Seetha Rama Serial: ಸಿಹಿ ಆಸೆ ತಣಿಸಿ, ಸೀತಾಳನ್ನು ಕಣ್ತುಂಬಿಕೊಂಡ ರಾಮ್; ಇತ್ತ ಅಂಜಲಿಗೂ ಗೊತ್ತಾಯ್ತು ಅಶೋಕ್- ಪ್ರಿಯಾ ಪ್ರೀತಿ ವಿಷ್ಯಾ
ಸೀತಾ ರಾಮ ಸೀರಿಯಲ್‌ನಲ್ಲೀಗ ಪ್ರೀತಿ ವಿಚಾರವೇ ಹೆಚ್ಚು ಮನಸೆಳೆಯುತ್ತಿದೆ. ಒಂದು ಕಡೆ ಸೀತಾ ರಾಮ, ಮತ್ತೊಂದು ಕಡೆ ಪ್ರಿಯಾ ಅಶೋಕ ಜೋಡಿ ಪ್ರೀತಿಯಲ್ಲಿ ಬಿದ್ದಿದೆ. ಈ ನಡುವೆ ಸಿಹಿಯ ಆಸೆ ಈಡೇರಿಸಲು ಡೆಲಿವರಿ ಬಾಯ್ ವೇಷದಲ್ಲಿ ಸೀತಾಳ ಮನೆಗೆ ಬಂದಿದ್ದಾನೆ ರಾಮ.
Seetha Rama Serial: ರಾಮ್ ಮತ್ತು ಅಶೋಕ್ ನಡುವೆ ಒಂದಷ್ಟು ತರಲೆ ಮಾತುಗಳು ನಡೆದಿವೆ. ಸೀತಾ ಬಂದಿದ್ರಾ? ಏನಾಯ್ತು ಹೋಗಿದ್ದ ಕೆಲಸ. ಹಣ್ಣಾ ಕಾಯಾ? ಎಂದು ಪ್ರಶ್ನಿಸಿದ್ದಾನೆ. ಅಶೋಕನ ಪ್ರಶ್ನೆಗೆ ಒಂದಷ್ಟು ವೋಳು ಬಿಟ್ಟಿದ್ದಾನೆ ರಾಮ. ನಮ್ಮ ನಡುವೆ ಏನೂ ಮಾತುಕತೆಯಾಗಿಲ್ಲ. ನೀವು ಬಾಸ್, ನಾನು ಎಂಪ್ಲಾಯಿ ಎಂದೆಲ್ಲ ಹೇಳಿಕೊಂಡ್ರು ಎಂದಿದ್ದಾರೆ ಎಂದು ಅಶೋಕನ ಮುಂದೆ ವರದಿ ಒಪ್ಪಿಸಿದ್ದಾನೆ ರಾಮ.
ಮತ್ತೊಂದು ಕಡೆ, ಅಶೋಕ ತನ್ನ ಹುಡುಗಿಯನ್ನ ತಂಗಿ ಅಂಜಲಿಗೆ ತೋರಿಸೋದಾಗಿ ಹೇಳಿದ್ದಾನೆ. ಅದೇ ಖುಷಿಯಲ್ಲಿ ಅಂಜಲಿ ಬೇಗ ಬೇಗನೇ ಎದ್ದು, ರೆಡಿಯಾಗಿ ಅಣ್ಣನ ಮನೆಕಡೆ ಹೊರಟಿದ್ದಾಳೆ. ಇತ್ತ ಅಂಜಲಿಯ ಮಾತು ಕೇಳಿ ಅಲ್ಲೇ ಮಲಗಿದ್ದ ಪ್ರಿಯಾ, ಸಾಕು ಮಾಡಮ್ಮ, ಬೆಳ್‌ಬೆಳಗ್ಗೆ ಏನಿದು? ಇವತ್ತು ಸಂಡೇ ಹಾಯಾಗಿ ಮಲಗೋಕೂ ಬಿಡಲ್ವಲ್ಲ ಎಂದಿದ್ದಾಳೆ.
ಅಂಜಲಿ ಹಿಂದೆ ಬಿದ್ದ ಲಾಯರ್
ಇತ್ತ ಲಾಯರ್ ರುದ್ರಪ್ರತಾಪ್, ಅಂಜಲಿ ಹಿಂದೆ ಬಿದ್ದಿದ್ದಾನೆ. ಯಾವುದೋ ನೆಪ ಮಾಡಿ ಅಂಜಲಿಯ ಅಡ್ರೆಸ್ ತಿಳಿದುಕೊಂಡಿದ್ದಾನೆ. ತನ್ನ ಕೆಲಸಕ್ಕೆ ದಾಳವಾಗಿ ಅಶೋಕನ ತಂಗಿಯನ್ನು ಬಳಸಿಕೊಳ್ಳುತ್ತಿದ್ದಾನೆ ಲಾಯರ್. ಆದರೆ, ಈತನ ಅಸಲಿಯತ್ತು ಮಾತ್ರ ಅಂಜಲಿಗೆ ಗೊತ್ತಾಗುತ್ತಿಲ್ಲ. ಆತನನ್ನು ಕುರುಡಾಗಿ ನಂಬಿ ಇರೋ ಸತ್ಯವನ್ನೆಲ್ಲ ಹೇಳಿಕೊಳ್ಳುತ್ತಿದ್ದಾಳೆ.
