ಕನ್ನಡ ಸುದ್ದಿ  /  Entertainment  /  Kannada Television News Seetha Rama Serial Feb 28th Wednesday Promo Highlights Zee Kannada Seetha Rama Serial Mnk

Seetha Rama Serial: ‘ನಿಮ್ಮ ಜತೆ ಜೀವನ ನಡೆಸ್ಬೇಕು ಸೀತಾ’; ಸೀರೆಯ ಮೂಲಕ ಸೀತೆಯನ್ನು ತಲುಪಿತು, ರಾಮನ ಪ್ರೀತಿಯ ಸಂದೇಶ

Seetha Rama Serial: ಸೀತಾ ರಾಮ ಸೀರಿಯಲ್‌ನಲ್ಲಿ ಇದೀಗ ಕೌತುಕ ಮನೆ ಮಾಡಿದೆ. ರಾಮ ಅಪಘಾತದಿಂದ ಆಸ್ಪತ್ರೆ ಪಾಲಾದರೆ, ರಕ್ತ ನೀಡಿ ಜೀವ ಉಳಿಸಿದ್ದಾಳೆ ಸೀತಾ. ಇತ್ತ ಸೀತಾಳ ಮುಂದೆ ತನ್ನ ಪ್ರೀತಿಯನ್ನು ಮೌನದಲ್ಲೇ ಹೇಳಿಕೊಂಡಿದ್ದಾನೆ ರಾಮ. ಅಶೋಕನಿಂದ ರಾಮ ನೀಡಬಯಸಿದ್ದ ಸೀರೆಯೂ ಸೀತೆಯ ಕೈ ಸೇರಿದೆ.

Seetha Rama Serial: ‘ನಿಮ್ಮ ಜತೆ ಜೀವನ ನಡೆಸ್ಬೇಕು ಸೀತಾ’; ಸೀರೆಯ ಮೂಲಕ ಸೀತೆಯನ್ನು ತಲುಪಿತು, ರಾಮನ ಪ್ರೀತಿಯ ಸಂದೇಶ
Seetha Rama Serial: ‘ನಿಮ್ಮ ಜತೆ ಜೀವನ ನಡೆಸ್ಬೇಕು ಸೀತಾ’; ಸೀರೆಯ ಮೂಲಕ ಸೀತೆಯನ್ನು ತಲುಪಿತು, ರಾಮನ ಪ್ರೀತಿಯ ಸಂದೇಶ

Seetha Rama Serial: ಸೀತಾ ರಾಮ ಸೀರಿಯಲ್‌ನಲ್ಲೀಗ ಭಾವುಕ ಲೋಕದ ಅನಾವರಣವಾಗಿದೆ. ಲವಲವಿಕೆಯಿಂದ ಓಡಾಡುತ್ತಿದ್ದ ರಾಮ, ಅಪಘಾತದಿಂದಾಗಿ ಹಾಸಿಗೆ ಹಿಡಿದಿದ್ದಾನೆ. ಸದಾ ಶ್ರೀರಾಮನ ಕೆಡುಕು ಬಯಸುವ ಭಾರ್ಗವಿ ಚಿಕ್ಕಿಗೆ ಹಾಲು ಕುಡಿದಷ್ಟೇ ಸಂತೋಷವಾಗಿದೆ. ಅಶೋಕ, ರಾಮನ ಸ್ಥಿತಿ ಕಂಡು ಕಣ್ಣೀರಿಡುತ್ತಿದ್ದರೆ, ಇದೆಲ್ಲ ನನ್ನಿಂದಲೇ ಆಯ್ತು ಎಂದು ಪಶ್ಚಾತ್ತಾಪದಲ್ಲಿದ್ದಾಳೆ. ಇತ್ತ ಸಿಹಿ ತನ್ನ ಫ್ರೆಂಡ್‌ ಉಳಿವಿಗಾಗಿ ದೇವರ ಮೊರೆ ಹೋಗಿದ್ದಾಳೆ. ಇವರೆಲ್ಲರ ಹಾರೈಕೆಯ ಫಲವೇ ರಾಮ್‌ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ.

