Seetha Rama Serial: ಸೀತೆಗೆ ತಪ್ಪದ ಸಂಕಷ್ಟ; ಆಕೆಯನ್ನೇ ಮದುವೆ ಆಗ್ತಿನಿ ಅಂತ ಮತ್ತೆ ರಾಮನ ಹೆಂಡತಿ ಹಿಂದೆ ಬಿದ್ದ ರುದ್ರಪ್ರತಾಪ್‌!-kannada television news seetha rama serial september 11th episode rudrapratap fell behind seetha again mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Seetha Rama Serial: ಸೀತೆಗೆ ತಪ್ಪದ ಸಂಕಷ್ಟ; ಆಕೆಯನ್ನೇ ಮದುವೆ ಆಗ್ತಿನಿ ಅಂತ ಮತ್ತೆ ರಾಮನ ಹೆಂಡತಿ ಹಿಂದೆ ಬಿದ್ದ ರುದ್ರಪ್ರತಾಪ್‌!

Seetha Rama Serial: ಸೀತೆಗೆ ತಪ್ಪದ ಸಂಕಷ್ಟ; ಆಕೆಯನ್ನೇ ಮದುವೆ ಆಗ್ತಿನಿ ಅಂತ ಮತ್ತೆ ರಾಮನ ಹೆಂಡತಿ ಹಿಂದೆ ಬಿದ್ದ ರುದ್ರಪ್ರತಾಪ್‌!

Seetha Rama Serial Sep 11th Episode: ಸೀತಾ ರಾಮ ಸೀರಿಯಲ್‌ನಲ್ಲಿ ಸೀತೆಗೆ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗುತ್ತಿದೆ. ಒಂದು ಕಡೆ ಶ್ಯಾಮ್‌ ಜತೆ ರಾಮನೂ ಸೇರಿ ಸರೋಗಸಿ ತಾಯಿಯ ಹುಡುಕಾಟಕ್ಕಿಳಿದಿದ್ದಾರೆ. ಮತ್ತೊಂದು ಕಡೆ ಸೀತಾಳನ್ನು ತನ್ನವಳನ್ನಾಗಿ ಮಾಡಿಕೊಳ್ಳುವ ನಿಟ್ಟಿನಲ್ಲಿ ತಂತ್ರ ಹೆಣೆಯುತ್ತಿದ್ದಾನೆ ರುದ್ರಪ್ರತಾಪ್‌.

ಸೀತಾ ರಾಮ ಧಾರಾವಾಹಿ
ಸೀತಾ ರಾಮ ಧಾರಾವಾಹಿ (Image\ Zee 5)

Seetha Rama Serial: ಸೀತಾ ರಾಮ ಧಾರಾವಾಹಿಯಲ್ಲೀಗ ಸಿಹಿಯ ಸರೋಗಸಿ ತಾಯಿಯ ಹುಡುಕಾಟಕ್ಕೆ ಮೇಘಶ್ಯಾಮನಿಗೆ ಶ್ರೀರಾಮ ಸಾಥ್‌ ನೀಡಿದ್ದಾನೆ. ಈ ವಿಷಯ ತಿಳಿದ ಸೀತಾ ಸಹ ಕೊಂಚ ಆತಂಕದಲ್ಲಿದ್ದಾಳೆ. ಈ ನಡುವೆ ಗಣೇಶ ಹಬ್ಬ ಬಂದಿದೆ. ಸಿಹಿ, ಅನಿಕೇತನ ಮನಸ್ಸು ಬದಲಾಯಿಸಿ ಆತನನ್ನು ಕರೆದುಕೊಂಡು ಗಣೇಶನನ್ನು ಮಾಡಿದ್ದಾಳೆ. ಮನೆಯವರೆಲ್ಲರನ್ನು ಒಂದೆಡೆ ಸೇರಿಸಿ ಹಬ್ಬದಾಚರಣೆ ಸಿದ್ಧತೆ ಮಾಡಿದ್ದಾಳೆ. ಇದೇ ವೇಳೆ ಡಾಕ್ಟರ್ ಮೇಘಶ್ಯಾಮ ಮತ್ತು ಶಾಲಿನಿ ದಂಪತಿ ರಾಮ್‌ ಮನೆಗೆ ಬಂದಿದ್ದಾರೆ.

