ಕನ್ನಡ ಸುದ್ದಿ  /  Entertainment  /  Kannada Television News Seetha Rama Serial Friday March 8th Episode Highlights Seetha Raama Serial Latest Updates Mnk

Seetha Rama Serial: ಕಟು ಸತ್ಯಗಳನ್ನು ತಿಳಿದು ಕಂಗಾಲಾದ ಅಶೋಕ; ಚಾಂದಿನಿ ಚಾಲೆಂಜ್‌ಗೆ ಶ್ರೀರಾಮನ ಸ್ನೇಹಿತನ ಹೆಣಗಾಟ

ರಾಮ ಹಳೇ ಲಯಕ್ಕೆ ಮರಳುತ್ತಿದ್ದಾನೆ. ಆಫೀಸ್‌ಗೆ ತೆರಳಲು ರೆಡಿಯಾಗಿದ್ದಾನೆ. ಈ ನಡುವೆ ಆಫೀಸ್‌ನಲ್ಲಿ ತಾವಿಲ್ಲದಿದ್ದಾಗ ನಡೆದ ಒಂದಷ್ಟು ವಿಚಾರಗಳು ಅಶೋಕನ ಗಮನಕ್ಕೆ ಬಂದಿವೆ. ಚಾಂದಿನಿಯ ಎಂಟ್ರಿ ಮತ್ತು ಸೀತಾಳ ರಾಜೀನಾಮೆ ವಿಷಯದಿಂದ ಅಶೋಕ ಕಂಗಾಲಾಗಿದ್ದಾನೆ. ಸೀತಾ ರಾಮ ಸೀರಿಯಲ್‌ ಶುಕ್ರವಾರದ ಏಪಿಸೋಡ್‌ ಹೈಲೈಟ್‌ ಹೀಗಿದೆ.

Seetha Rama Serial: ಕಟು ಸತ್ಯಗಳನ್ನು ತಿಳಿದು ಕಂಗಾಲಾದ ಅಶೋಕ; ಚಾಂದಿನಿ ಚಾಲೆಂಜ್‌ಗೆ ಶ್ರೀರಾಮನ ಸ್ನೇಹಿತನ ಹೆಣಗಾಟ
Seetha Rama Serial: ಕಟು ಸತ್ಯಗಳನ್ನು ತಿಳಿದು ಕಂಗಾಲಾದ ಅಶೋಕ; ಚಾಂದಿನಿ ಚಾಲೆಂಜ್‌ಗೆ ಶ್ರೀರಾಮನ ಸ್ನೇಹಿತನ ಹೆಣಗಾಟ

Seetha Rama Serial: ರಾಮನ ಆರೋಗ್ಯ ನೋಡಿಕೊಳ್ಳುವುದರಲ್ಲಿಯೇ ಕೆಲವು ದಿನಗಳನ್ನು ಸವೆಸಿದ್ದ ಅಶೋಕನಿಗೆ ಆಫೀಸ್‌ನಲ್ಲಿ ಏನಾಗ್ತಿದೆ ಎಂಬ ಸಣ್ಣ ಸುಳಿವೂ ಸಿಕ್ಕಿರಲಿಲ್ಲ. ಈ ನಡುವೆ ಚಾಂದಿನಿ ಆಗಮನವಾಗಿ, ಫಿನಾನ್ಸ್‌ ಸೆಕ್ಷನ್‌ ಹೆಡ್‌ ಆಗಿ ಅಧಿಕಾರವಹಿಸಿಕೊಂಡಿದ್ದೂ ಅಶೋಕನ ಗಮನಕ್ಕೆ ಬಂದಿಲ್ಲ. ಇದೀಗ ಈ ಬೆಳವಣಿಗೆಗಳು ಪ್ರಿಯಾ ಮೂಲಕ ಅಶೋಕನಿಗೆ ಗೊತ್ತಾಗಿದೆ. ಒಂದು ಕ್ಷಣ ಅಶೋಕ ಶಾಕ್‌ ಆಗಿದ್ದಾನೆ.

ಮತ್ತೊಂದು ಕಡೆ ಭಾರ್ಗವಿ ಬಳಿ ಆಫೀಸ್‌ನ ವಿಚಾರಗಳನ್ನು ಚಾಂದಿನಿ ಚರ್ಚೆ ಮಾಡಿದ್ದಾಳೆ. ಅಶೋಕ್‌ ನನ್ನ ಎಲ್ಲ ಕೆಲಸಗಳಿಗೆ ಅಡ್ಡಗಾಲಾಗುತ್ತಿದ್ದಾನೆ. ನನ್ನ ರಾಮ್‌ ಮಧ್ಯೆ ದೊಡ್ಡ ಗೋಡೆ ಆಗಿದ್ದಾನೆ. ಚಾಂದಿನಿಯ ಮಾತಿಗೆ, ಯಾರವನು ಅಶೋಕ? ಅವನನ್ನು ಹ್ಯಾಂಡಲ್‌ ಮಾಡೋಕೂ ಬರಲ್ವ? ಇದು ಒಂದು ವಿಷ್ಯಾನೇ ಅಲ್ಲ ಎಂದು ಚಾಂದಿನಿಗೆ ಬುದ್ಧಿ ಹೇಳಿದ್ದಾಳೆ. ದೇಸಾಯಿ ಕುಟುಂಬದಲ್ಲಿ ನೀನೂ ಒಬ್ಬಳು ಆಗಬೇಕೆಂದರೆ, ಎಲ್ಲವನ್ನೂ ಸರಿಯಾಗಿಯೇ ಹ್ಯಾಂಡಲ್‌ ಮಾಡಬೇಕು ಎಂದಿದ್ದಾಳೆ.