ಮತ್ತೊಂದು ಕಡೆ ಚಾಂದಿನಿಗೆ ಕ್ಲಾಸ್‌ ತೆಗೆದುಕೊಂಡು, ಆತನಿಂದ ದೂರ ಇರುವಂತೆ ಎಚ್ಚರಿಕೆ ನೀಡಿದ್ದಾನೆ ಅಶೋಕ. ಇತ್ತ ಆಸ್ಪತ್ರೆಯ ಬೆಡ್‌ ಮೇಲೆ ಮಲಗಿರುವ ರಾಮನನ್ನು ನೋಡಲು ಸೀತಾ ಆಗಮಿಸಿದ್ದಾಳೆ. ಸಿಹಿಯೂ ಬಂದಿದ್ದಾಳೆ. ದೇವಸ್ಥಾನದಲ್ಲಿನ ದೇವರ ಹಣೆ ಮೇಲಿನ ಕುಂಕುಮ ರಾಮನ ಹಣೆಗೂ ಹಚ್ಚಿದ್ದಾಳೆ ಸೀತಾ. ಇದೇ ವೇಳೆ ರಾಮನಿಗೆ ಪ್ರಜ್ಞೆ ಬಂದಿದೆ. ಸೀತೆಯನ್ನು ನೋಡಿ ಕನವರಿಸಿದ್ದಾನೆ. ಮಾತು ಬಾರದಿದ್ದರೂ ಸನ್ನೆ ಮೂಲಕವೇ ಆಕೆಯೊಂದಿಗೆ ಸಂವಹನ ನಡೆಸಿದ್ದಾನೆ. ಆದರೆ, ರಾಮ್‌ ಏನು ಹೇಳುತ್ತಿದ್ದಾನೆ ಎಂಬುದು ಮಾತ್ರ ಸೀತಾಳಿಗೆ ಅರ್ಥವಾಗುತ್ತಿಲ್ಲ.

ಯಾಕೆ ನನಗೆ ಮಾತನಾಡೋಕೆ ಆಗ್ತಿಲ್ಲ. ನಾನು ಮಾತನಾಡಬೇಕು ಎಂದು ಪ್ರಯತ್ನಿಸಿದ್ದಾನೆ. ನಿಮಗೆ ನಾನು ಹೇಗೆ ಹೇಳಲಿ. ಸೀತಾ ಒಂದೇ ಒಂದು ಸಲ ನನ್ನ ಕಣ್ಣನ್ನು ನೋಡಿ. ನಾನು ಏನು ಹೇಳಲು ಟ್ರೈ ಮಾಡ್ತಿದಿನಿ ಅಂತ ಅರ್ಥ ಆಗುತ್ತೆ. ನಿಮ್ಮ ಮತ್ತು ಸಿಹಿ ಜತೆ ನಾನು ಜೀವನ ನಡೆಸ್ಬೇಕು. ಅದಕ್ಕೆ ಒಂದೇ ಒಂದು ಅವಕಾಶ ಮಾಡಿಕೊಡಿ. ನಂದು ಪ್ಯೂರ್‌ ಲವ್‌, ಯಾವುದೇ ಕೆಟ್ಟ ಉದ್ದೇಶ ನನಗಿಲ್ಲ. ಐ ಲವ್‌ ಯೂ ಸೀತಾ ಎಂದು ಸನ್ನೇಯಲ್ಲಿಯೇ ಹೇಳಿದ್ದಾನೆ ರಾಮ್.‌

ಸೀತಾ ಜತೆಗಿದ್ದರೆ ರಾಮ ಹುಷಾರಾಗ್ತಾನೆ ಅನ್ನೋ ಕಾರಣಕ್ಕೆ, ಆಕೆಯನ್ನು ಆಸ್ಪತ್ರೆಗೆ ಕರೆಸಿಕೊಂಡಿದ್ದಾನೆ ಅಶೋಕ. ಹೀಗಿರುವಾಗಲೇ ರಾಮ್‌ ಒಂದಷ್ಟು ವಿಚಾರವನ್ನು ನನ್ನ ಬಳಿ ಹೇಳಿದ್ರು, ಅದು ಅರ್ಥ ಆಗಲಿಲ್ಲ ಎಂದು ಅಶೋಕನ ಬಳಿ ಹೇಳಿಕೊಂಡಿದ್ದಾಳೆ ಸೀತಾ. ಈ ನಡುವೆ ನೇರವಾಗಿ ಅಲ್ಲದಿದ್ದರೂ, ರಾಮನ ಮನಸ್ಸಿನಲ್ಲೇನಿದೆ ಎಂಬುದನ್ನು ಅಶೋಕ ಸೀತೆಗೆ ಮನವರಿಕೆ ಮಾಡಿಕೊಡುತ್ತಿದ್ದಾನೆ. ರಾಮ್‌ ನಿಮ್ಮನ್ನು ಭೇಟಿ ಮಾಡಿ ಅದೇನು ಮಾತನಾಡಬೇಕು ಅಂದುಕೊಂಡಿದ್ನೋ, ಅದನ್ನೇ ಹೇಳಲು ಟ್ರೈ ಮಾಡ್ತಿರಬಹುದು ಎಂದಿದ್ದಾನೆ.

