ಕನ್ನಡ ಸುದ್ದಿ  /  ಮನರಂಜನೆ  /  Seetha Rama Serial: ಅಶೋಕನ ಮೇಲೆ ಮಾರಣಾಂತಿಕ ಹಲ್ಲೆ, ಇದು ಭಾರ್ಗವಿ ಸಂಚೋ, ರುದ್ರಪ್ರತಾಪನ ಕೈವಾಡವೋ?

Seetha Rama Serial: ಅಶೋಕನ ಮೇಲೆ ಮಾರಣಾಂತಿಕ ಹಲ್ಲೆ, ಇದು ಭಾರ್ಗವಿ ಸಂಚೋ, ರುದ್ರಪ್ರತಾಪನ ಕೈವಾಡವೋ?

ಸೀತಾ ರಾಮನ ಮದುವೆಗೆ ತಯಾರಿ ಶುರುವಾಗಿದೆ. ಹೆಣ್ಣು ಕೇಳುವ ಸಲುವಾಗಿ ದೇಸಾಯಿ ಕುಟುಂಬ ಶಾಂತಮ್ಮನ ವಠಾರಕ್ಕೆ ಬಂದಿದೆ. ತಾಂಬೂಲವೂ ಬದಲಾಗಿದೆ. ಈ ನಡುವೆ ಅಶೋಕನ ಜೀವಕ್ಕೆ ಸಂಚಕಾರ ಬಂದೊದಗಿದೆ. ಯಾರೋ ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಈ ಸಂಚಿನ ಹಿಂದಿರುವ ಕೈಗಳು ಯಾರದ್ದು?

Seetha Rama Serial: ಅಶೋಕನ ಮೇಲೆ ಮಾರಣಾಂತಿಕ ಹಲ್ಲೆ, ಇದು ಭಾರ್ಗವಿ ಸಂಚೋ, ರುದ್ರಪ್ರತಾಪನ ಕೈವಾಡವೋ?
Seetha Rama Serial: ಅಶೋಕನ ಮೇಲೆ ಮಾರಣಾಂತಿಕ ಹಲ್ಲೆ, ಇದು ಭಾರ್ಗವಿ ಸಂಚೋ, ರುದ್ರಪ್ರತಾಪನ ಕೈವಾಡವೋ?

Seetha Rama Serial: ಶಾಂತಮ್ಮನ ವಠಾರದ ಸೀತಾಳ ಮನೆಗೆ ದೇಸಾಯಿ ಕುಟುಂಬ ಎಲ್ಲರ ಆಗಮನವಾಗಿದೆ. ಶಾಸ್ತ್ರೋಕ್ತವಾಗಿ ಹೆಣ್ಣು ಕೇಳಲು ಸೂರ್ಯಪ್ರಕಾಶ್‌ ಸಹ ಖುಷಿಯಲ್ಲಿಯೇ ಆಗಮಿಸಿದ್ದಾನೆ. ಶ್ರೀರಾಮ, ಭಾರ್ಗವಿ, ವಿಶ್ವ, ಸಾಧನಾ ಸಹ ಸೀತಾಳ ಮನೆಯಲ್ಲಿದ್ದಾರೆ. ಇಡೀ ಮನೆಯ ಉಸ್ತುವಾರಿ ಹೊತ್ತಂತೆ, ಸಿಹಿ ಪುಟಾಣಿ ಓಡಾಡಿ ಎಲ್ಲ ಕೆಲಸವನ್ನೂ ಮಾಡುತ್ತಿದ್ದಾಳೆ. ತಾಂಬೂಲ ಬದಲಾಯಿಸಿಕೊಳ್ಳುವುದಕ್ಕೂ ಮುಂದಾಗಿದ್ದಾಳೆ.

