Seetha Rama Serial: ಸೀತಾಳನ್ನು ಟ್ರಾನ್ಸ್‌ಫರ್‌ ಮಾಡಿದ ಖುಷಿಯಲ್ಲಿ ಭಾರ್ಗವಿ ಬೀಗುತ್ತಿದ್ದರೆ, ಇತ್ತ ದೈವದ ಲೀಲೆಯೇ ಬೇರೆಯೇ ಆಗಿದೆ!
ಕನ್ನಡ ಸುದ್ದಿ  /  ಮನರಂಜನೆ  /  Seetha Rama Serial: ಸೀತಾಳನ್ನು ಟ್ರಾನ್ಸ್‌ಫರ್‌ ಮಾಡಿದ ಖುಷಿಯಲ್ಲಿ ಭಾರ್ಗವಿ ಬೀಗುತ್ತಿದ್ದರೆ, ಇತ್ತ ದೈವದ ಲೀಲೆಯೇ ಬೇರೆಯೇ ಆಗಿದೆ!

Seetha Rama Serial: ಸೀತಾಳನ್ನು ಟ್ರಾನ್ಸ್‌ಫರ್‌ ಮಾಡಿದ ಖುಷಿಯಲ್ಲಿ ಭಾರ್ಗವಿ ಬೀಗುತ್ತಿದ್ದರೆ, ಇತ್ತ ದೈವದ ಲೀಲೆಯೇ ಬೇರೆಯೇ ಆಗಿದೆ!

Seetha Rama Serial Episode: ಜೀ ಕನ್ನಡ ಚಾನೆಲ್‌ನಲ್ಲಿ ಪ್ರಸಾರವಾಗುವ ಧಾರಾವಾಹಿ 'ಸೀತಾ ರಾಮ' ಇದೀಗ ನೋಡುಗರ ಗಮನ ಸೆಳೆಯುವುದರ ಜತೆಗೆ ರೋಚಕತೆ ಹೆಚ್ಚಿಸುತ್ತಿದೆ. ನವೆಂಬರ್‌ 20ರ ಸಂಚಿಕೆಯಲ್ಲಿ ಏನೆಲ್ಲಾ ಆಯಿತು ಎಂಬ ವಿವರ ಇಲ್ಲಿದೆ. ಟ್ರಾನ್ಸ್‌ಫರ್‌ ಪಡೆದು ಬೆಳಗಾವಿಗೆ ಹೊರಟ ಸೀತಾಳನ್ನು ತಡೆದು ಮನೆಗೆ ಕರೆದೊಯ್ದಿದ್ದಾನೆ ರಾಮ.

Seetha Rama Serial: ಸೀತಾಳನ್ನು ಟ್ರಾನ್ಸ್‌ಫರ್‌ ಮಾಡಿದ ಖುಷಿಯಲ್ಲಿ ಭಾರ್ಗವಿ ಬೀಗುತ್ತಿದ್ದರೆ, ಇತ್ತ ದೈವದ ಲೀಲೆಯೇ ಬೇರೆಯೇ ಆಗಿದೆ!
Seetha Rama Serial: ಸೀತಾಳನ್ನು ಟ್ರಾನ್ಸ್‌ಫರ್‌ ಮಾಡಿದ ಖುಷಿಯಲ್ಲಿ ಭಾರ್ಗವಿ ಬೀಗುತ್ತಿದ್ದರೆ, ಇತ್ತ ದೈವದ ಲೀಲೆಯೇ ಬೇರೆಯೇ ಆಗಿದೆ!

