Seetha Rama Serial: ಅಸಲಿ ಆಟ ಈಗ ಶುರು, ದೇಸಾಯಿ ಕುಟುಂಬಕ್ಕೆ ಮಗು ಹೆತ್ತು ಕೊಡಲು ಸೀತಾ ನಿರ್ಧಾರ; ಭಾರ್ಗವಿ ಎದೆಯಲ್ಲಿ ನಡುಕ
Seetha Rama Serial: ಸಿಹಿ, ಭಾರ್ಗವಿ ಚಿಕ್ಕಿಯಿಂದಲೇ ಬೋರ್ಡಿಂಗ್ ಸ್ಕೂಲ್‌ಗೆ ಹೋದ ವಿಚಾರವ ಸೀತಾ ಗಮನಕ್ಕೆ ಬಂದಿದೆ. ಮತ್ತೊಂದು ಕಡೆ ಎಲ್ಲವೂ ನಾವಂದುಕೊಂಡಂತೆ ನಡೆಯುತ್ತಿದೆ ಎಂದು ಒಳಗೊಳಗೇ ಬೀಗುತ್ತಿರುವ ಭಾರ್ಗವಿ ಮತ್ತು ವಿಶ್ವನಿಗೆ ಇದೀಗ ಅದೇ ಸೀತಾ ಶಾಕ್ ಟ್ರೀಟ್‌ಮೆಂಟ್ ನೀಡಿದ್ದಾಳೆ.
Seetha Rama Serial: ಸೀತಾ ರಾಮ ಸೀರಿಯಲ್‌ನಲ್ಲಿ ಇದೀಗ ಸರಣಿ ತಿರುವುಗಳು ವೀಕ್ಷಕನಿಗೆ ನೋಡಲು ಸಿಗುತ್ತಿವೆ. ಅಚ್ಚರಿಯ ರೀತಿಯಲ್ಲಿ ಪ್ರಿಯಾಗೆ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ. ಅಲ್ಲಿ ಪತಿ ಅಶೋಕ ಕಂಗಾಲಾಗಿದ್ದಾನೆ. ಇತ್ತ ಸಿಹಿ, ಭಾರ್ಗವಿ ಚಿಕ್ಕಿಯಿಂದಲೇ ಬೋರ್ಡಿಂಗ್ ಸ್ಕೂಲ್‌ಗೆ ಹೋದ ವಿಚಾರವೂ ಸೀತಾ ಗಮನಕ್ಕೆ ಬಂದಿದೆ. ಮತ್ತೊಂದು ಕಡೆ ಎಲ್ಲವೂ ನಾವಂದುಕೊಂಡಂತೆ ನಡೆಯುತ್ತಿದೆ ಎಂದು ಒಳಗೊಳಗೇ ಬೀಗುತ್ತಿರುವ ಭಾರ್ಗವಿ ಮತ್ತು ವಿಶ್ವನಿಗೆ ಇದೀಗ ಅದೇ ಸೀತಾ ಶಾಕ್ ಟ್ರೀಟ್‌ಮೆಂಟ್ ನೀಡಿದ್ದಾಳೆ.
ರಾಮ್ ಜತೆಗಿನ ಮದುವೆಗೂ ಮುನ್ನ, "ನಾನು ಇನ್ನೊಂದು ಮಗು ಮಾಡಿಕೊಳ್ಳುವುದಿಲ್ಲ. ನನಗೆ ಸಿಹಿಯೊಬ್ಬಳೇ ಮಗಳು" ಎಂದು ಹೇಳಿಯೇ ಮದುವೆ ಆಗಿದ್ದಳು. ಈ ವಿಚಾರ ರಾಮ್ ಮತ್ತು ಭಾರ್ಗವಿಗೆ ಮಾತ್ರ ಗೊತ್ತಿತ್ತು. ಇದನ್ನೇ ಅಸ್ತ್ರವಾಗಿಟ್ಟುಕೊಂಡ ಭಾರ್ಗವಿ, ದೇಸಾಯಿ ಮನೆತನದ ಆಸ್ತಿ ನನ್ನ ಮಗನಿಗೆ ದಕ್ಕಬೇಕು ಎಂದು ಖುಷಿಯಿಂದಲೇ ಸೀತಾಳನ್ನು ಮನೆ ತುಂಬಿಸಿಕೊಂಡಿದ್ದಳು. ಇದೀಗ ಇದೇ ಭಾರ್ಗವಿಯ ಪ್ಲಾನ್ ತಲೆ ಕೆಳಗಾಗಿದೆ. ಸೀತಾ ತನ್ನ ನಿರ್ಧಾರವನ್ನೇ ಬದಲಿಸಿದ್ದಾಳೆ.
