Seetha Rama Serial: ಬಬ್ಲಿ ಬೆಡಗಿ ಪ್ರಿಯಾಗೆ ಸ್ತನ ಕ್ಯಾನ್ಸರ್‌! ಗಂಭೀರ ಕಾಯಿಲೆ ಬಗ್ಗೆ ಹೊರಬಿತ್ತು ಅಚ್ಚರಿಯ ರಿಪೋರ್ಟ್‌
ಕನ್ನಡ ಸುದ್ದಿ  /  ಮನರಂಜನೆ  /  Seetha Rama Serial: ಬಬ್ಲಿ ಬೆಡಗಿ ಪ್ರಿಯಾಗೆ ಸ್ತನ ಕ್ಯಾನ್ಸರ್‌! ಗಂಭೀರ ಕಾಯಿಲೆ ಬಗ್ಗೆ ಹೊರಬಿತ್ತು ಅಚ್ಚರಿಯ ರಿಪೋರ್ಟ್‌

Seetha Rama Serial: ಬಬ್ಲಿ ಬೆಡಗಿ ಪ್ರಿಯಾಗೆ ಸ್ತನ ಕ್ಯಾನ್ಸರ್‌! ಗಂಭೀರ ಕಾಯಿಲೆ ಬಗ್ಗೆ ಹೊರಬಿತ್ತು ಅಚ್ಚರಿಯ ರಿಪೋರ್ಟ್‌

ಸೀತಾ ರಾಮ ಸೀರಿಯಲ್‌ನಲ್ಲಿ ಅಶೋಕ ಮತ್ತು ಪ್ರಿಯಾ ಪ್ರೀತಿ ಮಾಡಿ ಮದುವೆ ಆದವರು. ಮದುವೆ ಬಳಿಕ ಕೆಲವು ಸಲ ವಾಂತಿಯಾದಾಗ, ಮಗುವಿನ ಆಸೆ ಪ್ರಿಯಾ ಮನಸ್ಸಲ್ಲಿ ಚಿಗುರೊಡೆದಿತ್ತು. ಆದರೆ ಅದು ಪಿತ್ತದ ವಾಂತಿ ಎಂದು ಗೊತ್ತಾದಾಗ ಬೇಸರಿಸಿಕೊಂಡಿದ್ದಳು. ಇದೀಗ ಪ್ರಿಯಾಗೆ ಗಂಭೀರ ಕಾಯಿಲೆ ಇರುವುದು ಬೆಳಕಿಗೆ ಬಂದಿದೆ.

ಸೀತಾ ರಾಮ ಸೀರಿಯಲ್‌ನಲ್ಲೀಗ ಪ್ರಿಯಾಗೆ ಸ್ತನ ಕ್ಯಾನ್ಸರ್‌ ಇರುವುದು ಬೆಳಕಿಗೆ ಬಂದಿದೆ.
ಸೀತಾ ರಾಮ ಸೀರಿಯಲ್‌ನಲ್ಲೀಗ ಪ್ರಿಯಾಗೆ ಸ್ತನ ಕ್ಯಾನ್ಸರ್‌ ಇರುವುದು ಬೆಳಕಿಗೆ ಬಂದಿದೆ. (Zee5)

Seetha Rama Serial: ಸೀತಾ ರಾಮ ಸೀರಿಯಲ್‌ನಲ್ಲೀಗ ಅಚ್ಚರಿಗಳು ಘಟಿಸುತ್ತಿವೆ. ಇಲ್ಲಿಯವರೆಗೂ ಮೇಘಶ್ಯಾಮ ಅನ್ನೋ ಹೆಸರು ಕೇಳುತ್ತಿದ್ದಂತೆ ಕೊಂಚ ಬೆಚ್ಚಿ ಬೀಳುತ್ತಿದ್ದ ಸೀತಾ, ಇದೀಗ ಅದೇ ಮೇಘಶ್ಯಾಮನ ಜತೆಗೆ ಫೋನ್‌ನಲ್ಲಿ ಮಾತನಾಡಿದ್ದಾಳೆ. ರಾಮನ ವೈಫ್‌ ಎಂಬ ಕಾರಣಕ್ಕೆ, ಆದಷ್ಟು ಬೇಗ ನಿಮ್ಮ ಮನೆಗೆ ಬರ್ತೀವಿ ಪ್ಲಾನ್‌ ಮಾಡಿ ಎಂದಿದ್ದಾನೆ. ಈ ನಡುವೆ ಮೇಘಶ್ಯಾಮ್‌ ಸಹ ಶೀಘ್ರದಲ್ಲಿ ನಾನು ಮತ್ತು ಶಾಲಿನಿ ನಿಮ್ಮ ಮನೆಗೆ ಬರ್ತೀವಿ ಎಂಬ ಭರವಸೆ ನೀಡಿದ್ದಾನೆ. ಸೀತಾ ರಾಮನಷ್ಟೇ ಸಿಹಿ ಮೇಲೆ ಪ್ರೀತಿ ಇಟ್ಟುಕೊಂಡಿದ್ದಾನೆ ಮೇಘಶ್ಯಾಮ್.‌

