ಕನ್ನಡ ಸುದ್ದಿ  /  ಮನರಂಜನೆ  /  Seetha Rama Serial: ಸೀತಾ ರಾಮಾಯಣದಲ್ಲಿ ಪ್ರೇಮಾಯಣ! ಶುರುವಾಯ್ತು ಲವ್‌ ಸೀಸನ್‌, ವೀಕ್ಷಕರಿಗೆ ಹೊಸ ಸುಳಿವಿನ ಸರ್ಪ್ರೈಸ್‌

Seetha Rama Serial: ಸೀತಾ ರಾಮಾಯಣದಲ್ಲಿ ಪ್ರೇಮಾಯಣ! ಶುರುವಾಯ್ತು ಲವ್‌ ಸೀಸನ್‌, ವೀಕ್ಷಕರಿಗೆ ಹೊಸ ಸುಳಿವಿನ ಸರ್ಪ್ರೈಸ್‌

Seetha Rama Serial: ಸೀತಾ ರಾಮ ಧಾರಾವಾಹಿಯಲ್ಲೀಗ ಪ್ರೇಮಾಯಣ ಶುರುವಾಗುವ ಸೂಚನೆ ಸಿಕ್ಕಿದೆ. ಬೀಚ್‌ ಬಳಿ ಕೈ ಕೈ ಹಿಡಿದು ಸೀತಾ ರಾಮ ಸುತ್ತಾಡಿದ್ದಾರೆ. ಪ್ರೇಮನಿವೇದನೆಯನ್ನೂ ಮಾಡಿ, ಮದುವೆ ಆಗ್ತೀರಾ ಎಂದೂ ಕೇಳಿದ್ದಾನೆ ರಾಮ.

ಸೀತಾ ರಾಮಾಯಣದಲ್ಲಿ ಪ್ರೇಮಾಯಣ! ಶುರುವಾಯ್ತು ಲವ್‌ ಸೀಸನ್‌, ವೀಕ್ಷಕರಿಗೆ ಹೊಸ ಸುಳಿವಿನ ಸರ್ಪ್ರೈಸ್‌
ಸೀತಾ ರಾಮಾಯಣದಲ್ಲಿ ಪ್ರೇಮಾಯಣ! ಶುರುವಾಯ್ತು ಲವ್‌ ಸೀಸನ್‌, ವೀಕ್ಷಕರಿಗೆ ಹೊಸ ಸುಳಿವಿನ ಸರ್ಪ್ರೈಸ್‌

Seetha Rama Serial: ಕನ್ನಡ ಕಿರುತೆರೆಯ ವೀಕ್ಷಕರನ್ನು ಮೋಡಿ ಮಾಡುತ್ತಿರುವ ಸೀರಿಯಲ್‌ಗಳಲ್ಲಿ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸೀತಾ ರಾಮ ಧಾರಾವಾಹಿ ಸಹ ಒಂದು. ಸಿಂಗಲ್‌ ಪೇರೆಂಟ್‌ ತಾಯಿಯೊಬ್ಬಳ ಬದುಕು ಮತ್ತು ಬವಣೆಯನ್ನು ತೆರೆದಿಡುವ ಈ ಸೀರಿಯಲ್‌ನಲ್ಲಿ ಆಗರ್ಭ ಶ್ರೀಮಂತನ ಪ್ರೀತಿ ಕಥೆಯೂ ಹೈಲೈಟ್.‌

ಟ್ರೆಂಡಿಂಗ್​ ಸುದ್ದಿ

ಹೆಸರಿಗಷ್ಟೇ ಸಿಹಿಯಾಗಿರುವ ಪುಟಾಣಿ ಸಿಹಿಗೆ ಇಲ್ಲಿ ಸಕ್ಕರೆ ಖಾಯಿಲೆ. ಆ ಪುಟಾಣಿ ಮಗಳನ್ನು ಸಲುಹುತ್ತ ಸವಾಲುಗಳನ್ನು ಎದುರಿಸುತ್ತ ಏರಿಳಿತದ ಬದುಕು ನಡೆಸುವವಳು ಸೀತಾ. ಹೀಗೆ ಸಾಗುವ ಹಾದಿಯಲ್ಲಿ ಅಡ್ಡಗಾಲಾಗುವ ವಿಲನ್‌ಗಳೂ ಇದ್ದಾರೆ. ಅವರೆಲ್ಲರ ನಡುವೆಯೇ ಶ್ರೀರಾಮನ ಪ್ರೀತಿಯ ಗಾಳಿಯೂ ಇದೀಗ ಸೀತಾಗೆ ಸೋಕುವ ಸಮಯ ಬಂದಾಗಿದೆ.