ಭಾರ್ಗವಿ ತಂತ್ರ ಸೀತಾಗೆ ಗೊತ್ತಾಯ್ತು..
ಬೋರ್ಡಿಂಗ್ ಸ್ಕೂಲ್‌ಗೆ ಹೋಗು ಅಂತ ಹೇಳಿದ್ದೇ ಬಡ್ಡಿ ಬಂಗಾರಮ್ಮ ಅಂತ ಭಾರ್ಗವಿ ಕಡೆ ಸಿಹಿ ಬೆರಳು ಮಾಡಿ ತೋರಿಸುತ್ತಿದ್ದಂತೆ, ರಾಮ್ ಮುಂದೆ ಸೀತಾ ಈ ಹಿಂದಿನ ಒಂದಷ್ಟು ಘಟನಾವಳಿಗಳನ್ನು ನೆನಪು ಮಾಡಿಕೊಂಡಿದ್ದಾಳೆ. ಮೊದಲ ಸಲ ಮನೆಗೆ ಬಂದಾಗ ಭಾರ್ಗವಿ ನಡೆದುಕೊಂಡ ರೀತಿ, ಮದುವೆ ಸಮಯದಲ್ಲಿ ತಾತ ಸೂರ್ಯಪ್ರಕಾಶ್ ಮುಂದೆ ಆಡಿದ ಮಾತು, ಅದಾದ ಬಳಿಕ ಮಾವಯ್ಯ ಮಗು ಬೇಕು ಎಂದಿದ್ದು, ಈ ಮನೆಯಲ್ಲಿ ಎಲ್ಲವನ್ನು ಕುರುಡಾಗಿ ನಂಬಬೇಡ ಎಂದ ಅಶೋಕ್ ಸರ್ ಮಾತು.. ಎಲ್ಲವನ್ನೂ ಸೀತಾ ಯೋಚಿಸಿ ನೋಡಿದ್ದಾಳೆ. ಇದೆಲ್ಲವನ್ನು ನೋಡಿದ ಬಳಿಕ ಭಾರ್ಗವಿ ಸೀತಾಗೆ ಬೇರೆ ರೀತಿಯಲ್ಲಿಯೇ ಕಂಡಿದ್ದಾಳೆ.
ಹಿಂದಿನದನ್ನು ನೆನೆದ ಸೀತಾ
ಈ ವಿಷಯವಾಗಿ ರಾಮ್ ಮುಂದೆ ಬಂದು, ಭಾರ್ಗವಿ ಚಿಕ್ಕಿ ಬಳಿ ಕೇಳ್ತಿನಿ ಎಂದಿದ್ದಾನೆ. ಅದಕ್ಕೆ ಬೇಡ ಎಂದಿರುವ ಸೀತಾ, ಸಿಹಿ ಹೇಳಿದ್ದಾಳೆ ಅಂತ ಭಾರ್ಗವಿ ಚಿಕ್ಕಿಯನ್ನು ಪ್ರಶ್ನೆ ಮಾಡೋಕೆ ಆಗಲ್ಲ. ಅವರ ತಲೆಯಲ್ಲಿ ಏನಿತ್ತೋ ಏನೋ ಹೇಳಿದ್ದಾರೆ. ಈ ಬಗ್ಗೆ ಈ ಚರ್ಚೆ ಬೇಡ ಎಂದಿದ್ದಾಳೆ. ಬಳಿಕ ಒಳಗೊಳಗೆ ಇದೆಲ್ಲದರ ಹಿಂದಿನ ಮರ್ಮ ಅರಿತ ಸೀತಾ, ಸಿಹಿಯ ಆಸೆಯಂತೆ ಮುಂದುವರಿದಿದ್ದಾಳೆ. ನೇರವಾಗಿ ಚಿಕ್ಕಿ ಮುಂದೆ ಸಿಹಿಯನ್ನು ಬೋರ್ಡಿಂಗ್ ಸ್ಕೂಲ್‌ಗೆ ಏಕೆ ಸೇರಿಸಿದ್ದೀರಿ ಎಂಬುದನ್ನು ಹೇಳಿಕೊಳ್ಳದೆ, ಪರೋಕ್ಷವಾಗಿಯೇ ಟಾಂಗ್ ಕೊಟ್ಟಿದ್ದಾಳೆ.
