ಕನ್ನಡ ಸುದ್ದಿ  /  Entertainment  /  Kannada Television News Seetha Rama Serial March 25th Episode Highlights Seetha Raama Serial Latest Update Mnk

Seetha Rama Serial: ಎಲ್ಲರೆದುರು ಸೀತಾನೇ ತನ್ನ ಹುಡುಗಿ ಅಂತ ಹೇಳೇಬಿಡ್ತಾನಾ ಶ್ರೀರಾಮ? ಸೀತಾ ರಾಮ ಸೀರಿಯಲ್‌ನಲ್ಲೀಗ ಪ್ರೀತಿಯ ರಂಗು

ಸೀತಾ ರಾಮ ಸೀರಿಯಲ್‌ನಲ್ಲೀಗ ಹೋಳಿ ಹಬ್ಬದ ರಂಗಿನ ಜತೆಗೆ ಸೀತಾ ಮತ್ತು ರಾಮನ ಬಾಳಿನಲ್ಲೂ ಕಲರ್‌ಫುಲ್‌ ರಂಗು ಮೂಡಿದೆ. ಪ್ರೀತಿಯ ಬಳಿಕ ಇದೀಗ ಮದುವೆ ವಿಚಾರವನ್ನೂ ಎಲ್ಲರೆದುರು ಪ್ರಸ್ತಾಪಿಸೋ ಮುನ್ಸೂಚನೆ ನೀಡಿದ್ದಾನೆ ರಾಮ.

Seetha Rama Serial: ಎಲ್ಲರೆದುರು ಸೀತಾನೇ ತನ್ನ ಹುಡುಗಿ ಅಂತ ಹೇಳೇಬಿಡ್ತಾನಾ ಶ್ರೀರಾಮ? ಸೀತಾ ರಾಮ ಸೀರಿಯಲ್‌ನಲ್ಲೀಗ ಪ್ರೀತಿಯ ರಂಗು
Seetha Rama Serial: ಎಲ್ಲರೆದುರು ಸೀತಾನೇ ತನ್ನ ಹುಡುಗಿ ಅಂತ ಹೇಳೇಬಿಡ್ತಾನಾ ಶ್ರೀರಾಮ? ಸೀತಾ ರಾಮ ಸೀರಿಯಲ್‌ನಲ್ಲೀಗ ಪ್ರೀತಿಯ ರಂಗು

Seetha Rama Serial: ಸೀತಾ ರಾಮ ಧಾರಾವಾಹಿಯಲ್ಲೀಗ ಹೋಳಿಯ ರಂಗು ಮೂಡಿದೆ. ಆಫೀಸ್‌ನ ಎಲ್ಲ ಸಹೋದ್ಯೋಗಿಗಳನ್ನು ಮನೆಗೆ ಕರೆಸಿ ಹೋಳಿ ಹಬ್ಬದಾಚರಣೆ ಮಾಡಿದ್ದಾರೆ ಸೂರ್ಯಪ್ರಕಾಶ್‌ ದೇಸಾಯಿ. ಇದಕ್ಕೂ ಮೊದಲು ಆಫೀಸ್‌ನಿಂದ ಎಲ್ಲರೂ ಬರ್ತಾರಲ್ಲ, ಬರ್ತಾರಲ್ಲ ಎಂದು ಕೌತುಕದ ಕಣ್ಣಿಂದಲೇ ಕೇಳಿದ್ದಾನೆ ರಾಮ. ಅಲ್ಲೇ ಇದ್ದ ಭಾರ್ಗವಿಗೂ ಇದು ಅನುಮಾನ ತರಿಸಿದೆ, ಚಾಂದಿನಿ ಸಲುವಾಗಿ ಕೇಳಿದ್ದಾನೆ ಎಂದು ಮಾವನ ಪ್ರಶ್ನೆಗೂ ಉತ್ತರಿಸಿದ್ದಾಳೆ ಭಾರ್ಗವಿ.

