Seetha Rama Serial: ಮನದಲ್ಲಿ ನೋವಿದ್ದರೂ, ಸಿಹಿಗೆ ಅಪ್ಪನನ್ನ ಹುಡುಕೋ ಜವಾಬ್ದಾರಿ ಹೊತ್ತು ಸೀತಾಳ ಮುಂದೆ ನಿಂತ ಶ್ರೀರಾಮ!
ಕನ್ನಡ ಸುದ್ದಿ  /  ಮನರಂಜನೆ  /  Seetha Rama Serial: ಮನದಲ್ಲಿ ನೋವಿದ್ದರೂ, ಸಿಹಿಗೆ ಅಪ್ಪನನ್ನ ಹುಡುಕೋ ಜವಾಬ್ದಾರಿ ಹೊತ್ತು ಸೀತಾಳ ಮುಂದೆ ನಿಂತ ಶ್ರೀರಾಮ!

Seetha Rama Serial: ಮನದಲ್ಲಿ ನೋವಿದ್ದರೂ, ಸಿಹಿಗೆ ಅಪ್ಪನನ್ನ ಹುಡುಕೋ ಜವಾಬ್ದಾರಿ ಹೊತ್ತು ಸೀತಾಳ ಮುಂದೆ ನಿಂತ ಶ್ರೀರಾಮ!

Seetha Rama Serial Episode: ಜೀ ಕನ್ನಡ ಚಾನೆಲ್‌ನಲ್ಲಿ ಪ್ರಸಾರವಾಗುವ ಧಾರಾವಾಹಿ 'ಸೀತಾ ರಾಮ' ಇದೀಗ ನೋಡುಗರ ಗಮನ ಸೆಳೆಯುವುದರ ಜತೆಗೆ ರೋಚಕತೆ ಹೆಚ್ಚಿಸುತ್ತಿದೆ. ಡಿಸೆಂಬರ್‌ 5ರ ಸಂಚಿಕೆಯಲ್ಲಿ ಏನೆಲ್ಲಾ ಆಯಿತು ಎಂಬ ವಿವರ ಇಲ್ಲಿದೆ. ಸೀತಾ ತನ್ನನ್ನು ಕಡೆಗಣನೆ ಮಾಡುತ್ತಿದ್ದಾರೆ ಎಂದು ಬೇಸರದಲ್ಲಿದ್ದಾನೆ ರಾಮ.

Seetha Rama Serial: ಮನದಲ್ಲಿ ಮಾಸದ ನೋವಿದ್ದರೂ, ಸಿಹಿಗೆ ಅಪ್ಪನನ್ನ ಹುಡುಕೋ ಜವಾಬ್ದಾರಿ ಹೊತ್ತು ಸೀತಾಳ ಮುಂದೆ ನಿಂತಿದ್ದಾನೆ ಶ್ರೀರಾಮ!
Seetha Rama Serial: ಮನದಲ್ಲಿ ಮಾಸದ ನೋವಿದ್ದರೂ, ಸಿಹಿಗೆ ಅಪ್ಪನನ್ನ ಹುಡುಕೋ ಜವಾಬ್ದಾರಿ ಹೊತ್ತು ಸೀತಾಳ ಮುಂದೆ ನಿಂತಿದ್ದಾನೆ ಶ್ರೀರಾಮ!

Seetha Rama Serial: ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ಸೀತಾ ರಾಮ ಸೀರಿಯಲ್‌ ದಿನದಿಂದ ದಿನಕ್ಕೆ ರೋಷಕ ಘಟ್ಟಕ್ಕೆ ಹೊರಟಿದೆ. ತಾನಾಯ್ತು, ತನ್ನ ಕೆಲಸವಾಯ್ತು ಎಂದಷ್ಟೇ ಇದ್ದ ಸೀತಾ ಬಾಳಲ್ಲಿ ಇದೀಗ ಮದುವೆ ವಿಚಾರವೇ ಹೆಚ್ಚು ಪ್ರಸ್ತಾಪವಾಗುತ್ತಿದೆ. ಲಾಯರ್‌ ರುದ್ರಪ್ರತಾಪ್‌, ತನ್ನ ವಕ್ರಬುದ್ಧಿ ಉಪಯೋಗಿಸಿ ತಾತ ಮತ್ತು ಅಜ್ಜಿಯನ್ನು ಬುಟ್ಟಿಗೆ ಹಾಕಿಕೊಂಡು, ಸೀತಾಳನ್ನು ವಶಕ್ಕೆ ಪಡೆಯಲು ಸಂಚು ರೂಪಿಸುತ್ತಿದ್ದಾನೆ. ಈ ನಡುವೆ ಇವರಿಬ್ಬರನ್ನು ಒಂದು ಮಾಡುವಂತೆ ರಾಮನ ಮುಂದೆಯೂ ಬೇಡಿಕೆ ಇಟ್ಟಿದ್ದಾಳೆ ಶಾಂತಮ್ಮಜ್ಜಿ.

