Seetha Rama Serial: ಸಿಹಿಯ ಅಪ್ಪ ಹೌದು, ಆದರೆ ಸೀತಾಳ ಗಂಡನಲ್ಲ! ಪುಟಾಣಿ ಸಿಹಿ ಬದುಕಿಗೆ ಮೇಘದಂತೆ ಬಂದನಾ ರಿಯಲ್‌ ಅಪ್ಪ ಮೇಘಶ್ಯಾಮ್?-kannada television news seetha rama serial august 20th episode highlights new character dr meghashyam entry mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Seetha Rama Serial: ಸಿಹಿಯ ಅಪ್ಪ ಹೌದು, ಆದರೆ ಸೀತಾಳ ಗಂಡನಲ್ಲ! ಪುಟಾಣಿ ಸಿಹಿ ಬದುಕಿಗೆ ಮೇಘದಂತೆ ಬಂದನಾ ರಿಯಲ್‌ ಅಪ್ಪ ಮೇಘಶ್ಯಾಮ್?

Seetha Rama Serial: ಸಿಹಿಯ ಅಪ್ಪ ಹೌದು, ಆದರೆ ಸೀತಾಳ ಗಂಡನಲ್ಲ! ಪುಟಾಣಿ ಸಿಹಿ ಬದುಕಿಗೆ ಮೇಘದಂತೆ ಬಂದನಾ ರಿಯಲ್‌ ಅಪ್ಪ ಮೇಘಶ್ಯಾಮ್?

ಸೀತಾ ರಾಮ ಧಾರಾವಾಹಿಯಲ್ಲಿ ಸಿಹಿಯ ಜನ್ಮ ರಹಸ್ಯವೇ ದೊಡ್ಡ ಪ್ರಶ್ನೆಯಾಗಿ ಉಳಿದಿದೆ. ಅದಕ್ಕೆ ಇದೀಗ ಉತ್ತರ ಎಂಬಂತೆ ಹೊಸ ಪಾತ್ರಗಳ ಎಂಟ್ರಿಯಾಗುತ್ತಿದೆ. ಸಿಹಿ ಬೋರ್ಡಿಂಗ್‌ ಸ್ಕೂಲ್‌ ಸೇರುತ್ತಿದ್ದಂತೆ, ಡಾ. ಮೇಘಶ್ಯಾಮನ ಆಗಮನವಾಗಿದೆ. ಹಾಗಾದರೆ, ಯಾರೀತ, ಸಿಹಿಗೂ ಈತನಿಗೂ ಏನು ಸಂಬಂಧ?

ಸೀತಾ ರಾಮ ಧಾರಾವಾಹಿಯಲ್ಲಿ ಸಿಹಿಯ ಜನ್ಮ ರಹಸ್ಯವೇ ದೊಡ್ಡ ಪ್ರಶ್ನೆಯಾಗಿ ಉಳಿದಿದೆ. ಅದಕ್ಕೆ ಇದೀಗ ಉತ್ತರ ಎಂಬಂತೆ ಹೊಸ ಪಾತ್ರಗಳ ಎಂಟ್ರಿಯಾಗುತ್ತಿದೆ. ಸಿಹಿ ಬೋರ್ಡಿಂಗ್‌ ಸ್ಕೂಲ್‌ ಸೇರುತ್ತಿದ್ದಂತೆ, ಡಾ. ಮೇಘಶ್ಯಾಮನ ಆಗಮನವಾಗಿದೆ.
ಸೀತಾ ರಾಮ ಧಾರಾವಾಹಿಯಲ್ಲಿ ಸಿಹಿಯ ಜನ್ಮ ರಹಸ್ಯವೇ ದೊಡ್ಡ ಪ್ರಶ್ನೆಯಾಗಿ ಉಳಿದಿದೆ. ಅದಕ್ಕೆ ಇದೀಗ ಉತ್ತರ ಎಂಬಂತೆ ಹೊಸ ಪಾತ್ರಗಳ ಎಂಟ್ರಿಯಾಗುತ್ತಿದೆ. ಸಿಹಿ ಬೋರ್ಡಿಂಗ್‌ ಸ್ಕೂಲ್‌ ಸೇರುತ್ತಿದ್ದಂತೆ, ಡಾ. ಮೇಘಶ್ಯಾಮನ ಆಗಮನವಾಗಿದೆ.

