ಕನ್ನಡ ಸುದ್ದಿ  /  Entertainment  /  Kannada Television News Seetha Rama Serial Tuesday March 12th Episode Highlights Seetha Raama Serial Latest Updates Mnk

Seetha Rama Serial: ಐ ಲವ್‌ ಯೂ ಅಷ್ಟೇ! ದೇವಿ ಸನ್ನಿಧಿಯಲ್ಲೇ ಸೀತಾಳ ಮುಂದೆ ಹೊರಬಿತ್ತು ರಾಮನ ಮನಸಿನ ಮಾತು

Seetha Rama Serial Latest Episode: ಸೀತಾ ರಾಮ ಧಾರಾವಾಹಿಯಲ್ಲೀಗ ಅಚ್ಚರಿಗಳ ಕೌತುಕ ಮನೆ ಮಾಡಿದೆ. ಸೀತಾ ರಾಮನನ್ನು ಒಂದು ಮಾಡಲು ಅಶೋಕನ ಜತೆ ಪ್ರಿಯಾ ಸಹ ಸಾಥ್‌ ನೀಡಿದ್ದಾಳೆ. ಸೀತಾಳ ಮುಂದೆ ರಾಮ ತನ್ನ ಪ್ರೀತಿ ಹೇಳಿಕೊಂಡಿದ್ದಾನೆ. ಅದಕ್ಕೆ ಸೀತಾಳ ಪ್ರತಿಕ್ರಿಯೆ ಏನು ಎಂಬ ಕುತೂಹಲದ ಘಟ್ಟಕ್ಕೆ ಈ ಸೀರಿಯಲ್‌ ಇದೀಗ ಬಂದು ನಿಂತಿದೆ.

ಐ ಲವ್‌ ಯೂ ಅಷ್ಟೇ! ದೇವಿ ಸನ್ನಿಧಿಯಲ್ಲೇ ಸೀತಾಳ ಮುಂದೆ ಹೊರಬಿತ್ತು ರಾಮನ ಮನಸಿನ ಮಾತು
ಐ ಲವ್‌ ಯೂ ಅಷ್ಟೇ! ದೇವಿ ಸನ್ನಿಧಿಯಲ್ಲೇ ಸೀತಾಳ ಮುಂದೆ ಹೊರಬಿತ್ತು ರಾಮನ ಮನಸಿನ ಮಾತು

Seetha Rama Serial: ಭಾರ್ಗವಿಯ ಮಾತಿನಂತೆ ಸೀತಾಳನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುವ ಪ್ಲಾನ್‌ ಮಾಡಿದ್ದಾಳೆ ಚಾಂದಿನಿ. ಎಮೋಷನಲ್‌ ಆಗಿ ಬ್ಲಾಕ್‌ ಮೇಲ್‌ ಮಾಡುವ ಕೆಲಸ ಮುಂದುವರಿಸಿದ್ದಾಳೆ. ನಾನೂ ಕೂಡ ಎಲ್ಲರಂತೆ ನಾರ್ಮಲ್‌ ಹುಡುಗಿ, ರಾಮ್‌ ಜತೆಗೆ ದೂರವಾಗಿದ್ದಕ್ಕೆ ನಾನೂ ಬದಲಾದೆ. ನಮ್ಮ ಕಣ್ಣಮುಂದಿನ ಪ್ರೀತಿ ಸಿಗಲ್ಲ ಎಂದಾಗ ಆ ನೋವು ನಿಮಗೆ ಅರ್ಥವಾಗುತ್ತೆ ಅಲ್ವಾ ಸೀತಾ ಎಂದಿದ್ದಾಳೆ ಚಾಂದಿನಿ.

ಸೀತಾಳ ಮುಂದೆ, ರಾಮನ ಜತೆಗಿನ ಪ್ರೀತಿ ವಿಚಾರವನ್ನು ಹೇಳಿಕೊಳ್ಳುತ್ತಿದ್ದಾಳೆ ಚಾಂದಿನಿ. ಅವನೇ ನನ್ನ ಪ್ರಪಂಚವಾಗಿದ್ದ, ಅವನೇ ನನ್ನ ಜೀವವಾಗಿದ್ದ. ಇದೀಗ ನಾನು ನನ್ನ ಸ್ಟೇಟಸ್‌, ಪೊಸಿಷನ್‌ ಎಲ್ಲವನ್ನು ಬಿಟ್ಟು ಈ ಮಾತು ಹೇಳುತ್ತಿದ್ದೇನೆ. ರಾಮ್‌ ನನಗೆ ಬೇಕು ಸೀತಾ ಎಂದಿದ್ದಾಳೆ ಚಾಂದಿನಿ. ನನ್ನನ್ನು ಹುಚ್ಚನ ಥರ ಪ್ರೀತಿಸುತ್ತಿದ್ದ ರಾಮ್‌ ನನಗೆ ಬೇಕು ಸೀತಾ. ನನಗೆ ರಾಮ್‌ ಸಿಗ್ತಾನಲ್ಲ ಸೀತಾ? ಎಂದು ಸೀತಾಳ ಮುಂದೆ ಕಣ್ಣೀರಿಟ್ಟಿದ್ದಾಳೆ.

