Seetha Rama Serial: ಸೀತಾ ಮುಚ್ಚಿಟ್ಟಿದ್ದ ಕಟು ಸತ್ಯ ಸಿಹಿ ಬಾಯಿಂದಲೇ ರಾಮನ ಕಿವಿಗೂ ಬಿತ್ತು; ಮುಂದಾಗಿದ್ದೇ ಬೇರೆ-kannada television news seetha rama serial march 22th episode highlights seetha raama serial latest update mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Seetha Rama Serial: ಸೀತಾ ಮುಚ್ಚಿಟ್ಟಿದ್ದ ಕಟು ಸತ್ಯ ಸಿಹಿ ಬಾಯಿಂದಲೇ ರಾಮನ ಕಿವಿಗೂ ಬಿತ್ತು; ಮುಂದಾಗಿದ್ದೇ ಬೇರೆ

Seetha Rama Serial: ಸೀತಾ ಮುಚ್ಚಿಟ್ಟಿದ್ದ ಕಟು ಸತ್ಯ ಸಿಹಿ ಬಾಯಿಂದಲೇ ರಾಮನ ಕಿವಿಗೂ ಬಿತ್ತು; ಮುಂದಾಗಿದ್ದೇ ಬೇರೆ

ಸೀತಾ ರಾಮ ಸೀರಿಯಲ್‌ನಲ್ಲೀಗ ಹಲವು ಕುತೂಹಲಗಳು ಘಟಿಸುತ್ತಿವೆ. ರಾಮನ ಪ್ರೀತಿಯನ್ನು ಸೀತಾ ಒಪ್ಪಿದ್ದಾಳೆ. ಈ ನಡುವೆ ರಾಮನಿಗೆ ಗೊತ್ತಿರದ ಮತ್ತೊಂದು ವಿಚಾರವೂ ಸಿಹಿಯ ಮೂಲಕ ಆತನ ಗಮನಕ್ಕೆ ಬಂದಿದೆ.

Seetha Rama Serial: ಸೀತಾ ಮುಚ್ಚಿಟ್ಟಿದ್ದ ಕಟು ಸತ್ಯ ಸಿಹಿ ಬಾಯಿಂದಲೇ ರಾಮನ ಕಿವಿಗೂ ಬಿತ್ತು; ಮುಂದಾಗಿದ್ದೇ ಬೇರೆ
Seetha Rama Serial: ಸೀತಾ ಮುಚ್ಚಿಟ್ಟಿದ್ದ ಕಟು ಸತ್ಯ ಸಿಹಿ ಬಾಯಿಂದಲೇ ರಾಮನ ಕಿವಿಗೂ ಬಿತ್ತು; ಮುಂದಾಗಿದ್ದೇ ಬೇರೆ

Seetha Rama Serial: ಸಿಹಿಯ ಆಸೆಯಂತೆ ರಾಮನೇ ಡೆಲಿವರಿ ಬಾಯ್‌ ಆಗಿ ಪಿಜ್ಜಾ ಹೊತ್ತು ಶಾಂತಮ್ಮನ ವಠಾರಕ್ಕೆ ಬಂದಿದ್ದಾನೆ. ಅಷ್ಟೇ ಅಲ್ಲ, ಮುದ್ದು ಫ್ರೆಂಡ್‌ ಸಿಹಿಗೆ ಪಿಜ್ಜಾ ತಿನಿಸಿ ತಾನೂ ಖುಷಿಯಲ್ಲಿ ಸಂಭ್ರಮಿಸಿದ್ದಾನೆ. ಪಿಜ್ಜಾ ಮುಟ್ಟದ ಸೀತಮ್ಮನಿಗೆ ಹಠ ಮಾಡಿ ತಿನ್ನಿಸಿದ್ದಾಳೆ ಸಿಹಿ. ಇನ್ನೊಂದೆಡೆ ಸೀತಾ ಮತ್ತು ರಾಮನ ನಡುವಿನ ಪಿಸು ಮಾತುಗಳು ಸಿಹಿಯ ಕಿವಿಗೂ ಬಿದ್ದಿದೆ. ಇಬ್ಬರ ನಡುವೆ ಏನೋ ನಡೆಯುತ್ತಿದೆ ಎಂಬ ಅನುಮಾನವೂ ಸಿಹಿಗೆ ಬಂದಿದೆ.

