Seetha Rama Serial: ಸೀತಾ ಹೆಸರಿಗೆ ವಾಣಿ ಅತ್ತಿಗೆಯ ಆಸ್ತಿ ಬರೆಸಲು ಮುಂದಾದ ಭಾರ್ಗವಿ; ಹನಿಮೂನ್‌ಗೆ ಕಳಿಸಿ ಹತ್ಯೆಯ ಸಂಚು!?
ದೇಸಾಯಿ ಕುಟುಂಬದ ಆಸ್ತಿಯನ್ನು ತನ್ನ ಹೆಸರಿಗೆ ಮಾಡಿಕೊಳ್ಳಬೇಕೆಂಬ ಪ್ಲಾನ್ ಭಾರ್ಗವಿಯದ್ದು. ಆದರೆ, ಅದು ಅಷ್ಟು ಸುಲಭಕ್ಕೆ ಸಿಗದು ಎಂದು ಗೊತ್ತಿದ್ದರೂ, ಕುತಂತ್ರದಿಂದಲೇ ಅದನ್ನು ಪಡೆಯಲು ನಿರ್ಧರಿಸಿದ್ದಾಳೆ ಭಾರ್ಗವಿ. ಅದರಂತೆ, ಸೀತಾ ಹೆಸರಿಗೆ ಆಸ್ತಿ ಬರೆಸಿ, ಬಳಿಕ ಅವಳನ್ನು ಹತ್ಯೆ ಮಾಡುವುದು ಭಾರ್ಗವಿಯ ಸಂಚು.
Seetha Rama Serial: ಸೀತಾ ರಾಮ ಸೀರಿಯಲ್‌ನಲ್ಲಿ ನೋಡುಗರನ್ನು ಹಿಡಿದಿಡುವ ರೋಚಕತೆ ಎದುರಾಗುತ್ತಿದೆ. ಹೊಸ ಪಾತ್ರಗಳ ಆಗಮನದಿಂದ ಕಥೆಯಲ್ಲಿ ಒಂದಿಲ್ಲೊಂದು ಟ್ವಿಸ್ಟ್ ಸಿಗುತ್ತಿದೆ. ಸಿಹಿ ಬೋರ್ಡಿಂಗ್ ಸ್ಕೂಲ್‌ಗೆ ಹೋಗುತ್ತಿದ್ದಂತೆ, ಆ ಸ್ಕೂಲ್‌ನ ಡಾಕ್ಟರ್ ಮೇಘಶ್ಯಾಮ್ ಪಾತ್ರ ಪರಿಚಯವಾಗಿದೆ. ಒಬ್ಬಂಟಿಯಾಗಿದ್ದ ಸಿಹಿಗೆ ಮೇಘಶ್ಯಾಮನ ಪ್ರೀತಿ ಸಿಕ್ಕಿದೆ. ಡಾ. ಮೇಘಶ್ಯಾಮ್ ಹೆಸರು ಹೇಳಿದ ಸೀತೆಯೂ ಕೊಂಚ ನಡುಗಿದ್ದಾಳೆ. ಅಷ್ಟಕ್ಕೆ ಮುಗಿಯಲಿಲ್ಲ, ರಾಮ ಮತ್ತು ಶ್ಯಾಮ ಇಬ್ಬರೂ ಪರಸ್ಪರ ಭೇಟಿಯಾಗಿದ್ದಾರೆ.
ರಾಮ ಶ್ಯಾಮ ಭೇಟಿ..
