Seetha Rama: ಬಾಡಿಗೆ ಮನೆ ಬೇಕು ಅಂತ ಸೀತಾ ಕೇಳ್ತಿದ್ರೆ, ಸ್ವಂತ ಮನೆಯನ್ನೇ ಉಳಿಸಿಕೊಡ್ತೀನಿ ಅಂತಿದ್ದಾನೆ ರಾಮ!
ಕನ್ನಡ ಸುದ್ದಿ  /  ಮನರಂಜನೆ  /  Seetha Rama: ಬಾಡಿಗೆ ಮನೆ ಬೇಕು ಅಂತ ಸೀತಾ ಕೇಳ್ತಿದ್ರೆ, ಸ್ವಂತ ಮನೆಯನ್ನೇ ಉಳಿಸಿಕೊಡ್ತೀನಿ ಅಂತಿದ್ದಾನೆ ರಾಮ!

Seetha Rama: ಬಾಡಿಗೆ ಮನೆ ಬೇಕು ಅಂತ ಸೀತಾ ಕೇಳ್ತಿದ್ರೆ, ಸ್ವಂತ ಮನೆಯನ್ನೇ ಉಳಿಸಿಕೊಡ್ತೀನಿ ಅಂತಿದ್ದಾನೆ ರಾಮ!

ಲಾಯರ್ ರುದ್ರಪ್ರತಾಪ್‌‌ನಿಂದಾಗಿ ಸೀತಾ ಮನೆ ಮಾರಲು ಮುಂದಾಗಿದ್ದಾಳೆ. ಮುಂಚಿತವಾಗಿ ಮನೆ ಬಾಡಿಗೆ ಹುಡುಕಲು ಶುರುಮಾಡಿದ್ದಾಳೆ. ಇತ್ತ ಮನೆ ಉಳಿಸಿಕೊಡುವುದಾಗಿ ಮನದಲ್ಲೇ ಒಳ್ಳೆಯದನ್ನು ಬಯಸುತ್ತಿದ್ದಾನೆ ರಾಮ.

Seetha Rama: ಬಾಡಿಗೆ ಮನೆ ಬೇಕು ಅಂತ ಸೀತಾ ಕೇಳ್ತಿದ್ರೆ, ಸ್ವಂತ ಮನೆಯನ್ನೇ ಉಳಿಸಿಕೊಡ್ತೀನಿ ಅಂತಿದ್ದಾನೆ ರಾಮ!
Seetha Rama: ಬಾಡಿಗೆ ಮನೆ ಬೇಕು ಅಂತ ಸೀತಾ ಕೇಳ್ತಿದ್ರೆ, ಸ್ವಂತ ಮನೆಯನ್ನೇ ಉಳಿಸಿಕೊಡ್ತೀನಿ ಅಂತಿದ್ದಾನೆ ರಾಮ! (Zee5)

Seetha Rama: ಸಿಹಿ ಮತ್ತು ಸೀತಾ ಜತೆ ಊರ್‌ ಸುತ್ತಾಡಿ ಹೊಟ್ಟೆ ಬಿರಿಯೋ ರೀತಿ ತಿಂದು ಬಂದ ರಾಮನಿಗೆ ಊಟದ ವಿಚಾರಕ್ಕೆ ಒತ್ತಾಯ ಮಾಡುತ್ತಿದ್ದಾಳೆ ಚಿಕ್ಕಿ ಭಾರ್ಗವಿ. ಬೇಡ ಬೇಡ ಎಂದು ರಾಮ ಎಷ್ಟೇ ಹೇಳಿದರೂ, ಭಾರ್ಗವಿ ಮಾತ್ರ ಬಿಡುತ್ತಿಲ್ಲ. ಕೊನೆಗೆ ಏನೋ ಹೇಳಿ ಅಲ್ಲಿಂದ ಹೊರಡುತ್ತಾನೆ. ನನ್ನ ಮಾತನ್ನು ಯಾವತ್ತೂ ಮೀರದ ರಾಮ, ಈಗ ಬದಲಾಗಿದ್ದಾನೆ ಎಂಬ ಅನುಮಾನ ಭಾರ್ಗವಿಯ ತಲೆಯಲ್ಲಿದೆ.

ಇತ್ತ ಬಾಡಿಗೆ ಮನೆ ವಿಚಾರಕ್ಕೆ ಸೀತಾ ಮತ್ತು ರಾಮನ ನಡುವೆ ಫೋನ್‌ ಮೂಲಕ ಮಾತುಕತೆ ನಡೆಯುತ್ತಿದೆ. ನಿಮ್ಮ ಮನೆ ಬಳಿ ಮನೆ ಬಾಡಿಗೆ ಎಷ್ಟು ಎಂದೆಲ್ಲ ಸೀತಾ ವಿಚಾರಿಸಿದ್ದಾಳೆ. ಇದಕ್ಕೆ ಕೊಂಚ ಗೊಂದಲದಲ್ಲಿಯೇ ಉತ್ತರಿಸಿದ್ದಾನೆ ರಾಮ. ಮನೆ ಮಾರಬೇಕು, ಲೋನ್‌ ತೀರಿಸಬೇಕು ಎಂದೆಲ್ಲ ರಾಮನ ಮುಂದೆ ಹೇಳಿಕೊಳ್ಳುತ್ತಾಳೆ. ನೀವು ಅದೇ ಮನೆಯಲ್ಲಿ ಇರ್ತೀರಾ ತಲೆ ಕೆಡಿಸಿಕೊಳ್ಳಬೇಡಿ ಎಂದು ಭರವಸೆ ನೀಡ್ತಾನೆ ರಾಮ.