ಸೀತಮ್ಮನಿಗೆ ಪಿಜ್ಜಾ ಬಳಿಕ ದಾಳಿಂಬೆ ಜ್ಯೂಸ್‌ ಕೇಳಿದ್ದಾಳೆ ಸಿಹಿ. ದಾಳಿಂಬೆ ಜ್ಯೂಸ್‌ ಕುಡಿದ್ರೆ ದೇಹದಲ್ಲಿ ರಕ್ತ ಜಾಸ್ತಿ ಆಗುತ್ತೆ ಅನ್ನೋ ಮಾತುಗಳೂ ಸಿಹಿ ಬಾಯಿಂದ ಬಂದಿದೆ. ನೀನು ನನ್ನ ಫ್ರೆಂಡ್‌ಗೆ ರಕ್ತ ಕೊಟ್ಯಲ್ಲ ಆ ಥರ ನಾನೂ ಬ್ಲಡ್‌ ಡೊನೇಟ್‌ ಮಾಡ್ತಿನಿ ಎಂದಿದ್ದಾಳೆ ಸಿಹಿ. ಸಿಹಿಯ ಮಾತು ಕೇಳಿ ಅಚ್ಚರಿ ವ್ಯಕ್ತಪಡಿಸಿದ ರಾಮ್,‌ ಕೆಲ ಕ್ಷಣ ಮೌನವಾಗಿದ್ದಾನೆ. ಅಪಗಾತವಾದಾಗ ತನಗೆ ರಕ್ತ ನೀಡಿದ್ದು ಸೀತಾ ಎಂಬುದು ರಾಮ್‌ನಿಗೂ ಗೊತ್ತಾಗಿದೆ.

ಇತ್ತ ಕಡೆಗೆ ಅಶೋಕ ಮತ್ತು ಅಂಜಲಿ ಜತೆಗೆ ಪ್ರಿಯಾ ಮಾತುಕತೆ ಮುಂದುವರಿದಿದೆ. ಅಂಜಲಿ ಅಶೋಕನ ತಂಗಿ ಎಂದು ತಿಳಿದು ಶಾಕ್‌ ಆಗಿದ್ದಾಳೆ ಪ್ರಿಯಾ. ಬಳಿಕ ಅಷ್ಟೇ ಸಂಭ್ರಮಿಸಿದ್ದಾಳೆ. ಇದೇ ವೇಳೆ ನಿಮ್ಮಿಬ್ಬರನ್ನು ಇಲ್ಲಿಗೆ ಕರೆಸಿದ ವಿಚಾರವನ್ನು ಅಶೋಕ ಸ್ಪಷ್ಟಪಡಿಸಿದ್ದಾನೆ. ರಾಮನ ಮದುವೆ ಆಗಬೇಕು. ಇದು ತಾತನ ಕಂಡಿಷನ್.‌ ಮೊದಲು ಅಶೋಕ ಮದುವೆ ಆಗಬೇಕು ಎಂಬುದು ರಾಮನ ಡಿಮಾಂಡ್.‌ ಹಾಗಾಗಿ ಈ ಬಗ್ಗೆ ಚರ್ಚೆ ಮಾಡುವ ಉದ್ದೇಶಕ್ಕೆ ನಿಮ್ಮನ್ನು ಇಲ್ಲಿ ಕರೆಸಿದ್ದೇನೆ ಎಂದಿದ್ದಾನೆ.

ನೇರವಾಗಿ ನಿಮ್ಮ ಅಮ್ಮನ ಜತೆಗೆ ಮದುವೆ ವಿಚಾರ ಯಾವಾಗ ಮಾತನಾಡಲಿ ಎಂದಿದ್ದಾನೆ ಅಶೋಕ. ಮದುವೆ ಆಗೋಕೆ ನಾನು ರೆಡಿ. ನಾನು ಹು ಅಂದಮೇಲೆ ಅಮ್ಮನೂ ರೆಡಿ ಎಂದಿದ್ದಾಳೆ ಪ್ರಿಯಾ. ನನ್ನ ತಂಗಿಗೆ ಅತ್ತಿಗೆ ಪ್ರೀತಿ ಸಿಗಬೇಕು, ರಾಮ್‌ಗೆ ಸಿಹಿ ಮತ್ತು ಸೀತಾ ಪ್ರೀತಿ ಸಿಗಬೇಕು. ಅದಕ್ಕೇ ನಾನು ಈ ರಿಸ್ಕಿ ಡಿಸಿಷನ್‌ ತಗೋಬೇಕು ಎಂದುಕೊಂಡಿದ್ದೇನೆ ಎಂದಿದ್ದಾನೆ ಅಶೋಕ.

