Seetha Rama Serial: ಸೀತಾ- ರುದ್ರಪ್ರತಾಪ್ ಮದುವೆ ನಿಶ್ಚಯ! ಪ್ರೀತಿ ತ್ಯಜಿಸಿ ತ್ಯಾಗಮೂರ್ತಿಯಾಗಿ ಬದಲಾದ್ನಾ ರಾಮ?
Seetha Rama Serial Episode: ಜೀ ಕನ್ನಡ ಚಾನೆಲ್‌ನಲ್ಲಿ ಪ್ರಸಾರವಾಗುವ ಧಾರಾವಾಹಿ 'ಸೀತಾ ರಾಮ' ಇದೀಗ ನೋಡುಗರ ಗಮನ ಸೆಳೆಯುವುದರ ಜತೆಗೆ ರೋಚಕತೆ ಹೆಚ್ಚಿಸುತ್ತಿದೆ. ಹಿಂದಿನ ಸಂಚಿಕೆಯಲ್ಲಿ ಏನೆಲ್ಲಾ ಆಯಿತು ಎಂಬ ವಿವರ ಇಲ್ಲಿದೆ. ರುದ್ರಪ್ರತಾಪ್ ಸೀತಾ ಜೋಡಿಗೆ ಮದುವೆ ನಿಶ್ಚಯವಾಗಿದೆ. ರಾಮನ ಆಗಮನವೂ ಆಗಿದೆ. ಆದರೆ, ಇಬ್ಬರ ಮೊಗದಲ್ಲಿ ಗಾಢ ಮೌನ ಆವರಿಸಿದೆ.
Seetha Rama Serial: ತಾತ ಸೂರ್ಯ ಪ್ರಕಾಶ್ ಬಳಿ ಮನದ ನೋವನ್ನು ಹಂಚಿಕೊಳ್ಳುತ್ತಿದ್ದಾನೆ ರಾಮ. ಪ್ರೀತಿ, ತ್ಯಾಗದ ಬಗ್ಗೆಯೂ ಮೊಮ್ಮಗನಿಗೆ ಮನವರಿಕೆ ಮಾಡಿಕೊಟ್ಟಿದ್ದಾನೆ. ನಮಗಿಷ್ಟವಾದವರು ಚೆನ್ನಾಗಿರಬೇಕಾದ್ರೆ ನಾವೂ ತ್ಯಾಗ ಮಾಡಬೇಕಲ್ವಾ? ಎಂದು ಪ್ರಶ್ನೆ ಮಾಡಿದ್ದಾನೆ ರಾಮ. ಅದಕ್ಕೆ ಪರೋಕ್ಷವಾಗಿಯೇ ಉತ್ತರ ನೀಡಿದ ತಾತ, ಆ ತ್ಯಾಗವೇ ಜೀವನ ಆಗಬಾರದು, ಅದರಾಚೆಗೂ ನಮಗೂ ಒಂದು ಬದುಕಿದೆ ಎಂದಿದ್ದಾನೆ ತಾತ. ಇತ್ತ ಅಶೋಕನ ಬಾಯಲ್ಲೂ ಅದೇ ಮಾತು ಬಂದಿದೆ. ತ್ಯಾಗ ಮಾಡು ಆದರೆ, ಆ ತ್ಯಾಗದಿಂದ ಇಬ್ಬರೂ ಖುಷಿಯಾಗಿಲ್ಲ ಅಂದ್ರೆ ಏನು ಪ್ರಯೋಜನ? ಎಂದಿದ್ದಾನೆ.
ಚಾಂದಿನಿ ಒಂದು ಕೆಟ್ಟ ಕನಸು ಅದನ್ನು ಮರೆಯಬಹುದು, ಮರೆತಿದ್ದೀಯಾ. ಆದರೆ, ಸೀತಾ ವಿಷಯದಲ್ಲಿ ಹಾಗಲ್ಲ. ನೀನು ಮದುವೆಯ ಒತ್ತಡದಲ್ಲಿದ್ದೀಯಾ, ಸೀತಾ ಸಹ ಪಾರ್ಟನರ್ ಹುಡುಕುತ್ತಿದ್ದಾರೆ. ಏಕೆ ನೀವಿಬ್ಬರೂ ಮದುವೆ ಆಗಬಾರದು? ಎಂದಿದ್ದಾನೆ. ಆದರೆ, ರಾಮನ ವಾದವೇ ಬೇರೆ. ನಾನ್ಯಾರು, ನಾನೇಕೆ ಇಲ್ಲಿ ಬಂದೆ ಎಂಬುದನ್ನು ಸೀತಾಗೆ ಹೇಳುವ ಅವಶ್ಯಕತೆ ಇಲ್ಲ. ಸೀತಾರ ಮದುವೆ ಆಗ್ತಿದಂಗೆ, ನಾನು ಮಲೇಷ್ಯಾಗೆ ಹೊರಡುತ್ತೇನೆ ಎಂದಿದ್ದಾನೆ ರಾಮ. ಪ್ರೀತಿಯ ಜತೆಗೆ ತ್ಯಾಗಕ್ಕೂ ರೆಡಿಯಾಗಬೇಕು ಎಂದಿದ್ದಾನೆ.