Seetha Rama Serial: ಸೀತಾ ರಾಮ ಧಾರಾವಾಹಿಯಲ್ಲಿ ಇತ್ತೀಚಿನ ಕೆಲ ದಿನಗಳಿಂದ ನೋಡುಗರನ್ನು ಸೆಳೆಯುವ ಯತ್ನವಾಗುತ್ತಿದೆ. ಹೊಸ ಪಾತ್ರಗಳ ಆಗಮನವೂ ಆಗುತ್ತಿದೆ. ಅಪ್ಪ ಅಮ್ಮ ಖುಷಿಯಾಗಿರಬೇಕು ಅನ್ನೋ ಒಂದು ಕಾರಣಕ್ಕೆ ಸಿಹಿ ಬೋರ್ಡಿಂಗ್‌ ಸ್ಕೂಲ್‌ ಸೇರಿದ್ದಾಳೆ. ಬೇಸರದಲ್ಲಿಯೇ ಮಗಳನ್ನು ಬೋರ್ಡಿಂಗ್‌ ಶಾಲೆಗೆ ಕಳಿಸಿದ್ದಾರೆ ಸೀತಾ ಮತ್ತು ರಾಮ. ಇನ್ನೊಂದು ಕಡೆಗೆ ಇದೇ ಸಿಹಿಯ ರಿಯಲ್‌ ತಂದೆಯ ಹುಟುಕಾಟಕ್ಕೆ ಇಳಿದಿದ್ದಾಳೆ ಭಾರ್ಗವಿ. ಭಾರ್ಗವಿ ಜತೆಗೆ ಪತಿ ವಿಶ್ವಜೀತ್‌ ಸಹ ಸಾಥ್‌ ನೀಡಿದ್ದಾರೆ. ರಾಮ ಮೇಲೆ ಆತನೂ ಕೂಡ ಒಳಗೊಳಗೆ ಹಲ್ಲು ಮಸಿಯುತ್ತಿದ್ದಾನೆ.

ಹೇಗಾದರೂ ಸೀತಾ ಮತ್ತು ಸಿಹಿಯನ್ನು ದೂರ ಮಾಡಿದರೆ, ನಮ್ಮ ಮನೆಗೂ ಒಂದು ಮಗು ಬರಬಹುದು ಎಂದು ಭಾರ್ಗವಿ ಈಗಾಗಲೇ ಮಾವಯ್ಯ ಸೂರ್ಯಪ್ರಕಾಶ್‌ ತಲೆಗೆ ತುಂಬಿದ್ದಾಳೆ. ಆದರೆ, ಭಾರ್ಗವಿಯ ಅಸಲಿ ಆಟವೇ ಬೇರೆ ಇದೆ. ಮತ್ತೊಂದು ಕಡೆಗೆ ಇಷ್ಟು ದಿನ ಕಾಣಿಸಿಕೊಳ್ಳದ ಚಾಂದಿನಿ ಇದೀಗ ಮತ್ತೆ ರಾಮನ ಸಂಸಾರ ಹಾಳು ಮಾಡುವ ಪಣ ತೊಟ್ಟಂತಿದೆ. ಹೇಳದೇ ಕೇಳದೆ ಆಕೆಯನ್ನು ಕೆಲಸದಿಂದ ಕಿತ್ತು ಹಾಕಿದ ರಾಮನ ವಿರುದ್ಧ ಸಿಡಿದೆದ್ದಿದ್ದಾಳೆ. ಭಾರ್ಗವಿಯಿಂದಲೇ ಅವಮಾನ ಎದುರಿಸಿ, ದೇಸಾಯಿ ಕುಟುಂಬದ ವಿರುದ್ಧ ತಿರುಗಿ ಬಿದ್ದಿದ್ದಾಳೆ.

