Seetha Rama Serial: ಸೀತಾಳ ಮುಂದೆ ಪ್ರೇಮ ನಿವೇದಿಸಲು ಬಂದ ಶ್ರೀರಾಮ್‌ಗೆ ಅವಮಾನದ ಜತೆಗೆ ಭೀಕರ ಅಪಘಾತ, ಸ್ಥಿತಿ ಗಂಭೀರ!-kannada television news seetha rama serial february 20th episode highlights zee kannada seetha rama serial mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Seetha Rama Serial: ಸೀತಾಳ ಮುಂದೆ ಪ್ರೇಮ ನಿವೇದಿಸಲು ಬಂದ ಶ್ರೀರಾಮ್‌ಗೆ ಅವಮಾನದ ಜತೆಗೆ ಭೀಕರ ಅಪಘಾತ, ಸ್ಥಿತಿ ಗಂಭೀರ!

Seetha Rama Serial: ಸೀತಾಳ ಮುಂದೆ ಪ್ರೇಮ ನಿವೇದಿಸಲು ಬಂದ ಶ್ರೀರಾಮ್‌ಗೆ ಅವಮಾನದ ಜತೆಗೆ ಭೀಕರ ಅಪಘಾತ, ಸ್ಥಿತಿ ಗಂಭೀರ!

Seetha Rama Serial: ಇತ್ತೀಚೆಗಷ್ಟೇ ಹೊಸ ಪ್ರೋಮೋ ಮೂಲಕ ಗಮನ ಸೆಳೆದಿದ್ದ ಸೀತಾ ರಾಮ ಸೀರಿಯಲ್‌, ನೋಡುಗರಿಂದ ಮೆಚ್ಚುಗೆ ಪಡೆದುಕೊಂಡಿತ್ತು. ಅಂತೂ ಇಬ್ಬರ ಪ್ರೀತಿ ಫಲಸಿತ್ತಲ್ಲ ಎಂದು ವೀಕ್ಷಕ ನಿಟ್ಟುಸಿರು ಬಿಟ್ಟಿದ್ದ. ಆದರೆ, ವಿಧಿಯಾಟವೇ ಬೇರೆಯಿದೆ. ಪ್ರೇಮನಿವೇದನೆಗೆ ಓಡೋಡಿ ಬಂದ ರಾಮ್‌ಗೆ ಸೀತಾ ಅವಮಾನ ಮಾಡಿದ್ದಾಳೆ. ಅಪಘಾತವೂ ಸಂಭವಿಸಿದೆ.

Seetha Rama Serial: ಸೀತಾಳ ಮುಂದೆ ಪ್ರೇಮ ನಿವೇದಿಸಲು ಬಂದ ಶ್ರೀರಾಮ್‌ಗೆ ಅವಮಾನದ ಜತೆಗೆ ಭೀಕರ ಅಪಘಾತ, ಸ್ಥಿತಿ ಗಂಭೀರ!
Seetha Rama Serial: ಸೀತಾಳ ಮುಂದೆ ಪ್ರೇಮ ನಿವೇದಿಸಲು ಬಂದ ಶ್ರೀರಾಮ್‌ಗೆ ಅವಮಾನದ ಜತೆಗೆ ಭೀಕರ ಅಪಘಾತ, ಸ್ಥಿತಿ ಗಂಭೀರ!

Seetha Rama Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸೀತಾ ರಾಮ ಸೀರಿಯಲ್‌ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಹತ್ತು ಹಲವು ಕೌತುಕಗಳ ಸರಮಾಲೆಯನ್ನೇ ನೋಡುಗರ ಮುಂದೆ ಪ್ರೋಮೋ ರೀತಿಯಲ್ಲಿ ಬಿಚ್ಚಿಟ್ಟಿದೆ. ಇದೀಗ ಇದೇ ಸೀರಿಯಲ್‌ನಲ್ಲಿ ಮತ್ತೊಂದು ಟ್ವಿಸ್ಟ್‌ ಎದುರಾಗಿದೆ. ಪ್ರೇಮನಿವೇದನೆ ಮಾಡಲು ಓಡೋಡಿ ಬಂದ ರಾಮ್‌ಗೆ ಸೀತಾಳಿಂದ ಅವಮಾನವಾಗಿದೆ. ಮತ್ತೊಂದೆಡೆ ಅಪಘಾತವೂ ಸಂಭವಿಸಿದೆ.