ಈ ನಡುವೆಯೇ ಸಿಹಿಯ ಆಟ, ತುಂಟಾಟಗಳನ್ನು ಅಲ್ಲೇ ಇದ್ದ ರಾಮ್‌ ಸೀತಾ ನೋಡಿ ಖುಷಿ ಪಟ್ಟಿದ್ದಾರೆ. ಮನೆಗೆ ಬಂದ ಮೇಘಶ್ಯಾಮ್‌ ಮತ್ತು ಶಾಲಿನಿಗೂ ಸಿಹಿಯ ಮೇಲೆ ಒಲವು ಮೂಡಿದೆ. ಎತ್ತಿ ಮುದ್ದಾಡಿದ್ದಾರೆ. ತನ್ನ ಮಗುವಿಗಾಗಿ ಹಪಹಪಿಸುತ್ತಿರುವ ಮೇಘಶ್ಯಾಮ, ಸಿಹಿಯನ್ನು ನೋಡಿ ಕಳೆದುಹೋಗಿದ್ದಾನೆ. ಅಷ್ಟೇ ಯಾಕೆ ಆತನ ಪತ್ನಿ ಶಾಲಿನಿಗೂ ಸಿಹಿ ಇಷ್ಟವಾಗಿದ್ದಾಳೆ. ಇದೇ ವೇಳೆ ಬಾಡಿಗೆ ತಾಯಿಯಿಂದಲೇ ನಮಗೆ ಮೋಸವಾಗಿದೆ ಎಂಬ ವಿಚಾರವನ್ನೂ ಶ್ಯಾಮ್‌ ಮತ್ತು ಶಾಲಿನಿ ರಾಮ್‌ ದಂಪತಿ ಮುಂದೆ ಹೇಳಿಕೊಳ್ಳುತ್ತಾರೆ.

ದೇವರ ಬಳಿ ಸಿಹಿ ಬೇಡಿದ್ದೇನು?

ಅಲ್ಲೇ ಇದ್ದ ಸಿಹಿಯೂ ಇದೆಲ್ಲವನ್ನು ಕೇಳಿಸಿಕೊಂಡು, ಆ ಗಣಪನಲ್ಲಿ ವರ ಬೇಡಿಕೊಳ್ಳುತ್ತಾಳೆ. ಹೇಗಾದ್ರೂ ಮಾಡಿ ಇವರ ಮಗು ಇವರಿಗೆ ಆದಷ್ಟು ಬೇಗ ಸಿಗೋ ಹಾಗಾಗ್ಲಿ ಎಂದಿದ್ದಾಳೆ. ಸಿಹಿಯ ಮಾತಿಗೆ ಈ ಜೋಡಿ ಮತ್ತೆ ಮರಳಾಗುತ್ತದೆ. ಸದಾ ಫಿಟ್‌ನೆಸ್‌ ಮತ್ತು ಡಯಟ್‌ ಎಂದೆಲ್ಲ ಇರುವ ಶಾಲಿನಿಗೆ ದೇವರ ಪ್ರಸಾದದ ರೂಪದಲ್ಲಿ ಸಿಹಿಯಾದ ಲಡ್ಡು ನೀಡುತ್ತಾಳೆ ಸಿಹಿ. ಆಗ ಇಲ್ಲ ನಾನು ಡಯಟ್‌ ಮೇಲಿದಿನಿ ಲಡ್ಡು ಬೇಡ ಎನ್ನುತ್ತಾಳೆ. ನಿಮಗೆ ಸ್ವೀಟ್ ತಿನ್ನುವ ಯೋಗವಿದೆ. ನನಗೆ ಜೀವನ ಪೂರ್ತಿ ಸ್ವೀಟ್ ತಿನ್ನುವ ಹಾಗೆಯೇ ಇಲ್ಲ. ನನಗೋಸ್ಕರ ಸ್ವೀಟ್ ತಿನ್ನಿ. ಆಗ ನನಗೂ ಖುಷಿಯಾಗುತ್ತದೆ. ಆಗ ಸರಿ ಎಂದು ಸ್ವೀಟ್‌ ತಿನ್ನುತ್ತಾಳೆ ಶಾಲಿನಿ. ಇದು ಶ್ಯಾಮ್‌ಗೂ ಅಚ್ಚರಿ ಎನಿಸುತ್ತದೆ.

