ಟಿವಿಯಲ್ಲಿ ನೋಡಿಯೇ ನನ್ನನ್ನು ಮನೆ ಸೊಸೆ ಅನ್ಕೊಂಡಿತ್ತು ಆ ತಮಿಳು ಕುಟುಂಬ, ಕೊನೆಗೆ ಅವ್ರ ಮನೆಯನ್ನೇ ಸೇರಿದೆ; ನಟಿ ಸ್ನೇಹಾ ಮದುವೆ ಕಥೆ
ಮೂಲ ಕನ್ನಡತಿಯಾದರೂ, ತೆಲುಗು, ತಮಿಳು, ಮಲಯಾಳಂನ ಹತ್ತಾರು ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ ಸ್ನೇಹಾ. ಈ ನಡುವೆ ಇದೇ ನಟಿಯ ಮದುವೆ ಆಗಿದ್ದೂ ಅಷ್ಟೇ ರೋಚಕ. ಆ ವಿಚಾರವನ್ನು ಸ್ಟಾರ್ ಸುವರ್ಣ ವಾಹಿನಿಯಲ್ಲಿನ ಸುವರ್ಣ ಸೂಪರ್‌ಸ್ಟಾರ್ ಶೋನಲ್ಲಿ ಶಾಲಿನಿ ಮುಂದೆ ಹೇಳಿಕೊಂಡು ನಗಾಡಿದ್ದಾರೆ.
Shravani Subramanya Serial Actress Sneha Eshwar: ಕನ್ನಡ ಕಿರುತೆರೆ, ಸಿನಿಮಾಗಳಲ್ಲಿ ಮಾತ್ರವಲ್ಲ ಪರಭಾಷೆಯಲ್ಲಿಯೂ ಹೆಸರು ಮಾಡಿದ್ದಾರೆ ನಟಿ ಸ್ನೇಹಾ ಈಶ್ವರ್. ಮೂಲ ಕನ್ನಡತಿಯಾದರೂ, ತೆಲುಗು, ತಮಿಳು, ಮಲಯಾಳಂನ ಹತ್ತಾರು ಸೀರಿಯಲ್‌ಗಳಲ್ಲಿ ನಟಿಸಿದ್ದಾರೆ ಸ್ನೇಹಾ. ಶೀಘ್ರದಲ್ಲಿಯೇ ಬಣ್ಣದ ಲೋಕದಲ್ಲಿ ಎರಡು ದಶಕಗಳನ್ನೂ ಪೂರೈಸುವ ಖುಷಿಯಲ್ಲಿದ್ದಾರೆ ಈ ನಟಿ. ಈ ನಡುವೆ ಇದೇ ನಟಿಯ ಮದುವೆ ಆಗಿದ್ದೂ ಅಷ್ಟೇ ರೋಚಕ. ಆ ವಿಚಾರವನ್ನು ಸ್ಟಾರ್ ಸುವರ್ಣ ವಾಹಿನಿಯಲ್ಲಿನ ಸುವರ್ಣ ಸೂಪರ್‌ಸ್ಟಾರ್ ಶೋನಲ್ಲಿ ಶಾಲಿನಿ ಮುಂದೆ ಹೇಳಿಕೊಂಡು ನಗಾಡಿದ್ದಾರೆ.
