ಪ್ರಿಯಾ ಅವರದ್ದು. ಇದೀಗ ಇದೇ ಜೋಡಿ ಪ್ರೀತಿಯಲ್ಲಿ ಬಿದ್ದಿದೆ. ಪ್ರೇಮನಿವೇದನೆ ಮಾಡಿ ನೋಡುಗರಿಗೂ ಸರ್ಪ್ರೈಸ್‌ ನೀಡಿದೆ. ಯಾರ ಕಣ್ಣೂ ನಿಮ್ಮ ಮೇಲೆ ಬೀಳದಿರಲಿ, ಬೇಗ ಮದುವೆಯಾಗಿ ಎಂದು ಹರಸುತ್ತಿದ್ದಾರೆ.

‘ಸೀತಾ ರಾಮ ಒಂದಾಗಲ್ಲ, ನೀವಿಬ್ಬರಾದ್ರೂ ಬೇಗ ಮದುವೆ ಆಗಿ’ ಅಶೋಕ- ಪ್ರಿಯಾ ಪ್ರೀತಿಗೆ ವೀಕ್ಷಕನ ಬಹುಪರಾಕ್
‘ಸೀತಾ ರಾಮ ಒಂದಾಗಲ್ಲ, ನೀವಿಬ್ಬರಾದ್ರೂ ಬೇಗ ಮದುವೆ ಆಗಿ’ ಅಶೋಕ- ಪ್ರಿಯಾ ಪ್ರೀತಿಗೆ ವೀಕ್ಷಕನ ಬಹುಪರಾಕ್

Seetha Rama Serial: ಸೀತಾ ರಾಮ ಸೀರಿಯಲ್‌ನಲ್ಲಿ ನಿತ್ಯ ಒಂದಲ್ಲ ಒಂದು ರೋಚಕ ವಿಚಾರ ವೀಕ್ಷಕನ ಕಣ್ಣರಳಿಸುತ್ತಿದೆ. ಕಳೆದೊಂದು ವಾರದಿಂದ ಪ್ರೋಮೋ ಮೂಲಕವೇ ಕುತೂಹಲಕ್ಕೆ ಒಗ್ಗರಣೆ ಹಾಕಿತ್ತು ಜೀ ಕನ್ನಡ. ಇದೀಗ ಸೀತಾ ರಾಮ ಪ್ರೇಮಕಥೆಯ ನಡುವೆ, ಪ್ರಿಯಾ- ಅಶೋಕನ ನಡುವಿನ ಪ್ರೀತಿಗೂ ಗ್ರೀನ್‌ ಸಿಗ್ನಲ್‌ ಸಿಕ್ಕಿದೆ. ಯಾರೂ ನಿರೀಕ್ಷಿಸದ ರೀತಿಯಲ್ಲಿ, ಇವರಿಬ್ಬರ ನಡುವೆ ಪ್ರೇಮನಿವೇದನೆ ಘಟಿಸಿದೆ. ಬಚ್ಚಿಟ್ಟದ ವಿಷ್ಯವನ್ನು ಇಬ್ಬರೂ ಹೇಳಿಕೊಂಡು ಮನಸು ಹಗುರ ಮಾಡಿಕೊಂಡಿದ್ದಾರೆ.

ಹೌದು, ಹೀಗೆ ಈ ಜೋಡಿ ಒಂದಾದ, ಪರಸ್ಪರರ ನಡುವೆ ಪ್ರೇಮ ನಿವೇದನೆ ಅದಲು ಬದಲಾದ ವಿಡಿಯೋ ತುಣುಕನ್ನು ಜೀ ಕನ್ನಡ ತನ್ನ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಶೇರ್‌ ಮಾಡಿತ್ತು. ಹಾಗೇ ಶೇರ್‌ ಆಗಿದ್ದೇ ತಡ, ಸಾವಿರಾರು ಮೆಚ್ಚುಗೆಯ ಸಂದೇಶಗಳು ಆ ಪೋಸ್ಟ್‌ಗೆ ದಕ್ಕಿವೆ. ಲಕ್ಷಾಂತರ ವೀಕ್ಷಣೆ ಕಂಡಿದ್ದು ಮಾತ್ರವಲ್ಲದೆ, ಲಕ್ಷ ಲಕ್ಷ ಲೈಕ್ಸ್‌ ಸಹ ಸಿಕ್ಕಿದೆ. ಆರಂಭದಿಂದಲೂ ಈ ಜೋಡಿ ಮೇಲೆ ವೀಕ್ಷಕರ ಕಣ್ಣಿತ್ತು. ಸೀತಾ ಮತ್ತು ರಾಮನ ಆಪ್ತರಾಗಿರುವ ಅಶೋ ಮತ್ತು ಪ್ರಿಯಾ ಸದ್ದಿಲ್ಲದೆ, ಎಲ್ಲರ ಮನಸ್ಸು ಗೆದ್ದಿದ್ದರು.

