Seetha Rama Serial: ಸೀತಾ ರಾಮನ ನಡುವೆ ಮಗಳಿಗಾಗಿ ಮನಸ್ತಾಪ; ಬೋರ್ಡಿಂಗ್ ಸ್ಕೂಲ್‌ಗೆ ಹೊರಡಲು ಅಣಿಯಾದಳು ಸಿಹಿ
ಮದುವೆ ಬಳಿಕ ಹಾಯಾಗಿ ಇರಬಹುದು ಎಂದು ಲೆಕ್ಕ ಹಾಕಿದ್ದ ಸೀತಾ ಮತ್ತು ರಾಮನ ನಡುವೆ ಇದೀಗ, ಆ ನೆಮ್ಮದಿಯ ಹುಡುಕಾಟದಲ್ಲಿದ್ದಾರೆ. ಸಿಹಿಯನ್ನೇ ಟಾರ್ಗೆಟ್ ಮಾಡಿರುವ ಭಾರ್ಗವಿ, ಆಕೆಯನ್ನು ಮನೆಯಿಂದ ಆಚೆ ಕಳಿಸುವ ನಿಟ್ಟಿನಲ್ಲಿ ಒಂದಾದ ಮೇಲೊಂದು ಅಸ್ತ್ರ ಉಪಯೋಗಿಸುತ್ತಿದ್ದಾಳೆ.
Seetha Rama Serial: ಸೀತಾ ರಾಮ ಧಾರಾವಾಹಿಯಲ್ಲಿ ಸಿಹಿಯ ವಿಚಾರವೇ ದೊಡ್ಡ ಸುದ್ದಿಯಾಗುತ್ತಿದೆ. ಆಕೆಯನ್ನೇ ಟಾರ್ಗೆಟ್ ಮಾಡಿರುವ ಭಾರ್ಗವಿ, ಶತಾಯ ಗತಾಯ ಸಿಹಿಯನ್ನು ಬೋರ್ಡಿಂಗ್ ಸ್ಕೂಲ್‌ಗೆ ಸೇರಿಸಿಬೇಕೆಂದು ಪಣತೊಟ್ಟಂತಿದೆ. ಅದಕ್ಕಾಗಿಯೇ ಪತಿ ವಿಶ್ವಜಿತ್ ಜತೆ ಸೇರಿ ಸಿಹಿಯನ್ನು ಕಿಡ್ನಾಪ್ ಮಾಡಿಸುವ ನಾಟಕ ಮಾಡಿದ್ದಾಳೆ ಭಾರ್ಗವಿ. ಸಿಹಿಗೆ ಮೇಲಿಂದ ಮೇಲೆ ಎದುರಾಗುತ್ತಿರುವ ಕಂಟಕಗಳನ್ನು ಕಂಡು ರಾಮ್ ಮತ್ತು ಸೀತಾ ಸಹ ಕೊಂಚ ಗಾಬರಿಯಾಗಿದ್ದಾರೆ.
ಸಿಹಿ ಕಣ್ಣಿರು ಸುರಿಸುತ್ತಲೇ ನಡೆದ ವಿಚಾರವನ್ನು ಮನೆಯವರ ಮುಂದೆ ಹೇಳಿಕೊಂಡಿದ್ದಾಳೆ. ನಾನೇ ಸಿಹಿಯನ್ನು ಕಾಪಾಡಿ, ಆ ಕಿಡ್ನಾಪರ್‌ನನ್ನು ಪೊಲೀಸ್ ಕಸ್ಟಡಿಗೆ ಕೊಟ್ಟು ಬಂದಿದ್ದೇನೆ ಎಂದೂ ಹೇಳಿದ್ದಾನೆ. ಒಳಗೊಳಗೆ ನನ್ನ ಸ್ವಾರ್ಥಕ್ಕೆ ನಿನ್ನ ಬಳಸಿಕೊಳ್ಳುವಂತಾಯ್ತು, ಸಾರಿ ಸಿಹಿ ಎಂದು ಮನಸಿನೊಳಗೇ ಹೇಳಿಕೊಂಡಿದ್ದಾನೆ ವಿಶ್ವ. ಇತ್ತ ಸಿಹಿ ಈಗ ಸಾಮಾನ್ಯ ಹುಡುಗಿಯಲ್ಲ, ದೇಸಾಯಿ ಕುಟುಂಬದ ಮಗಳು, ಶತ್ರುಗಳ ಕಣ್ಣು ಆಕೆಯ ಮೇಲೂ ಬಿದ್ದಿದೆ. ಹಾಗಾಗಿ ಆಕೆಯನ್ನು ಬೋರ್ಡಿಂಗ್ ಸ್ಕೂಲ್‌ಗೆ ಕಳಿಸುವ ಬಗ್ಗೆ ಹೇಳಿದ್ದಾಳೆ.
