Seetha Rama: ಸೀತಾ - ರಾಮರ ನಡುವೆ ಶುರುವಾಗಿದೆ ಸಿಹಿಯಾದ ಗೆಳೆತನ, ನಿಲ್ಲದ ಭಾರ್ಗವಿಯ ಹಗೆತನ
ಕನ್ನಡ ಸುದ್ದಿ  /  ಮನರಂಜನೆ  /  Seetha Rama: ಸೀತಾ - ರಾಮರ ನಡುವೆ ಶುರುವಾಗಿದೆ ಸಿಹಿಯಾದ ಗೆಳೆತನ, ನಿಲ್ಲದ ಭಾರ್ಗವಿಯ ಹಗೆತನ

Seetha Rama: ಸೀತಾ - ರಾಮರ ನಡುವೆ ಶುರುವಾಗಿದೆ ಸಿಹಿಯಾದ ಗೆಳೆತನ, ನಿಲ್ಲದ ಭಾರ್ಗವಿಯ ಹಗೆತನ

ಸೀತಾ - ರಾಮರ ನಡುವೆ ಶುರುವಾಗಿದೆ ಸಿಹಿಯಾದ ಗೆಳೆತನ. ಸಿಹಿ-ಸೀತಾಳ ಸಂಬಂಧಕ್ಕೆ ಹೊಸ ಅರ್ಥ ಕಲ್ಪಿಸುವ ಅಶೋಕನ ಮಾತಿಗೆ, ತನ್ನ ಹಳೆಯ ಪ್ರೀತಿಯನ್ನ ನೆನಪಿಸ್ತಿದ್ದಾನೆ ರಾಮ. ಇತ್ತ ಅದೇ ರಾಮನನ್ನು ಕಂಡು ಮುಂದುವರಿದಿದೆ ಭಾರ್ಗವಿಯ ಹಗೆತನ.

Seetha Rama: ಸೀತಾ - ರಾಮರ ನಡುವೆ ಶುರುವಾಗಿದೆ ಸಿಹಿಯಾದ ಗೆಳೆತನ, ನಿಲ್ಲದ ಭಾರ್ಗವಿಯ ಹಗೆತನ
Seetha Rama: ಸೀತಾ - ರಾಮರ ನಡುವೆ ಶುರುವಾಗಿದೆ ಸಿಹಿಯಾದ ಗೆಳೆತನ, ನಿಲ್ಲದ ಭಾರ್ಗವಿಯ ಹಗೆತನ

Seetha Rama: ಸಿಹಿ, ಸೀತಾ, ರಾಮ ಮೂವರೂ ಒಟ್ಟಿಗೆ ಔಟಿಂಗ್‌ ಬಂದಿದ್ದಾರೆ. ಈ ವೇಳೆ ಪತಿ ಬಗ್ಗೆ ಕೇಳಿದ ರಾಮನ ಪ್ರಶ್ನೆಗೆ ಉತ್ತರ ನೀಡಿದ್ದಾಳೆ ಸೀತಾ. ನಾನು ಸಿಂಗಲ್‌ ಪೇರೆಂಟ್‌. ನಿಮಗೂ ಒಂದು ಪಾಸ್ಟ್‌ ಇದೆ. ಅದು ನನಗೂ ಗೊತ್ತಿದೆ. ಖುಷಿ ವಿಚಾರಗಳು ನಡೆದಿದ್ರೂ ಕಹಿ ಮಾತ್ರ ಉಳಿದಿರುತ್ತದೆ. ಹಾಗಾಗಿ ಆ ಕಹಿ ಘಟನೆ ಬಗ್ಗೆ ಮಾತನಾಡೋದು ಬೇಡ ಎಂದಿದ್ದಾಳೆ ಸೀತಾ. ಸೀತಾಳ ಮಾತಿಗೆ ರಾಮ ಸಹ ಓಕೆ ಎಂದಿದ್ದಾನೆ. ಈ ಮೂಲಕ ಇಬ್ಬರ ನಡುವಿನ ಸ್ನೇಹ ಭಾವ ಮತ್ತಷ್ಟು ಗಟ್ಟಿಯಾಗಿದೆ.

