Seetha Rama Serial: ಹಾರಿ ಹೋಗುತ್ತಿದ್ದ ಪ್ರೀತಿ ಹಕ್ಕಿಯನ್ನು ಅಡ್ಡಗಟ್ಟಿ ನಿಲ್ಲಿಸಿಯೇ ಬಿಟ್ಟ ರಾಮ! ಫ್ಲಾಪ್‌ ಆಯ್ತಾ ಭಾರ್ಗವಿಯ ಸಂಚು?
ಕನ್ನಡ ಸುದ್ದಿ  /  ಮನರಂಜನೆ  /  Seetha Rama Serial: ಹಾರಿ ಹೋಗುತ್ತಿದ್ದ ಪ್ರೀತಿ ಹಕ್ಕಿಯನ್ನು ಅಡ್ಡಗಟ್ಟಿ ನಿಲ್ಲಿಸಿಯೇ ಬಿಟ್ಟ ರಾಮ! ಫ್ಲಾಪ್‌ ಆಯ್ತಾ ಭಾರ್ಗವಿಯ ಸಂಚು?

Seetha Rama Serial: ಹಾರಿ ಹೋಗುತ್ತಿದ್ದ ಪ್ರೀತಿ ಹಕ್ಕಿಯನ್ನು ಅಡ್ಡಗಟ್ಟಿ ನಿಲ್ಲಿಸಿಯೇ ಬಿಟ್ಟ ರಾಮ! ಫ್ಲಾಪ್‌ ಆಯ್ತಾ ಭಾರ್ಗವಿಯ ಸಂಚು?

Seetha Rama Serial Episode: ಜೀ ಕನ್ನಡ ಚಾನೆಲ್‌ನಲ್ಲಿ ಪ್ರಸಾರವಾಗುವ ಧಾರಾವಾಹಿ 'ಸೀತಾ ರಾಮ' ಇದೀಗ ನೋಡುಗರ ಗಮನ ಸೆಳೆಯುವುದರ ಜತೆಗೆ ರೋಚಕತೆ ಹೆಚ್ಚಿಸುತ್ತಿದೆ. ನವೆಂಬರ್‌ 16ರ ಸಂಚಿಕೆಯಲ್ಲಿ ಏನೆಲ್ಲಾ ಆಯಿತು ಎಂಬ ವಿವರ ಇಲ್ಲಿದೆ. ಟ್ರಾನ್ಸ್‌ಫರ್‌ ಪಡೆದು ಬೆಳಗಾವಿಗೆ ಹೊರಟ ಸೀತಾಳನ್ನು ತಡೆದು ನಿಲ್ಲಿಸಿದ್ದಾನೆ ರಾಮ

Seetha Rama Kannada Serial November 16h Episode: ಜೀ ಕನ್ನಡ ಚಾನೆಲ್‌ನಲ್ಲಿ ಪ್ರಸಾರವಾಗುವ ಸೀತಾ ರಾಮ ಧಾರಾವಾಹಿಯ ದೃಶ್ಯ
Seetha Rama Kannada Serial November 16h Episode: ಜೀ ಕನ್ನಡ ಚಾನೆಲ್‌ನಲ್ಲಿ ಪ್ರಸಾರವಾಗುವ ಸೀತಾ ರಾಮ ಧಾರಾವಾಹಿಯ ದೃಶ್ಯ

ಸೀತಾ ರಾಮ ಧಾರಾವಾಹಿ ನವೆಂಬರ್‌ 16ರ ಸಂಚಿಕೆ: ಸೀತಾಳಿಗೆ ಬೆಳಗಾವಿಗೆ ವರ್ಗಾವಣೆ ಆಗಿದೆ. ಚರಂಡಿಯೊಬ್ಬನನ್ನು ಬಿಟ್ಟು ಬೇಸರದಲ್ಲಿಯೇ ಇಡೀ ಆಫೀಸ್‌ನವರು ಸೀತಾಳಿಗೆ ಬೀಳ್ಕೊಟ್ಟಿದ್ದಾರೆ. ಇತ್ತ ರಾಮ ಏನೂ ಮಾಡದ ಅಸಹಾಯಕ ಸ್ಥಿತಿಗೆ ಜಾರಿದ್ದಾನೆ. ಸ್ನೇಹಿತ ಅಶೋಕನಿಗೂ ಇದು ಭಾರ್ಗವಿಯ ಕೈವಾಡ ಎಂಬುದು ಗೊತ್ತಾಗಿದೆ. ಆದರೆ, ಅದನ್ನು ಹೇಳುವ ಸ್ಥಿತಿಯಲ್ಲಿ ಆತನಿಲ್ಲ. ಇತ್ತ ಯುದ್ಧ ಗೆದ್ದ ಖುಷಿಯ ಅಲೆಯಲ್ಲಿ ತೇಲುತ್ತಿದ್ದಾಳೆ ಭಾರ್ಗವಿ.

