Seetha Rama Serial: ಸೀತೆಯನ್ನೇ ಅರಸಿ ಬಂತು ದೇಸಾಯಿ ವಂಶದ ಸ್ವತ್ತು; ಕೇಡು ಬಯಸೋ ಭಾರ್ಗವಿಗೆ ಕಾದಿದ್ಯಾ ಆಪತ್ತು?
ದೇಸಾಯಿ ಮನೆಯಲ್ಲಿ ರಾಮನ ತಂದೆ ಇಂದ್ರಜಿತ್ ಮತ್ತು ತಾಯಿ ವಾಣಿಯ ಪೂಜೆ ನಡೆಯುತ್ತಿದೆ. ಈ ಪೂಜೆಗೆ ಸೀತಾ ಅವರ ಕುಟುಂಬವೂ ಆಗಮಿಸಿದೆ. ಇತ್ತ ಭಾರ್ಗವಿ ಮಾತ್ರ ಮನದೊಳಗೆ ರಣತಂತ್ರವನ್ನೇ ಹೆಣೆಯುತ್ತಿದ್ದಾಳೆ. ಮತ್ತೊಂದು ಕಡೆ ದಿಢೀರನೇ ದುಬೈಗೆ ಹೊರಟು ನಿಂತಿದ್ದಾನೆ ರಾಮ್. ಹೀಗಿರುವಾಗಲೇ ಸೀತಾಳ ಅತ್ತೆ ಸುಲೋಚನಾ ಕಣ್ಣು, ಕಂಠಿ ಹಾರದ ಮೇಲೆ ಬಿದ್ದಿದೆ.
Seetha Rama Serial: ಸೀತಾ ರಾಮ ಧಾರಾವಾಹಿಯಲ್ಲಿ ಇದೀಗ ಎಲ್ಲವೂ ಭಾರ್ಗವಿಯ ಪ್ಲಾನ್‌ನಂತೆಯೇ ನಡೆಯುತ್ತಿದೆ. ರಾಮ್ ಬಿಜಿನೆಸ್ ವಿಚಾರವಾಗಿ ದಿಢೀರನೇ ದುಬೈಗೆ ಹಾರಿದ್ದಾನೆ. ಈ ವಿಚಾರವನ್ನು ಮನೆಗೆ ಬಂದ ಸೀತಾ ಗಮನಕ್ಕೂ ತಂದಿದ್ದಾನೆ. ಆದರೆ, ಸೀತಾಳ ಮನಸ್ಸಿನಲ್ಲಿ ಮಾತ್ರ ಬೇರೆಯದೇ ವಿಚಾರ ಗಿರಕಿ ಹೊಡೆಯುತ್ತಿದೆ. ಈ ಹಿಂದೆ ನಾನೂ ಮತ್ತು ರಾಮ್ ಪ್ಯಾರಿಸ್‌ಗೆ ಹೋಗ್ತಿದ್ದೇವೆ ಎಂದು ಚಾಂದಿನಿ ಹೇಳಿದ ಮಾತು ಸೀತಾಳ ಮನಸ್ಸಲ್ಲಿ ಹೊಸ ಅನುಮಾನ ಮೂಡಿಸಿದೆ. ಭಾರ್ಗವಿ ಎದುರೇ ಇದನ್ನು ಪರಿಹರಿಕೊಂಡಿದ್ದಾಳೆ.