ಈ ನಡುವೆ ಸಿಹಿ ಬೋರ್ಡಿಂಗ್‌ ಸ್ಕೂಲ್‌ ಹೋಗಲ್ಲ. ತಾತ ಸೂರ್ಯಪ್ರಕಾಶ್‌ ಹೇಳಿದಂತೆ, ನನಗೆ ಇನ್ನೊಬ್ಬ ತಮ್ಮ ಬೇಕು ಎಂದು ಹಠ ಹಿಡಿದು ಕೂತಿದ್ದಾಳೆ ಸಿಹಿ. ಈ ವಿಚಾರವನ್ನು ಭಾರ್ಗವಿ ಮತ್ತು ವಿಶ್ವನ ಮುಂದೆಯೂ ಹೇಳಿಕೊಂಡಿದ್ದಾಳೆ. ನನಗೆ ಇನ್ನೊಬ್ಬ ತಮ್ಮ ಬೇಕು ಎಂದು ಹೇಳುತ್ತಿದ್ದಂತೆ, ಭಾರ್ಗವಿ, ವಿಶ್ವ ಅರೇ ಕ್ಷಣ ಶಾಕ್‌ ಆಗಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಭಾರ್ಗವಿ, ನಿನಗೆ ತಮ್ಮ ಬರಲ್ಲ, ತಮ್ಮ ಬಂದ್ರೆ ಸೀತಾ-ರಾಮ ಇಬ್ಬರೂ ನಿನ್ನನ್ನು ಇಷ್ಟಪಡಲ್ಲ, ನಿನಗೆ ಟೈಮ್ ಸಹ ಕೊಡಲ್ಲ ಎಂದು ಸಿಹಿಯ ಕಿವಿಗೆ ತುಂಬಿದ್ದಾಳೆ ಭಾರ್ಗವಿ.

ದೇಸಾಯಿ ಮನೆತನದ ಆಸ್ತಿ ನನ್ನ ಮಗನಿಗೆ ಮಾತ್ರ..

ಇಲ್ಲ ನನಗೆ ತಮ್ಮ ಬಂದೇ ಬರ್ತಾನೆ ನೋಡ್ತಿರಿ ಎಂದು ಚಾಲೆಂಜ್‌ ಹಾಕಿದ್ದಾಳೆ ಸಿಹಿ. ಸಿಹಿಯ ಈ ಮಾತು ಭಾರ್ಗವಿ ಮತ್ತು ವಿಶ್ವನಿಗೆ ನಡುಕ ಹುಟ್ಟಿಸಿದೆ. ಒಂದು ವೇಳೆ ಸೀತಾ ರಾಮ ಇಬ್ಬರೂ ಮಗು ಮಾಡಿಕೊಂಡರೆ, ಇಡೀ ಆಸ್ತಿ ಆ ಮಗುವಿನ ಪಾಲಾಗುತ್ತೆ ಎಂದು ವಿಶ್ವ ಹೇಳುತ್ತಿದ್ದಂತೆ, ಇಲ್ಲ ಹಾಗಾಗಲು ನಾನು ಬಿಡಲ್ಲ. ದೇಸಾಯಿ ಮನೆತನದ ಆಸ್ತಿ ನನ್ನ ಮಗನಿಗೆ ಸಿಗಬೇಕು ಎಂದಿದ್ದಾಳೆ. ಈ ಮೂಲಕ ರಾಮನ ಆಸ್ತಿಯನ್ನು ಲಪಟಾಯಿಸಲು ಪ್ರತಿತಂತ್ರ ಹೆಣೆಯುತ್ತಿದ್ದಾಳೆ ಭಾರ್ಗವಿ.

ಅಶೋಕನ ಮಡದಿ ಪ್ರಿಯಾಗೆ ಕ್ಯಾನ್ಸರ್‌!