ಅಷ್ಟಕ್ಕೂ ರಾಮ್‌ ನನ್ನ ಬಳಿ ಏನು ಮಾತನಾಡಬೇಕು ಅಂದುಕೊಂಡಿದ್ರು ಎಂದು ಅಶೋಕ್‌ ಮುಂದೆ ಪ್ರಶ್ನೆ ಇಟ್ಟಿದ್ದಾಳೆ ಸೀತಾ. ಅದನ್ನು ನಾನು ಹೇಳುವುದಕ್ಕಿಂತ ರಾಮ್‌ ಹೇಳಿದ್ರೆ ಚಂದ ಎಂದಿದ್ದಾನೆ ಅಶೋಕ. ಇದೇ ವೇಳೆ ಆಸ್ಪತ್ರೆ ಸಿಬ್ಬಂದಿ, ಅಪಘಾತದ ಸ್ಥಳದಲ್ಲಿ ಸಿಕ್ಕ ಬ್ಯಾಗ್‌ ಅನ್ನು ಸೀತಾಳ ಕೈಗೆ ನೀಡಿದ್ದಾರೆ. ಇದು ನಿಮಗೇ ಸೇರಬೇಕಾಗಿದ್ದು ಎಂದು ಆಕೆಗೆ ನೀಡಿದ್ದಾನೆ ಅಶೋಕ. ಆ ಬ್ಯಾಗ್‌ ತೆರೆದು ನೋಡಿದರೆ, ಅದರಲ್ಲಿ ಸೀರೆ ಇದೆ. ಈ ಮೂಲಕ ರಾಮನ ಪ್ರೀತಿಯ ಸಂದೇಶ, ಸೀರೆಯ ಮೂಲಕ ಸೀತೆಯನ್ನ ತಲುಪಿದೆ!

ಸೀತಾ ರಾಮ ಧಾರಾವಾಹಿ ಪಾತ್ರವರ್ಗ

ನಿರ್ದೇಶಕ: ಮಧುಸೂಧನ್‌

ಗಗನ್‌ ಶ್ರೀನಿವಾಸ್: ಶ್ರೀರಾಮ (ನಾಯಕ)

ವೈಷ್ಣವಿ ಗೌಡ: ಸೀತಾ (ನಾಯಕ)

ರೀತು ಸಿಂಗ್: ಸಿಹಿ (ಸೀತಾ ಮಗಳು)

ಅಶೋಕ ಶರ್ಮಾ: ಅಶೋಕ (ಶ್ರೀರಾಮನ ಪ್ರಾಣ ಸ್ನೇಹಿತ)

ಭಾರ್ಗವಿ: ಪೂಜಾ ಲೋಕೇಶ್‌ (ಶ್ರೀರಾಮನ ಚಿಕ್ಕಮ್ಮ)

ಮುಖ್ಯಮಂತ್ರಿ ಚಂದ್ರು: ಸೂರ್ಯ ಪ್ರಕಾಶ್‌ ದೇಸಾಯಿ (ಶ್ರೀರಾಮನ ತಾತ)

ಶ್ವೇತಾ ಶಂಕರಪ್ಪ: ಪ್ರಿಯಾ (ಸೀತಾಳ ಸ್ನೇಹಿತೆ)

ವಿಕಾಸ್‌ ಕಾರ್‌ಗೋಡ್:‌ ಲಾಯರ್‌ ರುದ್ರಪ್ರತಾಪ್

ಸತೀಶ್‌ ಚಂದ್ರ: ಚರಣ್‌. ಡಿ

ಪೂರ್ಣಚಂದ್ರ ತೇಜಸ್ವಿ: ವಿಶ್ವಜೀತ್‌ (ಶ್ರೀರಾಮನ ಚಿಕ್ಕಪ್ಪ)

ಜಯದೇವ್‌ ಮೋಹನ್:‌ ಸತ್ಯಜೀತ್‌ (ಶ್ರೀರಾಮನ ಚಿಕ್ಕಪ್ಪ)

IPL_Entry_Point