ಕನ್ನಡ ಸುದ್ದಿ  /  Entertainment  /  Kannada Television News Seetha Rama Serial Nov 28th Friday 99th Episode Highlights Zee Kannada Seetha Rama Mnk

Seetha Rama Serial: ಕೋಟಿ ಕೋಟಿ ನುಂಗಲು ಭಾರ್ಗವಿಯ ಸಂಚು, ಸೀತಾಗೆ ಪ್ರಪೋಸ್‌ ಮಾಡಲು ಬಂದ ರಾಮನಿಗೂ ಎದುರಾಯ್ತು ವಿಘ್ನ!

Seetha Rama Serial Episode: ಜೀ ಕನ್ನಡ ಚಾನೆಲ್‌ನಲ್ಲಿ ಪ್ರಸಾರವಾಗುವ ಧಾರಾವಾಹಿ 'ಸೀತಾ ರಾಮ' ಇದೀಗ ನೋಡುಗರ ಗಮನ ಸೆಳೆಯುವುದರ ಜತೆಗೆ ರೋಚಕತೆ ಹೆಚ್ಚಿಸುತ್ತಿದೆ. ನವೆಂಬರ್‌ 28ರ ಸಂಚಿಕೆಯಲ್ಲಿ ಏನೆಲ್ಲಾ ಆಯಿತು ಎಂಬ ವಿವರ ಇಲ್ಲಿದೆ. ಪ್ರೇಮ ನಿವೇದನೆ ಮಾಡಬೇಕೆಂದು ಹೊರಟ ರಾಮ್‌ಗೆ ವೇದನೆಯೇ ಸಿಕ್ಕಿದೆ.

Seetha Rama Serial: ಕೋಟಿ ಕೋಟಿ ನುಂಗಲು ಭಾರ್ಗವಿಯ ಸಂಚು, ಸೀತಾಗೆ ಪ್ರಪೋಸ್‌ ಮಾಡಲು ಬಂದ ರಾಮನಿಗೂ ಎದುರಾಯ್ತು ವಿಘ್ನ
Seetha Rama Serial: ಕೋಟಿ ಕೋಟಿ ನುಂಗಲು ಭಾರ್ಗವಿಯ ಸಂಚು, ಸೀತಾಗೆ ಪ್ರಪೋಸ್‌ ಮಾಡಲು ಬಂದ ರಾಮನಿಗೂ ಎದುರಾಯ್ತು ವಿಘ್ನ

Seetha Rama: ಅವಮಾನ ಮಾಡಿದ ಭಾರ್ಗವಿಯಿಂದಲೇ ಸನ್ಮಾನ ಪಡೆದ ಸೀತಾ, ಬೆಸ್ಟ್‌ ಎಂಪ್ಲಾಯಿ ಆಫ್‌ ದಿ ಇಯರ್‌ ಅವಾರ್ಡ್‌ ಸ್ವೀಕರಿಸಿದ್ದಾಳೆ. ಏನೇ ಮಾಡಿದರೂ ಇವಳನ್ನು ಇಲ್ಲಿಂದ ಓಡಿಸಲು ಆಗುತ್ತಿಲ್ಲವಲ್ಲ ಎಂದು ಮನದೊಳಗೆ ಹೊಸ ಹೊಸ ಸಂಚು ರೂಪಿಸುತ್ತಿದ್ದಾಳೆ ಭಾರ್ಗವಿ. ಆದರೆ, ಸದ್ಯಕ್ಕೆ ಅದ್ಯಾವುದು ಕೆಲಸಕ್ಕೆ ಬರುತ್ತಿಲ್ಲ. ಎಲ್ಲ ಪ್ಲಾನ್‌ಗಳೂ ಪ್ಲಾಪ್‌ ಪಟ್ಟಿಗೆ ಸೇರುತ್ತಿವೆ.

ಸೀತಾ ರಾಮ ಸೀರಿಯಲ್‌ ದಿನೇದಿನೆ ವೀಕ್ಷಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಕಥೆಯ ಮೂಲಕ ಮತ್ತು ಮೇಕಿಂಗ್‌ ವಿಚಾರದಲ್ಲಿ ನೋಡುಗರ ಗಮನ ಸೆಳೆಯುತ್ತಿದೆ ಸೀತಾ ರಾಮ. ಸೀರಿಯಲ್‌ನಲ್ಲಿನ ಕೌತುಕಗಳು ನೋಡುಗರನ್ನು ರೋಚಕ ಘಟ್ಟದತ್ತ ಕರೆದೊಯ್ಯುತ್ತಿವೆ. ಇದೀಗ ರಾಮನ ಪ್ರೇಮ ನಿವೇದನೆಗೆ ಸಮಯ ಕೂಡಿ ಬಂದಿದೆ. ಆದರೆ, ಆ ಶುಭಕಾರ್ಯಕ್ಕೆ ಆರಂಭಿಕ ವಿಘ್ನ ಎದುರಾಗಿದೆ.