ಪಟ ಪಟ ಅಂತ ಅರಳು ಹುರಿದಂತೆ ಮಾತನಾಡೋ ಪ್ರಿಯಾ, ದೇಸಾಯಿ ಕಂಪನಿಯ ಸಿಒಒ ಆಗಿರುವ ಅಶೋಕನ ತಲೆ ತಿನ್ನೋ ಕೆಲಸ ಮಾಡುತ್ತಿರುತ್ತಾಳೆ. ಆಕೆಯ ಆ ತುಂಟತನ ಅಶೋಕನಿಗೂ ಇಷ್ಟ. ಆದರೆ, ಅದನ್ನು ಆಕೆಯ ಮುಂದೆ ತೋರಿಸಿರಲಿಲ್ಲ. ಇದೀಗ ಇಬ್ಬರ ನಡುವಿನ ಆ ಪ್ರೀತಿ, ಬಯಲಾಗಿದೆ. ಸೀರಿಯಲ್‌ ವೀಕ್ಷಕರಿಗೆ ಡಬಲ್‌ ಧಮಾಕಾ ಅನ್ನೋ ರೀತಿಯಲ್ಲಿ ಎರಡೆರಡು ಲವ್‌ ಸ್ಟೋರಿಗಳನ್ನು ಒಂದೇ ಸೀರಿಯಲ್‌ನಲ್ಲಿ ಕಣ್ತುಂಬಿಕೊಳ್ಳುತ್ತಿದ್ದಾರೆ. ಈ ಜೋಡಿಗೆ ಅಭಿನಂದನೆಯ ಮಹಾಪೂರವೇ ಹರಿದು ಬರುತ್ತಿದೆ.

ಯಾವ ಕೆಟ್ಟ ಕಣ್ಣೂ ಈ ಜೋಡಿ ಮೇಲೆ ಬೀಳದಿರಲಿ..

ಸೀತಾ ರಾಮ ಸೀರಿಯಲ್‌ನಲ್ಲಿ ಪ್ರಿಯಾ ಹೆಸರಿನ ಪಾತ್ರವನ್ನು ಮೇಘನಾ ಶಂಕರಪ್ಪ ನಿರ್ವಹಿಸುತ್ತಿದ್ದರೆ, ಅಶೋಕ ಪಾತ್ರವನ್ನು ಅಶೋಕ ಶರ್ಮಾ ಮಾಡುತ್ತಿದ್ದಾರೆ. ಈಗ ಈ ಜೋಡಿ ಲವ್‌ ಟ್ರ್ಯಾಕ್‌ ಏರಿದ್ದು, ಕುತೂಹಲ ಇನ್ನಷ್ಟು ಹೆಚ್ಚಾಗಿದೆ. ಈ ಜೋಡಿಯ ನೋಡಿದ ವೀಕ್ಷಕರು ಬಗೆಬಗೆಯ ಕಾಮೆಂಟ್‌ಗಳ ಮೂಲಕವೇ ಶುಭ ಕೋರುತ್ತಿದ್ದಾರೆ.

- ಸೀತಾ, ರಾಮ ಜೋಡಿಗಿಂತ ನಿಮ್ಮ ಜೋಡಿ ತುಂಬಾ ಚೆನ್ನಾಗಿ ಇದೆ

- ನಿಜವಾಗಿಯೂ ನಿಮ್ಮ ಜೋಡಿ ತುಂಬಾ ಸುಂದರವಾಗಿದೆ ದಯವಿಟ್ಟು ಮದುವೆಯಾಗಿ

- ಈ ಧಾರಾವಾಹಿಯಲ್ಲಿ ಹೀರೋ ಹೀರೋಯಿನ್ ಯಾರು ಅಂತಾನೆ ಅರ್ಥ ಆಗ್ತಾ ಇಲ್ಲ

- ಸೀತಾ ರಾಮ ಅಂತೂ ಒಂದಾಗಲಿಲ್ಲ.. ಲಕ್ಷ್ಮಣ ಊರ್ಮಿಳಾ ತರ ಇರೋ ನೀವು ಆದರು ಚೆನ್ನಾಗಿ ಇರಿ. ಯಾರ ಕೆಟ್ಟ ಕಣ್ಣು ನಿಮ್ಮ ಮೇಲೆ ಬೀಳದೆ ಇರ್ಲಿ

- ಸೀತಾ ರಾಮ ಜೋಡಿ ಗಿಂತ ನನಿಗೆ ಈ ಜೋಡಿ ತುಂಬಾ ಇಷ್ಟ.. ಇವರಿಬ್ಬರನ್ನು ಚೇಂಜ್ ಮಾಡ್ಬೇಡಿ...