ಸಿಹಿ ಬೇಸರದಲ್ಲಿ ಕಣ್ಣೀರು ಹಾಕಿದ್ದಾಳೆ ಎಂಬ ಒಂದೇ ಒಂದು ಕಾರಣಕ್ಕೆ ಸೀತಾಳ ಜತೆಗೆ ನೇರವಾಗಿ ಸಿಹಿ ಇರುವ ಬೋರ್ಡಿಂಗ್ ಶಾಲೆಗೆ ಬಂದಿದ್ದಾನೆ. ಸಿಹಿಯನ್ನು ನೋಡಬೇಕೆಂದು ಕೇಳಿಕೊಂಡಿದ್ದಾನೆ. ಆದರೆ, ಇದಕ್ಕೆ ವಾರ್ಡನ್ ಅವಕಾಶ ಕೊಟ್ಟಿಲ್ಲ. ಅಷ್ಟೊತ್ತಿಗೆ ಶಾಲೆಯ ಬಿಲ್ಡಿಂಗ್ ಮೇಲಿಂದಲೇ ಸಿಹಿ ಅಪ್ಪ ಅಮ್ಮನಿಗೆ ಹಾಯ್ ಹೇಳಿದ್ದಾಳೆ. ಅದಾದ ಮೇಲೆ ಇಬ್ಬರೂ ಒಟ್ಟಿಗೆ ರಸ್ತೆ ಬದಿಯ ಫುಡ್ ಸವಿದಿದ್ದಾರೆ. ಬಳಿಕ ಗಾಡಿ ತರಲೆಂದು ರಾಮ್ ತೆರಳಿದ್ದಾನೆ. ಅಷ್ಟರಲ್ಲಿಯೇ ಮೇಘ ಶ್ಯಾಮ್ ಎದುರಾಗಿದ್ದಾನೆ. ಇಬ್ಬರೂ ಮೊದಲೇ ಪರಿಚಯ ಇದ್ದಿದ್ದರಿಂದ ಮಾತನಾಡಿಕೊಂಡಿದ್ದಾರೆ. ಶೀಘ್ರದಲ್ಲಿಯೇ ಮತ್ತೆ ಭೇಟಿಯಾಗೋಣ ಎಂದು ಶ್ಯಾಮ್ ಹೊರಟಿದ್ದಾನೆ.
ಸತ್ಯನಿಗೂ ಆಸ್ತಿ ವಿಚಾರ ಗೊತ್ತಾಯ್ತು…
ಈ ನಡುವೆ ಸಾಧನಾ, ಪತಿ ಸತ್ಯನಿಗೆ ಫೋನ್ ಮಾಡಿದ್ದಾಳೆ. ಸಿಹಿಯನ್ನು ಬೋರ್ಡಿಂಗ್ ಸ್ಕೂಲ್‌ಗೆ ಕಳಿಸಿದ್ದನ್ನು ಹೇಳಿಕೊಂಡಿದ್ದಾಳೆ. ಅಷ್ಟೇ ಅಲ್ಲ ಆಸ್ತಿ ಹಂಚಿಕೆ ವಿಚಾರವನ್ನೂ ಸತ್ಯನಿಗೆ ಹೇಳಿದ್ದಾಳೆ ಸಾಧನಾ. ಸ್ವತಃ ಭಾರ್ಗವಿಯೇ ಸೀತಾ ಹೆಸರಿಗೆ ಆಸ್ತಿ ಬರೆಸುತ್ತಿದ್ದಾಳೆ. ಅವರಿಬ್ಬರನ್ನೂ ಹನಿಮೂನ್‌ಗೆ ಕಳಿಸುವ ಪ್ಲಾನ್ ಆಗಿದೆ ಎಂದಿದ್ದಾಳೆ. ಭಾರ್ಗವಿಯ ಈ ಪ್ಲಾನ್ ಸತ್ಯನಿಗೆ ಬೇರೆಯದೇ ಅನುಮಾನ ತರಿಸಿದೆ. ದಿಢೀರ್ ಎಂದು ಫೋನ್ ಕಟ್ ಮಾಡಿದ್ದಾನೆ.
ಇತ್ತ ಭಾರ್ಗವಿ ಮತ್ತು ವಿಶ್ವ ಗೆದ್ದು ಬೀಗಿದ ಖುಷಿಯಲ್ಲಿದ್ದಾರೆ. ಸೀತಾ ಮತ್ತು ರಾಮನ ನಡುವೆ ಕೊಂಡಿಯಾಗಿದ್ದ ಸಿಹಿಯನ್ನು ಮೊದಲು ದೂರವಿಡಬೇಕು ಎಂದು ಭಾರ್ಗವಿ ಪ್ಲಾನ್ ಮಾಡಿದ್ದಳು. ಅದರಂತೆ, ಸಿಹಿಯನ್ನು ಬೋರ್ಡಿಂಗ್ ಸ್ಕೂಲ್‌ಗೆ ಕಳಿಸಿ, ತಮ್ಮ ಮುಂದಿನ ಪ್ಲಾನ್‌ಅನ್ನು ಮತ್ತಷ್ಟು ಹಗುರ ಮಾಡಿಕೊಂಡಿದ್ದಾಳೆ. ಇನ್ನು ಮುಂದೆ ಏನಿದ್ದರೂ ಆಸ್ತಿಯನ್ನು ಹೊಡೆಯುವುದೊಂದೇ ಆಕೆಯ ಮತ್ತು ವಿಶ್ವನ ಗುರಿಯಾಗಿದೆ. ಅದರಂತೆ ವಕೀಲರನ್ನು ಕರೆಸಿ ಆಸ್ತಿ ಹಂಚಿಕೆ ಪ್ರಕ್ರಿಯೆಗೂ ಮುಂದಾಗಿದ್ದಾಳೆ.