ಸೀತಾಳ ಮೇಲೆ ಪ್ರೀತಿ, ಪ್ರೇಮ ಎಂದೆಲ್ಲ ಕನಸು ಕಂಡಿದ್ದ ರಾಮ್‌, ಶಾಂತಮ್ಮಜ್ಜಿಯ ಮಾತನ್ನು ನೆರವೇರಿಸಿಕೊಡಲು ಮುಂದಾಗಿದ್ದಾನೆ. ಅಶೋಕನ ಮಾತನ್ನು ಧಿಕ್ಕರಿಸಿ, ತನ್ನ ಪ್ರೀತಿಗಿಂತ ಅವರ ಮಾತೇ ಮುಖ್ಯ ಎಂದು, ಒಲ್ಲದ ಮನಸ್ಸಿನಲ್ಲಿಯೇ ರುದ್ರಪ್ರತಾಪ್‌ ಮತ್ತು ಸೀತಾಳನ್ನು ಒಂದಾಗಿಸಲು ಹೊರಟಿದ್ದಾನೆ. ಈ ನಡುವೆ ಲಾಯರ್‌ ಆಫೀಸ್‌ನಲ್ಲಿ ಪಾರ್ಟ್‌ ಟೈಮ್‌ ಕೆಲಸಕ್ಕೂ ಹೊರಟಿದ್ದಾಳೆ ಸೀತಾ. ಇದೂ ವಿಚಾರವೂ ರಾಮನ ಗಮನಕ್ಕೆ ಬಂದಿದೆ.

ಇತ್ತ ಆಫೀಸ್‌ನಲ್ಲಿ ಸೀತಾಳ ಮೇಲೆಯೇ ಕಣ್ಣಿಟ್ಟಿದ್ದಾನೆ ಲಾಯರ್.‌ ಆಕೆಯನ್ನೇ ನುಂಗುವಂತೆ ಕೆಕ್ಕರಿಸಿ ನೋಡುತ್ತಿದ್ದಾನೆ. ಲಾಯರ್‌ ಸಂಗ ಮಾಡಿದ್ದರಿಂದಲೋ, ಕೆಲಸದ ಒತ್ತಡದ ನಡುವೆಯೋ ರಾಮನಿಗೆ ಸರಿಯಾಗಿ ರೆಸ್ಪಾನ್ಸ್‌ ಮಾಡುತ್ತಿಲ್ಲ ಸೀತಾ. ಸೀತಾಳ ಈ ನಡೆ ರಾಮನಿಗೂ ಬೇಸರ ತರಿಸಿದೆ. ಸೀತಾಗೆ ಫೋನ್‌ ಮಾಡಿದರೂ ಸ್ಪಂದಿಸುತ್ತಿಲ್ಲ. ತನ್ನನ್ನು ನೆಗ್ಲೆಕ್ಟ್‌ ಮಾಡುತ್ತಿದ್ದಾಳೆ ಅನ್ನೋ ಕೊರಗು ರಾಮನಿಗೆ ಕಾಡುತ್ತಿದೆ.

