Seetha Rama Serial: ರಾಮ ಮತ್ತೆ ಮೊದಲಿನಂತಾಗೋ ಹೊತ್ತಲ್ಲಿ, ಆಫೀಸ್‌ನಲ್ಲಿ ಸೀತಾಳ ಮೇಲೆ ಶುರುವಾಯ್ತು ಚಾಂದಿನಿ ದರ್ಪ!-kannada television news seetha rama serial monday march 4th episode highlights seetha raama serial latest updates mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Seetha Rama Serial: ರಾಮ ಮತ್ತೆ ಮೊದಲಿನಂತಾಗೋ ಹೊತ್ತಲ್ಲಿ, ಆಫೀಸ್‌ನಲ್ಲಿ ಸೀತಾಳ ಮೇಲೆ ಶುರುವಾಯ್ತು ಚಾಂದಿನಿ ದರ್ಪ!

Seetha Rama Serial: ರಾಮ ಮತ್ತೆ ಮೊದಲಿನಂತಾಗೋ ಹೊತ್ತಲ್ಲಿ, ಆಫೀಸ್‌ನಲ್ಲಿ ಸೀತಾಳ ಮೇಲೆ ಶುರುವಾಯ್ತು ಚಾಂದಿನಿ ದರ್ಪ!

ರಾಮ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿ ಮನೆಗೆ ಮರಳಿದ್ದಾನೆ. ಸೀತಾ ಮತ್ತು ಸಿಹಿಗೆ ವಿಡಿಯೋ ಕಾಲ್‌ ಮಾಡಿ ಮಾತನಾಡಿ, ಮನಸು ಹಗುರ ಮಾಡಿಕೊಂಡಿದ್ದಾನೆ. ಮತ್ತೊಂದೆಡೆ ಆಫೀಸ್‌ನಲ್ಲಿ ಚಾಂದಿನಿಯ ದರ್ಪ ಶುರುವಾದರೆ, ಅಶೋಕನ ತಂಗಿಯ ಮೇಲೆ ಕಣ್ಣು ಹಾಕಿದ್ದಾನೆ ಲಾಯರ್.‌

Seetha Rama Serial: ರಾಮ ಮತ್ತೆ ಮೊದಲಿನಂತಾಗೋ ಹೊತ್ತಲ್ಲಿ, ಆಫೀಸ್‌ನಲ್ಲಿ ಸೀತಾಳ ಮೇಲೆ ಶುರುವಾಯ್ತು ಚಾಂದಿನಿ ದರ್ಪ!
Seetha Rama Serial: ರಾಮ ಮತ್ತೆ ಮೊದಲಿನಂತಾಗೋ ಹೊತ್ತಲ್ಲಿ, ಆಫೀಸ್‌ನಲ್ಲಿ ಸೀತಾಳ ಮೇಲೆ ಶುರುವಾಯ್ತು ಚಾಂದಿನಿ ದರ್ಪ!

Seetha Rama Serial: ರಾಮ ಗುಣಮುಖನಾಗಿ ಮತ್ತೆ ಮೊದಲಿನಂತಾಗಲಿ ಎಂದು ಎಷ್ಟೋ ಜೀವಗಳು ಬೇಡಿಕೊಳ್ಳುತ್ತಿವೆ. ಸೀತಾ ಆ ಶ್ರೀರಾಮನ ಮೊರೆ ಹೋದರೆ, ಸಿಹಿ ಶ್ರೀರಾಮ ನಾಮಾವಳಿ ಬರೆಯುತ್ತಿದ್ದಾಳೆ. ಇತ್ತ ಅಶೋಕ ಜೀವವನ್ನೇ ಹಿಡಿದು ರಾಮನಿಗಾಗಿ ನಿಂತಿದ್ದಾನೆ. ತಾತ ಸೂರ್ಯಪ್ರಕಾಶ್ ಏನೂ ತಿಳಿಯದೇ ಮೌನಕ್ಕೆ ಜಾರಿದ್ದಾನೆ. ಈ ನಡುವೆ ಭಾರ್ಗವಿ ಮಾತ್ರ ಕೆಡುಕು ಬಯಸುವ ಕೆಲಸವನ್ನೇ ಮುಂದುವರಿಸಿದ್ದಾಳೆ. ಆದರೆ, ಸಿಹಿಯ ಬೇಡಿಕೆ, ಸೀತಾಳ ಹಾರೈಕೆ, ಅಶೋಕನ ಆರೈಕೆ ಹೀಗೆ ರಾಮನ ಸುತ್ತ ಒಳ್ಳೆಯತನವೇ ತುಂಬಿಕೊಳ್ತಿದೆ!