ತಾತ ಸೂರ್ಯಪ್ರಕಾಶ್‌ ದೇಸಾಯಿ ರಾಮನಿಗೆ ವಾರ್ನಿಂಗ್‌ ಮಾಡಿದ್ದಾನೆ. ಇನ್ನು 24 ಗಂಟೆಯೊಳಗೆ ಸೀತಾಳ ಮುಂದೆ ನಿನ್ನ ಪ್ರೀತಿಯನ್ನು ಹೇಳಬೇಕು ಎಂದು ಕಟ್ಟಪ್ಪಣೆ ಮಾಡಿದ್ದಾನೆ. ಆ ನಿಮಿತ್ತ ಶತಾಯ ಗತಾಯ ಸೀತಾಳ ಮುಂದೆ ತನ್ನ ಪ್ರೀತಿ ಹೇಳಿಕೊಳ್ಳಲು ಬಗೆ ಬಗೆ ರೀತಿಯಲ್ಲಿ ತಯಾರಾಗಿದ್ದಾನೆ. ಕೋಣೆಯಲ್ಲಿ ಹೇಗೆಲ್ಲ ಪ್ರಪೋಸ್‌ ಮಾಡಬಹುದು ಎಂದು ರಿಹರ್ಸಲ್‌ ಮಾಡಿದ್ದಾನೆ. ಕಾರ್‌ ಬದಿಗಿಟ್ಟು, ಸೈಕಲ್‌ ಏರಿ ಸೀತಾಳ ಮನೆ ತಲುಪಿದ್ದಾನೆ.

ಇತ್ತ ಸೀತಾಳಿಗೆ ಶ್ರೀರಾಮನೇ ತಾನಿರುವ ಮನೆಯನ್ನು ಖರೀದಿಸಿದ್ದು ಎಂಬುದು ಗೊತ್ತಾಗಿದೆ. ಭಾರ್ಗವಿ ತನ್ನ ಕೆಟ್ಟಬುದ್ಧಿಯನ್ನು ಬಳಸಿ, ಸೀತಾ ಮನೆಯಲ್ಲಿ ಇಲ್ಲದ ವೇಳೆಯೇ ಆಕೆಯ ವಠಾರಕ್ಕೆ ತೆರಳಿ, ಈ ಮನೆಯನ್ನು ನನ್ನ ಮಗನೇ ಖರೀದಿಸಿದ್ದು ಎಂದು ಜೋರಾಗಿಯೇ ಹೇಳಿಕೊಂಡಿದ್ದಳು. ಶಾಂತಮ್ಮಜ್ಜಿಗೂ ಈ ವಿಚಾರ ತಿಳಿದಿತ್ತು. ಅದಾದ ಬಳಿಕ ಸೀತಾ ಆಫೀಸ್‌ನಿಂದ ಬಂದ ಬಳಿಕ ಇದೇ ವಿಚಾರವನ್ನು ಆಕೆಯ ಮುಂದೆಯೂ ಹೇಳಿದ್ದಳು ಶಾಂತಮ್ಮಜ್ಜಿ.

ಇದೆಲ್ಲದರ ನಡುವೆಯೇ ಸೀತಾಳ ಮನೆಗೆ ಬಂದ ರಾಮ್‌ಗೆ ಅವಮಾನ ಮಾಡಿದ್ದಾಳೆ ಸೀತಾ. ಪದೇ ಪದೇ ನನ್ನ ಲೈಫ್‌ನಲ್ಲಿ ಬಂದು ನನ್ನನ್ನು ಸೇವ್‌ ಮಾಡಿ ಹೀರೋ ಆಗಬೇಕು ಅಂತ ಅಂದುಕೊಂಡಿದ್ದೀರಾ? ಇದೆಲ್ಲದರ ಅವಶ್ಯಕತೆ ಏನಿತ್ತು. ನಮ್ಮಿಬ್ಬರ ನಡುವೆ ಮಾತನಾಡೋಕೆ ಏನೂ ಇಲ್ಲ. ಇದು ನಿಮ್ಮ ಮನೆ, ಈ ಮನೆಯನ್ನು ನೀವೇ ತೆಗೆದುಕೊಂಡಿದ್ದು ಅನ್ನೋ ವಿಚಾರವನ್ನು ಯಾಕೆ ಮುಚ್ಚಿಟ್ರಿ?

ಪದೇಪದೆ ಈ ಥರ ಮನೆಗೆ ಬರ್ತಾಯಿದ್ರೆ ಬೇರೆಯವರು ಏನು ಅನ್ಕೋಳ್ತಾರೆ? ಪ್ರತಿ ತಿಂಗಳು ನಿಮಗೆ ಬಾಡಿಗೆ ಬರುತ್ತೆ, ನಮ್ಮ ನಡುವೆ ಸ್ನೇಹ ಇದ್ದರೂ ಅದು ನೋಡುವವರ ಕಣ್ಣಿಗೆ ಬೇರೆ ಥರ ಕಾಣ್ತಿದೆ ಇದಕ್ಕೆಲ್ಲ ಕಿವಿಗೊಡಬಾರದು ಅಂದುಕೊಂಡೆ. ಆದರೆ, ಅದು ಸಾಧ್ಯ ಆಗ್ತಿಲ್ಲ. ನನಗೆ ಚಿಕ್ಕ ಮಗಳಿದ್ದಾಳೆ, ನನ್ನನ್ನು ನನ್ನ ಪಾಡಿಗೆ ಇರಲು ಬಿಟ್ಟು ಬಿಡಿ ಎಂದು ವಠಾರದ ಎಲ್ಲರಿಗೂ ಗೊತ್ತಾಗುವಂತೆ ಹೇಳಿದ್ದಾಳೆ ಸೀತಾ.