ಸೀತಾ ರಾಮ ಸೀರಿಯಲ್‌ನಲ್ಲಿ ರಾಮ, ದೇಸಾಯಿ ಕಂಪನಿಯ ಮಾಲೀಕ ಎಂಬ ವಿಚಾರ ತಿಳಿದ ಬಳಿಕ, ಆತನಿಂದ ಕೊಂಚ ಅಂತರ ಕಾಯ್ದುಕೊಂಡಿದ್ದಳು ಸೀತಾ. ಆಕೆಯನ್ನು ಮನವೊಲಿಸಲು ಎಷ್ಟೇ ಪ್ರಯತ್ನ ಪಟ್ಟರೂ ರಾಮ್‌ಗೆ ಅದು ಸಾಧ್ಯವಾಗಿರಲಿಲ್ಲ. ಒಂದಷ್ಟು ಘಟನೆಗಳು ಇಬ್ಬರ ನಡುವಿನ ಅಂತರವನ್ನು ಕಡಿಮೆ ಮಾಡಿದವು. ಇವರಿಬ್ಬರ ನಡುವಿನ ಸಂಬಂಧ ಗಟ್ಟಿಯಾಗುತ್ತಿದ್ದಂತೆ, ಸಿಹಿ ಮತ್ತು ಅಶೋಕನ ಮೊಗದಲ್ಲೂ ನಗು ಉಕ್ಕಿತ್ತು.

ಇದೀಗ ಇಬ್ಬರ ನಡುವಿನ ಬಂಧ ಮತ್ತಷ್ಟು ಬಿಗಿಯಾಗಿದೆ. ಇಬ್ಬರು ಮತ್ತಷ್ಟು ಹತ್ತಿರವಾಗುತ್ತಿದೆ. ಪ್ರೀತಿಯ ಸಸಿ ಇಬ್ಬರಲ್ಲೂ ಮೊಳಕೆಯೊಡೆಯುತ್ತಿದೆ. ಅದಕ್ಕೆ ಪೂರಕವೆಂಬಂತೆ, ಪ್ರೇಮಾಯಣದ ಹಾಡೊಂದು ಹೊರಬಿದ್ದಿದೆ. ಇನ್ನೇನಿದ್ದರೂ, ಪ್ರೇಮನಿವೇದನೆಯಷ್ಟೇ ಬಾಕಿ. ಈಗಾಗಲೇ ತಾತ ಸೂರ್ಯಪ್ರಕಾಶ್‌, ರಾಮ್‌ ಮೇಲೆ ಒತ್ತಡ ಹಾಕಿದ್ದಾನೆ. ಆದಷ್ಟು ಬೇಗ ನಿನ್ನ ಪ್ರೀತಿಯನ್ನು ಸೀತಾಳ ಮುಂದೆ ಹೇಳ್ತಿಯೋ, ನಾನೇ ಹೋಗಿ ಹೇಳಲೋ ಎಂದಿದ್ದಾನೆ.

ಇತ್ತ ಹೇಗಾದ್ರೂ ಮಾಡಿ ಸೀತಾ ಮತ್ತು ರಾಮನನ್ನು ಒಂದು ಮಾಡಬೇಕು ಎಂದು ಅಶೋಕ ಹರಸಾಹಸ ಪಡ್ತಿದ್ದಾನೆ. ಪ್ರೇಮಿಗಳ ದಿನದಂದು ಇಬ್ಬರನ್ನೂ ಒಂದೇ ಕಡೆ ಸೇರಿಸಿದ್ದಾನೆ. ಪ್ರಾಣ ಸ್ನೇಹಿತನ ಬದುಕು ಹಸನಾಗಲಿ ಎಂದು ಹರಸುತ್ತಿದ್ದಾನೆ. ಈಗ ಪ್ರೇಮನಿವೇದನೆಗೆ ಸಮಯ ಪಕ್ವವಾಗಿದೆ ಎಂಬ ಸುಳಿವು ಸಿಕ್ಕಿದೆ. ಶ್ರೀರಾಮ ತನ್ನೊಳಗೆ ಹುದುಗಿಸಿಟ್ಟುಕೊಂಡ ಪ್ರೀತಿಯನ್ನು ಸೀತಾಳ ಮುಂದೆ ಹೇಳುವ ಸಮಯ ಹತ್ತಿರ ಬಂದಿದೆ.

