Seetha Rama: ಸೀತಾಗೆ ದುಡ್ಡು ತಲುಪಿಸೋಕೆ ದಾರಿ ಹುಡುಕಿದ್ದಾನೆ ಶ್ರೀರಾಮ; ಕಣ್ತಪ್ಪಿ ಬಂದಿರೋ ದುಡ್ಡನ್ನ ವಾಪಸ್ ಕೊಡೋಕೆ ಒಪ್ತಾಳಾ ಪ್ರಿಯಾ?
ಕನ್ನಡ ಸುದ್ದಿ  /  ಮನರಂಜನೆ  /  Seetha Rama: ಸೀತಾಗೆ ದುಡ್ಡು ತಲುಪಿಸೋಕೆ ದಾರಿ ಹುಡುಕಿದ್ದಾನೆ ಶ್ರೀರಾಮ; ಕಣ್ತಪ್ಪಿ ಬಂದಿರೋ ದುಡ್ಡನ್ನ ವಾಪಸ್ ಕೊಡೋಕೆ ಒಪ್ತಾಳಾ ಪ್ರಿಯಾ?

Seetha Rama: ಸೀತಾಗೆ ದುಡ್ಡು ತಲುಪಿಸೋಕೆ ದಾರಿ ಹುಡುಕಿದ್ದಾನೆ ಶ್ರೀರಾಮ; ಕಣ್ತಪ್ಪಿ ಬಂದಿರೋ ದುಡ್ಡನ್ನ ವಾಪಸ್ ಕೊಡೋಕೆ ಒಪ್ತಾಳಾ ಪ್ರಿಯಾ?

ಸೀತಾ ಖಾತೆಗ ಹೋಗಬೇಕಿದ್ದ 25 ಲಕ್ಷ ಹಣ ಪ್ರಿಯಾ ಅಕೌಂಟ್‌ಗೆ ಹೋಗಿದೆ. ಆ ಹಣವನ್ನು ಹೇಗಾದ್ರೂ ಮಾಡಿ ಮರಳಿ ಪಡಿಬೇಕು ಅನ್ನೋ ನಿಟ್ಟಿನಲ್ಲಿ ರಾಮ ಮತ್ತು ಅಶೋಕ ಪ್ಲಾನ್‌ ಮಾಡಿದ್ದಾರೆ.

Seetha Rama: ಸೀತಾಗೆ ದುಡ್ಡು ತಲುಪಿಸೋಕೆ ದಾರಿ ಹುಡುಕಿದ್ದಾನೆ ಶ್ರೀರಾಮ; ಕಣ್ತಪ್ಪಿ ಬಂದಿರೋ ದುಡ್ಡನ್ನ ವಾಪಸ್ ಕೊಡೋಕೆ ಒಪ್ತಾಳಾ ಪ್ರಿಯಾ?
Seetha Rama: ಸೀತಾಗೆ ದುಡ್ಡು ತಲುಪಿಸೋಕೆ ದಾರಿ ಹುಡುಕಿದ್ದಾನೆ ಶ್ರೀರಾಮ; ಕಣ್ತಪ್ಪಿ ಬಂದಿರೋ ದುಡ್ಡನ್ನ ವಾಪಸ್ ಕೊಡೋಕೆ ಒಪ್ತಾಳಾ ಪ್ರಿಯಾ?

Seetha rama: ಸಂಕಷ್ಟಕ್ಕೆ ಸಿಲುಕಿದ ಸೀತಾಳಿಗೆ ಸಹಾಯ ಮಾಡಲು ಮುಂದಾದ ರಾಮನಿಗೆ ಸಮಸ್ಯೆ ಮೇಲೆ ಸಮಸ್ಯೆಗಳು ಎದುರಾಗುತ್ತಿವೆ. ಅತ್ತ ಚಿಕ್ಕಿ ಭಾರ್ಗವಿ ರಾಮನ ಮೇಲೆ ತನ್ನ ವಕ್ರದೃಷ್ಟಿ ಬೀರಿದ್ದು ಒಂದೆಡೆಯಾದರೆ, ಇತ್ತ ಸೀತಾಳ ಮೇಲೂ ಕಿಡಿ ಕಾರುತ್ತಿದ್ದಾಳೆ. ಇನ್ನೇನು ಸೀತಾಳ ಖಾತೆಗೆ ಅಡ್ವಾನ್ಸ್‌ ಸಂಬಳ ಹೋಗಬೇಕು ಎನ್ನುವಷ್ಟರಲ್ಲಿ ಕೊನೇ ಕ್ಷಣದದಲ್ಲಿ ಆ ಹಣ ಪ್ರಿಯಾಳ ಖಾತೆಗೆ ಹೋಗುವಂತೆ ಮಾಡಿದ್ದಾಳೆ ಭಾರ್ಗವಿ. ಈ ಸಮಸ್ಯೆ ಬಗೆಹರಿಸುವಂತೆ ಅಶೋಕನಿಗೆ ಒತ್ತಡ ಹೇರುತ್ತಿದ್ದಾನೆ ರಾಮ.