ಮತ್ತೊಂದು ಕಡೆ ಲಾಯರ್‌ ರುದ್ರಪ್ರತಾಪ್‌, ಭಾರ್ಗವಿಗೆ ಫೋನ್‌ ಮಾಡಿದ್ದಾನೆ. ನಿಮ್ಮ ಉಪಯೋಗಕ್ಕೆ ನನ್ನನ್ನು ಬಳಿಸಿಕೊಳ್ಳುತ್ತಿದ್ದೀರಿ ಎಂದಿದ್ದಾನೆ. ಅಷ್ಟೇ ಅಲ್ಲ ನಾನು ಮದುವೆ ಆಗಬೇಕು ಎಂದುಕೊಂಡಿರೋ ಹುಡುಗಿ ಹಿಂದೆ ನಿಮ್ಮ ಹುಡುಗ ಸುತ್ತಾಡ್ತಿದ್ದಾನೆ. ಮಧ್ಯರಾತ್ರಿ ಆಕೆ ಮನೆಗೆ ಹೋಗುವುದು, ಡ್ರಾಪ್‌ ಮಾಡುವುದು ನನ್ನಿಂದ ನೋಡಲು ಆಗ್ತಿಲ್ಲ. ನಿಮ್ಮ ಹುಡುಗನ್ನ ನೀವು ಹದ್ದುಬಸ್ತಲ್ಲಿ ಇಟ್ಟುಕೊಂಡ್ರೆ ನಿಮಗೇ ಒಳ್ಳೆಯದು ಎಂದಿದ್ದಾನೆ ರುದ್ರಪ್ರತಾಪ್.‌

ಅಂತೂ ಇಂತೂ ಎರಡೆರಡು ಸಲ ನನ್ನ ಲೈಫ್‌ನ ಸೇವ್‌ ಮಾಡಿದ್ದಕ್ಕೆ ಸೀತಾಗೆ ಥ್ಯಾಂಕ್ಸ್‌ ಹೇಳಿ ಕಿಂಡಲ್‌ ಮಾಡಿದ್ದಾನೆ ರಾಮ್. ತಮ್ಮಿಬ್ಬರ ನಡುವಿನ ವಿಚಾರವನ್ನು ಸಿಹಿಗೆ ಹೇಗೆ ಹೇಳುವುದು ಅಂತ ಕೊಂಚ ಗಲಿಬಿಲಿಗೆ ಒಳಗಾಗಿದ್ದಾನೆ ರಾಮ. ಇದೇ ವೇಳೆ ಅರ್ಜೆಂಟಾಗಿ ಮನೆಗೆ ಬಾ ಎಂದು ಭಾರ್ಗವಿ ರಾಮ್‌ಗೆ ಕಾಲ್‌ ಮಾಡಿದ್ದಾಳೆ. ಅಲ್ಲಿಂದ ಹೊರಟು ನಿಂತಿದ್ದಾನೆ ರಾಮ್.‌ ಇನ್ನೊಂದು ಕಡೆ ರಾಮ್‌ ತನ್ನನ್ನು ಕಡೆಗಣಿಸುತ್ತಿರುವುದಕ್ಕೆ ಹಲ್ಲು ಮಸಿಯುತ್ತಿದ್ದಾಳೆ ಚಾಂದಿನಿ.

ಸೀತಾ ರಾಮ ಧಾರಾವಾಹಿ ಪಾತ್ರವರ್ಗ

ನಿರ್ದೇಶಕ: ಮಧುಸೂಧನ್‌

ಗಗನ್‌ ಶ್ರೀನಿವಾಸ್: ಶ್ರೀರಾಮ (ನಾಯಕ)

ವೈಷ್ಣವಿ ಗೌಡ: ಸೀತಾ (ನಾಯಕ)

ರೀತು ಸಿಂಗ್: ಸಿಹಿ (ಸೀತಾ ಮಗಳು)

ಅಶೋಕ ಶರ್ಮಾ: ಅಶೋಕ (ಶ್ರೀರಾಮನ ಪ್ರಾಣ ಸ್ನೇಹಿತ)

ಭಾರ್ಗವಿ: ಪೂಜಾ ಲೋಕೇಶ್‌ (ಶ್ರೀರಾಮನ ಚಿಕ್ಕಮ್ಮ)

ಮುಖ್ಯಮಂತ್ರಿ ಚಂದ್ರು: ಸೂರ್ಯ ಪ್ರಕಾಶ್‌ ದೇಸಾಯಿ (ಶ್ರೀರಾಮನ ತಾತ)

ಶ್ವೇತಾ ಶಂಕರಪ್ಪ: ಪ್ರಿಯಾ (ಸೀತಾಳ ಸ್ನೇಹಿತೆ)

ವಿಕಾಸ್‌ ಕಾರ್‌ಗೋಡ್:‌ ಲಾಯರ್‌ ರುದ್ರಪ್ರತಾಪ್

ಸತೀಶ್‌ ಚಂದ್ರ: ಚರಣ್‌. ಡಿ

ಪೂರ್ಣಚಂದ್ರ ತೇಜಸ್ವಿ: ವಿಶ್ವಜೀತ್‌ (ಶ್ರೀರಾಮನ ಚಿಕ್ಕಪ್ಪ)

ಜಯದೇವ್‌ ಮೋಹನ್:‌ ಸತ್ಯಜೀತ್‌ (ಶ್ರೀರಾಮನ ಚಿಕ್ಕಪ್ಪ)