ಪ್ರೇಮಾಯಣದ ಹೊಸ ಗೀತೆ..

ಸೀತಾ ಮತ್ತು ರಾಮನ ನಡುವೆ ಪ್ರೇಮಾಯಣ ಶುರುವಾಗುತ್ತಿದ್ದಂತೆ, ಜೀ ಕನ್ನಡ ವಾಹಿನಿ ಹೊಸ ಹಾಡೊಂದನ್ನು ರಿಲೀಸ್‌ ಮಾಡಿದೆ. ಇದೇ ಸೀರಿಯಲ್‌ನ ಮುಂದಿನ ಕಥೆ ಹೇಗಿರಬಹುದು? ಎಂಬ ಸುಳಿವು ನೀಡಿದೆ. ಸೀತಾ ಮತ್ತು ರಾಮನ ಪ್ರೇಮಕಥೆಯೂ ಇಲ್ಲಿ ಅನಾವರಣಗೊಂಡಿದೆ. ಬೀಚ್‌ನಲ್ಲಿ ಕೈ ಕೈ ಹಿಡಿದು ಸುತ್ತಾಡಿದ್ದಾರೆ. ಉಡುಗೊರೆಗಳು ವಿನಿಮಯವಾಗಿದೆ. ಅಷ್ಟಕ್ಕೇ ಮುಗಿಯಲಿಲ್ಲ, ಬೀಚ್‌ ಬಳಿ ಸೀರೆ ಉಟ್ಕೊಂಡು ಬನ್ನಿ ಸರ್ಪ್ರೈಸ್‌ ಇದೆ ಎಂದಿದ್ದಾನೆ. ಸೀರೆ ಉಟ್ಟುಕೊಂಡು ಹೋದ ಸೀತಾಗೆ, ಪ್ರೇಮ ನಿವೇದನೆ ಮಾಡಿದ್ದಾನೆ. ನನ್ನನ್ನು ಮದುವೆಯಾಗ್ತೀರಾ ಎಂದಿದ್ದಾನೆ. ರಾಮನ ಪ್ರೀತಿ ಮಾತಿಗೆ ಸೀತಾ ಸಹ ಕರಗಿದ್ದಾಳೆ.

ಸೀತಾ ರಾಮ ಧಾರಾವಾಹಿ ಪಾತ್ರವರ್ಗ

ನಿರ್ದೇಶಕ: ಮಧುಸೂಧನ್‌

ಗಗನ್‌ ಶ್ರೀನಿವಾಸ್: ಶ್ರೀರಾಮ (ನಾಯಕ)

ವೈಷ್ಣವಿ ಗೌಡ: ಸೀತಾ (ನಾಯಕ)

ರೀತು ಸಿಂಗ್: ಸಿಹಿ (ಸೀತಾ ಮಗಳು)

ಅಶೋಕ ಶರ್ಮಾ: ಅಶೋಕ (ಶ್ರೀರಾಮನ ಪ್ರಾಣ ಸ್ನೇಹಿತ)

ಭಾರ್ಗವಿ: ಪೂಜಾ ಲೋಕೇಶ್‌ (ಶ್ರೀರಾಮನ ಚಿಕ್ಕಮ್ಮ)

ಮುಖ್ಯಮಂತ್ರಿ ಚಂದ್ರು: ಸೂರ್ಯ ಪ್ರಕಾಶ್‌ ದೇಸಾಯಿ (ಶ್ರೀರಾಮನ ತಾತ)

ಶ್ವೇತಾ ಶಂಕರಪ್ಪ: ಪ್ರಿಯಾ (ಸೀತಾಳ ಸ್ನೇಹಿತೆ)

ವಿಕಾಸ್‌ ಕಾರ್‌ಗೋಡ್:‌ ಲಾಯರ್‌ ರುದ್ರಪ್ರತಾಪ್

ಸತೀಶ್‌ ಚಂದ್ರ: ಚರಣ್‌. ಡಿ

ಪೂರ್ಣಚಂದ್ರ ತೇಜಸ್ವಿ: ವಿಶ್ವಜೀತ್‌ (ಶ್ರೀರಾಮನ ಚಿಕ್ಕಪ್ಪ)

ಜಯದೇವ್‌ ಮೋಹನ್:‌ ಸತ್ಯಜೀತ್‌ (ಶ್ರೀರಾಮನ ಚಿಕ್ಕಪ್ಪ)

IPL_Entry_Point