ಬೋರ್ಡಿಂಗ್ ಸ್ಕೂಲ್ ವಿಚಾರಕ್ಕೂ ಮೊದಲು ನಮ್ಮ ಅನಿಕೇತ್ ಶಾಲೆಗೆ ಸಿಹಿಯನ್ನು ಅಡ್ಮಿಷನ್ ಮಾಡಿಸಿದ್ರಾಯ್ತು ಎಂದಿದ್ದಾಳೆ. 15 ಲಕ್ಷದ ಜತೆಗೆ ಇನ್ನೂ 15 ಲಕ್ಷ ಕೊಟ್ರಾಯ್ತು ಎಂದಿದ್ದಾಳೆ ಭಾರ್ಗವಿ. ಅಯ್ಯೋ ಅಷ್ಟೆಲ್ಲ ದೊಡ್ಡ ಸ್ಕೂಲ್‌ಗೆ ಸಿಹಿ ಹೋಗುವುದು ಬೇಡ. ನನ್ನ ಮಗಳಿಗೆ ಇಷ್ಟೊಂದು ಹಣ ಖರ್ಚು ಮಾಡುವುದು ಬೇಡ ಎಂದಿದ್ದಾಳೆ. ಇದಕ್ಕೆ ಮತ್ತೆ ಮಾತನಾಡಿದ ಭಾರ್ಗವಿ, ಹಾಗಾದರೆ, ನಮ್ಮ ಮುಂದಿರುವ ಆಯ್ಕೆ, ಸಿಹಿಯನ್ನು ಬೋರ್ಡಿಂಗ್ ಸ್ಕೂಲ್‌ಗೆ ಹಾಕಬೇಕಷ್ಟೇ ಎಂದಿದ್ದಾಳೆ.
ಸಿಹಿ ನನ್ನ ಜತೆಯೇ ಇರಲಿ..
ಭಾರ್ಗವಿಯ ಈ ಮಾತಿಗೆ, ನನ್ನ ಮಗಳು ಬೋರ್ಡಿಂಗ್ ಸ್ಕೂಲ್‌ನಲ್ಲಿ ಓದುವುದು ಬೇಡ ಎಂದು ಬೇಸರದಲ್ಲಿಯೇ ಸಿಹಿಯನ್ನು ಕರೆದುಕೊಂಡು ಒಳನಡೆದಿದ್ದಾಳೆ. ಇತ್ತ ರಾಮ್ ನಾನೇ ಆಕೆಯನ್ನು ಪಿಕ್ ಡ್ರಾಪ್ ಮಾಡ್ತಿನಿ ಎಂದರೂ, ತಾತ ಸೂರ್ಯಪ್ರಕಾಶ್ ರಾಮ್‌ನ ಮಾತನ್ನು ಒಪ್ಪುತ್ತಿಲ್ಲ. ಆಫೀಸ್ ಕೆಲಸವೇ ಹೆಚ್ಚಿರುವಾಗ, ಇದನ್ನು ಹೇಗೆ ನಿಭಾಯಿಸ್ತಿಯಾ ಎಂದಿದ್ದಾನೆ. ರಾಮ್‌ಗೆ ಮಗಳನ್ನು ಬಸ್‌ನಲ್ಲಿ ಕಳಿಸೋ ಮನಸಿಲ್ಲ. ಇತ್ತ ಸೀತಾಗೆ ಸಿಹಿಯನ್ನು ಬೋರ್ಡಿಂಗ್ ಸ್ಕೂಲ್‌ಗೆ ಕಳಿಸುವ ಎಳ್ಳಷ್ಟು ಮನಸ್ಸಿಲ್ಲ.