ನಟಿ ಸ್ನೇಹಾ ಈಶ್ವರ್ ಸದ್ಯ ಕನ್ನಡ ಕಿರುತೆರೆಯಲ್ಲಿ ಎರಡು ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ. ಪ್ರಧಾನ ಪಾತ್ರದಲ್ಲಿಯೇ ಮಿಂಚುತ್ತಿದ್ದಾರೆ. ಜೀ ಕನ್ನಡದಲ್ಲಿ ಶ್ರಾವಣಿ ಸುಬ್ರಮಣ್ಯ ಧಾರಾವಾಹಿಯಲ್ಲಿ ವಿಜಯಾಂಬಿಕಾ ಪಾತ್ರದಲ್ಲಿ ಸ್ನೇಹಾ ನಟಿಸುತ್ತಿದ್ದಾರೆ. ಟಿಆರ್‌ಪಿ ವಿಚಾರದಲ್ಲಿಯೂ ಈ ವಾರ ಎರಡನೇ ಸ್ಥಾನದಲ್ಲಿದೆ ಈ ಧಾರಾವಾಹಿ. ಇತ್ತ ಸ್ಟಾರ್ ಸುವರ್ಣದ ಆಸೆ ಧಾರಾವಾಹಿಯಲ್ಲಿಯೂ ನೆಗೆಟಿವ್ ಶೇಡ್‌ನಲ್ಲಿ ಶಾಂತಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೀಗ ಗ್ಯಾಪ್‌ನಲ್ಲಿಯೇ ಅಚ್ಚರಿಯ ಮದುವೆ ಬಗ್ಗೆ ಹೇಳಿಕೊಂಡಿದ್ದಾರೆ.
ಸೀರಿಯಲ್ ನೋಡಿಯೇ ಸೊಸೆಯನ್ನಾಗಿ ಸ್ವೀಕರಿಸಿದ್ರು...
'ನಾನು ಮದುವೆಯಾಗಿ 19 ವರ್ಷ ಆಗಿದೆ. ಆಗ ಈ ಪ್ರೀ- ವೆಡ್ಡಿಂಗ್ ಗೀ -ವೆಡ್ಡಿಂಗ್ ಶೂಟ್‌ಗಳು ಇರಲಿಲ್ಲ. ಮದುವೆ ರಿಸೆಪ್ಶನ್‌ನಲ್ಲಿ ನಿಂತು ಬಗೆಬಗೆ ಫೋಟೋ ತೆಗೆಸಿಕೊಳ್ತಿದ್ವಿ. ಆಗಲೇ ಸುಸ್ತಾಗುತ್ತಿದ್ವಿ. ಆದರೆ, ಸೀರಿಯಲ್ ನೋಡಿಯೇ ನನ್ನ ಮದುವೆ ಆಗಿರುವುದರಿಂದ ನನಗೆ ಅದೊಂದು ವಿಭಿನ್ನವಾದ ಅನುಭವ. ಏಕೆಂದರೆ, ಆಗ ನಾನು ಮಾಡಿದ ಒಂದು ತಮಿಳು ಸೀರಿಯಲ್‌ನಿಂದಲೇ ನನ್ನ ಮದುವೆ ಆಗಿದ್ದು. ಅಂದರೆ, ಆಗ ನಾನು ಮಾಡ್ತಿದ್ದ ಸೀರಿಯಲ್‌ಅನ್ನ ನನ್ನ ಅತ್ತೆ ಆವತ್ತು ನೋಡಿದ್ರು. ಹಗಲು ಹೊತ್ತಿನಲ್ಲಿ ಆ ಸೀರಿಯಲ್ ಪ್ರಸಾರವಾಗುತ್ತಿತ್ತು. ಆ ಸೀರಿಯಲ್‌ನಲ್ಲಿ ನನ್ನದು ವಿಚಿತ್ರ ಕ್ಯಾರೆಕ್ಟರ್"
ಚಾನೆಲ್‌ಗೆ ಕಾಲ್ ಮಾಡಿ ಅಡ್ರೆಸ್ ತಗೊಂಡ್ರು