ಚಾಂದಿನಿಯ ಕಣ್ಣೀರಿಗೆ ಸೀತಾ ಸಹ ಕರಗಿದ್ದಾಳೆ. ತಲೆನೋವು ನೆಪದಲ್ಲಿ ಮನೆಕಡೆ ಹೊರಟುನಿಂತಿದ್ದಾಳೆ. ತನ್ನಲ್ಲೇ ಒಂದಷ್ಟು ವಿಚಾರಗಳನ್ನು ಪ್ರಶ್ನೆ ಮಾಡತೊಡಗಿದ್ದಾಳೆ. ಚಾಂದಿನಿ ಮತ್ತು ರಾಮ್‌ ಇಬ್ಬರ ಪ್ರೀತಿ ವಿಚಾರ ಗೊತ್ತಾದ ಮೇಲೆ ನನಗೇಕೆ ಬೇಜಾರಾಗಬೇಕು? ಚಾಂದಿನಿ ನಿಮ್ಮ ಹುಡುಗಿ ಅಲ್ವ ಅಂತ ರಾಮ್‌ಗೆ ಕೇಳುವಾಗ, ನನ್ನ ಮನಸಲ್ಲೂ ಚೂರು ಖುಷಿ ಇರಲಿಲ್ಲ. ಇದು ತಪ್ಪಲ್ವಾ? ಚಾಂದಿನಿ ತಮ್ಮ ನೋವನ್ನು ನನ್ನ ಬಳಿ ಹೇಳಿಕೊಂಡಾಗ ಕೇವಲ ಮಾತಿಗೆ ಸಮಾಧಾನ ಮಾಡಿದೆ ಅಷ್ಟೇ. ನನಗೆ ಏನಾಗ್ತಿದೆ? ಎಂದೇ ಪ್ರಶ್ನೆ ಮಾಡಿಕೊಂಡಿದ್ದಾಳೆ ಸೀತಾ.

ಸೀತಾ- ರಾಮನನ್ನು ಒಂದಾಗಿಸಲು ಅಶೋಕನ ಸರ್ಕಸ್‌

ಇತ್ತ ಅಮ್ಮನ ನೆನಪಿನಲ್ಲಿ ಕಣ್ಣೀರಿಡುತ್ತಿದ್ದಾನೆ ರಾಮ. ಸೀತಾಳ ಬಳಿ ಪ್ರೀತಿ ಹೇಳಿಕೊಳ್ಳುವಷ್ಟರಲ್ಲಿ ಚಾಂದಿನಿ ಮತ್ತೆ ನನ್ನ ಲೈಫ್‌ಗೆ ಎಂಟ್ರಿಕೊಟ್ಟಿದ್ದಾಳೆ. ಸೀತಾಗೆ ನಾನು ಏನು ಹೇಳಲಿ, ಹೇಗೆ ಅವರಿಗೆ ಮನವರಿಕೆ ಮಾಡಲಿ ಎಂದು ತನ್ನನ್ನು ತಾನೇ ಪ್ರಶ್ನೆ ಮಾಡಿಕೊಂಡಿದ್ದಾನೆ ರಾಮ. ಮತ್ತೊಂದೆಡೆ, ಸೀತಾ ಮತ್ತು ರಾಮನನ್ನು ಒಂದಾಗಿಸಬೇಕು ಅನ್ನೋ ನಿಟ್ಟಿನಲ್ಲಿ ಅಶೋಕ ಶತ ಪ್ರಯತ್ನಪಡುತ್ತಿದ್ದಾನೆ. ಪ್ರಿಯಾಳ ಬಳಿಯೂ ರಾಮ್‌ ಪ್ರೀತಿ ವಿಚಾರ ಹೇಳಿಯೇ ಬಿಟ್ಟಿದ್ದಾನೆ.