ಸಂಜೆ ಆಗ್ತಿದ್ದಂತೆ, ಮನೆ ಸೇರಲು ಆಟೋ ಏರುತ್ತಾರೆ. ಸೀತಾಳನ್ನು ಮನೆವರೆಗೂ ಡ್ರಾಪ್‌ ಮಾಡುತ್ತಾನೆ ರಾಮ. ಮನೆ ಮಾರುವ ವಿಚಾರ ಪ್ರಸ್ತಾಪವಾಗುತ್ತದೆ. ಲೈಫ್‌ನಲ್ಲಿ ಏನೂ ಇಲ್ಲದೇ ಬದುಕುವುದನ್ನೂ ಕಲೀಬೇಕು. ಅದನ್ನೇ ಮಕ್ಕಳಿಗೂ ಹೇಳಬೇಕು ಎನ್ನುತ್ತಾಳೆ ಸೀತಾ. ಮುಂಗಡ ಸಂಬಳ ಅಪ್ಲೈ ಮಾಡಿ ಎಂದು ರಾಮ ಸೀತಾಗೆ ಸಲಹೆ ನೀಡುತ್ತಾನೆ. ಆದರೆ, ಅದಕ್ಕೆ ಓಕೆ ಎನ್ನದ ಸೀತಾ, ನನಗೆ ಮನೆ ಮಾರುವುದನ್ನು ಬಿಟ್ಟರೇ ಬೇರೆ ದಾರಿ ಇಲ್ಲ ಎನ್ನುತ್ತಾಳೆ. ಮನೆ ಮಾರಿದ ಮೇಲೆ ಏನು ಮಾಡ್ತಿರಿ ಎಂದ ರಾಮನ ಪ್ರಶ್ನೆಗೆ ನನ್ನ ರಾಮ ನೋಡ್ಕೋತಾನೆ ಎನ್ನುತ್ತಾಳೆ ಸೀತಾ.

ಇತ್ತ ಅವರನ್ನು ಮನೆಗೆ ಬಿಟ್ಟು, ಅಶೋಕನನ್ನು ಬಿಗಿದಪ್ಪಿ, ಆ ಪುಟಾಣಿ ಸಿಹಿಯ ಸಂತೋಷ ನೋಡಿ ಖುಷಿಯ ಅಲೆಯಲ್ಲಿ ತೇಲುತ್ತಿದ್ದಾನೆ ರಾಮ.‌ ಈ ದಿನ ನನ್ನ ಪಾಲಿನ ಬಹುವಿಶೇಷ ದಿನ ಎಂದು ಅಶೋಕನ ಮುಂದೆ ಹೇಳಿಕೊಳ್ಳುತ್ತಾನೆ. ನನ್ನ ಬೆಸ್ಟ್‌ ಫ್ರೆಂಡ್‌ ಸಿಹಿಗೆ ಅವಳ ಮನೆ ಅವಳ ಹತ್ತಿರ ಉಳಿಯುವಂತೆ ನಾನು ಮಾಡ್ತಿನಿ ಎಂದು ಅಶೋಕನ ಮುಂದೆ ಮಾತು ಕೊಡ್ತಾನೆ ರಾಮ. ನಾರ್ಮಲ್‌ ಎಂಪ್ಲಾಯಿ ಆಗಿದ್ದರೆ, ಇದೆಲ್ಲವೂ ಘಟಿಸುತ್ತಿರಲಿಲ್ಲ ಎಂದೂ ಹೇಳಿಕೊಳ್ಳುತ್ತಾನೆ.