ಆದಷ್ಟು ಬೇಗ ಮೀಟಿಂಗ್‌ ಅರೇಂಜ್‌ ಮಾಡುವಂತೆ ರಾಮ ಅಶೋಕನಿಗೆ ಹೇಳಿದ್ದಾನೆ. ಸಂಜೆ ಮೀಟಿಂಗ್‌ ಇದೆ ರಾಮ್‌, ಸೀತಾ ಮತ್ತು ಪ್ರಿಯಾ ಮೂರು ಜನ ಜಾಯಿನ್‌ ಆಗಿ ಎಂದಿದ್ದಾನೆ. ಇತ್ತ 25 ಲಕ್ಷ ಬಂದ ಖುಷಿಯಲ್ಲಿ, ಆ ದುಡ್ಡಲ್ಲಿ ಏನೆನೆಲ್ಲ ಖರೀದಿಸಬಹುದು? ಏನೆನೆಲ್ಲ ಮಾಡಬಹುದು ಎಂದು ಲೆಕ್ಕ ಹಾಕುತ್ತಿದ್ದಾಳೆ ಪ್ರಿಯಾ. ಖರೀದಿಸಿದ ಗಿಫ್ಟ್‌ ಕೊಡೋಕೆ ಇದೇ ಸರಿಯಾದ ಸಮಯ ಅಂತ ಪ್ಲಾನ್‌ ಹಾಕಿದ್ದಾಳೆ ಪ್ರಿಯಾ.

ಇತ್ತ ಹೇಗಾದ್ರೂ ಮಾಡಿ ಸೀತಮ್ಮನ ಮನವೊಲಿಸಲು ಸಿಹಿ ಮುಂದಾಗಿದ್ದಾಳೆ. ಪಿಕ್‌ನಿಕ್‌ ಹೋಗುವ ಸಲುವಾಗಿ, ತನ್ನೆಲ್ಲ ಕೆಲಸವನ್ನು ಬೇಗ ಬೇಗ ಮುಗಿಸಿಕೊಂಡು ಸೀತಮ್ಮನ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾಳೆ. ದೇವರ ಬಳಿಯೂ ಪ್ರಾರ್ಥನೆ ಮಾಡಿಕೊಂಡಿದ್ದಾಳೆ. ಈ ಕಡೆ ಸೀತಾ, ಪ್ರಿಯಾ ಮತ್ತು ರಾಮ್‌ ಮೂವರೂ ಮೀಟಿಂಗ್‌ ಹೊರಟಿದ್ದಾರೆ. 25 ಲಕ್ಷ ಬಂದ ವಿಚಾರವನ್ನು ಸೀತಾಳಿಗೆ ಹೇಳಲು ಪ್ರಿಯಾ ತುದಿಗಾಲಲ್ಲಿಯೇ ನಿಂತಿದ್ದಾಳೆ. ಆದರೆ, ಅಲ್ಲೇ ಇದ್ದ ರಾಮ ಅದನ್ನು ತಡೆದಿದ್ದಾನೆ.

ಬಾಸ್‌ ಮೀಟಿಂಗ್‌ ಅರೇಂಜ್‌ ಮಾಡಿದ್ದೇ ನನಗಾಗಿ, ನೀವಿಬ್ಬರೂ ಸುಮ್ಮನೆ ಇರಲಿ ಅಂತ ಕರೆಸಿಕೊಂಡಿರಬೇಕು ಎಂದು ರಾಮ ಮತ್ತು ಸೀತಾ ಮುಂದೆ ಹೇಳಿಕೊಳ್ಳುತ್ತಿದ್ದಾಳೆ ಪ್ರಿಯಾ. ಹೋಗುವಾಗ ಇಷ್ಟು ಖುಷಿಯಲ್ಲಿ ಹೋಗ್ತಿದ್ದಾರೆ, ಬರೋವಾಗಲೂ ಅದೇ ಖುಷಿ ಇರುತ್ತೋ ಇಲ್ವೋ ಎಂದು ರಾಮ ಮಾತನಾಡಿಕೊಳ್ಳುತ್ತಿದ್ದಾನೆ. ಕೊನೆಗೂ ಬಾಸ್‌ ಅಶೋಕನನ್ನು ಪ್ರಿಯಾ ಭೇಟಿ ಮಾಡಿದ್ದಾಳೆ. ಖುಷಿಯಲ್ಲಿ ತೇಲಾಡಿದ್ದಾಳೆ.

ಅಶೋಕ ಹೇಳ ಹೊರಟಿರುವ ಕಥೆಯೇ ಬೇರೆ, ಪ್ರಿಯಾ ಅರ್ಥ ಮಾಡಿಕೊಂಡಿದ್ದೇ ಬೇರೆ. ಇದೇ ವೇಳೆ ಬಾಸ್‌ಗೆ ತಂದಿದ್ದ ಉಡುಗೊರೆಯನ್ನು ನೀಡಿದ್ದಾಳೆ ಪ್ರಿಯಾ. ಮೀಟಿಂಗ್‌ನ ಮುಖ್ಯ ಉದ್ದೇಶ ಏನಾಗಿತ್ತೋ ಅದನ್ನು ಪ್ರಿಯಾ ಮುಂದೆ ಹೇಳಿದ್ದಾನೆ ಅಶೋಕ. ಬೇರೆಯವರ ಅಕೌಂಟ್‌ಗೆ ಹೋಗಬೇಕಿರೋ ದುಡ್ಡು. ಮಿಸ್‌ ಆಗಿ ಅದು ನಿಮ್ಮ ಅಕೌಂಟ್‌ಗೆ ಬಂದಿದೆ. ಆದಷ್ಟು ಬೇಗ ಆ ಅಮೌಂಟ್‌ಅನ್ನು ಆಫೀಸ್‌ ಅಕೌಂಟ್‌ಗೆ ಟ್ರಾನ್ಸ್‌ಫರ್‌ ಮಾಡಿ ಎಂದಿದ್ದಾನೆ. ಬಾಸ್‌ ಮಾತು ಕೇಳಿ ಪ್ರಿಯಾ ಮೌನಕ್ಕೆ ಜಾರಿದ್ದಾಳೆ. ಬಾಸ್‌ ಮಾತಿಗೆ ಒಪ್ತಾಳಾ ಪ್ರಿಯಾ?

Whats_app_banner