ಈ ನಡುವೆ ಅಶೋಕ ಮತ್ತು ರಾಮನ ನಡುವೆ ಇದೇ ವಿಚಾರಕ್ಕೆ ಒಂದಷ್ಟು ಮಾತುಕತೆ ನಡೆದಿದೆ. ಎಲ್ಲರೂ ಬರ್ತಿದ್ದಾರಲ್ಲ ಮಗ ಎಂದು ಮರು ಪ್ರಶ್ನೆ ಮಾಡಿದ್ದಾನೆ. ಅದಕ್ಕೆ ಹೂನಪ್ಪ ಸೀತಾ ಅವ್ರು ಬರ್ತಿದ್ದಾರೆ ಎಂದಿದ್ದಾನೆ. ಅದಕ್ಕೆ ಏನೂ ಗೊತ್ತಿರದವನಂತೆ, ನಾಚಿಕೆಯಿಂದಲೇ ನಾಟಕ ಮುಂದುವರಿಸಿದ್ದಾನೆ ರಾಮ. ಆದಷ್ಟು ಬೇಗ ರೆಡಿಯಾಗಿ ಬಾ, ಎಲ್ಲರೂ ಬರ್ತಿದ್ದಾರೆ ಎಂದು ರಾಮನಿಗೆ ಹೇಳಿದ್ದಾನೆ. ಈ ನಡುವೆ ನನಗೋಸ್ಕರ ಆದ್ರೂ ಬನ್ನಿ ಎಂದು ಸೀತಾಗೆ ಫೋನ್‌ ಮಾಡಿ ತಿಳಿಸಿದ್ದಾನೆ ರಾಮ.

ಇತ್ತ ರಾಮನ ಮನೆಗೆ ಒಬ್ಬರಾದ ಮೇಲೋಬ್ಬರು ಬರ್ತಿದ್ದಾರೆ. ರಾಮನ ಕಣ್ಣು ಮಾತ್ರ ಸೀತಾಳ ಮೇಲಿದೆ. ಸೀತಾ ಬಂದ್ರಾ ಎಂದು ಗೇಟ್‌ ಬಳಿಯೇ ಕಣ್ಣು ನೆಟ್ಟಿದ್ದಾನೆ ರಾಮ. ಮತ್ತೊಂದು ಬದಿಯಲ್ಲಿ ಪ್ರಿಯಾಳ ಆಗಮನಕ್ಕೆ ಕಾಯುತ್ತಿದ್ದಾನೆ ಅಶೋಕ. ಈ ನಡುವೆ ಪ್ರಿಯಾ ಮತ್ತು ಅಂಜಲಿಯ ಆಗಮನವಾಗಿದೆ. ಅಶೋಕನ ಮೊಗದಲ್ಲೂ ನಗು ಮೂಡಿದೆ. ಹೀಗಿರುವಾಗಲೇ ಅತ್ತಕಡೆಯಿಂದ ಸೀರೆಯುಟ್ಟು ಸೀತಾ ಆಗಮನವಾಗಿದೆ.

ಸೀತಾ ಆಗಮಿಸುತ್ತಿದ್ದಂತೆ ರಾಮನ ಎದೆಯಲ್ಲಿ ಚಿಟ್ಟೆ ಹಾರಿದಂತಾಗಿದೆ. ಸೀತಾ ಜತೆಗೆ ಒಂದಷ್ಟು ಮಾತುಕತೆ ನಡೆಸಿದ್ದಾನೆ. ನೀವು ಬರಲ್ಲ ಅಂದುಕೊಂಡಿದ್ದೆ, ತುಂಬ ಖುಷಿಯಾಯ್ತು ಎಂದಿದ್ದಾನೆ. ಇವತ್ತು ಎಲ್ಲರ ಮುಂದೆ ನಮ್ಮ ಮದುವೆ ವಿಚಾರವನ್ನು ಅನೌನ್ಸ್‌ ಮಾಡ್ತಿನಿ ಎಂದಿದ್ದಾನೆ. ಸೀತಾಗೂ ರಾಮನ ಈ ನಡೆ ಕೊಂಚ ಭಯ ಹುಟ್ಟಿಸಿದೆ. ಈ ನಡುವೆ ಅಶೋಕನ ತಂಗಿ ಅಂಜಲಿಯನ್ನು ಸೀತಾಗೆ ಪರಿಚಯ ಮಾಡಿಸಿಕೊಟ್ಟಿದ್ದಾಳೆ ಪ್ರಿಯಾ. ಖುಷಿಯಲ್ಲಿ ಸಂಭ್ರಮಿಸಿದ್ದಾರೆ.