ಸಿಹಿ ಮತ್ತು ಸೀತಾಳನ್ನು ನೋಡಬೇಕೆಂಬ ಆಸೆ ರಾಮ್‌ಗೂ ಮೂಡಿತ್ತು. ರಾಮನ ಆ ಬಯಕೆಯನ್ನು ಅರಿತ ಅಶೋಕ ಸೀತಾಗೆ ವಿಡಿಯೋ ಕಾಲ್‌ ಮಾಡಿದ್ದ. ಬಾಡಿದ್ದ ಸಿಹಿಯ ಮುಖ ಫ್ರೆಂಡ್‌ ಫೋನ್‌ ಬರ್ತಿದ್ದಂತೆ ಅರಳಿ ನಿಂತಿತು. ಖುಷಿಯಲ್ಲಿಯೇ ರಾಮ್‌ ಜತೆ ಮಾತನಾಡಿದಳು. ತಾನೇ ಬರೆದ 101 ಶ್ರೀರಾಮನ ನಾಮಾವಳಿಯನ್ನು ತೋರಿಸಿ, ಆದಷ್ಟು ಬೇಗ ನೀನು ಹುಷಾರಾಗಲಿ ಎಂದು ಈ ರೀತಿ ಮಾಡ್ತಿದ್ದೇನೆ ಎಂದಳು. ಸಿಹಿಯ ಮುಗ್ಧತೆಗೆ ರಾಮ ಕರಗಿ ಹೋದ. ಅಲ್ಲೇ ಇದ್ದ ಸೀತಾ ಸಹ ರಾಮನ ಚೇತರಿಕೆ ಕಂಡು ನಿಟ್ಟುಸಿರು ಬಿಟ್ಟಿದ್ದಾಳೆ.

ಅಂಜಲಿ ಹಿಂದೆ ಬಿದ್ದ ರುದ್ರಪ್ರತಾಪ್

ಈ ನಡುವೆ ರಾಮನ ಆರೋಗ್ಯ ವಿಚಾರಿಸಲು ಅಶೋಕನ ತಂಗಿ ಅಂಜಲಿ ರಾಮನ ಮನೆಗೆ ಬಂದಿದ್ದಾಳೆ. ರಾಮನ ಆರೋಗ್ಯ ದಿನೇದಿನೆ ಸುಧಾರಿಸುತ್ತಿದೆ ಎಂಬ ವಿಚಾರವನ್ನೂ ಅಣ್ಣ ಅಶೋಕನ ಮುಂದೆ ಹೇಳಿದ್ದಾಳೆ. ಇದೇ ವೇಳೆ ಅಂಜಲಿ ಬೆನ್ನು ಬಿದ್ದಿದ್ದಾನೆ ಲಾಯರ್‌ ರುದ್ರಪ್ರತಾಪ್. ರಾಮು ಎಂಬ ಹೆಸರು ಹೇಳಿಕೊಂಡು, ಟ್ರೀಟ್‌ಮೆಂಟ್‌ ವಿಚಾರವಾಗಿ ಆಕೆಗೆ ಪದೇಪದೆ ಫೋನ್‌ ಮಾಡುತ್ತಿದ್ದಾನೆ. ಇದು ಅಂಜಲಿಗೂ ಕೊಂಚ ಕಿರಿಕಿರಿ ಅನಿಸಿದೆ. ಫೋನ್‌ ಇಟ್ಟ ಬಳಿಕ ಮತ್ತೆ ಹಲ್ಲು ಮಸಿಯುತ್ತ ತನ್ನ ಕೋಪತಾಪ ಹೊರಹಾಕಿದ್ದಾನೆ ರುದ್ರಪ್ರತಾಪ್.

ಪ್ರೀತಿಯ ಸೋಗು ಮುಂದುವರಿಸಿದ ಹಳೇ ಪ್ರೇಯಸಿ

ನೀನು ರಾಮನ ಒಲಿಸಿಕೊಳ್ಳುವುದಷ್ಟೇ ಅಲ್ಲ, ದೇಸಾಯಿ ಮನೆಯ ಸೊಸೆಯೂ ಆಗಬಹುದು ಎಂಬ ಭಾರ್ಗವಿಯ ಮಾತು ಚಾಂದಿನಿ ಮನದಲ್ಲಿದೆ. ಆ ಮಾತಂತೆ, ರಾಮನ ಮುಂದೆ ಮತ್ತೆ ಹಾಜರಿ ಹಾಕಿ ಪ್ರೀತಿಯ ಸೋಗಿಗೆ ಸಿದ್ಧತೆ ನಡೆಸಿದ್ದಾಳೆ. ಈ ನಡುವೆ ಅಚ್ಚರಿಯ ಬೆಳವಣಿಗೆಯಲ್ಲಿ ರಾಮ ಮತ್ತು ಅಶೋಕ ಇಲ್ಲದ ಹೊತ್ತಲ್ಲಿ, ಚಾಂದಿನಿ ಇಡೀ ಆಫೀಸ್‌ ಅನ್ನು ತನ್ನ ಕಂಟ್ರೋಲ್‌ಗೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾಳೆ. ಫಿನಾನ್ಸ್‌ ವಿಭಾಗದ ಹೆಡ್‌ ಆಗಿದ್ದಾಳೆ. ಆಫೀಸ್‌ನಲ್ಲಿ ತನ್ನದೇ ಆದ ಗತ್ತು ಪ್ರದರ್ಶಿಸುತ್ತಿದ್ದಾಳೆ.

