Seetha Rama Serial: ಮದುವೆ ನಿಂತೋಯ್ತು, ಇತ್ತ ಸೀತಾಳ ಮುಂದೆ ತನ್ನಿಷ್ಟದ ಹುಡುಗಿ ಯಾರೆಂದು ಹೇಳ ಹೊರಟಿದ್ದಾನೆ ಶ್ರೀರಾಮ!
ಕನ್ನಡ ಸುದ್ದಿ  /  ಮನರಂಜನೆ  /  Seetha Rama Serial: ಮದುವೆ ನಿಂತೋಯ್ತು, ಇತ್ತ ಸೀತಾಳ ಮುಂದೆ ತನ್ನಿಷ್ಟದ ಹುಡುಗಿ ಯಾರೆಂದು ಹೇಳ ಹೊರಟಿದ್ದಾನೆ ಶ್ರೀರಾಮ!

Seetha Rama Serial: ಮದುವೆ ನಿಂತೋಯ್ತು, ಇತ್ತ ಸೀತಾಳ ಮುಂದೆ ತನ್ನಿಷ್ಟದ ಹುಡುಗಿ ಯಾರೆಂದು ಹೇಳ ಹೊರಟಿದ್ದಾನೆ ಶ್ರೀರಾಮ!

Seetha Rama Serial Episode: ಜೀ ಕನ್ನಡದಲ್ಲಿ ಪ್ರಸಾರವಾಗುವ 'ಸೀತಾ ರಾಮ' ಸೀರಿಯಲ್‌ ರೋಚಕತೆಗೆ ಒಗ್ಗರಣೆ ಹಾಕಿದೆ. ರುದ್ರಪ್ರತಾಪನ ಅಸಲಿ ಮುಖದ ಅನಾವರಣವಾಗಿದೆ. ಅದರಂತೆ ನಡೆಯಬೇಕಿದ್ದ ಮದುವೆಯನ್ನು ತಡೆದಿದ್ದಾನೆ ಶ್ರೀರಾಮ. ಇತ್ತ ಸೀತಾಳಿಗೆ ತನ್ನ ಹುಡುಗಿಯನ್ನು ಪರಿಚಯಿಸುವ ನಿರ್ಧಾರಕ್ಕೂ ಬಂದಿದ್ದಾನೆ ರಾಮ.

Seetha Rama Serial: ಮದುವೆ ನಿಂತೋಯ್ತು, ಇತ್ತ ಸೀತಾಳ ಮುಂದೆ ತನ್ನಿಷ್ಟದ ಹುಡುಗಿ ಯಾರೆಂದು ಹೇಳ ಹೊರಟಿದ್ದಾನೆ ಶ್ರೀರಾಮ!
Seetha Rama Serial: ಮದುವೆ ನಿಂತೋಯ್ತು, ಇತ್ತ ಸೀತಾಳ ಮುಂದೆ ತನ್ನಿಷ್ಟದ ಹುಡುಗಿ ಯಾರೆಂದು ಹೇಳ ಹೊರಟಿದ್ದಾನೆ ಶ್ರೀರಾಮ!

Seetha Rama Serial: ಇಷ್ಟು ದಿನ ಒಂದು ಲೆಕ್ಕ ಇನ್ನು ಮುಂದೆ ಇನ್ನೊಂದು ಲೆಕ್ಕ ಹಾಗಾಗಿದೆ ಸೀತಾ ರಾಮ ಸೀರಿಯಲ್ ಕಥೆ. ‌ ಸೀತಾಳನ್ನು ಹೇಗಾದರೂ ಮಾಡಿ ಒಲಿಸಿಕೊಳ್ಳಬೇಕೆಂಬ ರುದ್ರಪ್ರತಾಪ್‌ನ ಪ್ಲಾನ್ಗ ಠುಸ್‌ ಪಟಾಕಿ ಆಗಿದೆ. ರುದ್ರಪ್ರತಾಪನ ಅಸಲಿ ಮುಖವನ್ನು ಎಲ್ಲರ ಎದುರು ಅನಾವರಣ ಮಾಡಿದ್ದಾನೆ ಶ್ರೀ ರಾಮ. ಅಷ್ಟೇ ಅಲ್ಲ ಸಿನಿಮೀಯ ಶೈಲಿಯಲ್ಲಿ ಫೈಟ್‌ ಮಾಡಿ, ಸೀತಾಳನ್ನು ರಕ್ಷಿಸಿದ್ದಾನೆ. ಶಾಂತಮ್ಮನ ವಠಾರದಲ್ಲಿ ಒಂದು ದೊಡ್ಡ ಸಾಹಸವೇ ನಡೆದುಹೋಗಿದೆ.

