ಮದುವೆಗೆ ಒಪ್ಪಿಗೆ ಸಿಕ್ಕರೂ, ರಾಮ್ ಜತೆ ಮಕ್ಕಳು ಮಾಡಿಕೊಳ್ಳಲ್ವಂತೆ ಸ್ವಾರ್ಥಿ ಸೀತಾ! ಸೀತಮ್ಮ ನಿಂದ್ಯಾಕೋ ಓವರ್ ಆಯ್ತಮ್ಮ ಎಂದ ವೀಕ್ಷಕ
Seetha Rama Serial: ಸೀತಾ ರಾಮ ಧಾರಾವಾಹಿಯಲ್ಲಿ ಇಬ್ಬರ ಮದುವೆಗೆ ತಾತ ಸೂರ್ಯ ಪ್ರಕಾಶ್ ಕಡೆಯಿಂದ ಸಮ್ಮತಿ ಸಿಕ್ಕಿದೆ. ಆದರೆ, ತಾತನ ಒಂದು ಕಂಡಿಷನ್ ಸೀತಾಳನ್ನು ಚಿಂತೆಗೆ ನೂಕಿದೆ.

Seetha Rama Serial: ತಾತ ಸೂರ್ಯಪ್ರಕಾಶ್ ದೇಸಾಯಿ ಮನೆಗೆ ಸೀತಾ ಆಗಮಿಸಿದ್ದಾಳೆ. ತಾತ ಏನು ಕೇಳಬಹುದು ಎಂದು ಎಲ್ಲರ ಮೊಗದಲ್ಲೂ ಕೊಂಚ ಗಾಬರಿ ಮನೆ ಮಾಡಿದೆ. ತಾತನ ಎದುರು ಕೂತಿದ್ದಾಳೆ ಸೀತಾ. ಮಗಳಿದ್ದಾಳೆ ಎಂಬ ವಿಚಾರವನ್ನು ಮೊದಲೇ ಏಕೆ ತಿಳಿಸಲಿಲ್ಲ ಎಂದು ಪ್ರಶ್ನೆ ಮಾಡುತ್ತ, ನಮ್ಮ ರಾಮ್‌ಗೆ ತಕ್ಕ ಹೆಣ್ಣು ನೀನು. ನಿನ್ನನ್ನು ನಾನು ನನ್ನ ಮನೆ ಸೊಸೆಯಾಗಿ ಸ್ವೀಕರಿಸುತ್ತೇನೆ. ಈ ಮಾತನ್ನು ನನ್ನ ಮನಸಾರೆ ಹೇಳ್ತಿದ್ದೇನೆ ಎಂದಿದ್ದಾನೆ. ತಾತನ ಮಾತನ್ನು ಕೇಳಿ, ಸೀತಾ ಮೊಗದಲ್ಲಿ ನಗು ಮೂಡಿದೆ.
ನನಗೆ ನಿನ್ನ ಹಳೇ ಜೀವನ ನಮಗೆ ಬೇಕಾಗಿಲ್ಲ ಎನ್ನುತ್ತಲೇ ಬೇಡಿಕೆಯೊಂದನ್ನು ಸೀತಾಳ ಮುಂದಿಟ್ಟಿದ್ದಾನೆ. ನಿನ್ನ ರಾಮನ ಮದುವೆ ಆದ ಮೇಲೆ ನಮ್ಮ ವಂಶದ ಕುಡಿ ಬೆಳೆಯೋದಕ್ಕೆ, ನಿನ್ನದೇನೂ ತಕರಾರು ಇರಬಾರದು. ನಮ್ಮ ವಂಶಕ್ಕೆ ವಾರಸುದಾರ ಅನಿಸಿಕೊಳ್ಳೋಕೆ, ನಮ್ಮ ರಾಮ್‌ಗೆ ಒಂದು ಮಗು ಬೇಕು. ಇದಕ್ಕೆ ನಿನ್ನ ಒಪ್ಪಿಗೆ ಇದೆಯೇ? ಎಂದು ಸೀತಾಗೆ ಒಂದಷ್ಟು ಕಾಲಾವಕಾಶವನ್ನೂ ನೀಡಿದ್ದಾನೆ ಸೂರ್ಯಪ್ರಕಾಶ್ ದೇಸಾಯಿ.