Seetha Rama Serial: ಸೀತಾ ರಾಮ ಸೀರಿಯಲ್‌ ದಿನದಿಂದ ದಿನಕ್ಕೆ ಒಂದಷ್ಟು ರೋಚಕತೆಯನ್ನು ಸೃಷ್ಟಿಸುತ್ತಲೇ ಸಾಗುತ್ತಿದೆ. ವೀಕ್ಷಕನನ್ನು ಹಿಡಿದಿಡುವ ಸನ್ನಿವೇಶಗಳನ್ನು ತೆರೆಮೇಲೆ ತರುತ್ತ ಕೌತುಕದತ್ತ ಸಾಗಿದೆ. ಈ ನಡುವೆ ಸೀತಾಳ ಮೇಲಿನ ರಾಮನ ಸೆಳೆತ ಪ್ರೀತಿಯಾಗಿ ಬದಲಾಗುತ್ತಿರುವುದೂ ನೋಡುಗನಿಗೆ ಇಷ್ಟವಾಗುತ್ತಿದೆ. ಮತ್ತೊಂದೆಡೆ ಸೀತಾಳನ್ನು ಆದಷ್ಟು ಬೇಗ ಟ್ರಾನ್ಸ್‌ಫರ್‌ ಮಾಡಿ, ರಾಮನಿಂದ ದೂರ ಮಾಡಲು ಮುಂದಾಗಿದ್ದಾಳೆ. ಸೋಮವಾರದ ಏಪಿಸೋಡ್‌ನಲ್ಲೂ ಅದೇ ಪ್ರಹಸನ ಮುಂದುವರಿದಿದೆ.

ಸೀತಾ ಎಲ್ಲವನ್ನು ಬಿಟ್ಟು ಬೆಳಗಾವಿಗೆ ಹೊರಟು ನಿಂತಿದ್ದಾಳೆ. ಸೀತಮ್ಮನ ಜತೆಗೆ ಸಿಹಿಗೆ ಒಲ್ಲದ ಮನಸ್ಸಿನಲ್ಲಿಯೇ ಪ್ರಯಾಣ ಮಾಡುವ ಅನಿವಾರ್ಯತೆ ಎದುರಾಗಿದೆ. ಬೆಂಗಳೂರು ನನಿಗಿನ್ನು ಸಾಕು ಅಂತ ಬೆಳಗಾವಿ ಬಸ್‌ ಏರಿದ್ದಾಳೆ ಸೀತಾ. ಆದರೆ, ಅಚ್ಚರಿಯ ಬೆಳವಣಿಗೆಯಲ್ಲಿ ಸೀತಾ ಹತ್ತಿದ ಬಸ್‌ ಚೇಸ್‌ ಮಾಡಿಕೊಂಡು, ಬಸ್‌ಗೆ ಕಾರ್‌ ಅಡ್ಡಗಟ್ಟಿ ನಿಲ್ಲಿಸಿದ್ದಾನೆ ರಾಮ. ಅಷ್ಟೇ ಅಲ್ಲ ಸೀತಾಳನ್ನೂ ಇಳಿಸಿದ್ದಾನೆ. ನಿಮ್ಮ ಟ್ರಾನ್ಸ್‌ಫರ್‌ ಕ್ಯಾನ್ಸಲ್‌ ಆಗಿದೆ ಎಂದೂ ಹೇಳಿದ್ದಾನೆ.

ಮತ್ತೊಂದು ಕಡೆ ಸೀತಾಳ ಟ್ರಾನ್ಸ್‌ಫರ್‌ ಬಗ್ಗೆ ಪತಿ ವಿಶ್ವಜಿತ್‌ ಬಳಿ ಮಾತಿಗಿಳಿದಿದ್ದಾಳೆ ಭಾರ್ಗವಿ. ಸೀತಾಳ ಟ್ರಾನ್ಸ್‌ಫರ್‌ ಆಯ್ತಾ ಎಂದು ಕೇಳಿದ್ದಾಳೆ. ನನ್ನ ಕೆಲಸ ನಾನು ನೀಟಾಗಿ ಮಾಡಿದ್ದೇನೆ ಎಂದಿದ್ದಾನೆ ವಿಶ್ವಜೀತ್‌. ಇತ್ತ ಇನ್ನೂ ಮನೆಗೆ ಬಾರದ ರಾಮನ ಮೇಲೂ ಭಾರ್ಗವಿಗೆ ಅನುಮಾನ ಮೂಡಿದೆ. ಮಾವ ತನ್ನಿಂದ ಏನೋ ಮುಚ್ಚಿಡುತ್ತಿದ್ದಾನೆ ಎಂಬ ಗೊಂದಲವೂ ಆಕೆಯನ್ನು ಕಾಡುತ್ತಿದೆ. ಇನ್ನೊಂದು ಕಡೆ ಪ್ರಿಯಾ ಮತ್ತು ಅಶೋಕನ ನಡುವೆ ಮಾತುಕತೆ ನಡೆದಿದೆ. ಈ ಟ್ರಾನ್ಸ್‌ಫರ್‌ ಹಿಂದೆ ಬೇರೆಯವರ ಕೈವಾಡ ಇದೆ ಎಂದಿದ್ದಾನೆ.