ಹೀಗಿರುವಾಗಲೇ ಎಲ್ಲರನ್ನೂ ವೇದಿಕೆಗೆ ಕರೆದು ಹೋಳಿ ಹಬ್ಬದ ಶುಭಾಶಯಗಳು ಎಂದು ಹೇಳಿದ್ದಾನೆ ಸೂರ್ಯಪ್ರಕಾಶ್‌. ಇದೇ ವೇಳೆ ತಾತನ ಜತೆಗೆ ವೇದಿಕೆಗೆ ಬಂದ ರಾಮ್, ಮದುವೆ ವಿಷಯ ಪ್ರಸ್ತಾಪ ಮಾಡಿದ್ದಾನೆ. ಶೀಘ್ರದಲ್ಲಿ ನಮ್ಮ ಮನೆಯಲ್ಲಿ ಒಂದು ಮದುವೆ ಆಗಲಿದೆ ಎಂದಿದ್ದಾನೆ. ಅಲ್ಲೇ ಇದ್ದ ಸೀತಾ ಶಾಕ್‌ ಆದರೆ, ಇತ್ತ ಭಾರ್ಗವಿ ಹೊಟ್ಟೆಯಲ್ಲಿ ಖಾರ ಕಲಸಿದಂತಾಗಿದೆ. ನಿಗಿ ನಿಗಿ ಕೆಂಡವಾಗಿದ್ದಾಳೆ. ನೇರವಾಗಿ ಸೀತಾಳ ಮುಂದೆ ನಿಂತಿದ್ದಾನೆ ರಾಮ. ಇನ್ನೇನು ಸೀತಾಳನ್ನು ಕರೆಯಬೇಕು ಎನ್ನುವಷ್ಟರಲ್ಲಿ, ಅಚ್ಚರಿಯ ಬದಲಾವಣೆ ನಡೆದಿದೆ.

ಪ್ರಿಯಾಳನ್ನು ಕೈ ಹಿಡಿದು ವೇದಿಕೆಗೆ ಕರೆತಂದಿದ್ದಾನೆ. ಇತ್ತ ಅಶೋಕನನ್ನು ಕರೆಸಿದ್ದಾನೆ. ಈ ಮೂಲಕ ಇವರಿಬ್ಬರ ಮದುವೆಯನ್ನು ಎಲ್ಲರ ಮುಂದೆ ಘೋಷಿಸಿದ್ದಾನೆ. ಎಲ್ಲರೂ ಸಂಭ್ರಮಿಸಿದ್ದಾರೆ. ಆದರೆ, ಭಾರ್ಗವಿ ಮಾತ್ರ ಮನಸ್ಸಿನಲ್ಲೇ ಕಡುಕೋಪಗೊಂಡಿದ್ದಾಳೆ.

ಸೀತಾ ರಾಮ ಧಾರಾವಾಹಿ ಪಾತ್ರವರ್ಗ

ನಿರ್ದೇಶಕ: ಮಧುಸೂಧನ್‌

ಗಗನ್‌ ಶ್ರೀನಿವಾಸ್: ಶ್ರೀರಾಮ (ನಾಯಕ)

ವೈಷ್ಣವಿ ಗೌಡ: ಸೀತಾ (ನಾಯಕ)

ರೀತು ಸಿಂಗ್: ಸಿಹಿ (ಸೀತಾ ಮಗಳು)

ಅಶೋಕ ಶರ್ಮಾ: ಅಶೋಕ (ಶ್ರೀರಾಮನ ಪ್ರಾಣ ಸ್ನೇಹಿತ)

ಭಾರ್ಗವಿ: ಪೂಜಾ ಲೋಕೇಶ್‌ (ಶ್ರೀರಾಮನ ಚಿಕ್ಕಮ್ಮ)

ಮುಖ್ಯಮಂತ್ರಿ ಚಂದ್ರು: ಸೂರ್ಯ ಪ್ರಕಾಶ್‌ ದೇಸಾಯಿ (ಶ್ರೀರಾಮನ ತಾತ)

ಶ್ವೇತಾ ಶಂಕರಪ್ಪ: ಪ್ರಿಯಾ (ಸೀತಾಳ ಸ್ನೇಹಿತೆ)

ವಿಕಾಸ್‌ ಕಾರ್‌ಗೋಡ್:‌ ಲಾಯರ್‌ ರುದ್ರಪ್ರತಾಪ್

ಸತೀಶ್‌ ಚಂದ್ರ: ಚರಣ್‌. ಡಿ

ಪೂರ್ಣಚಂದ್ರ ತೇಜಸ್ವಿ: ವಿಶ್ವಜೀತ್‌ (ಶ್ರೀರಾಮನ ಚಿಕ್ಕಪ್ಪ)

ಜಯದೇವ್‌ ಮೋಹನ್:‌ ಸತ್ಯಜೀತ್‌ (ಶ್ರೀರಾಮನ ಚಿಕ್ಕಪ್ಪ)

IPL_Entry_Point