ಕನ್ನಡ ಸುದ್ದಿ  /  ಮನರಂಜನೆ  /  Seetha Rama Serial: ಹೇಳಿಕೇಳಿ ದೇಸಾಯಿ ಕುಟುಂಬ ಅಲ್ಲವೇ, ಉತ್ತರ ಕರ್ನಾಟಕ ಶೈಲಿಯ ಉಡುಗೆಯಲ್ಲಿಯೇ ನಡೀತು ಸೀತಾ ರಾಮ ಕಲ್ಯಾಣ!

Seetha Rama Serial: ಹೇಳಿಕೇಳಿ ದೇಸಾಯಿ ಕುಟುಂಬ ಅಲ್ಲವೇ, ಉತ್ತರ ಕರ್ನಾಟಕ ಶೈಲಿಯ ಉಡುಗೆಯಲ್ಲಿಯೇ ನಡೀತು ಸೀತಾ ರಾಮ ಕಲ್ಯಾಣ!

ಜೀ ಕನ್ನಡದಲ್ಲೀಗ ಮದುವೆ ಸೀಸನ್!‌ ಅಂದರೆ, ಸೀತಾ ರಾಮ ಸೀರಿಯಲ್‌ನಲ್ಲಿ ಜವಾರಿ ಶೈಲಿಯಲ್ಲಿ ಸೀತಾ ರಾಮರ ಕಲ್ಯಾಣ ಒಂದು ಕಡೆ ನಡೆಯುತ್ತಿದ್ದರೆ, ಇನ್ನೊಂದು ಕಡೆಗೆ ಬ್ರಹ್ಮಗಂಟು ಧಾರಾವಾಹಿಯಲ್ಲಿನ ಚಿರಾಗ್‌ -ದೀಪಾ ಜೋಡಿಯ ಮದುವೆಯೂ ನಡೆಯುತ್ತಿದೆ.

Seetha Rama Serial: ಹೇಳಿಕೇಳಿ ದೇಸಾಯಿ ಕುಟುಂಬ ಅಲ್ಲವೇ, ಉತ್ತರ ಕರ್ನಾಟಕ ಶೈಲಿಯ ಉಡುಗೆಯಲ್ಲಿಯೇ ನಡೀತು ಸೀತಾ ರಾಮ ಕಲ್ಯಾಣ!
Seetha Rama Serial: ಹೇಳಿಕೇಳಿ ದೇಸಾಯಿ ಕುಟುಂಬ ಅಲ್ಲವೇ, ಉತ್ತರ ಕರ್ನಾಟಕ ಶೈಲಿಯ ಉಡುಗೆಯಲ್ಲಿಯೇ ನಡೀತು ಸೀತಾ ರಾಮ ಕಲ್ಯಾಣ!

Seetha Rama Serial: ಸೀತಾ ರಾಮ ಧಾರಾವಾಹಿಯಲ್ಲೀಗ ಮದುವೆ ಸಂಭ್ರಮ. ಬಯಸಿದಂತೆ ಸೀತೆಯನ್ನು ಕೈ ಹಿಡಿಯುತ್ತಿದ್ದಾನೆ ರಾಮ. ಸಂಭ್ರಮದಲ್ಲಿ ಈ ಜೋಡಿಯ ಮದುವೆ ತಯಾರಿಯೂ ನಡೆಯುತ್ತಿದೆ. ಇನ್ನೊಂದು ಬದಿಯಲ್ಲಿ ರಾತ್ರಿ 10ಗಂಟೆಗೆ ಪ್ರಸಾರ ಕಾಣುತ್ತಿರುವ ಹೊಸ ಸೀರಿಯಲ್‌ ಬ್ರಹ್ಮಗಂಟುವಿನಲ್ಲೂ ಮದುವೆ ಸಡಗರ. ಈ ಎರಡೂ ಮದುವೆಯನ್ನು ಅಷ್ಟೇ ಜೋರಾಗಿಯೇ ಮಾಡುತ್ತಿದೆ ಜೀ ಕನ್ನಡ ವಾಹಿನಿ. ಈ ಜೋಡಿ ಮದುವೆಯ ಪ್ರೋಮೋ ಸಹ ಬಿಡುಗಡೆ ಆಗಿದ್ದು, ನೋಡುಗರಿಂದ ಮೆಚ್ಚುಗೆ ಸಹ ಪಡೆದುಕೊಂಡಿದೆ.