ಹೊಸ ಪಾತ್ರ ಡಾ. ಮೇಘಶ್ಯಾಮ್‌ ಎಂಟ್ರಿ

ಇತ್ತ ಸಿಹಿ ಮೊದಲ ಸಲ್ಲ ಅಮ್ಮನನ್ನು ಬಿಟ್ಟು ಬೋರ್ಡಿಂಗ್‌ ಸ್ಕೂಲ್‌ ಸೇರಿದ್ದಾಳೆ. ಶಾಲೆಯಲ್ಲಿ ಬೇಸರದಲ್ಲಿ ಒಬ್ಬಳೇ ಕಾಲ ಕಳೆಯುತ್ತಿದ್ದಾಳೆ. ಹೀಗಿರುವಾಗಲೇ ಅಚ್ಚರಿಯ ರೀತಿಯಲ್ಲಿ ಹೊಸ ಪಾತ್ರವೊಂದು ಎಂಟ್ರಿಯಾಗಿದೆ. ಆ ಪಾತ್ರವೇ ಡಾ. ಮೇಘಶ್ಯಾಮ್!‌ ಇಲ್ಲಿಯವರೆಗೂ ಸೀತಾಳ ಅಪ್ಪ ಯಾರಿರಬಹುದು ಎಂಬ ಊಹೆ ಎಲ್ಲರಲ್ಲಿಯೂ ಇತ್ತು. ಮೇಘಶ್ಯಾಮನ ಎಂಟ್ರಿಯಾಗುತ್ತಿದ್ದಂತೆ, ವೀಕ್ಷಕರಿಂದ ಊಹೆಗಳ ಸುರಿಮಳೆಯೇ ಸುರಿದಿದೆ. ನಾನು ಡಾಕ್ಟರ್‌ ಎಂದು ಸಿಹಿಯನ್ನು ಇಂಟ್ರಡ್ಯೂಸ್‌ ಮಾಡಿಕೊಂಡಿದ್ದಾನೆ ಮೇಘಶ್ಯಾಮ್.‌

ಬೋರ್ಡಿಂಗ್‌ ಸ್ಕೂಲ್‌ ಮಕ್ಕಳ ಆರೋಗ್ಯ ನೋಡಿಕೊಳ್ಳುವ ಜವಾಬ್ದಾರಿ ಡಾ. ಮೇಘಶ್ಯಾಮ್‌ ಅವರದ್ದು. ಹೊಸ ಅಡ್ಮಿಷನ್‌ ಆಗಿದ್ದ ಸಿಹಿಗೆ ಇಂಜೆಕ್ಷನ್‌ ನೀಡಲು ಮೇಘಶ್ಯಾಮ್‌ ಬರುತ್ತಿದ್ದಂತೆ, ಸಿಹಿಯ ಮುಖವನ್ನೇ ಹೋಲುತ್ತಿದೆ. ಆತನ ಅಪಿಯರನ್ಸ್‌ ಕಂಡೊಡನೆ, ಬಗೆಬಗೆ ರೀತಿಯಲ್ಲಿ ಕಾಮೆಂಟ್‌ ಹಾಕುತ್ತಿದ್ದಾರೆ ವೀಕ್ಷಕರು. ನಿನ್ನ ಇಷ್ಟದ ತಿಂಡಿ ಯಾವುದು ಎಂದು ಸಿಹಿಗೆ ಕೇಳಿದ್ದಾನೆ ಡಾಕ್ಟರ್.‌ ಆಗ ಸಿಹಿ ನನಗೆ ಗೊಜ್ಜವಲಕ್ಕಿ ಎಂದಿದ್ದಾಳೆ. ಅರೇ ನನಗೂ ಅದೇ ಇಷ್ಟ ಎಂದಿದ್ದಾನೆ ಮೇಘಶ್ಯಾಮ್‌.