ತಾತನ ಮಾತಿಗೆ ಎದ್ದು ನಡೆದ ಸೀತಾ
ಈಗಲೇ ಹೇಳಬೇಕಂತ ಏನೂ ಇಲ್ಲ. ಯೋಚನೆ ಮಾಡಿ ರಾಮ್‌ಗೆ ನಿನ್ನ ನಿರ್ಧಾರ ತಿಳಿಸು. ಇದಕ್ಕೆ ನಿನ್ನ ಒಪ್ಪಿಗೆ ಇದ್ದರೆ, ಮದುವೆ ವಿಚಾರವನ್ನು ಮುಂದುವರಿಸೋಣ ಎಂದಿದ್ದಾನೆ. ತಾತನ ಈ ಮಾತು ಕೇಳಿ ಸೀತಾ ಎದೆಯಲ್ಲಿ ಬರಸಿಡಿಲು ಬಡಿದಂತಾಗಿದೆ. ಏನನ್ನೂ ಮಾತನಾಡದೇ ಅಲ್ಲಿಂದ ಎದ್ದು ಹೊರನಡೆದಿದ್ದಾಳೆ. ರಾಮ್ ಬಳಿ ಬಂದು ನಿಮ್ಮ ಜತೆ ಮಾತನಾಡಬೇಕು ಬನ್ನಿ ಎಂದಿದ್ದಾಳೆ. ಅಲ್ಲೇ ಇದ್ದ ಭಾರ್ಗವಿ ಸೀತಾಳನ್ನು ನೋಡಿ, ಇವಳ ಮುಖ ನೋಡ್ತಿದ್ರೆ, ಮಾವಯ್ಯ ಬೇಡ ಎಂದಿರಬೇಕು ಎಂದು ಮನದೊಳಗೇ ಗುನುಗಿದ್ದಾಳೆ. ಕನಸಲ್ಲಿ ಬಂದ ವಾಣಿಗೂ ಹಿಡಿಶಾಪ ಹಾಕಿದ್ದಾಳೆ.
ಸೀತಾಗೆ ರಾಮ್ ಜತೆ ಮದುವೆ ಬೇಕು, ಮಗು ಬೇಡ
ತಾತನ ಜತೆ ಮಾತನಾಡಿದ ವಿಚಾರವನ್ನು ರಾಮ್ ಮುಂದೆ ಹೇಳುತ್ತಿದ್ದಾಳೆ ಸೀತಾ. ಮದುವೆ ಬಳಿಕ ನನಗೆ ಸಿಹಿಯೇ ಎಲ್ಲ, ಸಿಹಿಯನ್ನು ಹೊರತುಪಡಿಸಿ ನನಗೆ ಇನ್ನೊಂದು ಮಗು ಬೇಡ ಎಂದು ರಾಮನ ಮುಂದೆ ಹೇಳಿದ್ದಾಳೆ. ವಂಶ ಬೆಳೆಸಲು ಮಗು ಬೇಕು ಎಂಬ ತಾತನ ಬೇಡಿಕೆಗೆ ಸೀತಾ ಕೊಂಚ ನಲುಗಿದ್ದಾಳೆ. ಇದು ಸಾಧ್ಯವೇ ಇಲ್ಲ ಎಂಬಷ್ಟರ ಮಟ್ಟಿಗೆ ಆಕೆಯ ಮನಸ್ಸಿನಲ್ಲಿ ಸಿಹಿ ಮನೆ ಮಾಡಿದ್ದಾಳೆ. ನಾನು ನನ್ನ ಮಗು ಅಂತ ಒಪ್ಪಿಕೊಳ್ಳುವುದು ಕೇವಲ ಸಿಹಿಯನ್ನು ಮಾತ್ರ ಎಂದು ಹೇಳಿ ಅಲ್ಲಿಂದ ಹೊರಟಿದ್ದಾಳೆ. ಸಿಹಿಯೇ ಸರ್ವಸ್ವ ಅನ್ನೋ ಸೀತೆಗೆ ಬೇರೆ ಮಗು ಬೇಕಿಲ್ಲ. ತಾತನ ಮಾತೇ ರಾಮನ ಪ್ರೀತಿಗೆ ತೊಡಕಾಗುತ್ತಾ? ಕಾದು ನೋಡಬೇಕಿದೆ.
ಸೀತಾಗೆ ಸ್ವಾರ್ಥಿ ಎಂದ ವೀಕ್ಷಕ..