ಟ್ರೆಂಡಿಂಗ್​ ಸುದ್ದಿ

ಈಗಾಗಲೇ ಸೀತಾ ಮತ್ತು ರಾಮನ ಮದುವೆ ವಿಚಾರದಲ್ಲಿ ಉರಿದುಕೊಳ್ಳುತ್ತಿರುವ ಭಾರ್ಗವಿ ಮಾತ್ರ ಶಾಂತವಾಗಿ ಉಳಿದಿಲ್ಲ. ಒಳಗೊಳಗೆ ಕುದಿಯುತ್ತಿದ್ದಾಳೆ. ದೇಸಾಯಿ ಕುಟುಂಬದ ಮೊಮ್ಮಗನಿಗೆ ವಠಾರದ ಹುಡುಗಿಯನ್ನು ಮನೆಗೆ ಸೊಸೆಯಾಗಿಸಿಕೊಳ್ಳುವ ಕರ್ಮ ಎಂದು ಸಾಧನಾ ಬಳಿ ಗೊಣಗಿದ್ದಾಳೆ. ಇತ್ತ ಮನೆ ಪ್ರವೇಶಿಸಿ, ಸೀತಾಳನ್ನೂ ಎಲ್ಲರೂ ಕಣ್ತುಂಬಿಕೊಂಡಿದ್ದಾರೆ. ಭಾರ್ಗವಿ ಸೀರೆ ತಂದು, ಇದ್ದನ್ನು ಉಟ್ಕೊಂಡು ಬಾ ಸೀತಾ ಎಂದಿದ್ದಾಳೆ.

ಈಗ ಉಟ್ಟುಕೊಂಡಿರುವ ಸೀರೆ ರಾಮ್‌ ಕೊಡಿಸಿದ್ದು ಎಂದಿದ್ದಾಳೆ. ಆಗ ಎಲ್ಲರೂ ರಾಮ್‌ ಸೆಲೆಕ್ಷನ್‌ ಬಗ್ಗೆ ಭೇಷ್‌ ಎಂದಿದ್ದಾರೆ. ಹೀಗೆ ಒಂದಷ್ಟು ಮಾತುಕತೆ ಮುಂದುವರಿದಿದೆ. ನಾನು ಸೀತಾ ಜತೆ ಪರ್ಸನಲ್‌ ಆಗಿ ಮಾತನಾಡಬೇಕು ಎಂದಿದ್ದಾನೆ ರಾಮ. ನಾನೂ ಮಾತನಾಡಬೇಕು ಎಂದಿದ್ದಾಳೆ ಸೀತಾ. ಇಬ್ಬರೂ ಅಡುಗೆ ಕೋಣೆ ಸೇರಿದ್ದಾರೆ. ಸೀತಾಳ ಕೈ ಹಿಡಿದು ನಿಮಗೆ ಈ ಮದುವೆ ಒಪ್ಪಿಗೆ ಇದೆಯಾ? ಎಂದು ಪ್ರಶ್ನೆ ಮಾಡಿದ್ದಾನೆ.

ಹಳೆಯ ಕಥೆ ಕೆದಕುವುದು ಬೇಡ

ಅಂದರೆ, ನನ್ನ ಬಗ್ಗೆ ನಿಮಗೆ ಯಾವುದೇ ಗೊಂದಲ ಇಲ್ಲವಲ್ಲ ಎಂದಿದ್ದಾನೆ. ನೀವ್ಯಾಕೆ ಈ ರೀತಿ ಕೇಳುತ್ತಿದ್ದೀರಿ ಎಂದಿದ್ದಾಳೆ ಸೀತಾ. ನೀವು ತುಂಬ ಒಳ್ಳೆಯವರು, ಯಾವುದೇ ಸಂಕೋಚಪಡದೇ ನನ್ನ ಜೊತೆ ಮಾತನಾಡಿ. ನೀವು ಎಷ್ಟೇ ಖುಷಿಯಿಂದ ಮಾತನಾಡಿದ್ರೂ, ನಿಮ್ಮ ಕಣ್ಣಲ್ಲಿ ಏನೋ ಒಂದು ಸಣ್ಣ ಚಿಂತೆ ಕಾಣ್ತಾನೇ ಇರುತ್ತೆ ಎಂದಿದ್ದಾನೆ. ಇದಕ್ಕೆ ಪ್ರತ್ಯುತ್ತರವಾಗಿ ರಾಮ್‌ ನಿಮಗೆ ಸಿಹಿ ಹುಟ್ಟಿನ ಬಗ್ಗೆ ತಿಳಿದುಕೊಳ್ಳಬೇಕು ಅನಿಸ್ತಿಲ್ವಾ? ಎಂದಿದ್ದಾಳೆ.