ಸೂರ್ಯ ಪ್ರಕಾಶ್, ರಾಮನ ಮದುವೆ ಬಗ್ಗೆ ಕೇಳುವ ಸಲುವಾಗಿಯೇ ಅಶೋಕನಿಗೆ ಫೋನ್‌ ಮಾಡಿ, ಹುಡುಗಿ ವಿಚಾರವಾಗಿ ಮಾತನಾಡುತ್ತಾನೆ. ರಾಮನಿಗೆ ಸೀತೆಯೇ ಸಿಗ್ತಾಳೆ ಎನ್ನುತ್ತಾನೆ ಅಶೋಕ. ಅವನು ನನ್ನನ್ನು ಮನೆ ಬ್ರೋಕರ್‌ ಮಾಡಿದ್ದಾನೆ, ನೀನು ಮದುವೆ ಬ್ರೋಕರ್‌ ಮಾಡ್ತಿದ್ದೀಯಾ ಎಂದು ಗೊಣಗುತ್ತಾನೆ‌ ಅಶೋಕ. ಹುಡುಗಿ ವಿಚಾರದಲ್ಲಿ ತಮಾಷೆಗೆ ಆಡಿದ ಮಾತ್ತನ್ನೇ ಸೂರ್ಯ ಪ್ರತಾಪ್‌ ಸೀರಿಯಸ್‌ ಆಗಿ ತೆಗೆದುಕೊಂಡಿದ್ದಾನೆ ಎಂಬ ವಿಚಾರವೂ ಅಶೋಕನಿಗೆ ಸಂಕಷ್ಟ ತಂದಿದೆ.

ಸೀತಾಗೆ ಬ್ಯಾಂಕ್‌ನಿಂದ ರಿಮೈಂಡ್‌ ಲೆಟರ್‌ ಬಂದಿದೆ. ಲಾಯರ್‌ ರುದ್ರಪ್ರತಾಪ್‌ಗೆ ಫೋನ್‌ ಮಾಡಿ ಗಮನಕ್ಕೆ ತಂದಿದ್ದಾಳೆ. ಇತ್ತ ಸೀತಾ ಮತ್ತು ಮನೆ ಇಬ್ಬರೂ ನನ್ನ ಸ್ವತ್ತೇ ಎಂದು ಕುಹಕ ನಗು ಬೀರಿದ್ದಾನೆ ರುದ್ರಪ್ರತಾಪ್. ತಾತನೊಂದಿಗೆ ಅಡ್ವಾನ್ಸ್‌ ಸ್ಯಾಲರಿ ಬಗ್ಗೆ ರಾಮ್‌ ಮತ್ತೆ ಮಾತನಾಡುತ್ತಾನೆ. ಭಾವನೆಗಳನ್ನು ದುಡ್ಡಿನಿಂದ ಅಳೆಯಲು ಆಗಲ್ಲ. ಉದ್ಯಮವೇ ಬೇರೆ ಭಾವನೆಗಳೇ ಬೇರೆ ಎಂಬ ಕಿವಿ ಮಾತೂ ತಾತನಿಂದ ಬರುತ್ತದೆ.

ಆಫೀಸ್‌ನಲ್ಲಿ ಎಲ್ಲರ ಜತೆಗೂ ಮನೆ ಬಾಡಿಗೆ ವಿಚಾರ ಹೇಳುತ್ತಿದ್ದಾಳೆ ಸೀತಾ. ಕಡಿಮೆ ಬಜೆಟ್‌ಗೆ ಮನೆ ಇದ್ದರೆ ತಿಳಿಸಿ ಎನ್ನುತ್ತಿದ್ದಾಳೆ. ಸೀತಾಳ ಸ್ಥಿತಿ ಕಂಡು, ಅಲ್ಲೇ ಪಕ್ಕದಲ್ಲೇ ಇದ್ದ ರಾಮ, ಯಾಕೆ ಇನ್ನೊಂದೆರಡು ದಿನ ಕಾಯಬಾರದು ಎನ್ನುತ್ತಾನೆ. ಅದಕ್ಕೆ ಮತ್ತೆ ಅದೇ ಸಮಸ್ಯೆಗಳ ಕಥೆ ಹೇಳುತ್ತಾಳೆ ಸೀತಾ. ನಿಮಗೆ ಇವತ್ತು ಅಡ್ವಾನ್ಸ್‌ ಸ್ಯಾಲರಿ ಸಿಗುತ್ತೆ, ನಿಮ್ಮ ಮನೆ ಉಳಿಯುತ್ತೆ ಎಂದು ಮನದಲ್ಲಿಯೇ ಹೇಳಿಕೊಳ್ಳುತ್ತಾನೆ ರಾಮ. ಹಾಗಾದರೆ ಸೀತಾಳ ಸಮಸ್ಯೆ ಬಗೆಹರಿಯುತ್ತಾ? ರುದ್ರಪ್ರತಾಪನ ಹಿಡಿತದಿಂದ ತಪ್ಪಿಸಿಕೊಳ್ಳುತ್ತಾಳಾ? ಕಾದು ನೋಡಬೇಕು.

ಮನರಂಜನೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

Whats_app_banner