- ಏನ ಜೋಡಿ ರಿ ಇಬ್ರದೂ ಮಸ್ತಜೋಡಿ Reel ಅಲ್ಲಾ Real ಜೀವನದಾಗು ಇಬ್ರೂ ಕೂಡ ಇರಿ

- ಸುಂದರಜೋಡಿ, ಸುಮಧುರವಾದ ಜೋಡಿ

- ಸೂಪರ್ ಅಂತೂ ಇಂತು ಪ್ರಪೋಸ್ ಮಾಡಿಬಿಟ್ಟ ಅಶೋಕ.. ಸೀತ ರಾಮ್ ಲವ್ ಸ್ಟೋರಿ ಸ್ಟಾರ್ಟ್ ಆಗತಾನೆ ಇಲ್ಲ .. ಇವರದು ಸ್ಟಾರ್ಟ್ ಅತು

- ಪ್ರೀತಿನೇ ಇಲ್ಲ ಅನ್ಕೊಂಡಿರೋವರೆಲ್ಲ ಪ್ರೀತಿನ ಎಕ್ಸ್ಪ್ರೆಸ್ ಮಾಡ್ತಾ ಇದ್ದಾರೆ. ಆದ್ರೆ ತುಂಬಾ ಪ್ರೀತಿ ಮಾಡ್ತೀನಿ ಅನ್ಕೊಂಡಿರೋರು ಇನ್ನೂ ಅವ್ರ್ ಪ್ರೀತಿನ ಹೇಳಕ್ಕೆ ಹೋಗಿಲ್ಲ

- ಅಬ್ಬಾ ಅಂತೂ ಅಶೋಕ್ ಪ್ರಿಯ ಪ್ರೀತಿ ಶುರು ಆಯ್ತು ಮುದ್ದಾದ ಜೋಡಿ

- ಮನಸ್ಸು ಆಕರ್ಷಣೆ ಆದ್ರೆ ಮುಗಿತು... ಎಲ್ಲಿದ್ರೂ ಕೂಗಿ ಹೇಳುತ್ತೆ ಅಂತಸ್ತು ಇರ್ಲಿ ಇಲ್ದೆ ಇರ್ಲಿ... ಯಾವತ್ತಿಗೂ ಬಿಡೋ ಮಾತೆ ಇಲ್ಲ

- ಸೀತಾರಾಮ ಜೋಡಿಗಿಂತ ನಿಮ್ಮ ಜೋಡಿ ತುಂಬಾನೇ ಚೆನ್ನಾಗಿದೆ ರಿಯಲ್ ಲೈಫಲ್ಲು ನಿಮ್ ಜೋಡಿ ತುಂಬಾನೇ ಚೆನ್ನಾಗಿರುತ್ತೆ

ಹೀಗೆ ಬಗೆಬಗೆ ಕಾಮೆಂಟ್‌ ಮೂಲಕ ನೆಟ್ಟಿಗರು ಈ ಜೋಡಿಯನ್ನು ಕೊಂಡಾಡುತ್ತಿದ್ದಾರೆ.

ಸದ್ಯ ಸೀರಿಯಲ್‌ ಎಲ್ಲಿಗೆ ಬಂತು?

ಒಂದು ಕಡೆ ರಾಮ ಸೀತಾಳಿಗೆ ತನ್ನ ಪ್ರೀತಿಯನ್ನು ಹೇಳಲು ಹರಸಾಹಸ ಪಡುತ್ತಿದ್ದಾನೆ. ಹೇಗಾದ್ರೂ ಮಾಡಿ ಪ್ರಪೋಸ್‌ ಮಾಡು ಎಂದು ಅಶೋಕ ಆತನ ದುಂಬಾಲು ಬಿದ್ದಿದ್ದಾನೆ. ಹೀಗಿರುವಾಗಲೇ ಸೀರಿಯಲ್‌ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಸೀತಾಳಿಗೆ ಪ್ರೀತಿ ವಿಷಯ ಹೇಳಲು ಓಡೋಡಿ ಹೋಗಿದ್ದ ರಾಮನಿಗೆ ಸೀತಾ ಅವಮಾನ ಮಾಡಿದ್ದಾಳೆ. ಅದೇ ಬೇಸರದಲ್ಲಿ ವಠಾರದಿಂದ ಹೊರ ಬಂದ ರಾಮ್‌ಗೆ, ಲಾಯರ್‌ ರುದ್ರಪ್ರತಾಪ್‌ ಅಪಘಾತ ಮಾಡಿಸಿದ್ದಾನೆ. ಸೀತಾ ಕಣ್ಣೀರಿಡುತ್ತಲೇ ಆಸ್ಪತ್ರೆಗೆ ಭೇಟಿ ನೀಡಿದ್ದಾಳೆ.

mysore-dasara_Entry_Point