ಸೀತಾ ರಾಜೀನಾಮೆ ವಿಚಾರ ಮುನ್ನೆಲೆಗೆ

ಇನ್ನೊಂದು ಬದಿ, ಅಶೋಕ ತನ್ನ ಅನುಮಾನವನ್ನು ಕ್ಲಿಯರ್‌ ಮಾಡಿಕೊಳ್ಳುವ ಉದ್ದೇಶಕ್ಕೆ ತಾತ ಸೂರಿ ಬಳಿ ಮಾತಿಗಿಳಿದಿದ್ದಾನೆ. ಆಫೀಸ್‌ಗೆ ಚಾಂದಿನಿಯ ಎಂಟ್ರಿ ಬಗ್ಗೆ ಕೇಳಿದ್ದಾನೆ. ಅದಕ್ಕೆ ಹೌದು ಎಂದಿದ್ದಾನೆ ಸೂರ್ಯಪ್ರಕಾಶ್. ಅಷ್ಟೇ‌ ಅಲ್ಲ ಸೀತಾ ಕೆಲಸಕ್ಕೆ ರಾಜೀನಾಮೆ ಕೊಟ್ಟಿದ್ದಾಳೆ. ಸದ್ಯ ಅವಳು ನೋಟಿಸ್‌ ಪಿರಿಯಡ್‌ನಲ್ಲಿದ್ದಾಳೆ ಎಂಬ ಮತ್ತೊಂದು ಸತ್ಯವೂ ಅಶೋಕನಿಗೆ ಗೊತ್ತಾಗಿದೆ. ಚಾಂದಿನಿ ಆಗಮನದ ಸಿಟ್ಟು ನೆತ್ತಿಗೇರುತ್ತಿದ್ದಂತೆ, ಸೀತಾಳ ರಾಜೀನಾಮೆ ಅಶೋಕನನ್ನು ಕಂಗೆಡಿಸಿದೆ.

ಅಶೋಕ್‌ಗೆ ಚಾಂದಿನಿಯ ಚಾಲೆಂಜ್‌

ಚಾಂದಿನಿಗೆ ಫೋನ್‌ ಮಾಡಿ ಮತ್ಯಾಕೆ ರಾಮನ ಲೈಫ್‌ಗೆ ಬರ್ತಿದ್ದೀಯಾ ಎಂದು ಅಶೋಕ್‌ ವಾರ್ನಿಂಗ್‌ ಮಾಡಿದ್ದಾನೆ. ಅಶೋಕನ ಮಾತಿಗೆ ಬಗ್ಗದ ಚಾಂದಿನಿ, ಈ ಮಾತು ರಾಮನ ಬಾಯಿಂದ ಬರಲಿ ಆವಾಗ ನಾನೇ ಇಲ್ಲಿಂದ ಹೊರಡುತ್ತೇನೆ ಎಂದು ಓಪನ್‌ ಚಾಲೆಂಜ್‌ ಹಾಕಿದ್ದಾಳೆ. ಸೀತಾ ರಾಜೀನಾಮೆ ವಿಚಾರವಾಗಿ ಆಕೆಯ ಬಳಿಯೂ ಮಾತಿಗಿಳಿದ ಅಶೋಕ, ರಿಸೈನ್‌ ಮಾಡುವಂಥದ್ದು ಏನಾಯ್ತು ಎಂದು ಕೇಳಿದ್ದಾನೆ. ನಿಮ್ಮ ನಿರ್ಧಾರ ಬದಲಿಸಿಕೊಳ್ಳಿ ಎಂದಿದ್ದಾನೆ.

ಪ್ರೇಮನಿವೇದನೆಗೆ ರಾಮ್‌ ರೆಡಿ

ಈ ನಡುವೆ ಸಿಹಿಯನ್ನು ಮನೆಗೆ ಕರೆಸಿಕೊಂಡಿದ್ದಕ್ಕೆ ಸೀತಾಗೆ ಮೆಸೆಜ್‌ ಮಾಡಿದ್ದಾನೆ ಶ್ರೀರಾಮ. ಅಷ್ಟೇ ಅಲ್ಲ ತಾನು ನಾಳೆ ಆಫೀಸ್‌ಗೆ ಬರ್ತಿರುವ ಬಗ್ಗೆಯೂ ಮೆಸೆಜ್‌ ಮಾಡಿದ್ದಾನೆ. ರಾಮನ ಈ ಮಾತಿಂದ ಸೀತಾ ಮೊಗದಲ್ಲಿ ನಗು ಉಕ್ಕಿದೆ. ರಾಮ್‌ ಮೊದಲಿನಂತೆ ಆಫೀಸ್‌ಗೆ ಬರೋಹಾಗಾಯಿತಲ್ಲ ಎಂದು ಸಂಭ್ರಮಿಸಿದ್ದಾಳೆ. ಕೊನೆಗೆ ಕ್ಷಮಿಸಿ ಎಂದೂ ಕೇಳಿದ್ದಾಳೆ. ಇನ್ನು ತಡ ಮಾಡೋಕಾಗಲ್ಲ, ಸೀತಾಳ ಮುಂದೆ ಪ್ರೇಮನಿವೇದನೆ ಮಾಡಿಬಿಡ್ತಿನಿ ತನ್ನೊಳಗೆ ಹೇಳಿಕೊಂಡಿದ್ದಾನೆ ರಾಮ. ಈ ನಡುವೆ ಆಫೀಸ್‌ಗೆ ಹೋಗಲು ಸಿದ್ಧನಾಗಿದ್ದ ರಾಮ್‌ಗೆ ಚಾಂದಿನಿ ಎದುರಾಗ್ತಾಳಾ? ಸೋಮವಾರವೇ ಈ ಕುತೂಹಲಕ್ಕೆ ತೆರೆಬೀಳಲಿದೆ.