ನಾನು ಮಗು ಮಾಡಿಕೊಳ್ತಿನಿ..
"ನನ್ನ ಮಗಳು ಅವಳಿಗೆ ತಮ್ಮ ಬೇಕು ಅಂತ ಹರಕೆ ಹೊತ್ತಿದ್ದಾಳೆ. ಅವಳ ಆಸೆ ಈಡೇರಲಿ ಅಂತ ನಾನೂ ಬಯಸುವೆ. ನನ್ನ ಮಗಳಿಗೆ ತಮ್ಮ ಬಂದರೆ ಅವಳಿಗೆ ಸಿಗೋ ಪ್ರೀತಿ ಕಮ್ಮಿ ಆಗತ್ತೆ ಅಂತ ಈ ಮನೆಯಲ್ಲಿ ಯಾರೂ ಬಯಸುವುದಿಲ್ಲ ಅಂತ ನಾನು ಅಂದುಕೊಂಡಿದ್ದೇನೆ. ನೀವು ನನ್ನ ಮಗಳಿಗೆ ಏನು ಹೇಳಿದ್ದೀರಿ ಅಂತ ನನಗೆ ಗೊತ್ತಾಗಿದೆ, ನನ್ನ ಮಗಳು ಎಲ್ಲವನ್ನು ನನ್ನ ಬಳಿ ಹೇಳಿಕೊಂಡಿದ್ದಾಳೆ ಎಂದು ಭಾರ್ಗವಿ ಮುಂದೆ ಹೇಳಿಕೊಳ್ಳುತ್ತಿದ್ದಂತೆ, ಇತ್ತ ಒಮ್ಮೆಲೆ ಶಾಕ್ ಆಗಿದ್ದಾಳೆ.
ಸೀತಾ ರಾಮ ಧಾರಾವಾಹಿ ಪಾತ್ರವರ್ಗ
ನಿರ್ದೇಶಕ: ಮಧುಸೂಧನ್
ಗಗನ್ ಚಿನ್ನಪ್ಪ: ಶ್ರೀರಾಮ (ನಾಯಕ)
ವೈಷ್ಣವಿ ಗೌಡ: ಸೀತಾ (ನಾಯಕ)
ರೀತು ಸಿಂಗ್: ಸಿಹಿ (ಸೀತಾ ಮಗಳು)
ಅಶೋಕ ಶರ್ಮಾ: ಅಶೋಕ (ಶ್ರೀರಾಮನ ಪ್ರಾಣ ಸ್ನೇಹಿತ)
ಭಾರ್ಗವಿ: ಪೂಜಾ ಲೋಕೇಶ್ (ಶ್ರೀರಾಮನ ಚಿಕ್ಕಮ್ಮ)
ಮುಖ್ಯಮಂತ್ರಿ ಚಂದ್ರು: ಸೂರ್ಯ ಪ್ರಕಾಶ್ ದೇಸಾಯಿ (ಶ್ರೀರಾಮನ ತಾತ)
ಶ್ವೇತಾ ಶಂಕರಪ್ಪ: ಪ್ರಿಯಾ (ಸೀತಾಳ ಸ್ನೇಹಿತೆ)
ವಿಕಾಸ್ ಕಾರ್‌ಗೋಡ್: ಲಾಯರ್ ರುದ್ರಪ್ರತಾಪ್
ಸತೀಶ್ ಚಂದ್ರ: ಚರಣ್. ಡಿ
ಪೂರ್ಣಚಂದ್ರ ತೇಜಸ್ವಿ: ವಿಶ್ವಜೀತ್ (ಶ್ರೀರಾಮನ ಚಿಕ್ಕಪ್ಪ)
ಜಯದೇವ್ ಮೋಹನ್: ಸತ್ಯಜೀತ್ (ಶ್ರೀರಾಮನ ಚಿಕ್ಕಪ್ಪ)
ವಿಭಾಗ