ಇಷ್ಟು ದಿನ ರಾಮ್ ಸಿಕ್ಕರೆ ಸಾಕು ಮದುವೆ ಆದರೆ ಸಾಕು ಎನ್ನುತ್ತಿದ್ದ ಸೀತಾ, ಇದೀಗ ಇದ್ದಕ್ಕಿದ್ದ ಹಾಗೆ ಒರಸೆ ಬದಲಿಸಿದ್ದಾಳೆ. ನನಗೆ ಸಿಹಿಯೇ ಎಲ್ಲ, ನಾನು ಇನ್ನೊಂದು ಮಗು ಮಾಡಿಕೊಳ್ಳಲಾರೆ ಎಂದಿದ್ದಾಳೆ. ಸೀರಿಯಲ್‌ನ ಈ ಪ್ರೋಮೋ ಹೊರಬಿದ್ದಿದ್ದೇ ತಡ ವೀಕ್ಷಕರು ಸೀತಾಳ ನಿರ್ಧಾರಕ್ಕೆ ಕಟು ಟೀಕೆ ಮಾಡುತ್ತಿದ್ದಾರೆ. ಇಷ್ಟೊಂದು ಸ್ವಾರ್ಥ ಒಳ್ಳೆಯದಲ್ಲ ಎನ್ನುತ್ತಿದ್ದಾರೆ. ವೀಕ್ಷಕರ ಅಭಿಪ್ರಾಯ ಹೀಗಿದೆ.
- ಸೀತಾ.. ಓವರ್ ಡ್ರಾಮಾ ಆಯ್ತು.. ಸಿಹಿನ ತಾತ ಒಪ್ಕೊಂಡಿದಾರೆ ತಾನೇ.. ಮತ್ತೆನ್ ಪ್ಲಾಬ್ಲಮ್ ನಿಮ್ಗೆ..
-ಅವ್ರ ಮನೆತನನು ಬೆಳೀಬೇಕೆಲ್ವಾ ಸೀತಾಗೆ ಬುದ್ದಿ ಇಲ್ವಾ?
- ನಮ್ ಹೀರೋನಾ ಈ ಥರ ಬೇಜಾರಲ್ಲಿ ಇರೋದನ್ನ ನೋಡೋಕೆ ಬೇಜಾರಾಗುತ್ತೆ.. ಸೀತಾದು ಸ್ವಲ್ಪ ಓವರ್ ಆಯ್ತು ಅನಿಸ್ತು
- ಸೀತಾ ನಿಂದು ಸ್ವಾರ್ಥ ಅನಿಸ್ತಿದೆ, ನಿನ್ನ ಸಿಹಿನ ತಾತ ಒಪ್ಕೊಂಡ್ರು ಬಟ್ ನೀನು ಮಾತ್ರ ಅವರ ಆಸೆ ಪೂರ್ತಿ ಮಾಡೋಕೆ ಹಿಂದೇಟು ಹಾಕುತ್ತಿಯ ಸೋ ಸ್ಯಾಡ್
- ಬಿಡ್ಲಪ್ ಜಾಸ್ತಿ ಆಯ್ತ ನಿಂದು ಸೀತಾ
- ಸೀತಾ ನಿಧಾರ ಸರಿಯಿಲ್ಲ
- ಸೀತಾನಾ ಎಲ್ರೂ ಒಪಿಕೊಂಡಿರೋದೇ ದೊಡ್ಡ ವಿಷಯ.. ಅದ್ರಲ್ಲೂ ಇವಳದ್ದು ಕಿತಾಪತಿ... ಸ್ವಾರ್ಥ..... ಅವ್ರಿಗೂ ಅಸೆ ಇರಲ್ವ.. ರಾಮಗೂ ಮಗು ಇರ್ಬೇಕು ಅಂತ
- ಸೀತಾ ಓವರ್ ಆಗಿ ಆಡಬೇಡ ಬೇರೆ ಮಗು ಬೇಡ ಅಂದ್ರೆ ಮತ್ತೆ ರಾಮ ಯಾಕ ನಿನ್ನ ಮದುವೆ ಆಗೋದು ಬೇಡ ಬಿಡು
- ಅವರ ವಂಶ ಬೇಳಿಬೇಕು ಅಂತ ಅವರಿಗೆ ಆಸೆ ಇರಲ್ವಾ. ಸೀತಾ ಗೆ ಮದುವೆ ಇಷ್ಟ ಇದೆ. ಬಟ್ ಇನ್ನೊಂದು ಮಗು ಆದರೆ ಏನು ಪ್ರಾಬ್ಲಮ್ ಇದು ಯಾಕೋ ಓವರ್ ಆಯ್ತು
