Seetha Rama: ಭಾರ್ಗವಿಯ ಕಳ್ಳಾಟಕ್ಕೆ ಬ್ರೇಕ್‌ ಹಾಕಿದ ಅಶೋಕ, ಇತ್ತ ಸಿಹಿಯ ನೋವು ಮರೆಸಿ ನಗು ಉಕ್ಕಿಸಿದ ಶ್ರೀರಾಮ
ಕನ್ನಡ ಸುದ್ದಿ  /  ಮನರಂಜನೆ  /  Seetha Rama: ಭಾರ್ಗವಿಯ ಕಳ್ಳಾಟಕ್ಕೆ ಬ್ರೇಕ್‌ ಹಾಕಿದ ಅಶೋಕ, ಇತ್ತ ಸಿಹಿಯ ನೋವು ಮರೆಸಿ ನಗು ಉಕ್ಕಿಸಿದ ಶ್ರೀರಾಮ

Seetha Rama: ಭಾರ್ಗವಿಯ ಕಳ್ಳಾಟಕ್ಕೆ ಬ್ರೇಕ್‌ ಹಾಕಿದ ಅಶೋಕ, ಇತ್ತ ಸಿಹಿಯ ನೋವು ಮರೆಸಿ ನಗು ಉಕ್ಕಿಸಿದ ಶ್ರೀರಾಮ

ಹಣ ಎಗರಿಸಲು ಭಾರ್ಗವಿ ಮಾಡಿದ ಪ್ಲಾನ್‌ ಪ್ಲಾಪ್‌ ಆಗಿದೆ. ಅಶೋಕನ ಎಂಟ್ರಿಯಿಂದ ದೊಡ್ಡ ಲೂಟಿಗೆ ಬ್ರೇಕ್‌ ಬಿದ್ದಿದೆ. ಇತ್ತ ಹಣ ಕಳೆದುಕೊಂಡ ಸಿಹಿಗೆ ಶ್ರೀರಾಮ ಆಸರೆಯಾಗಿದ್ದಾನೆ.

Seetha Rama: ಭಾರ್ಗವಿಯ ಕಳ್ಳಾಟಕ್ಕೆ ಬ್ರೇಕ್‌ ಹಾಕಿದ ಅಶೋಕ, ಇತ್ತ ಸಿಹಿಯ ನೋವು ಮರೆಸಿ ನಗು ಉಕ್ಕಿಸಿದ ಶ್ರೀರಾಮ
Seetha Rama: ಭಾರ್ಗವಿಯ ಕಳ್ಳಾಟಕ್ಕೆ ಬ್ರೇಕ್‌ ಹಾಕಿದ ಅಶೋಕ, ಇತ್ತ ಸಿಹಿಯ ನೋವು ಮರೆಸಿ ನಗು ಉಕ್ಕಿಸಿದ ಶ್ರೀರಾಮ

Seetha Rama: Serial 49th Episode: ಹಬ್ಬದ ದಿನವೇ ಸೀತಾಳ ಮನೆಗೆ ಅಣ್ಣನ ಎಂಟ್ರಿಯಾಗಿದೆ. ಎರಡು ಸಾವಿರ ನೀಡುವಂತೆ ಹಣಕ್ಕಾಗಿ ಸೀತಾಳಿಗೆ ಬೇಡಿಕೆ ಇಟ್ಟಿದ್ದಾನೆ. ಸೀತಾ ಇಲ್ಲ ಎಂದರೂ ಸಮಸ್ಯೆಯಿದೆ ಎಂದು ನಾಟಕವಾಡಿ, ಹಬ್ಬದ ಖರ್ಚಿಗೆ ಅಂತ ಸೀತಾಳ ಬಳಿಯಿದ್ದ 700 ರೂಪಾಯಿಯಲ್ಲಿ 500 ರೂಪಾಯಿ ಪಡೆದು ಕಾಲ್ಕಿತ್ತಿದ್ದಾನೆ.

ಇತ್ತ ಮನೆ ಗಣೇಶನನ್ನು ಕೊಳ್ಳಲು ರಾಮ್‌ ಮತ್ತು ಅಶೋಕ ಬಂದಿದ್ದಾರೆ. ಇದೇ ವೇಳೆ ಗಣೇಶ ಹಬ್ಬಕ್ಕೆ ಹಣ ಸಂಗ್ರಹಿಸುತ್ತಿರುವ ಸಿಹಿ ಕಡೆಯಿಂದ ರಾಮ್‌ಗೆ ವಿಡಿಯೋ ಕಾಲ್‌ ಬಂದಿದೆ. ಇಬ್ಬರೂ ಒಂದಷ್ಟು ಹೊತ್ತು ಖುಷಿ ಖುಷಿಯಾಗಿಯೇ ಮಾತನಾಡಿದ್ದಾರೆ. ಇದೇ ವೇಳೆ ಸೀತಾಳ ಅಣ್ಣ ಸಿಹಿಗೆ ಎದುರಾಗಿದ್ದಾನೆ. ಸಿಹಿ ಸಂಗ್ರಹಿಸಿದ ಡಬ್ಬದಲ್ಲಿನ ಹಣವನ್ನೂ ಜೇಬಿಗಿಳಿಸಿಕೊಂಡು ಹೋಗಿದ್ದಾನೆ.