ಸಿಹಿ ಕನಸಲ್ಲಿ ಬಂದ ಭಾರ್ಗವಿ
ಈ ನಡುವೆ, ಅಪ್ಪ ಅಮ್ಮ ಯಾವಾಗಲೂ ಖುಷಿ ಖುಷಿಯಾಗಿ ಇರಬೇಕು ಅಂದರೆ, ನೀನು ಅವರಿಂದ ದೂರ ಇರಬೇಕು. ಆಗ ಮಾತ್ರ ಅವರಿಬ್ಬರು ಸಂತೋಷವಾಗಿರುತ್ತಾರೆ ಎಂದು ಭಾರ್ಗವಿ ಹೇಳಿದ ಮಾತು ಸಿಹಿಯ ತಲೆಯಲ್ಲಿ ಕೊರೆಯುತ್ತಿದೆ. ಅದಕ್ಕಾಗಿ ರಾತ್ರಿ ದಿಢೀರನ್ ಎದ್ದು, ನಾನು ಬೋರ್ಡಿಂಗ್ ಸ್ಕೂಲ್‌ಗೆ ಹೋಗ್ತಿನಿ, ಅಪ್ಪ ಎಂದು ರಾಮನ ಮುಂದೆ ಹೇಳಿದ್ದಾಳೆ. ನಾನೀಗ ಚಿಕ್ಕವಳ್ಳಲ್ಲ, ದೊಡ್ಡವಳಾಗಿದ್ದೇನೆ ಎಂದು ಹೇಳಿ, ಅಪ್ಪನ ಬಳಿ ಬೇಡಿಕೊಂಡಿದ್ದಾಳೆ. ಮಗಳನ್ನು ಬೋರ್ಡಿಂಗ್ ಸ್ಕೂಲ್‌ಗೆ ಕಳಿಸುವುದು ರಾಮ್‌ಗೂ ಸುತಾರಾಂ ಇಷ್ಟವಿಲ್ಲ.
ಸೀತಾ ರಾಮ ಧಾರಾವಾಹಿ ಪಾತ್ರವರ್ಗ
ನಿರ್ದೇಶಕ: ಮಧುಸೂಧನ್
ಗಗನ್ ಚಿನ್ನಪ್ಪ: ಶ್ರೀರಾಮ (ನಾಯಕ)
ವೈಷ್ಣವಿ ಗೌಡ: ಸೀತಾ (ನಾಯಕ)
ರೀತು ಸಿಂಗ್: ಸಿಹಿ (ಸೀತಾ ಮಗಳು)
ಅಶೋಕ ಶರ್ಮಾ: ಅಶೋಕ (ಶ್ರೀರಾಮನ ಪ್ರಾಣ ಸ್ನೇಹಿತ)
ಭಾರ್ಗವಿ: ಪೂಜಾ ಲೋಕೇಶ್ (ಶ್ರೀರಾಮನ ಚಿಕ್ಕಮ್ಮ)
ಮುಖ್ಯಮಂತ್ರಿ ಚಂದ್ರು: ಸೂರ್ಯ ಪ್ರಕಾಶ್ ದೇಸಾಯಿ (ಶ್ರೀರಾಮನ ತಾತ)
ಶ್ವೇತಾ ಶಂಕರಪ್ಪ: ಪ್ರಿಯಾ (ಸೀತಾಳ ಸ್ನೇಹಿತೆ)
ವಿಕಾಸ್ ಕಾರ್‌ಗೋಡ್: ಲಾಯರ್ ರುದ್ರಪ್ರತಾಪ್
ಸತೀಶ್ ಚಂದ್ರ: ಚರಣ್. ಡಿ
ಪೂರ್ಣಚಂದ್ರ ತೇಜಸ್ವಿ: ವಿಶ್ವಜೀತ್ (ಶ್ರೀರಾಮನ ಚಿಕ್ಕಪ್ಪ)
ಜಯದೇವ್ ಮೋಹನ್: ಸತ್ಯಜೀತ್ (ಶ್ರೀರಾಮನ ಚಿಕ್ಕಪ್ಪ)