ಮತ್ತೊಂದೆಡೆ ಮನೆಗೆ ಬಂದ ಸೀತಾ, ಸಿಹಿಯನ್ನು ಕರೆದುಕೊಂಡು ಬೆಳಗಾವಿಗೆ ಹೊರಟು ನಿಂತಿದ್ದಾಳೆ. ಟ್ರಿಪ್‌ ಹೋಗುವ ಖುಷಿಯಲ್ಲಿದ್ದಾಳೆ ಸಿಹಿ. ಆದರೆ, ಶಾಂತಮ್ಮನ ವಠಾರದಲ್ಲೂ ಸೀತಾಳಿಗೆ ನೋವಿನ ಬೀಳ್ಕೊಡುಗೆ ಸಿಕ್ಕಿದೆ. ಅಜ್ಜಿ ತಾತ ಬೇಸರದಲ್ಲಿಯೇ ಕಣ್ಣೀರಾಗಿದ್ದಾರೆ. ಇತ್ತ ಮತ್ತೊಂದು ಕಡೆಗೆ ರಾಮನಿಗೆ ಏನು ಮಾಡಬೇಕೆಂಬುದೇ ತೋಚುತ್ತಿಲ್ಲ. ನೇರವಾಗಿ ತಾತನ ಬಳಿ ಬಂದು ಭಾವನೆಗಳು ವ್ಯವಹಾರದಲ್ಲಿ ಮಿಶ್ರಣವಾದರೆ ಏನು ಮಾಡುವುದೆಂದು ಪ್ರಶ್ನೆ ಮಾಡಿದ್ದಾನೆ.

ಅದಕ್ಕೆ ಉತ್ತರವಾಗಿ, ಬಿಜಿನೆಸ್‌ನಲ್ಲಿ ಎಮೋಷನ್ಸ್‌ ಬರೋದು ತಪ್ಪಲ್ಲ. ಅದೇ ಭಾವನೆಗಳಿಂದ ತಪ್ಪು ತಪ್ಪು ನಿರ್ಧಾರ ತೆಗೆದುಕೊಳ್ಳುವುದು ತಪ್ಪು ಎಂದು ತಿಳಿಸಿ ಹೇಳಿದ್ದಾನೆ.‌ ನಿನ್ನ ಮನಸ್ಸು ಏನು ಹೇಳುತ್ತೋ ಅದನ್ನು ಮಾಡು ಎಂದೂ ಸಲಹೆ ನೀಡಿದ್ದಾನೆ. ಮನುಷ್ಯ ಎರಡು ಸಂದರ್ಭದಲ್ಲಿ ಕನ್‌ಫ್ಯೂಸ್‌ ಆಗುತ್ತಾನೆ. ಒಂದು ಪ್ರೀತಿಯ ಆರಂಭ, ಇನ್ನೊಂದು ಅದೇ ಪ್ರೀತಿಯನ್ನು ಕಳೆದುಕೊಳ್ಳುತ್ತಿರುವಾಗ. ಇದೀಗ ನಿನ್ನ ನೋಡಿದರೆ ಪ್ರೀತಿಗಾಗಿ ಹೋರಾಟ ಮಾಡುತ್ತಿರುವವನ ರೀತಿ ಕಾಣಿಸ್ತಿದಿಯಾ ಎಂದಿದ್ದಾನೆ ತಾತ ಸೂರ್ಯ ಪ್ರಕಾಶ್‌.