ಸೀತಾ ರಾಮ ಧಾರಾವಾಹಿಯಲ್ಲಿ ಮದುವೆ ಪೂರ್ವ ಶಾಸ್ತ್ರಗಳು ಆರಂಭವಾಗಿವೆ. ನವ ಜೋಡಿಗೆ ಅರಿಶಿಣ ಹಚ್ಚುವ ಶಾಸ್ತ್ರ, ಮೆಹಂದಿ ಹಚ್ಚುವ ಶಾಸ್ತ್ರ ನಡೆದಿವೆ. ಅದರಂತೆ, ಇಡೀ ಮನೆ ಮಂದಿಯ ಮುಖದಲ್ಲಿ ಮದುವೆ ಕಳೆ ಮೂಡಿದೆ. ಆದರೆ, ಒಬ್ಬರನ್ನು ಬಿಟ್ಟು. ಅದು ಶ್ರೀರಾಮನ ಚಿಕ್ಕಮ್ಮ ಭಾರ್ಗವಿ! ಈ ಮೊದಲೆಲ್ಲ ಈ ಸೀತಾ ರಾಮನ ಮದುವೆ ಮಾಡಿಸಲೇಬಾರದೆಂದು ನಿರ್ಧರಿಸಿದ್ದ ಭಾರ್ಗವಿ ಅದಾದ ಬಳಿಕ ಆಸ್ತಿ ವಿಚಾರಕ್ಕೆ ಆಕೆಗಿಂದ ಗೊಂದಲವನ್ನು ನಿವಾರಿಸಿಕೊಳ್ಳಲು ಈ ಮದುವೆ ಒಪ್ಪಿಗೆ ಸೂಚಿಸಿ ಮುಂದುವರಿದಿದ್ದಾಳೆ.

ಟ್ರೆಂಡಿಂಗ್​ ಸುದ್ದಿ

ಇನ್ನೊಂದು ಕಡೆ, ಮದುವೆ ನಡುವೆಯೇ ಲಾಯರ್‌ ರುದ್ರಪ್ರತಾಪ್‌ನ ಅಸಲಿ ಮುಖ ರಾಮ್‌ ಮತ್ತು ಅಶೋಕನ ಮುಂದೆ ಬಯಲಾಗಿದೆ. ಇಬ್ಬರೂ ರುದ್ರಪ್ರತಾಪ್‌ಗೆ ಬಿಸಿ ಮುಟ್ಟಿಸಿ, ಒದೆ ಕೊಟ್ಟಿದ್ದಾರೆ. ಈ ವಿಷಯ ಭಾರ್ಗವಿ ಚಿಕ್ಕಿಯ ಗಮನಕ್ಕೂ ತಂದಿದ್ದಾನೆ. ಆದಷ್ಟು ಬೇಗ ಅವನಿಗೆ ಜಾಮೀನು ಕೊಟ್ಟು ಬಿಡಿಸಿದವರು ಯಾರು ಎಂದು ಪತ್ತೆ ಹಚ್ಚೇ ಹಚ್ತೀನಿ ಎಂದಿದ್ದಾನೆ. ಅದು ಅಸಾಧ್ಯವಾಗದ ಕೆಲಸ ಎಂದು ಭಾರ್ಗವಿ ಒಳಗೊಳಗೆ ಬೀಗಿದ್ದಾಳೆ. ರಾಮ್‌ ಜತೆ ಅಶೋಕನೂ ಸಾಥ್‌ ನೀಡಿದ್ದಾನೆ. ಇದೆಲ್ಲದರ ನಡುವೆ ಮದುವೆ ಶಾಸ್ತ್ರಗಳೂ ನಡೆಯುತ್ತಿವೆ.

ದೇಸಿ ಲುಕ್‌ನಲ್ಲಿ ನವ ಜೋಡಿ

ಸೀತಾ ರಾಮ ಸೀರಿಯಲ್‌ನ ಮದುವೆಯ ಕಿರು ಪ್ರೋಮೋವನ್ನು ಜೀ ಕನ್ನಡ ತನ್ನ ಅಧಿಕೃತ ಸೋಷಿಯಲ್‌ ಮೀಡಿಯಾ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದೆ. ಉತ್ತರ ಕರ್ನಾಟಕ ಶೈಲಿಯ ಸೊಗಡಿನಲ್ಲಿ ಸೀತಾ ರಾಮರ ಕಲ್ಯಾಣ ನಡೆದಿದೆ. ಹೇಳಿಕೇಳಿ ದೇಸಾಯಿ ಕುಟುಂಬ ಅಲ್ಲವೇ, ಹಾಗಾಗಿ ತಲೆಗೆ ಪೇಟ, ಪಂಚೆ, ರೇಷ್ಮೆ ದಿರಿಸಿನಲ್ಲಿ ಶ್ರೀರಾಮ ಎದುರಾದರೆ, ಸೀತಾ ಸಹ ದೇವತೆಯಂತೆ ಕಂಡಿದ್ದಾಳೆ. ಮೂಗಿಗೆ ಮೂಗುತಿ, ಕಚ್ಚೆ ಸೀರೆಯಲ್ಲಿಯೇ ಥೇಟ್‌ ಸೀತಾ ದೇವಿಯಂತೆ ಮಿನುಗಿದ್ದಾಳೆ ಸೀತಾ.