ಅಶೋಕ ಮತ್ತು ಪ್ರಿಯಾ ಪ್ರೀತಿ ಮಾಡಿ ಮದುವೆ ಆದವರು. ಮದುವೆ ಬಳಿಕ ಕೆಲವು ಸಲ ವಾಂತಿಯಾದಾಗ, ಮಗುವಿನ ಆಸೆ ಪ್ರಿಯಾ ಮನಸ್ಸಲ್ಲಿ ಚಿಗುರೊಡೆದಿತ್ತು. ಆದರೆ ಅದು ಪಿತ್ತದ ವಾಂತಿ ಎಂದು ಗೊತ್ತಾದಾಗ ಬೇಸರಿಸಿಕೊಂಡಿದ್ದಳು. ಹೀಗಿರುವಾಗ, ಪ್ರಿಯಾ ಆರೋಗ್ಯದಲ್ಲಿ ಚೂರು ವ್ಯತ್ಯಾಸ ಕಂಡು ಬಂದಿದೆ. ನೇರವಾಗಿ ಪ್ರಿಯಾಳನ್ನು ವೈದ್ಯರ ಬಳಿ ಕರೆದೊಯ್ದಿದ್ದಾನೆ ಅಶೋಕ. ಅಲ್ಲಿ ಅಚ್ಚರಿಯ ಸಂಗತಿ ಬಹಿರಂಗವಾಗಿದೆ. ಪ್ರಿಯಾಗೆ ಸ್ತನ ಕ್ಯಾನ್ಸರ್‌ ಇರುವುದು ವೈದ್ಯರಿಂದ ಅಶೋಕನಿಗೆ ತಿಳಿದಿದೆ.

ಅರೇ ಕ್ಷಣ ಶಾಕ್‌ ಆದ ಅಶೋಕ, ದಯವಿಟ್ಟು ಈ ವಿಚಾರವನ್ನು ನನ್ನ ಪತ್ನಿ ಹೇಳಬೇಡಿ. ಆಕೆಗೆ ಈ ವಿಚಾರ ಗೊತ್ತಾಗದ ರೀತಿಯಲ್ಲಿಯೇ ಚಿಕಿತ್ಸೆ ಕೊಡಿ ಎಂದು ವೈದ್ಯರ ಬಳಿ ಬೇಡಿಕೊಂಡಿದ್ದಾನೆ ಅಶೋಕ. ಈ ಮೂಲಕ ಸೀತಾ ರಾಮ ಧಾರಾವಾಹಿಯಲ್ಲಿ ಒಂದಷ್ಟು ರೋಚಕ ಸಂಗತಿಗಳು ಬಿಚ್ಚಿಕೊಳ್ಳುತ್ತ ಸಾಗುತ್ತಿವೆ. ನೋಡುಗರ ಕುತೂಹಲ ಕೆರಳಿಸುತ್ತಿವೆ.

ಸೀತಾ ರಾಮ ಧಾರಾವಾಹಿ ಪಾತ್ರವರ್ಗ

ನಿರ್ದೇಶಕ: ಮಧುಸೂಧನ್‌

ಗಗನ್‌ ಚಿನ್ನಪ್ಪ: ಶ್ರೀರಾಮ (ನಾಯಕ)

ವೈಷ್ಣವಿ ಗೌಡ: ಸೀತಾ (ನಾಯಕ)

ರೀತು ಸಿಂಗ್: ಸಿಹಿ (ಸೀತಾ ಮಗಳು)

ಅಶೋಕ ಶರ್ಮಾ: ಅಶೋಕ (ಶ್ರೀರಾಮನ ಪ್ರಾಣ ಸ್ನೇಹಿತ)

ಭಾರ್ಗವಿ: ಪೂಜಾ ಲೋಕೇಶ್‌ (ಶ್ರೀರಾಮನ ಚಿಕ್ಕಮ್ಮ)

ಮುಖ್ಯಮಂತ್ರಿ ಚಂದ್ರು: ಸೂರ್ಯ ಪ್ರಕಾಶ್‌ ದೇಸಾಯಿ (ಶ್ರೀರಾಮನ ತಾತ)

ಶ್ವೇತಾ ಶಂಕರಪ್ಪ: ಪ್ರಿಯಾ (ಸೀತಾಳ ಸ್ನೇಹಿತೆ)

ವಿಕಾಸ್‌ ಕಾರ್‌ಗೋಡ್:‌ ಲಾಯರ್‌ ರುದ್ರಪ್ರತಾಪ್

ಸತೀಶ್‌ ಚಂದ್ರ: ಚರಣ್‌. ಡಿ

ಪೂರ್ಣಚಂದ್ರ ತೇಜಸ್ವಿ: ವಿಶ್ವಜೀತ್‌ (ಶ್ರೀರಾಮನ ಚಿಕ್ಕಪ್ಪ)

ಜಯದೇವ್‌ ಮೋಹನ್:‌ ಸತ್ಯಜೀತ್‌ (ಶ್ರೀರಾಮನ ಚಿಕ್ಕಪ್ಪ)

Whats_app_banner