ರಾಮನ ಮಾತಿನ ಮೇಲೆ ಸೀತಾಗೆ ನಂಬಿಕೆ ಬರುತ್ತಿಲ್ಲ. ರಾಮನ ಒತ್ತಾಯಕ್ಕೆ ಮಣಿದು ಕಾರ್‌ ಏರಿದ್ದಾಳೆ. ಇದೇ ಟ್ರಾನ್ಸ್‌ಫರ್‌ ವಿಚಾರವಾಗಿಯೇ ಇಬ್ಬರ ನಡುವೆ ಮಾತುಕತೆ ನಡೆದಿದೆ. ಯಾವುದೇ ಕಾರಣಕ್ಕೂ ನಾನು ಈ ಬದಲಾವಣೆ ಒಪ್ಪಲ್ಲ, ನಾನು ಬೆಳಗಾವಿಗೆ ಹೋಗುತ್ತೇನೆ. ಅಲ್ಲಿಯೇ ಇರುವುದು ಎಷ್ಟೋ ವಾಸಿ ಎಂದಿದ್ದಾಳೆ. ಮಾತಾಡ್ತಾ ಮಾತಾಡ್ತಾ ಶಾಂತಮ್ಮನ ವಠಾರ ಬಂದಿದೆ. ಸೀತಾ ಮನೆಗೆ ಸಿಹಿ ಜತೆ ಗೂಡು ಸೇರಿದ್ದಾಳೆ. ಹಾಗಾದರೆ, ಭಾರ್ಗವಿಯ ಪ್ಲಾನ್‌ ಪ್ಲಾಪ್‌ ಆಯ್ತಾ? ಮರಳಿ ಬಂದ ಸೀತಾಳಿಗೆ ಏನ್‌ ಮಾಡ್ತಾಳೆ ಭಾರ್ಗವಿ?

ಈ ಏಪಿಸೋಡ್‌ ನೋಡಿ ವೀಕ್ಷಕ ಏನಂದ?

ಇನ್ನು ಸೀತಾರಾಮ ಸೀರಿಯಲ್‌ನ ಈ ಏಪಿಸೋಡ್‌ ನೋಡಿದ ವೀಕ್ಷಕ, ಈ ಏಪಿಸೋಡ್‌ ಬಗ್ಗೆ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ. ಆ ಪೈಕಿ ಆಯ್ದ ಕೆಲವು ಕಾಮೆಂಟ್‌ಗಳು ಇಲ್ಲಿವೆ.

- ಜೊತೆ ಇದ್ದಾಗ ಇರೋ ಖುಷಿಗಿಂತ ದೂರ ಹೋಗುವಾಗ ಆಗೋ ನೋವೇ ಹೆಚ್ಚು

- ಬಿಟ್ಟು ಹೋಗೋದು ಎಷ್ಟೊಂದು ಕಷ್ಟ! ಪ್ರಾಣ ಹೋಗೋದಕ್ಕಿಂತ ಹೆಚ್ಚು

- ಜೀವನದಲ್ಲಿ ಶತ್ರುಗಳು ಇರಬೇಕು ಆದರೆ ಹಿತ ಶತ್ರುಗಳು ಇರಬಾರದು ಯಾಕೆಂದರೆ ಆ ಬೆವರ್ಸಿಗಳು ಯಾರು ಎಂಬುದು ತಿಳಿಯುವ ಒಳಗೆ ಅವರು ನಮ್ಮ ಅರ್ಧ ಜೀವನ ಕುಲಗೆಡಿಸಿರುತ್ತಾರೆ.

- ಪ್ಲೀಸ್‌ ಈ ಸೀರಿಯಲ್‌ ಟೈಮಿಂಗ್‌ ಬದಲಾವಣೆ ಮಾಡಿ

- ದಿನೇ ದಿನೇ ಓವರ್‌ ಅನಿಸ್ತಿದೆ

- ಮೂರು ದಿನದಿಂದ ಬರೀ ಇದೇ ಆಯ್ತು

Whats_app_banner