ಸಿಹಿಯ ಆಸೆ ಈಡೇರಿಸಿದ ರಾಮ್
ಇನ್ನೊಂದು ಕಡೆಗೆ ಸಿಹಿಗೆ ಪಿಜ್ಜಾ ತಿನ್ನೋ ಆಸೆಯಾಗಿದೆ. ಹೇಗಾದ್ರೂ ಮಾಡಿ, ಆರ್ಡರ್ ಮಾಡು ಎಂದು ಸೀತಮ್ಮನಿಗೆ ಹೇಳುತ್ತಿದ್ದಾಳೆ. ಆದರೆ, ಸೀತಾ ಮಾತ್ರ ಬೇಡ ಅಂತಿದ್ದಾಳೆ. ಹೀಗಿರುವಾಗಲೇ ರಾಮ್ ಫೋನ್ ಮಾಡಿದ್ದಾನೆ. ತಮ್ಮಿಬ್ಬರ ಪ್ರೀತಿ ವಿಷಯವನ್ನು ಸಿಹಿಗೆ ಹೇಳ್ಲಾ ಎನ್ನುತ್ತಿದ್ದಾನೆ. ಈಗಲೇ ಬೇಡ ಎಂದಿದ್ದಾಳೆ ಸೀತಾ. ಅಷ್ಟೊತ್ತಿಗೆ ಪಿಜ್ಜಾ ವಿಚಾರವನ್ನು ರಾಮನ ಮುಂದೆ ಹೇಳಿಕೊಂಡಿದ್ದಾಳೆ ಸಿಹಿ.
ಅಶೋಕನ ಹುಡುಗಿ ಯಾರೆಂದು ತಂಗಿಗೂ ಗೊತ್ತಾಯ್ತು
ಇತ್ತ ಅಂಜಲಿಯನ್ನು ಅವರ ಅಣ್ಣನ ಮನೆಗೆ ಡ್ರಾಪ್ ಮಾಡಿದ್ದಾಳೆ ಪ್ರಿಯಾ. ಈ ವೇಳೆ ಅಶೋಕ ಮತ್ತು ಪ್ರಿಯಾ ಇಬ್ಬರೂ ಲವರ್ಸ್ ಎಂಬ ವಿಚಾರ ಅಂಜಲಿಗೂ ಗೊತ್ತಾಗಿದೆ. ಅಶೋಕ ಮತ್ತು ಅಂಜಲಿ ಇಬ್ಬರೂ ಅಣ್ಣ ತಂಗಿ ಅನ್ನೋ ಸತ್ಯ ಪ್ರಿಯಾಗೂ ತಿಳಿದಿದೆ. ಇವರಿಬ್ಬರನ್ನೂ ಒಟ್ಟಿಗೆ ನೋಡಿದ ಅಶೋಕ ಕೊಂಚ ಶಾಕ್ ಆಗಿದ್ದಾನೆ. ಮೂವರೂ ಅಚ್ಚರಿಯಲ್ಲಿಯೇ ಒಬ್ಬರನ್ನೊಬ್ಬರು ನೋಡಿಕೊಂಡಿದ್ದಾರೆ.
ಮತ್ತೊಂದೆಡೆ ಶಾಂತಮ್ಮನ ವಠಾರಕ್ಕೆ ಅಚ್ಚರಿಯ ರೀತಿಯಲ್ಲಿ ಪಿಜ್ಜಾ ಹಿಡಿದುಕೊಂಡು ಡೆಲಿವರಿ ಬಾಯ್ ಆಗಮವಾಗಿದೆ. ನೇರವಾಗಿ ಸೀತಾಳ ಮನೆಗೆ ಬಂದು, ಸಿಹಿ ಕೈಯಲ್ಲಿ ಪಿಜ್ಜಾ ಕೊಟ್ಟು ಸರ್ಪ್ರೈಸ್ ಕೊಟ್ಟಿದ್ದಾನೆ ರಾಮ. ಸಿಹಿ ಮೊಗದಲ್ಲಿ ನಗು ಅರಳಿದರೆ, ಸೀತಾಳನ್ನು ನೋಡುವ ನೆಪದಲ್ಲಿ ರಾಮನ ಆಗಮನವೂ ಆಗಿದೆ. ಇತ್ತ ರಾಮನನ್ನು ನೋಡಿ ಸೀತಾಳ ಮೊಗದಲ್ಲೂ ಮಂದಹಾಸ ಮೂಡಿದೆ.