"ಅದರಲ್ಲಿನ ನನ್ನ ಪಾತ್ರ ನನ್ನ ಅತ್ತೆಗೆ ಇಷ್ಟವಾಯ್ತು. ಅವರ ಮಗನಿಗೂ ಆಗ ಹುಡುಗಿ ನೋಡ್ತಿದ್ರು. ಅವತ್ತೇನೋ ಅವರೂ ಸಹ ಮನೆಯಲ್ಲಿಯೇ ಇದ್ರು. ಈ ಥರದ ಹುಡುಗಿ ಇದ್ರೆ ನೋಡು, ಸುಮ್ನೆ ಯಾರ್ಯಾರನ್ನೆಲ್ಲ ತೋರಿಸ್ತಿಯಾ ಅಂತ ಅವರ ಅಮ್ಮನಿಗೆ ಹೇಳಿದ್ರು. ಹೇಗಾದ್ರೂ ಎಸ್ಕೇಪ್ ಆಗಬೇಕು ಅಂತ ರ್ಯಾಂಡಮ್ ಆಗಿ ಹೇಳಿಕೊಂಡಿದ್ದಾರೆ. ಆ ಮಾತನ್ನೇ ನಮ್ಮ ಅತ್ತೆ ಹಿಡ್ಕೊಂಡು, ಈ ಹುಡುಗಿ ಚೆನ್ನಾಗಿದ್ದಾಳೆ ಅಲ್ವಾ? ಮಗ ಹೇಳಿದ್ದಾನೆ ಅಂತ, ನಾನು ನಟಿಸ್ತಿದ್ದ ವಾಹಿನಿಯ ಅಡ್ರೆಸ್ ಪಡೆದು, ಫೋನ್ ಮಾಡಿಯೇ ಬಿಟ್ಟಿದ್ದಾರೆ"
ಕೊನೆಗೆ ಮದುವೆಯೂ ಆಯ್ತು…
"ಆರ್ಟಿಸ್ಟ್ ನಂಬರ್ ಕೊಡಲ್ಲ, ಅವರ ತಂದೆ ತಾಯಿ ನಂಬರ್ ಕೊಡ್ತೀವಿ ಅಂತ ಹೇಳಿ, ನಮ್ಮ ಅಪ್ಪ ಅಮ್ಮನ ನಂಬರ್ ಕೊಟ್ಟು ಮಾತುಕತೆ ನಡೀತು. ನಾವೂ ಅವರು ಬೇರೆ ಜಾತಿ, ಬೇರೆ ಭಾಷೆ, ಯಾರೂ ಅಂತಾನೇ ನನಗೆ ಗೊತ್ತಿಲ್ಲ. ನಾನು ಈ ಸೀರಿಯಲ್ ನೋಡ್ತಿನಿ. ಆ ಹುಡುಗಿ ನನಗೆ ಇಷ್ಟ ಅಂತ ಹೇಳಿ ಮನವೊಲಿಸಿದರು. ಹೆಣ್ಣು ನೋಡುವ ಶಾಸ್ತ್ರ ಮಾಡಿ, ನಮ್ಮ ತಂದೆಗೂ ಅವರು ಬಹಳ ಇಷ್ಟವಾಗಿ, ಕೊನೆಗೂ ಸೀರಿಯಲ್ ನೋಡಿಯೇ ಮದುವೆ ಆಯ್ತು"
"ಆವಾಗೆಲ್ಲ ಗೊತ್ತಾಗ್ತಿರಲಿಲ್ಲ. ಹುಡುಗ ಚೆನ್ನಾಗಿದ್ದ. ಮದುವೆ ಆಯ್ತು. ಈಗ ತುಂಬ ಖುಷಿಯಾಗಿದ್ದೀನಿ. ಗಂಡ ಮತ್ತು ಮಕ್ಕಳ ಜತೆಗೆ ಖುಷಿಯಾಗಿದ್ದೇನೆ. ಈ ಪ್ರಪೋಸಲ್ ಬಂದಿದ್ದನ್ನು ಕೇಳಿ ಆವತ್ತು ನನ್ನ ಸೀರಿಯಲ್ ತಂಡಕ್ಕೂ ಸರ್ಪ್ರೈಸ್ ಆಗಿತ್ತು" ಎಂದು ಮದುವೆ ಪ್ರಹಸನದ ಬಗ್ಗೆ ನೆನಪು ಮಾಡಿಕೊಂಡು ನಕ್ಕು ಹಗುರಾಗಿದ್ದಾರೆ ಸ್ನೇಹಾ.
ವಿಭಾಗ