ನನ್ನ ಹಿಂದಿನ ಕಥೆ ಏನಿರಬಹುದು ಎಂಬುದನ್ನು ನೀವು ಇಲ್ಲಿಯವರೆಗೂ ಕೇಳಿಲ್ಲ ಎನ್ನುತ್ತಿದ್ದಂತೆ, ಇಬ್ಬರಿಗೂ ಒಂದೊಂದು ಕಥೆ ಇದೆ. ಅದರಿಂದ ಏನು ಪ್ರಯೋಜನ? ಹಳೆಯದನ್ನು ಕೆದಕುವುದರಿಂದ ಏನೂ ಆಗಲ್ಲ. ಹಾಗಾಗಿ ಅದನ್ನ ಕೈ ಬಿಟ್ಟು ಮುಂದೆ ಸಾಗುವುದೇ ಒಳಿತು, ನಿಮ್ಮ ಪಾಸ್ಟ್‌ ಬಗ್ಗೆ ತಿಳಿದುಕೊಳ್ಳುವ ಕುತೂಹಲ ನನಗಿಲ್ಲ ಸೀತಾ ಎನ್ನುತ್ತಿದ್ದಂತೆ, ಬಾಗಿಲ ಬಳಿ ಸಾಧನಾ ಚಿಕ್ಕಿ ಬಂದು ಇವರಿಬ್ಬರ ಮಾತು ಕೇಳಿಸಿಕೊಂಡಿದ್ದಾಳೆ.

ಅಂಜಲಿ ಜತೆ ರುದ್ರಪ್ರತಾಪನ ಫ್ಲರ್ಟ್‌

ಇತ್ತ ಮತ್ತೊಂದು ಬದಿಯಲ್ಲಿ ಚಾಂದಿನಿಯನ್ನು ಪತ್ತೆ ಮಾಡಲು ಅಶೋಕ ಪಣತೊಟ್ಟಿದ್ದಾನೆ. ಆಕೆಯ ಉದ್ದೇಶ ಏನು, ಆಕೆಯ ಹಿಂದಿರುವವರು ಯಾರು ಅಲ್ಲಿಯವರೆಗೂ ನನಗೆ ಸಮಾಧಾನವಿಲ್ಲ ಎಂದು ಪತ್ನಿ ಪ್ರಿಯಾ ಮುಂದೆ ಹೇಳುತ್ತಿದ್ದಾನೆ. ನಾನು ಮಲೇಷ್ಯಾಕ್ಕೆ ಹೋಗ್ತಿದ್ದೇನೆ ಎಂದು ರಾಮ್‌ಗೆ ಗೊತ್ತಾಗುವಂತೆ ತಿಳಿಸು ಎಂದಿದ್ದಾನೆ. ಇನ್ನೊಂದು ಕಡೆ ರುದ್ರಪ್ರತಾಪನ ಕುತಂತ್ರ ಮುಂದುವರಿದಿದೆ. ಅಶೋಕನ ತಂಗಿ ಜತೆಗೆ ಫ್ಲರ್ಟ್‌ ಮುಂದುವರಿಸಿದ್ದಾನೆ.

ಅಶೋಕನ ಮೇಲೆ ಹಲ್ಲೆ

ಚರಣ್‌ ಮನೆಯಲ್ಲಿಯೇ ರುದ್ರಪ್ರತಾಪ್‌ ವಾಸ್ತವ್ಯ ಹೂಡಿರುವುದರಿಂದ ಆತನ ಎಲ್ಲ ವಿಚಾರಗಳನ್ನು ಚರಣ್‌ ತಿಳಿದುಕೊಳ್ಳುತ್ತಿದ್ದಾನೆ. ಅಶೋಕನನ್ನು ಭೇಟಿ ಮಾಡಿ ಅವನ ಮುಂದೆಯೂ ಹೇಳುತ್ತಿದ್ದಾನೆ. ಹೀಗೆ ಹೇಳಿ ಇನ್ನೇನು ಅಶೋಕ ಕಾರ್‌ ಏರಬೇಕು ಎನ್ನುವಷ್ಟರಲ್ಲಿ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಯಾರೋ ಅಪರಿಚಿತ ವಬ್ಯಕ್ತಿಯೊಬ್ಬ ಅಶೋಕನ ತಲೆಗೆ ದೊಣ್ಣೆಯಿಂದ ಹೊಡೆದು ಪರಾರಿಯಾಗಿದ್ದಾನೆ. ಸ್ಥಳದಲ್ಲಿಯೇ ನೆಲಕ್ಕಚ್ಚಿದ ಅಶೋಕ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಹಾಗಾದರೆ ಇದು ಭಾರ್ಗವಿ ಕೆಲಸವೋ, ರುದ್ರಪ್ರತಾಪನ ಕೈವಾಡವೋ ಎಂಬ ಬಗ್ಗೆ ಮುಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.

ಟಿ20 ವರ್ಲ್ಡ್‌ಕಪ್ 2024