Seetha Rama Serial: ಅರಳೋ ಮುನ್ನವೇ ಬಾಡಿದೆ ಪ್ರೀತಿಯ ಹೂವು! ಸೀತಾಗೆ ಗುಡ್‌ ಬೈ ಹೇಳಿ ಮಲೆಷ್ಯಾಕ್ಕೆ ಹೊರಟು ನಿಂತ ಶ್ರೀರಾಮ
ಕನ್ನಡ ಸುದ್ದಿ  /  ಮನರಂಜನೆ  /  Seetha Rama Serial: ಅರಳೋ ಮುನ್ನವೇ ಬಾಡಿದೆ ಪ್ರೀತಿಯ ಹೂವು! ಸೀತಾಗೆ ಗುಡ್‌ ಬೈ ಹೇಳಿ ಮಲೆಷ್ಯಾಕ್ಕೆ ಹೊರಟು ನಿಂತ ಶ್ರೀರಾಮ

Seetha Rama Serial: ಅರಳೋ ಮುನ್ನವೇ ಬಾಡಿದೆ ಪ್ರೀತಿಯ ಹೂವು! ಸೀತಾಗೆ ಗುಡ್‌ ಬೈ ಹೇಳಿ ಮಲೆಷ್ಯಾಕ್ಕೆ ಹೊರಟು ನಿಂತ ಶ್ರೀರಾಮ

Seetha Rama Serial Episode: ಜೀ ಕನ್ನಡದಲ್ಲಿ ಪ್ರಸಾರವಾಗುವ 'ಸೀತಾ ರಾಮ' ಸೀರಿಯಲ್‌ ನೋಡುಗರ ಗಮನ ಸೆಳೆಯುವುದರ ಜತೆಗೆ ರೋಚಕತೆ ಹೆಚ್ಚಿಸುತ್ತಿದೆ. ಹಿಂದಿನ ಸಂಚಿಕೆಯಲ್ಲಿ ಏನೆಲ್ಲಾ ಆಯಿತು, ಇಂದಿನ ಸಂಚಿಕೆಯಲ್ಲಿ ಏನೆಲ್ಲಾ ಆಗಲಿದೆ ಎಂಬ ವಿವರ ಇಲ್ಲಿದೆ. ಅಲ್ಲಿ ಸೀತಾ ಮದುವೆ ಜರುಗುತ್ತಿದ್ದರೆ, ಇಲ್ಲಿ ರಾಮ ಮಲೇಷ್ಯಾಕ್ಕೆ ಹೊರಟು ನಿಂತಿದ್ದಾನೆ.

Seetha Rama Serial: ಅರಳೋ ಮುನ್ನವೇ ಬಾಡಿದೆ ಪ್ರೀತಿಯ ಹೂವು! ಸೀತಾಗೆ ಗುಡ್‌ ಬೈ ಹೇಳಿ ಮಲೆಷ್ಯಾಕ್ಕೆ ಹೊರಟು ನಿಂತ ಶ್ರೀರಾಮ
Seetha Rama Serial: ಅರಳೋ ಮುನ್ನವೇ ಬಾಡಿದೆ ಪ್ರೀತಿಯ ಹೂವು! ಸೀತಾಗೆ ಗುಡ್‌ ಬೈ ಹೇಳಿ ಮಲೆಷ್ಯಾಕ್ಕೆ ಹೊರಟು ನಿಂತ ಶ್ರೀರಾಮ