ಇದೆಲ್ಲವೂ ವಿಡಿಯೋ ಕಾಲ್‌ನಲ್ಲಿದ್ದ ರಾಮನ ಗಮನಕ್ಕೂ ಬಂದಿದೆ. ತಕ್ಷಣ ಸಿಹಿಯನ್ನು ಭೇಟಿ ಮಾಡಲು ಧಾವಿಸಿದ್ದಾನೆ. ಈ ಕಡೆ ಹಣ ಕಳೆದುಕೊಂಡ ನೋವಿನಲ್ಲಿ ಸಿಹಿ ಕಣ್ಣೀರು ಹಾಕುತ್ತಿದ್ದಾಳೆ. ಅಣ್ಣನ ಹಣದ ಹಪಹಪಿಗೆ ಸೀತಾ ಕಂಗೆಟ್ಟು ಹೋಗಿದ್ದಾಳೆ. ಸಿಹಿ ದುಃಖದಲ್ಲಿಯೇ ಅಳುತ್ತ ಮಲಗಿದ್ದಾಳೆ.

ಈ ಕಡೆಗೆ ಆಫೀಸ್‌ ಫೈಲ್‌ ಮನೆಗೆ ಬಂದಿದೆ. ಭಾರ್ಗವಿಯ ಅಸಲಿ ಆಟಕ್ಕೆ ಇನ್ನೇನು ಸೂರ್ಯ ಪ್ರಕಾಶ್‌ನ ಸಹಿ ಬೀಳಬೇಕು ಎನ್ನುವಷ್ಟರಲ್ಲಿಯೇ ಅಶೋಕನ ದಿಢೀರ್‌ ಆಗಮನವಾಗಿದೆ. ಅಶೋಕ ಎಂಟ್ರಿ ಆಗುತ್ತಿದ್ದಂತೆ ಭಾರ್ಗವಿ ನಿಗಿ ನಿಗಿ ಕೆಂಡವಾಗಿದ್ದಾಳೆ. ಫೈಲ್‌ಗೆ ಸಹಿ ಬೀಳುವುದನ್ನು ತಪ್ಪಿಸಿ, ಪ್ಲೇಟ್‌ ಬದಲಿಸಿದ್ದಾನೆ ಅಶೋಕ.

ಸೀತಾ ಮತ್ತು ಸಿಹಿ ನಡುವೆ ಮಾತುಕತೆ ಮುಂದುವರಿದಿದೆ. ಸಿಹಿಯ ಹಟಕ್ಕೆ ಸೀತಾ ಕ್ಯಾರೆ ಎನ್ನುತ್ತಿಲ್ಲ. ಎಷ್ಟು ಅಳುತ್ತಿಯೋ ಅಳು, ನೀನೇ ಸಮಾಧಾನ ಮಾಡ್ಕೊಂಡು ಹೊರಗಡೆ ಬಾ ಎಂದಿದ್ದಾಳೆ. ಹೀಗಿರುವಾಗಲೇ ರಾಮನ ಎಂಟ್ರಿಯಾಗಿದೆ. ನನ್ನ ಫ್ರೆಂಡ್‌ ಮೇಲೆ ಏಕೆ ಕೂಗಾಡ್ತಿದಿರಾ ಎಂದು ಸೀತಾಗೆ ಹೇಳಿದ್ದಾನೆ. ಸಿಹಿ ಬಳಿ ಬಂದು ನಿಂಗೇನು ಬೇಕು ಕೇಳು ಫ್ರೆಂಡ್‌ ನಾನು ಕೊಡಿಸ್ತಿನಿ ಎಂದಿದ್ದಾನೆ.

ಸಿಹಿಗೆ ನಾನೇ ಗಣೇಶ ಕೊಡಿಸ್ತಿನಿ ಎಂದಿದ್ದಾನೆ ರಾಮ. ಇದೇ ವೇಳೆ ಹೆಲಿಕಾಪ್ಟರ್‌ನಲ್ಲಿ ಕರೆದುಕೊಂಡು ಹೋಗುವುದಾಗಿಯೂ ಭರವಸೆ ನೀಡಿದ್ದಾನೆ. ರಾಮ್‌ ನೀವು ಈ ರೀತಿ ಮಾಡುವುದು ಸರಿಯಲ್ಲ ಎಂದು ಸೀತಾ ಹೇಳಿದ್ದಾಳೆ. ಇದಕ್ಕೆ ಉತ್ತರವಾಗಿ, ನನಗೆ ಅಂತ ನನ್ನ ಜೀವನದಲ್ಲಿ ತುಂಬ ಕಡಿಮೆ ಜನ. ಅದರಲ್ಲೂ ನನ್ನ ಬೆಸ್ಟ್‌ ಫ್ರೆಂಡ್‌ ಸಿಹಿ. ಅವಳಿಂದ ನನ್ನನ್ನು ದೂರ ಮಾಡ್ಬೇಡಿ ಎಂದು ಕೈ ಮುಗಿದು ಬೇಡಿಕೊಂಡಿದ್ದಾನೆ ರಾಮ.

ಮನರಂಜನೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

Whats_app_banner