Seetha Rama: ಹುಷಾರು ತಪ್ಪಿರೋ ಸೀತಮ್ಮನ ಪಾಲಿಗೆ ಸಿಹಿಯೇ ಅಮ್ಮನಾಗಿದ್ದಾಳೆ! ಸೀತಾಳ ಕಷ್ಟಕ್ಕೆ ರಾಮ್ ಮರುಗಿದರೂ ಪ್ರಯೋಜನವಾಗ್ತಿಲ್ಲ
ಸೀತಾಗೆ ಹುಷಾರು ತಪ್ಪಿದೆ, ಆಪ್ತಮಿತ್ರ ಅಶೋಕ ಫೋನ್ ಆಫ್ ಮಾಡಿದ್ದಾನೆ. ಭಾರ್ಗವಿ ಗ್ಯಾಪ್‌ನಲ್ಲೇ ತನ್ನ ಕಾರ್ಯ ಸಾಧನೆ ಮಾಡಿ ಮುಗಿಸಿದ್ದಾಳೆ. ಇತ್ತ ರಾಮ ಮಾತ್ರ ಕೊಂಚ ಬೇಸರದಲ್ಲಿದ್ದಾನೆ.
Seetha Rama Serial 56th Episode: ರಾಮನ ತಾಯಿ ವಾಣಿ ಬರ್ತ್‌ಡೇ ನಿಮಿತ್ತ ಮನೆಯಲ್ಲಿ ಕ್ಯಾರೇಟ್ ಹಲ್ವ ಸಿಹಿ ಮಾಡಿಸಿದ್ದಾಳೆ ಭಾರ್ಗವಿ. ಎಲ್ಲರೂ ಬಾಯಿಚಪ್ಪರಿಸಿ ಹಲ್ವ ಸೇವಿಸುತ್ತಿದ್ದರೆ, ರಾಮ್ ಮಾತ್ರ ಬೇರೆಯದೇ ಗುಂಗಿನಲ್ಲಿದ್ದಾನೆ. ಅಶೋಕ ಆಡಿದ ಮಾತುಗಳೇ ರಾಮನ ತಲೆಯಲ್ಲಿ ಓಡುತ್ತಿವೆ. ಕೊಂಚ ಬೇಸರದಲ್ಲಿಯೇ ಎಲ್ಲರ ಜತೆ ಊಟಕ್ಕೆ ಕೂತಿದ್ದಾನೆ ರಾಮ್.
ಈ ನಡುವೆ ತಾನು ಆಫೀಸ್‌ಗೆ ಹೋದ ವಿಚಾರವನ್ನೂ ರಾಮನ ಮುಂದೆ ಹೇಳಿಕೊಂಡಿದ್ದಾಳೆ ಭಾರ್ಗವಿ. ತಾನು ಬೇಕು ಅಂತ ಆಫೀಸ್‌ಗೆ ಹೋಗಿಲ್ಲ. ನೀನು ಉಸ್ತುವಾರಿ ವಹಿಸಿಕೊಂಡ ಮೇಲಂತೂ ಅತ್ತ ತಲೆನೂ ಹಾಕಿಲ್ಲ ಎಂದಿದ್ದಲ್ಲದೇ, ಪತಿ ವಿಶ್ವಜಿತ್ ಹೆಸರಲ್ಲಿ ಸುಳ್ಳಿನ ಕಥೆಯನ್ನೇ ರಾಮನ ಮುಂದೆ ಬಿಚ್ಚಿಟ್ಟಿದ್ದಾಳೆ. ಇತ್ತ ಅಯ್ಯೋ ಎಲ್ಲವನ್ನೂ ನನ್ನ ಬುಡಕ್ಕೇ ತಂದಳಲ್ಲ ಎಂದು ವಿಶ್ವಜಿತ್ ಬೆಪ್ಪಾಗಿದ್ದಾನೆ.
ಅಸಲಿ ಕಾರಣ ಏನು ಅಂತ ನನಗೆ ಗೊತ್ತು. ಆ ಸೀತಾಗೆ ದುಡ್ಡು ಸಿಗದಿದ್ದಕ್ಕೆ ನೀನು ಬೇಜಾರಾಗಿದ್ದು ಎಂದು ಮನದಲ್ಲೇ ಮಾತನಾಡಿಕೊಂಡ ಭಾರ್ಗವಿ, ವಾಣಿ ಮಗನಾದ ನಿನಗೆ ಸಂತೋಷ ನೆಮ್ಮದಿ ಯಾವತ್ತೂ ಸಿಗಬಾರದು ಎಂದು ಶಪಿಸಿದ್ದಾಳೆ. ಇತ್ತ ರಾಮನ ವಿಚಾರದಲ್ಲಿ ಅಶೋಕ ಕೊಂಚ ಗರಂ ಆಗಿದ್ದಾನೆ. ರಾಮನಿಗೆ ನಿಜ ಹೇಗೆ ತಿಳಿಸಬೇಕು ಎಂಬ ಗೊಂದಲದಲ್ಲಿದ್ದಾನೆ ಅಶೋಕ.