ಹೀಗಿರುವಾಗಲೇ ಆಫೀಸ್‌ಗೆ ಬಂದ ಚಾಂದಿನಿ, ಎಲ್ಲರಿಗೂ ಹಾಯಗ ಗಾಯ್ಸ್‌ ಎಂದು ಹೇಳುತ್ತ ಎಂಟ್ರಿಕೊಟ್ಟಿದ್ದಾಳೆ. ಕಳೆದ ವರ್ಷದ ಹಣಕಾಸು ಲೆಕ್ಕದ ಬಗ್ಗೆ ನನಗೆ ಯಾರಾದ್ರೂ ಮಾಹಿತಿ ನೀಡಬಹುದಾ ಎಂದು ಕೇಳಿದ್ದಾಳೆ. ಆಗ ಅಲ್ಲೇ ಇದ್ದ ಸಹದ್ಯೋಗಿ ಒಬ್ಬರು ಅದಕ್ಕೆ ಸೀತಾ ಬೆಸ್ಟ್‌ ಎಂದು ಹೇಳಿ ನಮ್ಮ ಆಫೀಸ್‌ನ ಬೆಸ್ಟ್‌ ಎಂಪ್ಲಾಯಿ ಎಂದೂ ಸೀತಾಳನ್ನು ಇಂಟ್ರಡ್ಯೂಸ್‌ ಮಾಡಿದ್ದಾರೆ. ಈ ಮೂಲಕ ಸೀತಾ ಮತ್ತು ಚಾಂದಿನಿ ಅಧಿಕೃತವಾಗಿ ಮೊದಲ ಸಲ ಮುಖಾಮುಖಿಯಾಗಿದ್ದಾರೆ.

ಚಾಂದಿನಿ ದರ್ಪಕ್ಕೆ ಕಿಡಿ

ಹೌದು ನಾನೇ ಸೀತಾ ಎನ್ನುತ್ತಿದ್ದಂತೆ, ಸರಿ ನನ್ನ ಕ್ಯಾಬಿನ್‌ಗೆ ಬನ್ನಿ ಎಂದಿದ್ದಾಳೆ ಚಾಂದಿನಿ. ಇದಕ್ಕೆ ಓಕೆ ಎಂದಿದ್ದಾಳೆ ಸೀತಾ. ಅಷ್ಟಕ್ಕೇ ಸುಮ್ಮನಾಗದ ಚಾಂದಿನಿ, ಬರೀ ಓಕೆ ಎನ್ನುವುದಷ್ಟೇ ಅಲ್ಲ. ಮ್ಯಾಮ್‌ ಅನ್ನಬೇಕು. ನಾನು ಅದನ್ನು ಬಯಸ್ತೀನಿ ಎಂದು ಸೊಕ್ಕಿನಿಂದಲೇ ಸೀತಾಗೆ ಹೇಳಿದ್ದಾಳೆ ಚಾಂದಿನಿ. ಅಲ್ಲೇ ಇದ್ದ ಪ್ರಿಯಾ ಸಹ ಕೊಂಚ ಗರಂ ಆಗಿದ್ದಾಳೆ. ಯಾರೇ ಇವಳು, ಮುಖ ನೋಡಿದರೆ, ಬರೀ ಕೊಬ್ಬೇ ಇದೆ ಇವಳಿಗೆ ಎಂದಿದ್ದಾಳೆ. ಇನ್ನು ಕೆಲವರು, ರಾಮ್‌ ಅವರಿಗೆ ಸರ್‌ ಎಂದರೆ ಬೇಡ ಜಸ್ಟ್‌ ಕಾಲ್‌ ಮಿ ರಾಮ್‌ ಅಂತಾರೆ, ಇವ್ರೇನ್‌ ಗುರು ಹೀಗಾಡ್ತಾರೆ ಎಂದು ಮಾತನಾಡಿಕೊಂಡಿದ್ದಾರೆ.