Seetha Rama Serial: ಸೀತಾ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಸಿಹಿಯೂ ಖುಷಿಯಲ್ಲಿದ್ದಾಳೆ. ಇದೇ ವೇಳೆ ರಾಮನ ಎಂಟ್ರಿಯೂ ಆಗಿದೆ. ಇವನ್ಯಾಕೆ ಬಂದ ಪೀಡೆ ಎಂದು ಮುಖ ಸಿಂಡರಿಸಿಕೊಂಡಿದ್ದಾಳೆ ಅತ್ತಿಗೆ ಸುಲೋಚನಾ. ಶಾಂತಮ್ಮನ ವಠಾರದಲ್ಲಿ ಹಬ್ಬದ ಕಳೆ ಮೂಡಿದರೆ, ರಾಮನ ಕೈ ಮೇಲೆ ಚೆಂದದ ಮೆಹಂದಿ ರಂಗು ಬಿಡಿಸಿದ್ದಾಳೆ ಪ್ರಿಯಾ. ಆದರೆ, ರಾಮನ ಎದೆಯಲ್ಲಿ ಮಾತ್ರ ಗಾಢ ಮೌನ ಆವರಿಸಿದೆ. ಪ್ರೀತಿ ಬದಿಗಿರಿಸಿ ಸೀತಾಳಿಗೆ ಗುಡ್‌ ಬೈ ಹೇಳಲು ಬಂದಿದ್ದಾನೆ. ನಾನಿನ್ನು ಇಲ್ಲಿ ಇರಲ್ಲ ಎಂದು ಹೇಳಿಯೇ ಬಿಟ್ಟಿದ್ದಾನೆ ಶ್ರೀರಾಮ!

ಸೀತಾಳನ್ನು ಇಷ್ಟಪಟ್ಟಿದ್ದ ರಾಮ, ಇನ್ನೇನು ಆ ವಿಷಯವನ್ನು ಆಕೆಯ ಮುಂದೆ ಹೇಳಬೇಕೆನ್ನುವಷ್ಟರಲ್ಲಿ ಎಲ್ಲವೂ ಏರುಪೇರಾಗಿತ್ತು. ಲಾಯರ್‌ ರುದ್ರಪ್ರತಾಪ್‌ ಜತೆಗೆ ದಿಢೀರ್‌ ಮದುವೆ ನಿಶ್ಚಯವಾಗಿತ್ತು. ಮದುವೆಯ ದಿನಾಂಕವೂ ನಿಗದಿಯಾಗಿತ್ತು. ಅಲ್ಲಿಂದ ಶ್ರೀರಾಮ ಮೊದಲಿನಂತಿಲ್ಲ. ನಾನಿನ್ನು ಇಲ್ಲಿ ಇರಲ್ಲ ಎಂದು ಅಶೋಕನ ಮುಂದೆ ಹೇಳಿದ್ದ ಶ್ರೀರಾಮ, ಇದೀಗ ಅದೇ ಮಾತನ್ನು ನಿಜ ಮಾಡಲು ಹೊರಟಿದ್ದಾನೆ. ಸೀತಾಳ ಮನೆಗೆ ಬಂದು ಹ್ಯಾಪಿ ಮ್ಯಾರೀಡ್‌ ಲೈಫ್‌ ಎಂದು ಹೇಳಿದ್ದಾನೆ.

ಸೀತಾಳ ಬಳಿ ಬಂದು ನಾನು ಮಲೇಷ್ಯಾಕ್ಕೆ ಹೊರಟಿರುವ ವಿಚಾರವನ್ನು ಹೇಳಿಕೊಂಡಿದ್ದಾನೆ. ನಡೀತಿರೋ ಮದುವೆಗೆ ನೀವೇ ಕಾರಣ, ನೀವೇ ಇರದಿದ್ದರೆ ಹೇಗೆ ಎಂದಿದ್ದಾಳೆ ಸೀತಾ. ಮಲೇಷ್ಯಾ ಬ್ರಾಂಚ್‌ನಲ್ಲಿ ಏನೋ ಸಮಸ್ಯೆ ಆಗಿದೆ, ಬಾಸ್‌ ಕರೆದಾಗ ಹೋಗಲೇಬೇಕು ಎಂದಿದ್ದಾನೆ. ನಾನು ನಿನ್ನನ್ನು ಹೋಗೋಕೆ ಬಿಡಲ್ಲ, ನನಗೆ ನೀನು ಬೇಕು ಎಂದಿದ್ದಾಳೆ ಸಿಹಿ. ನಾನು ಬದುಕಿರೋ ವರೆಗೂ ನೀನು ನನ್‌ ಎದೆಯಲ್ಲಿಯೇ ಇರುತ್ತಿಯಾ ಎಂದು ಸಿಹಿಯನ್ನು ಸಂಭಾಳಿಸಿದ್ದಾನೆ ರಾಮ. ರಾಮನನ್ನು ಬಿಗಿದಪ್ಪಿ ಕಣ್ಣೀರಿಟ್ಟಿದ್ದಾಳೆ ಸಿಹಿ. ಇಬ್ಬರಿಗೂ ಕೊನೆಯದಾಗಿ ಬೈ ಹೇಳಿ ಹೊರಟೇ ಬಿಟ್ಟ ರಾಮ.