ನನಗೆ ನಿನ್ನ ಸಹಾಯ ಬೇಕು. ಹೇಗಾದ್ರೂ ಮಾಡಿ, ಚಾಂದಿನಿ ಜತೆ ಸ್ನೇಹ ಬೆಳೆಸಿಕೊಳ್ಳಿ. ಆಕೆ ಬೇರೆ ಏನೋ ಉದ್ದೇಶ ಇಟ್ಟುಕೊಂಡು ಬಂದಿದ್ದಾಳೆ. ಇನ್ನೇನು ರಾಮ್‌, ಸೀತಾ ಮುಂದೆ ಹೋಗಿ ಎಲ್ಲವನ್ನು ಹೇಳಿಕೊಳ್ಳಬೇಕು. ಅಷ್ಟರಲ್ಲಿ ಈ ಚಾಂದಿನಿ ಬಂದಿದ್ದಾಳೆ. ರಾಮ್‌ ಬಾಯಿಬಿಟ್ಟು ಹೇಳಲ್ಲ, ಸೀತಾ ಅರ್ಥ ಮಾಡಿಕೊಳ್ಳಲ್ಲ. ಇವರಿಬ್ಬರ ನಡುವೆ ಇದೀಗ ಚಾಂದಿನಿ ಬಂದಿದ್ದಾಳೆ ಎಂದು ಪ್ರಿಯಾ ಮುಂದೆ ಹೇಳಿಕೊಂಡಿದ್ದಾನೆ ಅಶೋಕ.

ಪ್ರಿಯಾಗೂ ಗೊತ್ತಾಯ್ತು ರಾಮನ ಲವ್‌ಸ್ಟೋರಿ

ಓಹ್‌ ಮೈ ಗಾಡ್.‌ ರಾಮ್‌ ಸೀತಾನ ಲವ್‌ ಮಾಡ್ತಿದಾರಾ? ಎನ್ನುತ್ತಲೇ ಖುಷಿ ಹೊರಹಾಕಿದ್ದಾಳೆ ಪ್ರಿಯಾ. ಮೊದಲು ಈ ವಿಚಾರನ್ನು ಸೀತಾಳ ಮುಂದೆ ಹೇಳ್ತಿನಿ ಎಂದಿದ್ದಾಳೆ. ಬೇಡ ಬೇಡ. ಈ ವಿಚಾರವನ್ನು ರಾಮನೇ ಹೇಳಲಿ ಎಂದು ಪ್ರಿಯಾಳಿಗೆ ಇರೋ ವಿಚಾರವನ್ನು ಮನವರಿಕೆ ಮಾಡಿದ್ದಾನೆ. ಇವರಿಬ್ಬರೂ ಒಂದಾಗ್ತಾರೆ ಎಂದರೆ ನನ್ನಷ್ಟು ಖುಷಿಪಡೋರೆ ಇಲ್ಲ. ಅವರಿಬ್ಬರಿಗಾಗಿ ನಾನು ಏನು ಬೇಕಾದರೂ ಮಾಡಲು ಸಿದ್ಧ ಎಂದಿದ್ದಾಳೆ ಪ್ರಿಯಾ.

ದೇವಿ ಸನ್ನಿಧಿಯಲ್ಲಿ ಹೊರಬಿತ್ತು ಮನಸಿನ ಮಾತು

ಇನ್ನು ಕಾಕತಾಳೀತವೆಂಬಂತೆ, ಸೀತಾ ಮತ್ತು ರಾಮ ದೇವಿಯ ಸನ್ನಿಧಿಯಲ್ಲಿದ್ದಾರೆ. ಇಬ್ಬರಿಗೂ ತಾವು ಬಂದಿರುವ ವಿಚಾರ ಗೊತ್ತಿಲ್ಲ. ಹೀಗಿರುವಾಗಲೇ ದರ್ಶನ ಮುಗಿಸಿ ಹೊರಬಂದ ಬಳಿಕ ಇಬ್ಬರೂ ಎದುರುಬದುರಾಗಿದ್ದಾರೆ. ಇಬ್ಬರ ನಡುವೆ ಒಂದಷ್ಟು ಮಾತುಕತೆ ನಡೆದಿದೆ. ನಾನು ನಿಮ್ಮನ್ನ ಪ್ರೀತಿಸ್ತಿದಿನಿ ಎಂದು ಹೇಳಿಯೇ ಬಿಟ್ಟಿದ್ದಾನೆ ರಾಮ. ರಾಮನ ಮಾತು ಕೇಳಿ ಸೀತಾ ಅಕ್ಷರಶಃ ಶಾಕ್‌ ಆಗಿದ್ದಾಳೆ. ರಾಮನ ಮಾತಿಗೆ ಸೀತಾಳ ಉತ್ತರ ಏನಿರಬಹುದು ಎಂಬುದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.