ಸೋಮವಾರದ ಸಂಚಿಕೆಯಲ್ಲಿ ಮದುವೆ ತಯಾರಿಗಳು ನಡೆದಿದ್ದವು. ಇತ್ತ ರುದ್ರನ ಅಸಲಿಯತ್ತು ಸಿಹಿ ಕಳುಹಿಸಿದ ವಾಯ್ಸ್‌ ನೋಟ್‌ ಮೂಲಕ ರಾಮನಿಗೆ ತಿಳಿದಿತ್ತು. ಅದರಂತೆ, ಸೀತಾನ ಮನೆ ಖರೀದಿ ಮಾಡಬೇಕೆಂದುಕೊಂಡಿದ್ದ ರಾಜಣ್ಣನನ್ನು ಎಳೆದು ತಂದ ರಾಮ, ಮದುವೆ ನಿಲ್ಲಿಸಿದ್ದ. ಪೊಲೀಸರಿಗೂ ಈ ಬಗ್ಗೆ ಮಾಹಿತಿ ರವಾನೆಯಾಗಿತ್ತು. ಮದುವೆ ಮನೆ ಒಂದು ಕ್ಷಣ ರಣಾಂಗಣವಾಯ್ತು. ರುದ್ರನ ಮೇಲೆ ಮುಗಿಬಿದ್ದ ರಾಮ ತಮ್ಮ ರೌದ್ರಾವತಾರ ತೋರಿಸಿ ಲಾಯರ್‌ಗೆ ಬಿಸಿ ಮುಟ್ಟಿಸಿದ್ದ.

ಕೊನೆಗೆ ಸಿಹಿಯನ್ನು ಕಿಡ್ನಾಪ್‌ ಮಾಡಲು ಯತ್ನಿಸಿದ್ದ. ಆ ಪ್ರಹಸನಕ್ಕೂ ಫುಲ್‌ಸ್ಟಾಪ್‌ ಇಟ್ಟ ರಾಮ್‌, ಸಿಹಿಯನ್ನು ಕಾಪಾಡಿ, ರುದ್ರಪ್ರತಾಪ್‌ನನ್ನು ಪೊಲೀಸರಿಗೆ ಒಪ್ಪಿಸಿದ್ದ. ಇತ್ತ ಇಡೀ ಮನೆ ಮಂದಿ ನಿಟ್ಟುಸಿರು ಬಿಟ್ಟಿತ್ತು. ಸೀತಾಳ ಬಾಳು ಹಾಳಾಗೋದನ್ನು ತಪ್ಪಿಸಿದ ಶ್ರೀರಾಮನಿಗೂ ಕೃತಜ್ಞತೆ ಸಲ್ಲಿಸುತ್ತಿದ್ದಾರೆ. ಇತ್ತ ಸೀತಾಳ ಮನಸು ಕೊಂಚ ನಿರಾಳವಾಗಿರಲಿ ಎಂದು ಸಿಹಿ ಜತೆಗೆ ಹೊರಗಡೆ ಕರೆದುಕೊಂಡು ಬಂದಿದ್ದಾನೆ. ಮೂವರ ನಡುವೆ ನವಿರು ಮಾತುಕತೆ ಮುಂದುವರಿದಿದೆ.

ನನಗೆ ಈ ಮದುವೆಯೇ ಇಷ್ಟ ಇರಲಿಲ್ಲ. ನೀವೆಲ್ಲ ಒತ್ತಾಯ ಮಾಡಿದ್ದಕ್ಕೆ ನಾನು ಈ ಮದುವೆ ಒಪ್ಪಿಕೊಂಡೆ ಎಂದಿದ್ದಾಳೆ ಸೀತಾ. ನನಗೂ ಇಷ್ಟ ಇರಲಿಲ್ಲ ಎಂದು ಧ್ವನಿಗೂಡಿಸಿದ್ದಾಳೆ ಸಿಹಿ. ನನಗೂ ಇಷ್ಟ ಇರಲಿಲ್ಲ ಎಂದು ರಾಮ ಮನಸಲ್ಲೇ ಮಾತನಾಡಿಕೊಂಡಿದ್ದಾನೆ. ಇದೆಲ್ಲ ನನ್ನಿಂದಲೇ ಆಗಿದ್ದು, ಕ್ಷಮಿಸಿ ಎಂದು ಕೇಳಿದ್ದಾನೆ ರಾಮ. ಸಿಹಿಗೆ ಒಳ್ಳೆಯ ಅಪ್ಪ ಸಿಗ್ತಾನೆ ಅನ್ನೋ ಕಾರಣಕ್ಕೆ ನಾನು ಮದುವೆ ಓಕೆ ಅಂದಿದ್ದೆ. ಆದರೆ, ಇದು ಹೀಗಾಗುತ್ತೆ ಎಂದು ನಾನು ಭಾವಿಸಿರಲಿಲ್ಲ ಎಂದಿದ್ದಾನೆ ರಾಮ.