ಇತ್ತ ಸೀತಾಳ ಮನೆಗೆ ಪುರೋಹಿತರ ಆಗಮನವಾಗಿದೆ. ಒಲ್ಲದ ಮನಸ್ಸಲ್ಲಿಯೇ ಸೀತಾ ದೇವತೆಯಂತೆ ಸಿಂಗಾರಗೊಂಡಿದ್ದಾಳೆ. ಇದೆಲ್ಲವನ್ನು ಮಾಡಿದ್ದೇ ನೀನು, ಬೇಗ ಬಾ ಎಂದು ರಾಮನನ್ನು ಮನೆಗೆ ಆಹ್ವಾನಿಸಿದ್ದಾಳೆ ಶಾಂತಮ್ಮಜ್ಜಿ. ತ್ಯಾಗರಾಜನಾಗ ಹೊರಟ ರಾಮನ ನಡೆಗೆ ಅಶೋಕ ಬೇಸರಗೊಂಡಿದ್ದಾನೆ. ರಾಮ ಸಹ ಒಲ್ಲದ ಮನಸ್ಸಿನಿಂದಲೇ ಸೀತಾಳ ಮನೆಗೆ ಆಗಮಿಸಿದ್ದಾನೆ. ಇದೇ ತಿಂಗಳ ಕೊನೇ ಶುಕ್ರವಾರ ಮದುವೆ ದಿನ ಪ್ರಶಸ್ತವಾಗಿದೆ ಎಂದಿದ್ದಾರೆ ಪುರೋಹಿತರು. ಎಲ್ಲರೂ ತಲೆಗೊಂದರಂತೆ ಮಾತನಾಡುತ್ತಿದ್ದಾರೆ. ಕೊನೆಗೆ ಯಾವ ದಿನ ನಿಶ್ಚಿಯಿಸೋದು ಅನ್ನೋದನ್ನು ಸೀತಾ ಅವರನ್ನೇ ಕೇಳಿದ್ದಾನೆ ರುದ್ರಪ್ರತಾಪ್.
ನನಗೆ ಅದೇ ದಿನಾಂಕ ಓಕೆ ಎಂದು ತಿಂಗಳ ಕೊನೇ ಶುಕ್ರವಾರವೇ ಮದುವೆ ನಿಶ್ಚಯಿಸಿ ಎಂದಿದ್ದಾನೆ ರುದ್ರಪ್ರತಾಪ್. ಅಡುಗೆ ಮನೆಯಲ್ಲಿ ಸೀತಾ ಮತ್ತು ರಾಮ ಇಬ್ಬರ ನಡುವೆ ಮಾತು ಮುಂದುವರಿದಿದೆ. ನಾನು ಹ್ಯಾಪಿಯಾಗಿದ್ದೆನೆಂದು ಹೇಳಿಕೊಂಡಿದ್ದಾಳೆ ಸೀತಾ. ಸೀತಾಳ ಮಾತು ಕೇಳಿ ರಾಮನ ಬಾಯಲ್ಲಿ ಮಾತು ಹೊರಡುತ್ತಿಲ್ಲ. ಹೆಚ್ಚು ಮಾತನಾಡದೆ ಮೌನಕ್ಕೆ ಜಾರಿದ್ದಾನೆ. ಇತ್ತ ರಾಮನನ್ನು ದಿಟ್ಟಿಸಿ ಕಣ್ತುಂಬಿಕೊಂಡಿದ್ದಾಳೆ ಸೀತಾ. ಈ ಮೂಲಕ ಶುಕ್ರವಾರದ ಏಪಿಸೋಡ್ ಕೊನೆಗೊಂಡಿದೆ. ಹಾಗಾದರೆ ಸೀತಾ ತನ್ನ ಮನಸ್ಸಿನಲ್ಲಿರುವುದನ್ನು ರಾಮನಿಗೆ ಹೇಳುತ್ತಾಳಾ? ರಾಮನೂ ತನ್ನ ಪ್ರೀತಿಯನ್ನು ತೆರೆದಿಡುತ್ತಾನಾ? ಕಾದು ನೋಡಬೇಕು.