ಕನ್ನಡ ಸುದ್ದಿ  /  ಮನರಂಜನೆ  /  Seetha Rama Serial: ಚಿಕಿತ್ಸೆಯಲ್ಲಿರೋ ಶ್ರೀರಾಮನ ನೆನಪಿನ ಶಕ್ತಿ ನಾಶ? ಸೀತಾ ರಾಮ ಸೀರಿಯಲ್‌ನಲ್ಲಿ ಊಹೆಗೂ ನಿಲುಕದ ಟ್ವಿಸ್ಟ್‌!

Seetha Rama Serial: ಚಿಕಿತ್ಸೆಯಲ್ಲಿರೋ ಶ್ರೀರಾಮನ ನೆನಪಿನ ಶಕ್ತಿ ನಾಶ? ಸೀತಾ ರಾಮ ಸೀರಿಯಲ್‌ನಲ್ಲಿ ಊಹೆಗೂ ನಿಲುಕದ ಟ್ವಿಸ್ಟ್‌!

ಸೀತಾ ರಾಮ ಸೀರಿಯಲ್‌ನಲ್ಲಿ ರೋಚಕ ಟ್ವಿಸ್ಟ್‌ಗಳು ಎದುರಾಗುತ್ತಿವೆ. ಈಗಾಗಲೇ ಆಸ್ಪತ್ರೆ ಬೆಡ್‌ ಮೇಲೆ ತಲೆಗೆ ತೀವ್ರ ಗಾಯಗಳಾದ ಹಿನ್ನೆಲೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ ರಾಮ. ಹೀಗಿರುವಾಗಲೇ ರಾಮ್‌ಗೆ ರಕ್ತ ನೀಡಿ ಜೀವ ಉಳಿಸಿದ್ದಾಳೆ ಸೀತಾ. ಮತ್ತೊಂದು ಮಗ್ಗುಲಲ್ಲಿ, ರಾಮನ ಮಾಜಿ ಪ್ರೇಯಸಿಯ ಎಂಟ್ರಿ, ಅಶೋಕ ತಲೆ ಕೆಡಿಸಿದೆ.

Seetha Rama Serial: ಚಿಕಿತ್ಸೆಯಲ್ಲಿರೋ ಶ್ರೀರಾಮನ ನೆನಪಿನ ಶಕ್ತಿ ನಾಶವಾಗುತ್ತಾ? ಸೀತಾ ರಾಮ ಸೀರಿಯಲ್‌ನಲ್ಲಿ ಊಹೆಗೂ ನಿಲುಕದ ಟ್ವಿಸ್ಟ್‌!
Seetha Rama Serial: ಚಿಕಿತ್ಸೆಯಲ್ಲಿರೋ ಶ್ರೀರಾಮನ ನೆನಪಿನ ಶಕ್ತಿ ನಾಶವಾಗುತ್ತಾ? ಸೀತಾ ರಾಮ ಸೀರಿಯಲ್‌ನಲ್ಲಿ ಊಹೆಗೂ ನಿಲುಕದ ಟ್ವಿಸ್ಟ್‌!

Seetha Rama Serial: ಸೀತಾ ರಾಮ ಸೀರಿಯಲ್‌ನಲ್ಲಿ ಹೊಸ ಹೊಸ ರೋಚಕ ಸಂಗತಿಗಳು ನೋಡುಗರನ್ನು ಅಚ್ಚರಿಗೀಡು ಮಾಡುತ್ತಿದೆ. ಕುತೂಹಲದ ಜತೆಗೆ ದಿನೇ ದಿನೇ ಸೀತಾ ರಾಮ ಧಾರಾವಾಹಿ ಮೇಲಿನ ಸೆಳೆತವೂ ಹೆಚ್ಚಾಗುತ್ತಿದೆ. ಈಗಾಗಲೇ ಸೀತಾಗೆ ಪ್ರಪೋಸ್‌ ಮಾಡಿದ ಪ್ರೋಮೋ ನೋಡಿದ ವೀಕ್ಷಕ, ಭವಿಷ್ಯದ ಏಪಿಸೋಡ್‌ಗಳು ಹೇಗಿರಬಹುದು ಎಂದೆಲ್ಲ ಊಹಿಸುತ್ತಿದ್ದಾನೆ. ಅದು ಕನಸೂ ಆಗಿರಬಹುದಲ್ಲ ಎಂದೂ ಮರು ಪ್ರಶ್ನೆ ಮಾಡಿಕೊಳ್ಳುತ್ತಿದ್ದಾನೆ. ಈ ನಡುವೆ ಶ್ರೀರಾಮ್‌ಗೆ ಅಪಘಾತವಾಗಿ ಕಥೆ ಬೇರೆ ದಾರಿಯತ್ತ ಸಾಗುತ್ತಿದೆ. ರಾಮನ ಜ್ಞಾಪಕ ಶಕ್ತಿ ಹಾರಿ ಹೋಗುವ ಸಾಧ್ಯತೆಯೂ ಇದೆ.