ಸೀತಾಳ ಮಾತು ಕೇಳಿ, ಬೇಸರದಲ್ಲಿಯೇ ವಠಾರದಿಂದ ಹೊರನಡೆದಿದ್ದಾನೆ ರಾಮ್.‌ ರಾಮ್‌ ಹೊರ ನಡೆಯುತ್ತಿದ್ದಂತೆ, ರಾಮನಿಗೆ ಹಾಗೆಲ್ಲ ಮಾತನಾಡಿದ್ದಕ್ಕೆ ತಾನೇ ಪಶ್ಚಾತ್ತಾಪದ ಮಾತುಗಳನ್ನೂ ಆಡಿದ್ದಾಳೆ. ನಮಗಾಗಿ ಎಷ್ಟೆಲ್ಲ ಸಹಾಯ ಮಾಡಿದ್ದಾರೆ ಎಂದಿದ್ದಾಳೆ. ಜತೆಗೆ ರಾಮ್‌ಗೆ ಒಳ್ಳೆಯದೇ ಆಗಲಿ ಎಂದು ದೇವರು ಶ್ರೀರಾಮನ ಮುಂದೆ ನಿಂತು ಬೇಡಿಕೊಂಡಿದ್ದಾಳೆ. ಇತ್ತ ಲಾಯರ್‌ ರುದ್ರಪ್ರತಾಪ್‌, ಸಿಕ್ಕಿದ್ದೇ ಚಾನ್ಸು ಅಂತ ರಾಮ್‌ಗೆ ಅಪಘಾತ ಮಾಡಿಸಿದ್ದಾನೆ.

ರಾಮ್‌ಗೆ ಅಪಘಾತವಾದ ಸುದ್ದಿ ವ್ಯಾಪಕವಾಗಿ ಹರಡಿದೆ. ಸುದ್ದಿವಾಹಿನಿಯಲ್ಲೂ ಬಂದಿದೆ. ಸೀತಾಳಿಗೂ ಈ ಸುದ್ದಿ ತಿಳಿದಿದೆ. ಸಿಹಿಗೂ ವಿಚಾರ ತಿಳಿದಿದೆ. ಸೀತಾ ಶಾಕ್‌ನಲ್ಲಿಯೇ ಆಸ್ಪತ್ರೆಯತ್ತ ದೌಡಾಯಿಸಿದ್ದಾಳೆ. ಸದ್ಯ ರಾಮ್‌ ಸ್ಥತಿ ಗಂಭೀರ ಎಂಬ ಸುದ್ದಿ ಹರಿದಾಡಿದೆ.

ಸೀತಾ ರಾಮ ಧಾರಾವಾಹಿ ಪಾತ್ರವರ್ಗ

ನಿರ್ದೇಶಕ: ಮಧುಸೂಧನ್‌

ಗಗನ್‌ ಶ್ರೀನಿವಾಸ್: ಶ್ರೀರಾಮ (ನಾಯಕ)

ವೈಷ್ಣವಿ ಗೌಡ: ಸೀತಾ (ನಾಯಕ)

ರೀತು ಸಿಂಗ್: ಸಿಹಿ (ಸೀತಾ ಮಗಳು)

ಅಶೋಕ ಶರ್ಮಾ: ಅಶೋಕ (ಶ್ರೀರಾಮನ ಪ್ರಾಣ ಸ್ನೇಹಿತ)

ಭಾರ್ಗವಿ: ಪೂಜಾ ಲೋಕೇಶ್‌ (ಶ್ರೀರಾಮನ ಚಿಕ್ಕಮ್ಮ)

ಮುಖ್ಯಮಂತ್ರಿ ಚಂದ್ರು: ಸೂರ್ಯ ಪ್ರಕಾಶ್‌ ದೇಸಾಯಿ (ಶ್ರೀರಾಮನ ತಾತ)

ಶ್ವೇತಾ ಶಂಕರಪ್ಪ: ಪ್ರಿಯಾ (ಸೀತಾಳ ಸ್ನೇಹಿತೆ)

ವಿಕಾಸ್‌ ಕಾರ್‌ಗೋಡ್:‌ ಲಾಯರ್‌ ರುದ್ರಪ್ರತಾಪ್

ಸತೀಶ್‌ ಚಂದ್ರ: ಚರಣ್‌. ಡಿ

ಪೂರ್ಣಚಂದ್ರ ತೇಜಸ್ವಿ: ವಿಶ್ವಜೀತ್‌ (ಶ್ರೀರಾಮನ ಚಿಕ್ಕಪ್ಪ)

ಜಯದೇವ್‌ ಮೋಹನ್:‌ ಸತ್ಯಜೀತ್‌ (ಶ್ರೀರಾಮನ ಚಿಕ್ಕಪ್ಪ)