ಇತ್ತ ಮನೆ ನೆಮ್ಮದಿಯಿಂದ ಇರಬೇಕೆಂದರೆ ಆಚೆ ಹೋಗಬೇಕಿರುವುದು ನೀನು ಎಂದು ಭಾರ್ಗವಿಗೆ ಗದರುತ್ತಾನೆ ಸತ್ಯ. ಕುಡಿದ ಮತ್ತಿನಲ್ಲಿ ಭಾರ್ಗವಿ ವಿರುದ್ಧ ತಿರುಗಿಬೀಳುತ್ತಾನೆ. ತಾತನ ಆಗಮನವೂ ಆಗುತ್ತದೆ. ಎಲ್ಲರ ನೆಮ್ಮದಿ ಹಾಳುಮಾಡುತ್ತಿದ್ದಾನೆ. ಈ ಮನೆಗೆ ಕೆಟ್ಟ ಹೆಸರಿವನು ಎನ್ನುತ್ತಾನೆ. ಕುಡಿದ ಮತ್ತಿನಲ್ಲಿದ್ದ ಚಿಕ್ಕಪ್ಪನನ್ನು ರೂಮಿಗೆ ಕರೆದೊಯ್ಯುತ್ತಾನೆ ರಾಮ. ಮಾವನ ಮುಂದೆ ಭಾರ್ಗವಿಯ ಕಣ್ಣೀರಿನ ನಾಟಕ ಮುಂದುವರಿಯುತ್ತದೆ.

ಇತ್ತ ಆಫೀಸ್‌, ಬಿಜಿನೆಸ್‌ ಸಮಸ್ಯೆ ನಡುವೆ, ಮನೆಯ ಸಮಸ್ಯೆಯನ್ನೇ ಸರಿ ಮಾಡೋಕೆ ಆಗ್ತಿಲ್ಲ, ಒಂದೊಂದನ್ನೇ ಎಲ್ಲ ಸರಿ ಮಾಡಬೇಕು ಎಂದು ರಾಮ ಒಬ್ಬನೇ ಮಾತನಾಡಿಕೊಳ್ಳುತ್ತಾನೆ. ರಾಮನ ಮಾತನ್ನು ಭಾರ್ಗವಿ ಕೇಳಿಸಿಕೊಂಡಿದ್ದಾಳೆ. ನಿನ್ನ ಚಿಂತೆ ನನಗೆ ಅರ್ಥ ಆಗುತ್ತೆ ಎಂದು ಮಾತು ಆರಂಭಿಸಿ, ಮನೆಯಲ್ಲಿ ಏನೂ ಸರಿಯಿಲ್ಲ ಎನ್ನುತ್ತಾಳೆ. ನಮ್ಮ ಹತ್ರ ಎಲ್ಲವೂ ಇದ್ದೂ ಏನೂ ಇಲ್ಲ ಎನ್ನುತ್ತಾಳೆ.

ಈ ಸಮಸ್ಯೆ ನಿನ್ನಿಂದ ಸರಿಪಡಿಸಬಹುದು. ಅದಕ್ಕೆ ಮಾವಯ್ಯ ನಿನ್ನನ್ನ ಅಲ್ಲಿಂದ ಇಲ್ಲಿಗೆ ಕರೆಸಿಕೊಂಡಿದ್ದಾನೆ. ನಿನ್ನ ವಿಚಾರದಲ್ಲಿ ನಾನೂ ಫೇಲ್‌ ಆಗಿದ್ದೇನೆ ಎನ್ನುತ್ತಾ, ರಾಮನ ಮನಸಿನಲ್ಲಿನ ಹುಡುಗಿ ಯಾರೆಂದು ಬಾಯಿ ಬಿಡಿಸುವ ಪ್ರಯತ್ನ ಮಾಡುತ್ತಾಳೆ. ಆದರೆ, ರಾಮ ಹಾಗೇನೂ ಇಲ್ಲ ಎನ್ನುತ್ತಾನೆ. ಆ ಸಮಯಕ್ಕೆ ಸೀತಾಳ ಮೆಸೆಜ್‌ ಬರುತ್ತದೆ. ಆಫೀಸ್‌ನಿಂದದ ಎಂದು ಮಾತು ಬದಲಿಸಿ ರಾಮ ಹೊರಡುತ್ತಾನೆ. ಇತ್ತ ರಾಮನ ವರ್ತನೆ ಕಂಡು ಕೆಂಡವಾಗುತ್ತಿದ್ದಾಳೆ ಭಾರ್ಗವಿ.

Whats_app_banner