ರಾಮ ಇಷ್ಟಪಡುತ್ತಿರುವ ಹುಡುಗಿ ಇವಳೇ ಎಂಬ ವಿಚಾರ ಅಶೋಕ ಮೂಲಕ ಸೂರ್ಯ ಪ್ರಕಾಶ್‌ಗೆ ತಿಳಿದಿದೆ. ಆ ಹುಡುಗಿ ನಮ್ಮ ಮನೆ ಸೊಸೆಯಾಗಬೇಕಷ್ಟೇ ಎಂದು ರಾಮಗಿಗೆ ಕಟ್ಟಪ್ಪಣೆ ಹೊರಡಿಸಿದ್ದಾನೆ ತಾತ ಸೂರ್ಯ ಪ್ರಕಾಶ್‌. ಅದರಂತೆ, ಅಶೋಕ ಸಹ ಪ್ರಪೋಸ್‌ ಮಾಡಿಬಿಡು ಎಂದು ಸಲಹೆ ನೀಡಿದ್ದಾನೆ. ಸೀತಾಳಿಗೆ ಫೋನ್‌ ಮಾಡಿ ನಿಮ್ಮ ಬಳಿ ಮಾತನಾಡಬೇಕಿದೆ ಎಂದು ಎಂದಿದ್ದಾನೆ.

ಇತ್ತ ರಾಮನ ಮನೆಯಲ್ಲಿ ಹಣ ಎಗರಿಸೋಕೆ ಭಾರ್ಗವಿ ಸಂಚು ರೂಪಿಸಿದ್ದಾಳೆ. ಪತಿ ವಿಶ್ವಜೀತ್‌ನನ್ನು ಮುಂದೆ ಬಿಟ್ಟು, ರಾಮನ ಕಡೆಯಿಂದ 5 ಕೋಟಿ ಎಗರಿಸಲು ಪ್ಲಾನ್‌ ಮಾಡಿದ್ದಾಳೆ. ರಾಮನ ಬಳಿ ಬಂದ ವಿಶ್ವಜಿತ್, ಬಿಜಿನೆಸ್‌ಗಾಗಿ 5 ಕೋಟಿ ಬೇಕು ಎಂದಿದ್ದಾನೆ. ಚಿಕ್ಕಪ್ಪನ ಮಾತಿನಂತೆ, ಹಿಂದೂ ಮುಂದೂ ನೋಡದೇ, ನಾಲ್ಕು ಬ್ಲಾಂಕ್‌ ಚೆಕ್‌ಗಳಳಿಗೆ ಸಹಿ ಹಾಕಿ ನೀಡಿದ್ದಾನೆ ರಾಮ್.‌ ಇತ್ತ ರಾಮನ ನಡೆ ಅಶೋಕ್‌ಗೆ ಕೊಂಚ ಬೇಸರ ತರಿಸಿದೆ.

ಹೀಗಿರುವಾಗಲೇ ಸೀತಾಳ ಪ್ರೇಮ ನಿವೇದನೆ ಮಾಡಲು ಅಶೋಕನ ಜತೆಗೆ ಆಕೆಯ ಮನೆ ಬಳಿ ಬಂದಿದ್ದಾನೆ ರಾಮ. ಆಲ್‌ ಬೆಸ್ಟ್‌ ಕಣೋ ಎಂಬ ಹಾರೈಕೆಯೂ ಅಶೋಕನಿಂದ ಸಿಕ್ಕಿದೆ. ಸೀತಾಳ ಬದಲಿಗೆ ಮೊದಲು ಶಾಂತಮ್ಮಜ್ಜಿ ಸಿಕ್ಕಿದ್ದಾಳೆ. ನೀನು ಬಂದಿದ್ದು ಒಳ್ಳೆಯದೇ ಆಯ್ತು, ನಿನ್ನ ಜತೆ ಮಾತನಾಡಬೇಕಿತ್ತು ಎಂದು ರಾಮ ಜತೆ ಮಾತಿಗಿಳಿದಿದ್ದಾಳೆ.

ಸೀತಾ ಮದುವೆ ಆದರೆ ಸಿಹಿಗೆ ಅನ್ಯಾಯವಾಗುತ್ತಾ? ನೀನು ಹೇಳಿದ್ರೆ ಸಿಹಿನೂ ಕೇಳ್ತಾಳೆ, ಸೀತಾನೂ ಕೇಳ್ತಾಳೆ. ಆ ಲಾಯರ್‌ ತುಂಬ ಒಳ್ಳೆಯ ಹುಡುಗ, ಅವನನ್ನು ಮದುವೆ ಆದರೆ ಸೀತಾ ಚೆನ್ನಾಗಿರ್ತಾಳೆ ಎಂದಿದ್ದಾಳೆ. ಶಾಂತಮ್ಮಜ್ಜಿಯ ಮಾತು ಕೇಳಿ ಒಂದು ಕ್ಷಣ ದಂಗಾಗಿದ್ದಾನೆ ರಾಮ. ನಾನೇ ಅವಳನ್ನು ಮದುವೆ ಆಗಲು ಬಯಸುತ್ತಿದ್ದೇನೆ ಎಂದು ಹೇಳಲು ಬಂದ ರಾಮನ ತಲೆ ಮೇಲೆ ಆಕಾಶವೇ ಬಿದ್ದಂತಾಗಿದೆ. ರಾಮನ ಮುಂದಿನ ನಡೆ ಏನು?

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