ದೇಸಿ ಲುಕ್‌ನಲ್ಲಿ ಸೀತಾ ರಾಮ ಜೋಡಿ
ದೇಸಿ ಲುಕ್‌ನಲ್ಲಿ ಸೀತಾ ರಾಮ ಜೋಡಿ

ಬ್ರಹ್ಮಗಂಟು ಸೀರಿಯಲ್‌ನಲ್ಲೂ ಕಲ್ಯಾಣ

ಇತ್ತೀಚೆಗಷ್ಟೇ ಶುರುವಾದ ಬ್ರಹ್ಮಗಂಟು ಧಾರಾವಾಹಿಯಲ್ಲಿ ರೋಚಕ ಟ್ವಿಸ್ಟ್‌ ಎದುರಾಗಿದೆ. ಚಿರಾಗ್‌ ಮತ್ತು ರೂಪಾ ಜೋಡಿಯ ಮದುವೆ ನಡೆಯಬೇಕಿದ್ದ ಮಂಟಪದಲ್ಲಿ ಚಿರಾಗ್‌ ಜತೆ ಹಸೆ ಮಣೆ ಏರಿದ್ದಾಳೆ ದೀಪಾ. ಅರವಿಂದನ ಜತೆಗೆ ರೂಪಾ ಓಡಿ ಹೋಗುತ್ತಿದ್ದಂತೆ, ಮಾನಕ್ಕೆ ಅಂಜಿ ದೀಪಾ ಜತೆಗೆ ಚಿರಾಗ್‌ ಮದುವೆ ನಡೆದಿದೆ. ಚಿರಾಗ್‌ಗೆ ರೂಪವತಿಯನ್ನೇ ತನ್ನ ಮನೆ ಸೊಸೆಯಾಗಿ ತರಬೇಕು ಎಂಬ ಆಸೆ ಸೌಂದರ್ಯಳದ್ದು. ಆದರೆ, ಇದೀಗ ಅದು ನುಚ್ಚುನೂರಾಗಿದೆ. ದೀಪಾ ಗಂಡನ ಮನೆ ಪ್ರವೇಶಿಸುತ್ತಾಳಾ? ಮುಂದೆ ಏನಾಗಬಹುದು ಎಂಬ ಕುತೂಹಲ ಮೂಡಿಸಿದೆ.

ಸೀತಾ ರಾಮ ಧಾರಾವಾಹಿ ಪಾತ್ರವರ್ಗ

ನಿರ್ದೇಶಕ: ಮಧುಸೂಧನ್‌

ಗಗನ್‌ ಶ್ರೀನಿವಾಸ್: ಶ್ರೀರಾಮ (ನಾಯಕ)

ವೈಷ್ಣವಿ ಗೌಡ: ಸೀತಾ (ನಾಯಕ)

ರೀತು ಸಿಂಗ್: ಸಿಹಿ (ಸೀತಾ ಮಗಳು)

ಅಶೋಕ ಶರ್ಮಾ: ಅಶೋಕ (ಶ್ರೀರಾಮನ ಪ್ರಾಣ ಸ್ನೇಹಿತ)

ಭಾರ್ಗವಿ: ಪೂಜಾ ಲೋಕೇಶ್‌ (ಶ್ರೀರಾಮನ ಚಿಕ್ಕಮ್ಮ)

ಮುಖ್ಯಮಂತ್ರಿ ಚಂದ್ರು: ಸೂರ್ಯ ಪ್ರಕಾಶ್‌ ದೇಸಾಯಿ (ಶ್ರೀರಾಮನ ತಾತ)

ಶ್ವೇತಾ ಶಂಕರಪ್ಪ: ಪ್ರಿಯಾ (ಸೀತಾಳ ಸ್ನೇಹಿತೆ)

ವಿಕಾಸ್‌ ಕಾರ್‌ಗೋಡ್:‌ ಲಾಯರ್‌ ರುದ್ರಪ್ರತಾಪ್

ಸತೀಶ್‌ ಚಂದ್ರ: ಚರಣ್‌. ಡಿ

ಪೂರ್ಣಚಂದ್ರ ತೇಜಸ್ವಿ: ವಿಶ್ವಜೀತ್‌ (ಶ್ರೀರಾಮನ ಚಿಕ್ಕಪ್ಪ)

ಜಯದೇವ್‌ ಮೋಹನ್:‌ ಸತ್ಯಜೀತ್‌ (ಶ್ರೀರಾಮನ ಚಿಕ್ಕಪ್ಪ)