ರಾಮ ಆಸ್ಪತ್ರೆಯ ಬೆಡ್‌ ಮೇಲೆ ಅರೆ ಪ್ರಜ್ಞಾವಸ್ಥೆಯಲ್ಲಿ ಮಲಗಿದ್ದಾನೆ. ಹೊರ ಜಗತ್ತಿನಲ್ಲಿ ಏನಾಗ್ತಿದೆ ಎಂಬ ಸುಳಿವೂ ಆತನಿಗಿಲ್ಲ. ಭಾರ್ಗವಿ ಆತನ ಸಾವು ಬಯಸುತ್ತಿದ್ದರೆ, ಅಶೋಕ ಆತನ ಉಳಿಸಲು ಹರಸಾಹಸ ಪಡುತ್ತಿದ್ದಾನೆ. ಮತ್ತೊಂದೆಡೆ ರಾಮ್‌ ಉಳಿವಿಗಾಗಿ ಸೀತಾ ತನ್ನ ರಕ್ತವನ್ನೇ ನೀಡಿದ್ದಾಳೆ. ಈ ನಡುವೆಯೇ ಕೈಯಲ್ಲಿ ಹೂಗುಚ್ಛ ಹಿಡಿದು ರಾಮನ ಮಾಜಿ ಪ್ರೇಯಸಿಯ ಎಂಟ್ರಿಯೂ ಆಗಿದೆ. ಆಕೆಯನ್ನು ಕಂಡ ಅಶೋಕ ಕೆಂಡಕಾರಿದ್ದಾನೆ. ನೀನು ಅವನನ್ನು ನೋಡುವಂತಿಲ್ಲ ಎಂದಿದ್ದಾನೆ.

ಟ್ರೆಂಡಿಂಗ್​ ಸುದ್ದಿ

ಭಾರ್ಗವಿ ಬಳಿ ಬಂದು, ಚಿಕ್ಕಿ ನಾನು ರಾಮ್‌ನ ಒಂದೇ ಒಂದು ಸಲ ನೋಡ್ತಿನಿ ಎಂದಿದ್ದಾಳೆ. ಅಲ್ಲೇ ಪಕ್ಕದಲ್ಲಿ ಇದ್ದ ಅಶೋಕ ನೋ ಅದು ಸಾಧ್ಯವಿಲ್ಲ ಎಂದು ಜೋರಾಗಿ ಕೂಗಿದ್ದಾನೆ. ಭಾರ್ಗವಿ ಚಿಕ್ಕಿಯ ಅನುಮತಿ ಪಡೆದು ಒಳ ಪ್ರವೇಶಿಸಿದ್ದಾಳೆ ಚಾಂದಿನಿ. ರಾಮನ ಬಳಿ ಬಂದು ನೀನು ನನಗೋಸ್ಕರ ಕಾಯುತಿದ್ಯಾ ರಾಮ್? ಇನ್ಮೇಲೆ ನಿನ್ನನ್ನು ಬಿಟ್ಟು ನಾನು ಎಲ್ಲಿಗೂ ಹೋಗಲ್ಲ ರಾಮ್‌ ಎಂದಿದ್ದಾಳೆ. ಅಷ್ಟೊತ್ತಿಗೆ ಅಶೋಕನ ಎಂಟ್ರಿಯಾಗಿದೆ. ಅವನನ್ನು ಡಿಸ್ಟರ್ಬ್‌ ಮಾಡಬೇಡಿ ಎಂದು ಆಕೆಯನ್ನು ಆಚೆ ಕಳಿಸಿದ್ದಾನೆ.

ಈ ನಡುವೆ ರಾಮನನ್ನು ನೋಡಲು ಬಂದಿದ್ದ ಸೀತಾಗೆ ಭಾರ್ಗವಿ ಅವಮಾನ ಮಾಡಿ ಕಳಿಸಿದ್ದಳು. ಇದೀಗ ಇದೇ ಅಶೋಕ ಸೀತಾಳನ್ನು ಮತ್ತೆ ಕರೆಸಿಕೊಳ್ಳುವ ಪ್ಲಾನ್‌ ಮಾಡಿದ್ದಾನೆ. ತಾತ ಸೂರ್ಯಪ್ರಕಾಶ್‌ ದೇಸಾಯಿ ಅವರೇ ನಿಮ್ಮನ್ನು ಕರೆಸಿಕೊಳ್ಳುತ್ತಿದ್ದಾರೆ. ಅವರೇ ನಿಮ್ಮ ಜತೆ ಅರ್ಜೆಂಟಾಗಿ ಮಾತನಾಡಬೇಕಂತೆ. ಅವರ ಮನೆಗೆ ಹೋಗುವುದು ನಿಮಗೆ ಓಕೆ ಅನಿಸಿದರೆ, ಗಾಡಿ ಕಳಿಸ್ತಿನಿ ಎಂದಿದ್ದಾನೆ ಅಶೋಕ. ಅದಕ್ಕೆ ಸೀತಾ ಸಹ ಓಕೆ ಎಂದಿದ್ದಾಳೆ. ಹೀಗೆ ಮಾತನಾಡಿದ್ದನ್ನು ಅಲ್ಲೇ ಇದ್ದ ಭಾರ್ಗವಿಯೂ ಕೇಳಿಸಿಕೊಂಡಿದ್ದಾಳೆ.

