Seetha Rama: ಅಶೋಕನ ಅರಿವಿನ ಮಾತನ್ನೇ ಗಮನಿಸದ ರಾಮ!‌ ಸ್ನೇಹಿತನ ಸಲಹೆಗೂ ಸಿಗದ ಕಿಮ್ಮತ್ತು
ಕನ್ನಡ ಸುದ್ದಿ  /  ಮನರಂಜನೆ  /  Seetha Rama: ಅಶೋಕನ ಅರಿವಿನ ಮಾತನ್ನೇ ಗಮನಿಸದ ರಾಮ!‌ ಸ್ನೇಹಿತನ ಸಲಹೆಗೂ ಸಿಗದ ಕಿಮ್ಮತ್ತು

Seetha Rama: ಅಶೋಕನ ಅರಿವಿನ ಮಾತನ್ನೇ ಗಮನಿಸದ ರಾಮ!‌ ಸ್ನೇಹಿತನ ಸಲಹೆಗೂ ಸಿಗದ ಕಿಮ್ಮತ್ತು

ಪರೋಕ್ಷವಾಗಿ ಮನೆಯಲ್ಲಿನ ಸಮಸ್ಯೆ ಜತೆಗೆ ಮದುವೆ ವಿಚಾರ ಪ್ರಸ್ತಾಪಿಸಿದ್ದಕ್ಕೆ ಅಶೋಕನ ಮೇಲೆ ರೇಗಾಡಿದ್ದಾನೆ ರಾಮ. ಸ್ನೇಹಿತ ಅಶೋಕನ ಆ ಮಾತಲ್ಲೇ ಅಡಗಿದ್ದ ಸತ್ಯ ದರ್ಶನ ರಾಮನಿಗೆ ತಿಳಿಯುವುದು ಯಾವಾಗ?

Seetha Rama: ಅಶೋಕನ ಅರಿವಿನ ಮಾತನ್ನೇ ಗಮನಿಸದ ರಾಮ!‌ ಸ್ನೇಹಿತನ ಸಲಹೆಗೂ ಸಿಗದ ಕಿಮ್ಮತ್ತು
Seetha Rama: ಅಶೋಕನ ಅರಿವಿನ ಮಾತನ್ನೇ ಗಮನಿಸದ ರಾಮ!‌ ಸ್ನೇಹಿತನ ಸಲಹೆಗೂ ಸಿಗದ ಕಿಮ್ಮತ್ತು

Seetha Rama: ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಸೀತಾಳ ಮನೆಯಲ್ಲಿ ಹಬ್ಬದೂಟ ಸಿದ್ಧವಾಗಿದೆ. ಅತ್ತ ರಾಮ್‌ ಮನೆಯಲ್ಲೂ ಬಗೆಬಗೆ ಖಾದ್ಯಗಳು. ಹಬ್ಬದ ಪ್ರಯುಕ್ತ ತನ್ನ ಫ್ರೆಂಡ್‌ಗೆ ಮನೆಗೆ ಊಟಕ್ಕೆ ಕರೆಯುತ್ತಾಳೆ ಸಿಹಿ. ನೀನು ಬರೋವರೆಗೂ ಊಟ ಮಾಡಲ್ಲ ಎನ್ನುತ್ತಾಳೆ. ಮನೆಯಲ್ಲಿ ಮೊದಲೇ ಹೊಟ್ಟೆ ತುಂಬ ಊಟ ಮಾಡಿದ್ದ ರಾಮ್‌, ಸೀತಾಳ ಮನೆಗೆ ಬರುತ್ತಾನೆ. ಮನೆಗೆ ಬಂದ ರಾಮ್‌ಗೆ ಸಿಹಿಯೇ ಕೈತುತ್ತು ತಿನ್ನಿಸುತ್ತಾಳೆ. ಕೆಮ್ಮಿದರೆ ನೀರು ಕುಡಿಸುತ್ತಾಳೆ. ಊಟದ ಬಳಿಕ ಎಲ್ಲರೂ ಅಂತ್ಯಾಕ್ಷರಿಯಲ್ಲೂ ಭಾಗವಹಿಸುತ್ತಾರೆ.