ಸೀತಾ ಮನಸ್ಸಲ್ಲಿ ಕಾಡ್ತಿದೆ ಅನುಮಾನ
ರಾಮ್ ಮತ್ತು ಚಾಂದಿನಿ ಇಬ್ಬರೂ ಒಟ್ಟಿಗೆ ಒಂದೇ ಕಡೆ ಹೋಗ್ತಿದ್ದಾರಾ ಎಂಬ ಅನುಮಾನ ಸೀತಾ ತಲೆಯಲ್ಲಿ ಓಡಾಡಿದೆ. ಇದನ್ನು ಹೇಗಾದರೂ ಮಾಡಿ ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ, ಇದೇ ವಿಚಾರವನ್ನು ಭಾರ್ಗವಿಯ ಮುಂದೆಯೂ ಹೇಳಿಕೊಂಡಿದ್ದಾಳೆ. ಚಾಂದಿನಿ ರಾಮ್‌ನನ್ನು ಹೇಗಾದರೂ ಮಾಡಿ ಕರೆಸಿಕೊಳ್ಳುತ್ತೇನೆ ಎಂದು ಹೇಳಿದ್ದಳು. ಇದನ್ನೇ ಭಾರ್ಗವಿ ಮುಂದೆ ಹೇಳಿದ್ದಾಳೆ. ನನಗೆ ಇದ್ಯಾಕೋ ಪ್ಲಾನ್ಡ್ ಅಂತ ಕಾಣಿಸುತ್ತಿದೆ ಎಂದಿದ್ದಾಳೆ. ಈಗಲೇ ಅಶೋಕನಿಗೆ ಫೋನ್ ಮಾಡಿ ಕೇಳುತ್ತೇನೆ ಎನ್ನುತ್ತಿದ್ದಂತೆ, ಸೀತಾಳನ್ನು ತಡೆದಿದ್ದಾಳೆ ಭಾರ್ಗವಿ.
ಸೀತಾ ಕೊರಳಿಗೆ ಬಿತ್ತು ಕಂಠಿ ಹಾರ
ಸೀತಾಳ ಅತ್ತಿಗೆ ಸುಲೋಚನಾ ಗಂಡನ ಜತೆಗೆ ಇಡೀ ಮನೆ ಸುತ್ತಾಡಿದ್ದಾಳೆ. ಪೂಜೆ ವೇಳೆ ಅಲ್ಲೇ ಇದ್ದ ಕಂಠಿ ಹಾರವೂ ಸುಲೋಚನಾ ಕಣ್ಣಿಗೆ ಬಿದ್ದಿದೆ. ಇದು ಒರಿಜಿನಲ್ಲಾ ಎಂದು ಕೇಳಿದ್ದಾಳೆ. ಇದು ವಂಶಪಾರಂಪರ್ಯವಾಗಿ ಬಂದ ಹಾರ. ಈ ಮನೆಗೆ ಬರುವ ಸೊಸೆಗೆ ಸೇರಬೇಕಾದ ಹಾರ ಎಂದಿದ್ದಾಳೆ ಭಾರ್ಗವಿ. ಅಷ್ಟು ಹೇಳಿದ್ದೇ ತಡ, ಹಾಗಾದರೆ ಈ ಹಾರ ನಮ್ಮ ಸೀತಾಗೆ ಸೇರುತ್ತಾ? ಎನ್ನುತ್ತಲೇ ಕೈಗೆತ್ತಿಕೊಂಡಿದ್ದಾಳೆ. ಸೀತಾ ಇಲ್ನೋಡೆ ಎನ್ನುತ್ತ, ಕೈ ತಪ್ಪಿ ಅದೇ ಹಾರ ಸೀತಾಳ ಕೊರಳಿಗೆ ಬಿದ್ದಿದೆ.
ವಾಣಿಯ ಮಾತಿಂದ ಭಾರ್ಗವಿಗೆ ನಡುಕ
ಆ ಹಾರ ಸೀತಾಳ ಕೊರಳಿಗೆ ಬೀಳುತ್ತಿದ್ದಂತೆ, ಇತ್ತ ಭಾರ್ಗವಿ ನಿಗಿ ನಿಗಿ ಕೆಂಡದಂತಾಗಿದ್ದಾಳೆ. ಇನ್ನೊಂದು ಕಡೆ, ಭಾರ್ಗವಿ ನಿನ್ನ ಸ್ಥಾನವನ್ನು ಸೀತಾ ಆಕ್ರಮಿಸಿಕೊಳ್ಳಲಿದ್ದಾಳೆ. ನಿನ್ನ ಪಾಪದ ಕೊಡ ತುಂಬ್ತಾಯಿದೆ. ನನ್ನ ಸೊಸೆ ಬರ್ತಿದ್ದಾಳೆ ಎಂಬ ವಾಣಿಯ ಮಾತು ಭಾರ್ಗವಿ ಕಿವಿಗೆ ಮಾರ್ಧನಿಸಿದೆ. ಆ ಹಾರ ಸೀತಾ ಕೊರಳಿಗೆ ಬೀಳುತ್ತಿದ್ದಂತೆ, ಅಲ್ಲೇ ಇದ್ದ ಸೂರ್ಯಪ್ರಕಾಶ್ ದೇಸಾಯಿ ಮೊಗದಲ್ಲಿ ನಗು ಉಕ್ಕುತ್ತದೆ. ನೋಡಮ್ಮ ಸೀತಾ ನನ್ನ ಸೊಸೆ ವಾಣಿ, ನಿನಗೆ ಈ ಮೂಲಕ ಆಶೀರ್ವಾದ ಮಾಡಿ ಬಿಟ್ಟಳು ಎಂದಿದ್ದಾನೆ. ಅದರ ಸಂಕೇತವಾಗಿ ಆಕೆಯ ಹಾರ ನಿನ್ನ ಕೊರಳಿಗೇ ಬಿದ್ದು ಬಿಟ್ಟಿದೆ ಎಂದಿದ್ದಾನೆ.