ಸೀತಾಳ ಗುಂಗಿನಲ್ಲಿಯೇ ಮನೆಯ ಲಾನ್‌ನಲ್ಲಿ ಕುಳಿತು ಹಳೇಯದನ್ನು ನೆನಪಿಕೊಂಡಿದ್ದಾನೆ ರಾಮ. ಕತ್ತಲು ಕಳೆದು ಬೆಳಕು ಮೂಡಿದೆ. ಬ್ಯಾಗ್‌ ಪ್ಯಾಕ್‌ ಆಗಿದೆ. ಅಶೋಕನ ಜತೆಗೆ ಮಲೇಷ್ಯಾಕ್ಕೆ ಹೊರಡುವ ಬಗ್ಗೆ ನಿರ್ಧಾರ ತಿಳಿಸಿದ್ದಾನೆ. ಇಬ್ಬರ ನಡುವೆ ಇದೇ ವಿಚಾರ ಮುಂದುವರಿದಿದೆ. ರಾಮನ ಆಹ್ವಾನಕ್ಕೆ ಅಶೋಕ ಚಕಾರ ಎತ್ತಿದ್ದಾನೆ. ಈ ವಿಷ್ಯದಲ್ಲಿ ನಾನಿಲ್ಲ. ನಾನು ಇದಕ್ಕೆ ಸಪೋರ್ಟ್‌ ಮಾಡಲ್ಲ. ಇದು ನಿನ್ನ ಹಟದ ನಿರ್ಧಾರ. ನಾನು ಮಲೇಷ್ಯಾಕ್ಕೆ ಬರಲ್ಲ ಎಂದಿದ್ದಾನೆ.

ರಾಮ್‌ ಮತ್ತೆ ಮಲೇಷ್ಯಾಕ್ಕೆ ತೆರಳುತ್ತಿದ್ದಿದ್ದಕ್ಕೆ ಮನೆ ಮಂದಿ ಬೇಸರಲ್ಲಿದ್ದರೆ, ಭಾರ್ಗವಿ ಮಾತ್ರ ಒಳಗೊಳಗೇ ಹಾಲು ಕುಡಿದಷ್ಟೇ ಸಂತಸದಿಂದ ಬೀಗುತ್ತಿದ್ದಾಳೆ. ಹೋಗಬೇಡ ಅಪ್ಪು ಎಂದು ರಾಮ್‌ ಮುಂದೆ ನಾಟಕ ಮುಂದುವರಿಸುತ್ತಿದ್ದಾಳೆ. ರಾಮ ಇದ್ರೆನೇ ಕಣೋ ಅಯೋಧ್ಯೆಗೆ ಬೆಲೆ ಎಂದು ಸತ್ಯ ಚಿಕ್ಕಪ್ಪ ಬೇಸರ ಹೊರಹಾಕಿದ್ದಾನೆ. ಹಾಗಾದರೆ, ರಾಮ ಮಲೆಷ್ಯಾಕ್ಕೆ ಹೊರಡುತ್ತಾನಾ? ಅತ್ತ ಸೀತಾ ಮದುವೆ ನಡೆಯುತ್ತಾ? ಸೀತಾ ರಾಮನ ಬದುಕು ಬೇರೆ ಬೇರೆಯಾಗುತ್ತ? ಕಾದು ನೋಡಬೇಕು.

Whats_app_banner