ಬಳಿಕ ಲಾಯರ್‌ ರುದ್ರಪ್ರತಾಪ್‌ನಿಂದಲೂ ಸೀತಾಳಿಗೆ ಫೋನ್‌ ಕರೆ ಬರುತ್ತದೆ. ಆದಷ್ಟು ಬೇಗ ನಿಮ್ಮ ಸ್ಯಾಲರಿ ಸ್ಲೀಪ್‌ ಬೇಕು. ಬೇಗ ತಂದುಕೊಟ್ರೆ, ಬ್ಯಾಂಕ್‌ನವರ ಮುಖಕ್ಕೆ ಅದನ್ನು ಎಸೆಯಬಹುದು ಎನ್ನುತ್ತಾನೆ. ಆದರೆ, ಮಗಳು ಸಿಹಿಯನ್ನು ಔಟಿಂಗ್‌ ಕರೆದೊಯ್ಯಲು ಪ್ಲಾನ್‌ ಮಾಡಿರುತ್ತಾಳೆ. ಲಾಯರ್ ರುದ್ರಪ್ರತಾಪ್‌ ಮಾತಿಗೆ ತಲೆಯಾಡಿಸುವ ಸೀತಮ್ಮನನ್ನು ನೋಡಿ ಬೇಜಾರು ಮಾಡಿಕೊಳ್ಳುತ್ತಾಳೆ ಸಿಹಿ. ಹೊರಗಡೆ ಹೋಗುವದರ ಜತೆಗೆ ಒಂದು ಸಣ್ಣ ಬದಲಾವಣೆ ಎಂದೂ ಹೇಳಿ ಸಿಹಿಯನ್ನು ಒಪ್ಪಿಸಿ ಆಫೀಸ್‌ಗೆ ಕರೆದೊಯ್ಯುತ್ತಾಳೆ ಸೀತಾ.

ಆಫೀಸ್‌ನಲ್ಲಿ ರಜಾ ದಿನವೂ ಅಶೋಕ್‌ ರಾಮನಿಂದ ಒಂದಷ್ಟು ಫೈಲ್‌ಗಳಿಗೆ ಸಹಿ ಮಾಡಿಸಿಕೊಳ್ಳುತ್ತಿರುತ್ತಾನೆ. ಈ ನಡುವೆ ಮನೆಯಲ್ಲಿನ ಒಂದಷ್ಟು ಬೆಳವಣಿಗೆ ಕಂಡು ರಾಮ್‌ ಬೇಸರ ವ್ಯಕ್ತಪಡಿಸುತ್ತಾನೆ. ಮನೆಯವರಲ್ಲಿ ಏನೋ ಸಮಸ್ಯೆ ಇದೆ ಎಂದು ರಾಮ್‌ ಹೇಳಿಕೊಳ್ಳುತ್ತಾನೆ. ಮನೆಯಲ್ಲಿ ಎಲ್ರೂ ಖುಷಿಯಿಂದ ಇಲ್ಲ, ಆ ಸಮಸ್ಯೆಯನ್ನು ನಾನೇ ಪರಿಹರಿಸಬೇಕು ಎಂದು ಅಶೋಕನ ಮುಂದೆ ಹೇಳಿಕೊಳ್ಳುತ್ತಾನೆ. ನಮ್ಮ ಮನೆ ವಿಶಾಲವಾಗಿದೆ. ಎಲ್ಲರೂ ಒಟ್ಟಿಗೆ ಇಲ್ಲ. ಅದೇ ಸೀತಾ ಮನೆಯಲ್ಲಿ, ವಠಾರದಲ್ಲಿ ಗೋಡೆಗಳಿದ್ದರೂ ಎಲ್ಲರೂ ಒಟ್ಟಿಗಿದ್ದಾರೆ. ನಮ್ಮ ಮನೆಯಲ್ಲಿ ಹಾಗಿಲ್ಲ ಎನ್ನುತ್ತಾನೆ. ಇದೆಲ್ಲವನ್ನು ನೋಡಿ ರಾಮ ಇದ್ದಕ್ಕಿದ್ದಂತೆ ಬುದ್ಧ ಆದಂತಿದೆ ಎಂದು ಕಿಚಾಯಿಸುತ್ತಾನೆ ಅಶೋಕ.