ಸಿಹಿಗೆ ಫೋನ್‌ ಮಾಡುವ ರಾಮ್‌, ತನ್ನ ಫ್ರೆಂಡ್‌ ಜತೆ ಮಾತಿಗಿಳಿದಿದ್ದಾಳೆ. ಸೀತಮ್ಮ ಇನ್ನೂ ಬಂದಿಲ್ಲ. ಇನ್ಮೇಲೆ ದಿನ ತಡವಾಗಿಯೇ ಬರ್ತಾಳೆ ಅನ್ನೋದನ್ನೂ ರಾಮನ ಮುಂದೆ ಹೇಳಿಕೊಂಡಿದ್ದಾಳೆ. ಈ ನಡುವೆಯೇ ತನಗೆ ಇನ್ನೊಂದು ಸಹಾಯವೂ ಬೇಕು ಎಂದು ಕೇಳಿದ್ದಾಳೆ. ಅದಕ್ಕೆ ಇಲ್ಲ ಎನ್ನದ ರಾಮ, ಕೇಳು ಎಂದಿದ್ದಾನೆ. ಅಪ್ಪನ ಹುಡುಕೋಕೆ ಸಹಾಯ ಮಾಡ್ತಿಯಾ ಫ್ರೆಂಡ್‌ ಎಂದು ಕೇಳಿದ್ದಾಳೆ. ಅಪ್ಪನ ಆಸರೆ ಬಯಸುತ್ತಿರೋ ಪುಟಾಣಿ ಸಿಹಿ, ಶ್ರೀರಾಮನ ಮೊರೆ ಹೋಗಿದ್ದಾಳೆ! ನನಗೆ ನನ್ನಪ್ಪ ಹೇಗಿದ್ದಾರೆ ಅನ್ನೋದೆ ಗೊತ್ತಿಲ್ಲ ಎಂದ ಸಿಹಿ ಮಾತಿಗೆ ಮೂಕನಾಗಿದ್ದಾನೆ ರಾಮ.

ಮೊದಲನೇಯದಾಗಿ ಪಾರ್ಟ್‌ ಟೈಮ್‌ ಕೆಲಸ ಮಾಡುವ ವಿಚಾರವನ್ನು ರಾಮನಿಗೂ ತಿಳಿಸಿಲ್ಲ ಸೀತಾ. ಹೀಗಿರುವಾಗ ರಾಮನ ಮುಂದೆ ಬಂದ ಸೀತಾ, ನನ್ನಿಂದ ತಪ್ಪಾಗಿದೆ. ನಾನು ಪಾರ್ಟ್‌ ಟೈಮ್‌ ಕೆಲಸಕ್ಕೆ ಹೋಗುವ ವಿಚಾರವನ್ನು ನಿಮ್ಮ ಬಳಿ ಹೇಳಿಲ್ಲ, ನನಗೆ ಬೇರೆ ಆಯ್ಕೆಯೂ ಇರಲಿಲ್ಲ ಎಂದಿದ್ದಾಳೆ. ಇದಕ್ಕೆ ಪ್ರತಿಯಾಗಿ, ಹೆಚ್ಚುವರಿ ಕೆಲಸ ಮಾಡಿದರೆ, ದುಡ್ಡಿನ ಸಮಸ್ಯೆ ಬಗೆಹರಿಯಬಹುದು ಆದರೆ, ಸಿಹಿ ಕಥೆ ಏನು? ನಿಮ್ಮ ಲೈಫ್‌ನಲ್ಲಿ ಒಬ್ಬರಿದ್ದಿದ್ದರೆ ನಿಮಗೆ ಈ ಕಷ್ಟವೇ ಇರುತ್ತಿರಲಿಲ್ಲ ಎಂದಿದ್ದಾನೆ.

ಆ ಲಾಯರ್‌ ರುದ್ರಪ್ರತಾಪ್‌, ನಿಮ್ಮನ್ನು ಮದುವೆ ಆಗೋಕೆ ಒಪ್ಪಿಕೊಂಡಿದ್ದಾರೆ ಅನ್ನೋದು ನನಗೆ ಗೊತ್ತು. ಹಾಗಾಗಿ ಮದುವೆ ಆಗಿ ಎಲ್ಲವೂ ಒಳ್ಳೆಯದೇ ಆಗುತ್ತೆ ಎಂದು ಮನವೊಲಿಸಲು ಪ್ರಯತ್ನಿಸಿದ್ದಾನೆ. ಯಾರ ಮಾತನ್ನೂ ಕೇಳದ ಸೀತಾ ರಾಮನ ಮಾತನ್ನಾದರೂ ಒಪ್ಪುತ್ತಾಳಾ? ಕಾದು ನೋಡಬೇಕು.

Whats_app_banner