ತನ್ನ ಮೇಲೆ ಕೋಪಿಸಿಕೊಂಡ ಸ್ನೇಹಿತ ಅಶೋಕನಿಗೆ ತಾನೇ ಪೋನ್ ಮಾಡಿ ಮಾತನಾಡಲು ಮುಂದಾಗಿದ್ದಾನೆ ರಾಮ. ಆದರೆ, ಅಶೋಕ್ ಫೋನ್ ಆಫ್ ಮಾಡಿಟ್ಟಿದ್ದಾನೆ. ಇತ್ತ ಸೀತಾಳಿಗೆ ಜ್ವರ ಬಂದಿದೆ. ಸಿಹಿಯೇ ಸೀತಮ್ಮನ ಜ್ವರ ಚೆಕ್ ಮಾಡಿದ್ದಾಳೆ. ಈ ನಡುವೆ ಶಾಂತಮ್ಮ ಮತ್ತು ತಾತ ಇಬ್ಬರೂ ಸಂಬಂಧಿಕರ ಮನೆಯಲ್ಲಿನ ಮದುವೆ ಕಾರ್ಯಕ್ರಮಕ್ಕೆ ಹೊರಟಿದ್ದಾರೆ.
ಆಫೀಸ್‌ಗೆ ಬರದೆ, ಮನೆಯಲ್ಲಿಯೇ ರೆಸ್ಟ್ ಮಾಡ್ತಿದ್ದಾಳೆ ಸೀತಾ. ಇತ್ತ ಆಫೀಸ್‌ಗೆ ಬಂದ ರಾಮ್‌ಗೂ ಅಚ್ಚರಿ ಕಾದಿತ್ತು. ಸೀತಾ ಬಾರದಿದ್ದನ್ನು ನೋಡಿ, ನನ್ನ ಮೇಲಿನ ಬೇಸರಕ್ಕೆ ಬಂದಿಲ್ವ ಎಂದು ರಾಮ್ ಊಹಿಸಿಕೊಂಡಿದ್ದಾನೆ. ಪ್ರಿಯಾಳಿಂದ ಸೀತಾಗೆ ಜ್ವರ ಬಂದಿರೋ ವಿಚಾರ ಗೊತ್ತಾಗಿದೆ. ಮನೆಯಲ್ಲಿ ಸಿಹಿಯೇ ಅಮ್ಮನ ಆರೈಕೆಯಲ್ಲಿ ತೊಡಗಿದ್ದಾಳೆ. ಸೀತಾಳ ಆರೋಗ್ಯದ ಬಗ್ಗೆಯೂ ಸಿಹಿಗೆ ಫೋನ್ ಮಾಡಿ ವಿಚಾರಿಸಿದ್ದಾನೆ ರಾಮ್.
ಸೀತಮ್ಮಳ ಸಂಕಷ್ಟವನ್ನು ರಾಮನ ಮುಂದೆ ವಿವರಿಸಿದ್ದಾಳೆ ಸಿಹಿ. ನಾನು ಪಿಕ್‌ನಿಕ್‌ಗೆ ಹೋಗದೇ ಇದ್ದಿದ್ದು ಒಳ್ಳೆಯದಾಯ್ತು ಎಂದಿದ್ದಾಳೆ. ಅಜ್ಜಿ ತಾತ ಸಹ ಊರಿಗೆ ಹೋಗಿದ್ದಾರೆ. ಒಬ್ಬಳೇ ಇದ್ದೇನೆ. ಭಯ ಆಗ್ತಿದೆ, ಜ್ವರ ಬಂದ್ರೆ ಏನೂ ಆಗಲ್ವಲ್ಲ ಎಂದು ಕೇಳಿ, ನಾನು ಒಬ್ಬಳೇ ಇದ್ದೇನೆ ಏನು ಮಾಡಲಿ ಫ್ರೆಂಡ್ ಎಂದಿದ್ದಾಳೆ ಸಿಹಿ. ಹಾಗಾದರೆ, ರಾಮ್ ಸೀತಾಳ ಮನೆಗೆ ಹೋಗ್ತಾನಾ?
ಇದನ್ನೂ ಓದಿ: Seetha Rama Serial: ಮಾರ್ಕೆಟಿಂಗ್ ಮ್ಯಾನೇಜರ್ ಟು ಸೀರಿಯಲ್ ಹೀರೋ, ರೀಲ್ ರಾಮನ ರಿಯಲ್ ಕಥೆ; ಗಗನ್ ಚಿನ್ನಪ್ಪ ಸಂದರ್ಶನ