ಇದೇ ಸರಿಯಾದ ಸಮಯ ಎಂದು ನಿನೇಕೆ ಮದುವೆಯಾಗಬಾರದು ಎಂದು ರಾಮನಿಗೆ ಕೇಲುತ್ತಾನೆ ಅಶೋಕ. ಅಶೋಕನ ಮಾತಿನಿಂದ ಕೊಂಚ ಕೋಪಗೊಳ್ಳುವ ರಾಮ, ಆ ವಿಚಾರ ಬಿಟ್ಟು ಬೇರೆ ಮಾತಾಡು ಎನ್ನುತ್ತಾನೆ. ಮತ್ತೆ ಮದುವೆ ವಿಚಾರವನ್ನೇ ಪ್ರಸ್ತಾಪಿಸುವ ಅಶೋಕ, ಮಲೇಷ್ಯಾದಿಂದ ಭಾರತಕ್ಕೆ ಬರುವಾಗ ತಾನು ಹೇಳಿದ ಮಾತನ್ನು ನೆನಪಿಸುತ್ತಾನೆ. ಮೊದಲು ಕಾಣುವ ಹುಡುಗಿ ನಿನಗೆ ಇಷ್ಟ ಆಗ್ತಾಳೆ. ಅವಳ ಮೇಲೆ ಪ್ರೀತಿ ಮೂಡುತ್ತದೆ ಎಂದಿರುತ್ತಾನೆ. ಸೀತಾ ಮತ್ತು ಸಿಹಿಯ ಬಗ್ಗೆ ಮಾತನಾಡುತ್ತಾನೆ. ಸೀತಾ ಮತ್ತು ಸಿಹಿ ಜತೆಗಿದ್ದಾಗ ನೀನು ಎಷ್ಟು ಸಂತೋಷದಿಂದ ಇರ್ತಿಯಾ ಎಂದು ಹೇಳುತ್ತಾನೆ. ಸಿಹಿ ಪುಟ್ಟ ನಿನ್ನನ್ನು ಎಷ್ಟು ಇಷ್ಟಪಡ್ತಾಳೆ ಎಂದೂ ಹೇಳುತ್ತಾನೆ. ಆದರೆ, ಇದ್ಯಾವುದನ್ನೂ ತಲೆಗೆ ಹಾಕಿಕೊಳ್ಳದ ರಾಮ, ಮನೆಯ ವಿಚಾರದಲ್ಲಿ ಮುಳುಗಿರುತ್ತಾನೆ.

ಇತ್ತ ಸ್ಯಾಲರಿ ಸ್ಲಿಪ್‌ ತೆಗೆದುಕೊಳ್ಳಲು ಆಫೀಸ್‌ಗೆ ಬಂದಿರುತ್ತಾಳೆ ಸೀತಾ. ಅಲ್ಲೇ ಇದ್ದ ರಾಮನನ್ನೂ ನೋಡಿದ ಸಿಹಿ, ಫ್ರೆಂಡ್‌ ಎಂದು ಓಡಿ ಹೋಗಿ ಅಪ್ಪಿಕೊಳ್ಳುತ್ತಾಳೆ. ಬೇಸರಲ್ಲಿದ್ದ ರಾಮನ ಮೊಗದಲ್ಲಿ ನಗು ಮೂಡುತ್ತದೆ. ಸೀತಾ ಆಫೀಸ್‌ಗೆ ಬಂದ ವಿಚಾರವನ್ನು ಅಶೋಕ ಕೇಳುತ್ತಾನೆ. ಸೀತಾ ಲಾಯರ್‌ ವಿಚಾರವನ್ನು ಪ್ರಸ್ತಾಪಿಸುತ್ತಾಳೆ. ಇತ್ತ ಇದೇ ಸರಿಯಾದ ಸಮಯ ಎಂದು ಕಂಪನಿ ಕೆಲಸಗಾರರಿಗೆ ಅಡ್ವಾನ್ಸ್‌ ಸ್ಯಾಲರಿ ನೀಡುವ ವಿಚಾರವನ್ನೂ ಬಾಸ್‌ ಅಶೋಕ್‌ ಮುಂದೆ ಹೇಳುತ್ತಾನೆ ರಾಮ್.‌ ಬಳಿಕ ಅದೇ ಖುಷಿಯಲ್ಲಿ ರಾಮನನ್ನು ನಮ್ಮ ಜತೆಗೆ ಹೊರಗಡೆ ಸುತ್ತಾಡಲು ಕಳಿಸುವಂತೆ ಕೇಳುತ್ತಾಳೆ ಸಿಹಿ. ಅಶೋಕ್‌ ಕಡೆಯಿಂದಲೂ ಇಡೀ ದಿನ ಇವರ ಜತೆಗೆ ಕಳೆಯುವಂತೆ ಆದೇಶ ಹೊರಡಿಸುತ್ತಾನೆ. ಇತ್ತ ಸಿಹಿ ಖುಷಿಯಲ್ಲಿಯೇ ಫ್ರೆಂಡ್‌ ಜತೆ ಹೊರಬರುತ್ತಾನೆ.

ಮನರಂಜನೆ ಕುರಿತ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

Whats_app_banner