ಭಾರ್ಗವಿ ಮುಖ ನೋಡಲಾಗ್ತಿಲ್ಲ; ವೀಕ್ಷಕರ ಅನಿಸಿಕೆ

ಇನ್ನು ಸೀತಾ ರಾಮ ಸೀರಿಯಲ್‌ನಲ್ಲಿ ಭಾರ್ಗವಿಯನ್ನು ಕಂಡು ಸೀರಿಯಲ್‌ ವೀಕ್ಷಕರು ಕೆಂಡ ಕಾರುತ್ತಿದ್ದಾರೆ. ಈ ಬಾರ್ಗವಿ ಎಲ್ಲದಕ್ಕೂ ಅಡ್ಡಗಾಲು ಹಾಕ್ತಾಳೆ ಇರಿಟೇಷನ್. ಈ ಸೀರಿಯಲ್‌ನಲ್ಲಿ ಭಾರ್ಗವಿಯ ಹಾರಾಟಾನೇ ಜಾಸ್ತಿಯಾಗಿದೆ. ನಿಜವಾದ ರಾಮಾಯಣ ಕಥೆಯಲ್ಲಿಯೂ ರಾಮನಿಗೆ ಇಷ್ಟು ಕಷ್ಟ ಇರಲಿಲ್ಲ ಅನ್ಸುತ್ತೆ ಎಂದು ಭಾರ್ಗವಿ ಪಾತ್ರವನ್ನು ಕಂಡರೆ ಶಾಪ ಹಾಕುತ್ತಿದ್ದಾರೆ ವೀಕ್ಷಕರು.

ರಾಮ್‌ಗೆ ಮೆಮೋರಿ ಲಾಸ್!‌

ಸೀತಾ ರಾಮ ಸೀರಿಯಲ್‌ನಲ್ಲಿ ನೆಗೆಟಿವ್‌ ಅಂಶಗಳೇ ಹೆಚ್ಚಾಗಿ ಕಾಣುತ್ತಿದೆ ಎಂದು ವೀಕ್ಷಕರು ಕಾಮೆಂಟ್‌ ಮೂಲಕವೇ ಬೇಸರ ಹೊರಹಾಕುತ್ತಿದ್ದಾರೆ. ಸೀತಾ ರಾಮ ಮತ್ತು ಸಿಹಿ ಈ ಮೂವರ ಸಂತೋಷದ ಕ್ಷಣಗಳಿಗೆ ಮೊದಲ ಪ್ರಾಶಸ್ತ್ಯ ನೀಡಿ. ಅದನ್ನು ಬಿಟ್ಟು ನೆಗೆಟಿವಿಟಿಯನ್ನೇ ವೈಭವೀಕರಿಸಬೇಡಿ ಎಂದು ಕೆಲವರು ಕಾಮೆಂಟ್ ಹಾಕುತ್ತಿದ್ದಾರೆ. ಇದೆಲ್ಲದರ ನಡುವೆಯೇ ರಾಮ್‌ಗೆ ಜ್ಞಾಪಕ ಶಕ್ತಿ ನಾಶವಾಗುತ್ತದೆ, ಸೀತಾ, ಸಿಹಿಯನ್ನೇ ಮರೆತು ಬಿಡುತ್ತಾನೆ ಎಂಬ ಕಾಮೆಂಟ್‌ ಸಹ ಹರಿದುಬರುತ್ತಿವೆ. ಒಂದು ವೇಳೆ ಹೀಗಾದರೆ ನಾವು ಖಂಡಿತ ಈ ಸೀರಿಯಲ್‌ ನೋಡಲ್ಲ ಎಂದಿದ್ದಾರೆ. ಹಾಗಾದರೆ, ಈ ಟ್ವಿಸ್ಟ್‌ ಸಹ ಸೀರಿಯಲ್‌ನಲ್ಲಿ ಇರಬಹುದಾ? ಅದನ್ನು ಮುಂದಿನ ದಿನಗಳಲ್ಲೇ ನೋಡಬೇಕು.