ನಿಜವಾಗುತ್ತ ವೀಕ್ಷಕರ ಊಹೆ..?

“ಇವರೇ ನಿಜವಾದ ತಂದೆ, ಇವರು ಸಿಹಿ ಅಪ್ಪ ಅಂತ ಅನ್ಸುತ್ತೆ, ಇನ್ನೊಂದು ವಿಷಯ ಏನು ಅಂದರೆ ಅಪ್ಪ ಹೌದು ಅಮ್ಮ ಸೀತಾ ಅಲ್ಲ..” ಹೀಗೆ ಸಾಕಷ್ಟು ಉತ್ತರಗಳು ವೀಕ್ಷಕ ವಲಯದಿಂದ ಕೇಳಿಬರುತ್ತಿವೆ. ಇದರ ಜತೆಗೆ ಸಿಹಿ ಇವರ ಮಗಳಾಗಿರಬಹುದು, ಆದರೆ ಸೀತಾ ಈತನ ಹೆಂಡತಿ ಅಲ್ಲ ಎಂಬ ಊಹೆಯೂ ಜೋರಾಗಿದೆ. ಒಟ್ಟಿನಲ್ಲಿ ಸಿಹಿಯ ಜನ್ಮರಹಸ್ಯ ವಿಷಯವನ್ನೇ ನಿರ್ದೇಶಕರು ಟಾರ್ಗೆಟ್‌ ಮಾಡಿದಂತಿದೆ. ಆ ಟ್ವಿಸ್ಟ್‌ಗೆ ಇನ್ನೇನು ಶೀಘ್ರದಲ್ಲಿ ಉತ್ತರ ಸಿಗುವ ನಿರೀಕ್ಷೆಯಿದೆ.

ಸೀತಾ ರಾಮ ಧಾರಾವಾಹಿ ಪಾತ್ರವರ್ಗ

ನಿರ್ದೇಶಕ: ಮಧುಸೂಧನ್‌

ಗಗನ್‌ ಚಿನ್ನಪ್ಪ: ಶ್ರೀರಾಮ (ನಾಯಕ)

ವೈಷ್ಣವಿ ಗೌಡ: ಸೀತಾ (ನಾಯಕ)

ರೀತು ಸಿಂಗ್: ಸಿಹಿ (ಸೀತಾ ಮಗಳು)

ಅಶೋಕ ಶರ್ಮಾ: ಅಶೋಕ (ಶ್ರೀರಾಮನ ಪ್ರಾಣ ಸ್ನೇಹಿತ)

ಭಾರ್ಗವಿ: ಪೂಜಾ ಲೋಕೇಶ್‌ (ಶ್ರೀರಾಮನ ಚಿಕ್ಕಮ್ಮ)

ಮುಖ್ಯಮಂತ್ರಿ ಚಂದ್ರು: ಸೂರ್ಯ ಪ್ರಕಾಶ್‌ ದೇಸಾಯಿ (ಶ್ರೀರಾಮನ ತಾತ)

ಶ್ವೇತಾ ಶಂಕರಪ್ಪ: ಪ್ರಿಯಾ (ಸೀತಾಳ ಸ್ನೇಹಿತೆ)

ವಿಕಾಸ್‌ ಕಾರ್‌ಗೋಡ್:‌ ಲಾಯರ್‌ ರುದ್ರಪ್ರತಾಪ್

ಸತೀಶ್‌ ಚಂದ್ರ: ಚರಣ್‌. ಡಿ

ಪೂರ್ಣಚಂದ್ರ ತೇಜಸ್ವಿ: ವಿಶ್ವಜೀತ್‌ (ಶ್ರೀರಾಮನ ಚಿಕ್ಕಪ್ಪ)

ಜಯದೇವ್‌ ಮೋಹನ್:‌ ಸತ್ಯಜೀತ್‌ (ಶ್ರೀರಾಮನ ಚಿಕ್ಕಪ್ಪ)