ಸುಲೋಚನಾಗೆ ಥ್ಯಾಂಕ್ಸ್ ಹೇಳಿದ ವೀಕ್ಷಕರು
ಈ ವರೆಗೂ ಸೀತಾಳಿಗೆ ಶಪಿಸುತ್ತಲೇ ಬರುತ್ತಿದ್ದ ಅತ್ತಿಗೆ ಸುಲೋಚನಾ, ಮೊದಲ ಸಲ ಒಳ್ಳೆಯ ಕೆಲಸ ಮಾಡಿದ್ದಾಳೆ ವೀಕ್ಷಕರು ಹೇಳುತ್ತಿದ್ದಾರೆ. ಆ ಹಾರವನ್ನು ಸೀತಾ ಕೊರಳಿಗೆ ಹಾಕಿದ್ದಕ್ಕೆ ಥ್ಯಾಂಕ್ಸ್ ಹೇಳುತ್ತಿದ್ದಾರೆ. ಹಾರ ಯಾರಿಗೆ ಸೇರಬೇಕೋ ಅವರ ಕೊರಳಿಗೇ ಬಿದ್ದಿದೆ ಎನ್ನುತ್ತಿದ್ದಾರೆ.
ಸೀತಾ ರಾಮ ಧಾರಾವಾಹಿ ಪಾತ್ರವರ್ಗ
ನಿರ್ದೇಶಕ: ಮಧುಸೂಧನ್
ಗಗನ್ ಶ್ರೀನಿವಾಸ್: ಶ್ರೀರಾಮ (ನಾಯಕ)
ವೈಷ್ಣವಿ ಗೌಡ: ಸೀತಾ (ನಾಯಕ)
ರೀತು ಸಿಂಗ್: ಸಿಹಿ (ಸೀತಾ ಮಗಳು)
ಅಶೋಕ ಶರ್ಮಾ: ಅಶೋಕ (ಶ್ರೀರಾಮನ ಪ್ರಾಣ ಸ್ನೇಹಿತ)
ಭಾರ್ಗವಿ: ಪೂಜಾ ಲೋಕೇಶ್ (ಶ್ರೀರಾಮನ ಚಿಕ್ಕಮ್ಮ)
ಮುಖ್ಯಮಂತ್ರಿ ಚಂದ್ರು: ಸೂರ್ಯ ಪ್ರಕಾಶ್ ದೇಸಾಯಿ (ಶ್ರೀರಾಮನ ತಾತ)
ಶ್ವೇತಾ ಶಂಕರಪ್ಪ: ಪ್ರಿಯಾ (ಸೀತಾಳ ಸ್ನೇಹಿತೆ)
ವಿಕಾಸ್ ಕಾರ್‌ಗೋಡ್: ಲಾಯರ್ ರುದ್ರಪ್ರತಾಪ್
ಸತೀಶ್ ಚಂದ್ರ: ಚರಣ್. ಡಿ
ಪೂರ್ಣಚಂದ್ರ ತೇಜಸ್ವಿ: ವಿಶ್ವಜೀತ್ (ಶ್ರೀರಾಮನ ಚಿಕ್ಕಪ್ಪ)
ಜಯದೇವ್ ಮೋಹನ್: ಸತ್ಯಜೀತ್ (ಶ್ರೀರಾಮನ ಚಿಕ್ಕಪ್ಪ)
ವಿಭಾಗ