ಇನ್ನೊಂದು ಕಡೆ, ಫ್ರೆಂಡ್‌ ರಾಮ್‌ ಫೋನ್‌ ಬಾರದಿದ್ದಕ್ಕೆ ಸಿಹಿ ಬೇಸರಮಾಡಿಕೊಂಡಿದ್ದಾಳೆ. ವಿಡಿಯೋ ಕಾಲ್‌ನಲ್ಲಿಯೇ ಮಾತನಾಡುವಂತೆ ಎಂದು ಸಿಹಿಯನ್ನು ಕರೆದುಕೊಂಡು ಬಸ್‌ ಏರಿದ್ದಾಳೆ ಸೀತಾ. ಇತ್ತ ಸೀತಾ ಮತ್ತು ಸಿಹಿಯನ್ನು ಹುಡುಕಿಕೊಂಡು ಬಸ್‌ ನಿಲ್ದಾಣಕ್ಕೆ ಹೊರಟಿದ್ದಾರೆ ಅಶೋಕ ಮತ್ತು ರಾಮ. ಹೇಗಾದ್ರೂ ಮಾಡಿ, ಟ್ರಾನ್ಸ್‌ಫರ್‌ ಕ್ಯಾನ್ಸಲ್‌ ಮಾಡಬೇಕೆಂದು ಇಬ್ಬರೂ ಮಾತನಾಡಿಕೊಂಡಿದ್ದಾರೆ. ಬಸ್‌ ಏರಿ ಹೊರಟ ಸೀತಾಳನ್ನು ಕಾರ್‌ನಲ್ಲಿಯೇ ಫಾಲೋ ಮಾಡುತ್ತಿದ್ದಾನೆ ರಾಮ.

ಮಾವ ಸೂರ್ಯ ಪ್ರಕಾಶ್‌ ಬಳಿ ರಾಮನ ಗುಟ್ಟನ್ನು ಎಳೆ ಎಳೆಯಾಗಿ ಬಿಡಿಸಿಕೊಳ್ಳುವ ಪ್ರಯತ್ನದಲ್ಲಿದ್ದಾಳೆ ಭಾರ್ಗವಿ. ಆದರೆ, ಮಾವನಿಂದ ಯಾವುದೇ ಉತ್ತರ ಬಾರದಿದ್ದಕ್ಕೆ ಮತ್ತೆ ಗೊಂದಲಕ್ಕೀಡಾಗಿದ್ದಾಳೆ. ಸೀತಾ ಇದ್ದ ಕಾರ್‌ನ ಹಿಂಬಾಲಿಸಿ ಕೊನೆಗೂ ಅವಳಿದ್ದ ಕಾರ್ ಬಳಿ ಬಂದೇ ಬಿಟ್ಟಿದ್ದಾನೆ. ಫೋನ್‌ನಲ್ಲಿ ಕಾರ್‌ ನಿಲ್ಲಿಸುವಂತೆ ಹೇಳಿದರೂ, ರಾಮನ ಧ್ವನಿ ಸೀತಾಗೆ ಕೇಳಿಸುತ್ತಿಲ್ಲ. ಬೇರೆ ದಾರಿಯಿಲ್ಲದೆ, ಚಲಿಸುತ್ತಿದ್ದ ಬಸ್‌ಗೆ ಕಾರನ್ನೇ ಅಡ್ಡ ತಂದು ನಿಲ್ಲಿಸಿದ್ದಾನೆ ರಾಮ್.‌ ಟ್ರಾನ್ಸ್‌ಫರ್‌ ಕ್ಯಾನ್ಸಲ್‌ ಅನ್ನೋ ರಾಮನ ಮಾತನ್ನು ಸೀತಾ ನಂಬ್ತಾಳಾ? ಇತ್ತ ತನ್ನದೆಯಲ್ಲಿ ಬಚ್ಚಿಟ್ಟ ಪ್ರೀತಿಯನ್ನು ಸೀತಾಳ ಮುಂದೆ ತೆರೆದಿಡ್ತಾನಾ ರಾಮ್?‌ ಭಾರ್ಗವಿಯ ಟ್ರಾನ್ಸ್‌ಫರ್‌ ಸಂಚು ಫ್ಲಾಪ್‌ ಆಯ್ತಾ? ಕಾದು ನೋಡಬೇಕು.

Whats_app_banner