ಈ ಮಾತುಕತೆ ನಡುವೆಯೇ ರಾಮನ ಹುಡುಗಿ ವಿಚಾರ ಮುನ್ನೆಲೆಗೆ ಬಂದಿದೆ. ನಿಮ್ಮ ಹುಡುಗಿಯನ್ನು ಅದ್ಯಾವಾಗ ಪರಿಚಯ ಮಾಡಿಕೊಡ್ತಿರಿ ಎಂದು ಸೀತಾ, ರಾಮ್‌ಗೆ ಕೇಳಿದ್ದಾಳೆ. ಸೀತಾಳ ಮಾತಿಗೆ ನನ್ನ ಕಣ್ಣಮುಂದಿದ್ದೀರಲ್ಲ ನೀವೇ ನನ್ನ ಹುಡುಗಿ ಎಂದು ಮನದೊಳಗೇ ಮಾತನಾಡಿಕೊಂಡಿದ್ದಾನೆ. ನಾಳೆಯೇ ಭೇಟಿ ಮಾಡಿಸುವೆ ಎಂದಿದ್ದಾನೆ. ನಾನು ತುಂಬ ಎಗ್ಸೈಟ್‌ ಆಗಿದ್ದೇನೆ ಎಂದಿದ್ದಾಳೆ. ಅಲ್ಲಿಗೆ ಸೀತಾಳ ಬಾಳಲ್ಲಿನ ಕತ್ತಲು ಕಳೆದು ಬೆಳಕು ಹರಿದಿದೆ.

ತಾತ, ಅಶೋಕ ಮತ್ತು ರಾಮನ ನಡುವೆ ಮಾತುಕತೆ ನಡೆದಿದೆ. ಹೈದರಾಬಾದ್‌ಗೆ ಹೊರಡುತ್ತಿರುವ ತಾತನಿಗೆ ಮತ್ತು ಅಶೋಕನಿಗೆ ವಿಶೇಷ ಎನಿಸಿದೆ. ನೀವು ಹೈದರಾಬಾದ್‌ನಿಂದ ಬರುತ್ತಿದ್ದಂತೆ, ನಾನೇ ಎಲ್ಲ ಸತ್ಯ ಹೇಳಿ ಬಿಡುತ್ತೇನೆ ಎಂದಿದ್ದಾನೆ. ಈ ನಡುವೆ ಋಣಾನುಬಂಧದ ಬಗ್ಗೆ ರಾಮನಿಗೆ ಕಿವಿ ಮಾತು ಹೇಳಿದ್ದಾನೆ. ಹೈದರಾಬಾದ್‌ನಿಂದ ಬರುವಷ್ಟರಲ್ಲಿಯೇ ನಾನು ಬಾಸ್‌ ಪಟ್ಟ ಕಳಚಿಡಬಹುದಲ್ಲವೇ ಎಂದಿದ್ದಾನೆ ಅಶೋಕ. ಖಂಡಿತ ಮಗ ಎಂದಿದ್ದಾನೆ ರಾಮ.

ಮದುವೆ ನಿಂತು, ಸೀತಾ ಮತ್ತು ರಾಮ ನಿರಾಳರಾಗಿದ್ದಾರೆ. ಇತ್ತ ಇರೋ ಸತ್ಯ ಹೇಳುವುದಾಗಿ ರಾಮ ಹೇಳಿಕೊಂಡಿದ್ದಾನೆ. ಸೀತಾಗೆ ತನ್ನ ಹುಡುಗಿಯನ್ನೂ ಪರಿಚಯಿಸುವುದಾಗಿಯೂ ಮಾತು ಕೊಟ್ಟಿದ್ದಾನೆ. ಇದೆಲ್ಲವನ್ನು ನೆರವೇರಿಸುತ್ತಾನಾ ರಾಮ? ಕಾದು ನೋಡಬೇಕು.

Whats_app_banner