ತಣಿಯದ ರುದ್ರಪ್ರತಾಪನ ಆಸೆ

ಮತ್ತೊಂದು ಕಡೆ ಭಾರ್ಗವಿಯ ಅಣತಿಯಂತೆ ಚಾಂದಿನಿ ಹಿಂದೆ ಬಿದ್ದಿದ್ದಾನೆ ರುದ್ರಪ್ರತಾಪ್. ಸೀತಾ ಬರೆದ ಪತ್ರ ಹಿಡಿದು ಚಾಂದಿನಿ ಮನೆಗೆ ಬಂದರೂ, ಅಲ್ಲಿ ಆಕೆಯ ದರ್ಶನವಾಗಲಿಲ್ಲ. ಇತ್ತ ಶಾಂತಮ್ಮಜ್ಜಿ ಮನೆಗೆ ಬಂದ ರುದ್ರಪ್ರತಾಪ್‌, ಚಾಂದಿನಿ ಬಗ್ಗೆ ವಿಚಾರಿಸಿದ್ದಾನೆ. ಆತನ ಮಾತಿಗೆ ಏನೂ ಉತ್ತರ ನೀಡಿದೇ ಧೈರ್ಯವಾಗಿಯೇ ಎದುರಿಸಿದ್ದಾರೆ. ಸೀತಾಳನ್ನು ಸುಮ್ಮನೆ ಬಿಡಲ್ಲ. ಆಕೆಯನ್ನು ನನ್ನವಳನ್ನಾಗಿ ಮಾಡಿಕೊಳ್ಳುವೆ ಎಂದು ಹೇಳಿ ಹೋಗುತ್ತಾನೆ. ಹೀಗಿರುವಾಗ ಒಬ್ಬಳೇ ವಠಾರಕ್ಕೆ ಬರುವ ಸೀತಾಗೆ, ರುದ್ರಪ್ರತಾಪ್‌ ಬಂದ ವಿಚಾರ ಗೊತ್ತಾಗುತ್ತದೆ. ನೀನು ಹುಷಾರಾಗಿರು ಎಂದೂ ಶಾಂತಮ್ಮಜ್ಜಿ ಸೀತಾಗೆ ಹೇಳುತ್ತಾಳೆ.

ಸೀತಾ ರಾಮ ಧಾರಾವಾಹಿ ಪಾತ್ರವರ್ಗ

ನಿರ್ದೇಶಕ: ಮಧುಸೂಧನ್‌

ಗಗನ್‌ ಚಿನ್ನಪ್ಪ: ಶ್ರೀರಾಮ (ನಾಯಕ)

ವೈಷ್ಣವಿ ಗೌಡ: ಸೀತಾ (ನಾಯಕ)

ರೀತು ಸಿಂಗ್: ಸಿಹಿ (ಸೀತಾ ಮಗಳು)

ಅಶೋಕ ಶರ್ಮಾ: ಅಶೋಕ (ಶ್ರೀರಾಮನ ಪ್ರಾಣ ಸ್ನೇಹಿತ)

ಭಾರ್ಗವಿ: ಪೂಜಾ ಲೋಕೇಶ್‌ (ಶ್ರೀರಾಮನ ಚಿಕ್ಕಮ್ಮ)

ಮುಖ್ಯಮಂತ್ರಿ ಚಂದ್ರು: ಸೂರ್ಯ ಪ್ರಕಾಶ್‌ ದೇಸಾಯಿ (ಶ್ರೀರಾಮನ ತಾತ)

ಶ್ವೇತಾ ಶಂಕರಪ್ಪ: ಪ್ರಿಯಾ (ಸೀತಾಳ ಸ್ನೇಹಿತೆ)

ವಿಕಾಸ್‌ ಕಾರ್‌ಗೋಡ್:‌ ಲಾಯರ್‌ ರುದ್ರಪ್ರತಾಪ್

ಸತೀಶ್‌ ಚಂದ್ರ: ಚರಣ್‌. ಡಿ

ಪೂರ್ಣಚಂದ್ರ ತೇಜಸ್ವಿ: ವಿಶ್ವಜೀತ್‌ (ಶ್ರೀರಾಮನ ಚಿಕ್ಕಪ್ಪ)

ಜಯದೇವ್‌ ಮೋಹನ್:‌ ಸತ್ಯಜೀತ್‌ (ಶ್ರೀರಾಮನ ಚಿಕ್ಕಪ್ಪ)

mysore-dasara_Entry_Point