ಮುಂದೇ ಏನಾಗಬಹುದು?
ವಾಣಿ ಅತ್ತಿಗೆಯ ಆಸ್ತಿಯನ್ನು ಸೀತಾಳ ಹೆಸರಿಗೆ ಬರೆಸಿ, ಸೀತಾ ಮತ್ತು ರಾಮನನ್ನು ಹನಿಮೂನ್‌ಗೆ ಕಳಿಸಿ, ಅಲ್ಲಿ ಸೀತಾಳನ್ನು ಹತ್ಯೆ ಮಾಡುವುದು ಭಾರ್ಗವಿ ಮತ್ತು ವಿಶ್ವನ ಪ್ಲಾನ್. ಅದಕ್ಕಾಗಿಯೇ ಭಾರ್ಗವಿ ಇದೀಗ ಈ ಸಂಚು ರೂಪಿಸಿದ್ದು, ತಾನೇ ಲಾಯರ್ ಅವರಿಗೆ ಹೇಳಿ ಮನೆಗೆ ಕರೆಸುತ್ತಿದ್ದಾಳೆ. ಎಲ್ಲರ ಸಮ್ಮುಖದಲ್ಲಿ ಆಸ್ತಿಯನ್ನು ಸೀತಾಳ ಹೆಸರಿಗೆ ಬರೆಸಿ, ಅದಾದ ಬಳಿಕ ತನ್ನ ಕೈಚಳಕ ತೋರಿಸುವ ಪ್ಲಾನ್ ಆಕೆಯದ್ದು.
ಸೀತಾ ರಾಮ ಧಾರಾವಾಹಿ ಪಾತ್ರವರ್ಗ
ನಿರ್ದೇಶಕ: ಮಧುಸೂಧನ್
ಗಗನ್ ಚಿನ್ನಪ್ಪ: ಶ್ರೀರಾಮ (ನಾಯಕ)
ವೈಷ್ಣವಿ ಗೌಡ: ಸೀತಾ (ನಾಯಕ)
ರೀತು ಸಿಂಗ್: ಸಿಹಿ (ಸೀತಾ ಮಗಳು)
ಅಶೋಕ ಶರ್ಮಾ: ಅಶೋಕ (ಶ್ರೀರಾಮನ ಪ್ರಾಣ ಸ್ನೇಹಿತ)
ಭಾರ್ಗವಿ: ಪೂಜಾ ಲೋಕೇಶ್ (ಶ್ರೀರಾಮನ ಚಿಕ್ಕಮ್ಮ)
ಮುಖ್ಯಮಂತ್ರಿ ಚಂದ್ರು: ಸೂರ್ಯ ಪ್ರಕಾಶ್ ದೇಸಾಯಿ (ಶ್ರೀರಾಮನ ತಾತ)
ಶ್ವೇತಾ ಶಂಕರಪ್ಪ: ಪ್ರಿಯಾ (ಸೀತಾಳ ಸ್ನೇಹಿತೆ)
ವಿಕಾಸ್ ಕಾರ್‌ಗೋಡ್: ಲಾಯರ್ ರುದ್ರಪ್ರತಾಪ್
ಸತೀಶ್ ಚಂದ್ರ: ಚರಣ್. ಡಿ
ಪೂರ್ಣಚಂದ್ರ ತೇಜಸ್ವಿ: ವಿಶ್ವಜೀತ್ (ಶ್ರೀರಾಮನ ಚಿಕ್ಕಪ್ಪ)
ಜಯದೇವ್ ಮೋಹನ್: ಸತ್ಯಜೀತ್ (ಶ್ರೀರಾಮನ ಚಿಕ್ಕಪ್ಪ)
ವಿಭಾಗ